ಭಾರತ ಮತ್ತು ಪಾಕ್ ಅಭಿಮಾನಿಗಳ ಅರ್ಕುಟ್ ಸಮರ


ಪ್ಲಾಸಿ ಕದನ, ಸಿಪಾಯಿ ದಂಗೆ, ಕಾರ್ಗಿಲ್ ಯುದ್ದ, ಕಾಶ್ಮೀರ ಜಗಳ ಎಲ್ಲಾ ಒಂದು ಕಡೆ ಆದರೆ, ಇಂಡಿಯಾ ಮತ್ತು ಪಾಕಿಸ್ತಾನದ ಯುದ್ದ ಅಂತರ್ಜಾಲದಲ್ಲಿ ಬಿರುಸಾಗುತ್ತಿದೆ!


Warring Cousins now cross swords on orkut.comಭಾರತ, ಪಾಕಿಸ್ತಾನಗಳು ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯಲ್ಲಿದ್ದರೆ "ಅರ್ಕುಟ್’ಅಂತರ್ಜಾಲದಲ್ಲಿ ಭಾರತ, ಪಾಕಿಸ್ತಾನ ಅಭಿಮಾನಿಗಳು ಪರಸ್ಪರ ನಿಂದನೆ ಕಾಳಗದಲ್ಲಿ ತೊಡಗಿದ್ದಾರೆ.

ವಿಕೃತ ಮನಸ್ಸಿನ ಪಾ(ತ)ಕಿಗಳು ಅರ್ಕುಟ್ ಅಂತರ್ಜಾಲದಲ್ಲಿ ವಿ ಹೇಟ್ ಇಂಡಿಯಾ, ಐ ಹೇಟ್ ದೋಸ್ ಹೂ ಹೇಟ್ ಪಾಕಿಸ್ತಾನ್ ಮೊದಲಾದ ನೂರಾರು ಕಮ್ಯೂನಿಟಿಗಳನ್ನು ಸೃಷ್ಟಿಸಿದ್ದಾರೆ. ನಮ್ಮ ರಾಷ್ಟ್ರ ಬಾವುಟವನ್ನು ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಚಿತ್ರಿಸಿ ಅದರ ಮೇಲೆ ಅಡ್ಡ ಗೆರೆಗಳನ್ನು ಎಳೆದಿದ್ದಾರೆ. ನೇರ ಯುದ್ಧದಲ್ಲಿ ಸೋತು ಹಿಮ್ಮೆಟ್ಟಿದ ಪಾಕಿಸ್ತಾನಿಗಳು, ಹೇಡಿಗಳಂತೆ ಈ ರೀತಿ ನಿಂದಿಸುವ ಕೆಲಸದಲ್ಲಿ ಮಾತ್ರ ಮುಂದಿದ್ದಾರೆ.

ಇದರ ಉದ್ದೇಶ ಭಾರತವನ್ನು ವಿರೋಧಿಸುವುದರ ಜತೆಗೆ ಭಾರತೀಯರನ್ನು ಕೀಳಾಗಿ ತೋರಿಸುವ ಹುಮ್ಮಸ್ಸು ಕಂಡುಬಂದಿದೆ. ಇದರಲ್ಲಿ ಭಾರತೀಯರ ಬಗ್ಗೆ ಕುತ್ಸಿತ ಬರಹಗಳಿವೆ. ಜಮ್ಮು, ಕಾಶ್ಮೀರ ತಮ್ಮದೇ ನೆಲ ಎಂದೆಲ್ಲ ಬರೆಯಲಾಗಿದೆ. ಹೆಚ್ಚಿನವು ಪಾಕ್ ವಿಳಾಸದಲ್ಲಿ ರೂಪಿತವಾಗಿದೆ. ಬೆಂಗಳೂರು ಸೇರಿದಂತೆ ಅನ್ಯ ದೇಶಗಳಿಂದಲೂ ಈ ರೀತಿಯ ಕಮ್ಯೂನಿಟಿ (ಸ್ನೇಹಿತರ ಸಮುದಾಯ) ನಿರ್ಮಾಣವಾಗಿದೆ.

ಆದರೆ, ಅಂತರ್ಜಾಲ ಸಮರದಲ್ಲಿ ಭಾರತೀಯ ಪ್ರಜೆಗಳು ಹಿಂದೆ ಬಿದ್ದಿಲ್ಲ. ಪಾಕಿಸ್ತಾನದ ಇಂತಹ ಸಮುದಾಯಗಳು ಪ್ರತ್ಯಕ್ಷವಾದ ತಕ್ಷಣ ಕ್ರುದ್ಧರಾದ ಅನೇಕ ಮಂದಿ ಭಾರತೀಯರು ವಿ ಹೇಟ್ ಪಾಕ್, ವಿ ಲವ್ ಇಂಡಿಯಾ, ವಿ ಹೇಟ್ ಪಾಕಿಸ್ತಾನ್, ನಾಟ್ ಮುಸ್ಲಿಮ್ಸ್ ಎಂಬಂತಹ ನೂರಾರು ಸಮುದಾಯಗಳನ್ನು ರೂಪಿಸಿದ್ದಾರೆ. ಒಟ್ಟಾರೆ ಸ್ನೇಹ ಬೆಸೆಯಬೇಕಾದ ಈ ಅಂತರ್ಜಾಲದಲ್ಲಿ ದ್ವೇಷದ ಜ್ವಾಲೆಗಳು ಮೇಲೇಳುತ್ತಿವೆ.

ಏನು ಮಾಡಬಹುದು? :

ಈ ತಾಣಗಳನ್ನು ನೋಡಿದರೆ ಭಾರತೀಯರ ರಕ್ತ ಕುದಿಯದೆ ಇರದು. ಆದರೆ ಇದನ್ನು ನಿಲ್ಲಿಸಲು ನಮ್ಮಿಂದ ಸಾಧ್ಯವಿಲ್ಲ. ಆದರೆ ನಾವು ಒಂದು ಕೆಲಸ ಮಾಡಬಹುದು. ಕಡೇ ಪಕ್ಷ ಆ ಕಮ್ಯೂನಿಟಿಗೆ ಭೇಟಿ ನೀಡಿ ರಿಪೋರ್ಟ್ ಅಬ್ಯೂಸ್ಗೆ ಕ್ಲಿಕ್ ಮಾಡಬೇಕು. ಈ ರೀತಿ ಒಂದು ಸಾವಿರ ಕ್ಲಿಕ್ ಮಾಡಿದರೆ ಅರ್ಕುಟ್ ಈ ಕಮ್ಯೂನಿಟಿಯನ್ನು ಕಿತ್ತು ಹಾಕುತ್ತದೆ.

ಏನದು ಅರ್ಕುಟ್? :

ಅರ್ಕುಟ್ ಎನ್ನುವುದು ಅಂತರ್ಜಾಲದಲ್ಲಿನ ಗೆಳೆಯರ ತಾಣ. ಈ ಹಿಂದೆ ಇದ್ದ ತಮ್ಮ ಸ್ನೇಹಿತರನ್ನು ಮತ್ತೆ ಒಂದುಗೂಡಿಸುವ ಮತ್ತು ಹೊಸ ಗೆಳೆಯರನ್ನು ಸಂಪಾದಿಸುವ ಇಂಟರ್ನೆಟ್ ತಾಣ. ವಿಶ್ವದ ಎಲ್ಲೇ ಇದ್ದರೂ ಸಂವಹನ ಮಾಡಬಹುದಾಗಿದೆ.

ಅನೇಕ ಹೊಸ ಗೆಳೆಯರನ್ನು ಸಂಪಾದಿಸ ಬಹುದು, ಅಭಿಮಾನಿಗಳ ಜತೆ ಬೆರೆಯಬಹುದು. ತಮ್ಮ ಇಷ್ಟ, ಅಭಿಪ್ರಾಯ, ಫೋಟೊ, ವೀಡಿಯೊ ಪ್ರಸಾರ ಮಾಡಬಹುದಾಗಿದೆ. ಆದರೆ ಈಗ ಇದರಲ್ಲಿ ಹೈಟೆಕ್ ಸೆಕ್ಸ್ ರಾಕೆಟ್ ವಿಫುಲವಾಗಿ ಬೆಳೆಯುತ್ತಿದೆ. ಕುತ್ಸಿತ ನಿಂದನೆಗಳು ಹೆಚ್ಚುತ್ತಿವೆ.

ಏಕೆ ಮತ್ಸರ, ಪ್ರೀತಿಸಿ :

ಪುರಾತನ ಸಿಂಧು ನಾಗರಿಕತೆಯ ತೊಟ್ಟಿಲು ಭಾರತದಲ್ಲಿಯೇ. ಪಾಕ್ ಜನಕವೂ ಭಾರತವೇ, ಬಲಿಷ್ಠ ಪ್ರಜಾಪ್ರಭುತ್ವ, ವಿಶ್ವದ ಏಳನೇ ಅತಿ ದೊಡ್ಡ ದೇಶ, 4ನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ, ಅರ್ಥಿಕ ಪ್ರಗತಿಯಲ್ಲಿ ೨ನೇ ಸ್ಥಾನದಲ್ಲಿರುವ, ವಿಶ್ವದ ಎಲ್ಲ ಪ್ರಮುಖ ಧರ್ಮಗಳ ಅನುಯಾಯಿಗಳನ್ನು ಮುಖ್ಯ ವಾಹಿನಿಯಲ್ಲಿ ಹೊಂದಿರುವ ಭಾರತಕ್ಕೆ ಇವರ ನಿಂದನೆಗಳಿಂದೇನು ಕೆಡುಕಾಗದು. ವಿಶ್ವ ಶ್ರೇಷ್ಠ ಭಗವದ್ಗೀತೆ, ಅರ್ಥಶಾಸ್ತ್ರ, ಅದ್ಭುತ ತಾಜ್‌ಮಹಲ್, ಕುತ್‌ಬ್ ಮಿನಾರ್ ನೀಡಿರುವ ಭಾರತವನ್ನು ಯಾರಾದರೂ ಏಕೆ ದ್ವೇಷಿಸಬೇಕು, ಅಲ್ಲವೇ ?

ಹೆಮ್ಮೆಯ ಸುದ್ದಿ ಎಂದರೆ ಇದೇ ಅರ್ಕುಟ್ ಅಂತರ್ಜಾಲದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಅನೇಕ ಮಂದಿ ತಮ್ಮ ಫೋಟೊ ಬದಲಾಗಿ ಭಾರತ ತ್ರಿವರ್ಣ ಬಾವುಟದ ಚಿತ್ರ ಹಾಕಿಕೊಂಡು ದೇಶ ಪ್ರೇಮ ಮೆರೆಯುತ್ತಿದ್ದಾರೆ.

ನಿಂದನೆಗೆ ಅವಕಾಶ ಇಲ್ಲ :

ಅರ್ಕುಟ್‌ನಲ್ಲಿ ಖಾಸಗಿ ನಿಂದನೆಗೆ ಅವಕಾಶವಿಲ್ಲ. ಬೇನಾಮಿಗಳಿಗೆ ನಿಷೇಧ ಹೇರಲಾಗುವುದು, ವಿಮರ್ಶೆ ಸಹ್ಯವಾಗಿರಲಿ. ವಾಕ್ ಸ್ವಾತಂತ್ರ್ಯ ಮತ್ತು ಅಸಹ್ಯ ಮಾತಿನ ನಡುವೆ ಇರುವ ತೆಳುವಿನ ಅಂತರವನ್ನು ಮೀರದಿರಲಿ, ಅಶ್ಲೀಲ ಫೋಟೊ, ವೀಡಿಯೊ ಬಳಸಬೇಡಿ ಎಂಬೆಲ್ಲ ಕಾನೂನುಗಳಿದ್ದರೂ ಯಾವುದೂ ಜಾರಿಯಾಗುವುದಿಲ್ಲ.

ಬೆಂಗಳೂರು ವಿಳಾಸ ನೀಡಿರುವ ಕಮ್ಯೂನಿಟಿಯಲ್ಲು ಐ ಹೇಟ್ ಇಂಡಿಯಾ, ಐ ಹೇಟ್ ರಾಹುಲ್, ಐ ಹೇಟ್ ಸಚಿನ್, ಐ ಹೇಟ್ ಇಂಡಿಯನ್ ಪೊಲಿಟಿಕ್ಸ್ ಎಂಬ ನೂರಾರು ಕಮ್ಯೂನಿಟಿಗಳಿವೆ. ಇದಕ್ಕೆ ಸಾವಿರಾರು ಮಂದಿ ತಮ್ಮನ್ನು ನೋಂದಾಯಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+