ವಿಶ್ವಪ್ರೇಮಿಗಳ ದಿನ-2007
ಪ್ರೇಮದ ಹನಿ-3
ಹೀಗೊಂದು ಪ್ರೇಮ ನಿವೇದನೆ...
ಯಾರಿಗೊ ಅರಳಿದ ಸಾವಿರ ಕಂಗಳುನನ್ನೆದೆ ಬಯಲಲಿ ನರ್ತಿಸಿವೆ
ಯಾರ ಬೆಳಕಿಗೋ ಕೋಟಿದೀವಿಗೆ
ನನ್ನೆದೆ ಗಗನದಿ ಹೊಳೆಯುತಿವೆ
ಯಾರಿದ್ದಾರೋ ತಿಳಿದಿಲ್ಲ
ನನ್ನೊಳಗಂತೂ ಪ್ರೀತಿಯಿದೆ.
ಮುಸ್ಸಂಜೆ ಬಳ್ಳಿಯ ಮಲ್ಲಿಗೆಮಣಿಗಳ
ಮಾಯದ ಕಂಪು ನನ್ನಲಿವೆ
ಯಾರದೊ ಮುಡಿಯಲಿ ಸಂಪಿಗೆ ನಲಿದರೆ
ನನ್ನಲಿ ಕೋಮಲ ಕುಸುಮವಿದೆ
ಏಕೋ ಏನೋ ತಿಳಿದಿಲ್ಲ
ನನ್ನೊಳಗಂತೂ ಪ್ರೀತಿಯಿದೆ.
ಅವಳಿಗೆ ಅವನು ಹಾಡಿದರೆ
ನಾದಸ್ವರದಲೆ ನನ್ನಲಿವೆ
ಯಾರಿಗ್ಯಾರಲೋ ಪ್ರೀತಿಯಿದೆ
ನನ್ನೊಳಗದರನುಭೂತಿದೆ
ಯಾರಲ್ಲೆಂದು ತಿಳಿದಿಲ್ಲ
ನನ್ನೊಳಗಂತೂ ಪ್ರೀತಿಯಿದೆ.












Click it and Unblock the Notifications