‘ಯುವರ್‌ ಆನರ್‌, ಮಹಿಳಾ ವಕೀಲರು ದೌರ್ಜನ್ಯಕ್ಕೆ ಸಿಲುಕಿದ್ದಾರೆ..’


ಮಹಿಳಾ ವಕೀಲರ ಮೇಲಿನ ದೌರ್ಜನ್ಯಗಳಿಗೆ ನಿರ್ದಿಷ್ಟ ರೂಪಗಳಿಲ್ಲ. ಹೊರಗೆ ಮಾತ್ರವಲ್ಲ, ಮನೆಯ ಒಳಗೂ ಆಕೆಯ ಮೇಲೆ ನಾನಾ ದಾಳಿ ಮುಂದುವರೆದಿದೆ. ಸಂಸಾರಕ್ಕೆ ಸಂಬಂಧಪಟ್ಟ ಯಾವುದೇ ಮಾತುಕತೆಯಲ್ಲಿ ತರ್ಕ ಬದ್ದ ಮಾತುಗಳನ್ನಾಡಿದರೂ ‘ನಿನ್ನ ಲಾಯರ್‌ ಬುದ್ಧಿ ಇಲ್ಲಿ ತೋರಿಸಬೇಡ‘ ಎನ್ನುವ ವ್ಯಂಗ್ಯಕ್ಕೂ ಗುರಿಯಾಗ ಬೇಕಾಗುತ್ತದೆ!

Is law same for men and women advocates?ದೇಶದ ಆರ್ಥಿಕ ಸದೃಢತೆಗೆ ಉದ್ಯೋಗಸ್ಥ ಮಹಿಳೆಯರ ಕೊಡುಗೆ ಅತ್ಯಾವಶ್ಯಕ. ಆದರೆ ಉದ್ಯೋಗಸ್ಥ ಪುರುಷನಿಗಿಂತ ಮಹಿಳೆಯರು ಎದುರಿಸುವ ಸಮಸ್ಯೆಗಳು ಮಾತ್ರ ವಿಭಿನ್ನ. ಶಿಕ್ಷಣ, ವೈದ್ಯಕೀಯ, ರಾಜಕೀಯ, ತಂತ್ರಜ್ಞಾನ ಹೀಗೆ ಯಾವುದೇ ಕ್ಷೇತ್ರವಿರಲಿ ಮಹಿಳೆಯರು ಸಮಸ್ಯೆಗಳ ಮತ್ತು ಪುರೋಹಿತಶಾಹಿಯ ಸುಲಭ ಬಲಿಪಶುಗಳು. ಇದಕ್ಕೆ ನಮ್ಮ ಮಹಿಳಾ ನ್ಯಾಯವಾದಿಗಳು ಹೊರತೇನಲ್ಲ.

ಹಾಗೆ ನೋಡಿದರೆ ನಮ್ಮ ಸಮಾಜದ ಸಂಕೀರ್ಣ ರಚನೆಯಲ್ಲಿ ಮಹಿಳೆಯರನ್ನು ಕಾನೂನು ಕ್ಷೇತ್ರದಲ್ಲಿ ಒಪ್ಪಿಕೊಂಡಿರುವುದೇ ಕೆಲವು ದಶಕಗಳಿಂದೀಚೆಗೆ. ಶಿಕ್ಷಣ ಹಳ್ಳಿ ಹಳ್ಳಿಯನ್ನೂ ಮುಟ್ಟುವಂತಾಗುತ್ತಿದೆ, ವಿದ್ಯೆ ಮನೆ ಮನೆಯಲ್ಲೂ ಬೆಲೆ ಪಡೆಯುವಂತಾಗುತ್ತಿದೆ, ಕಾನೂನು ಕ್ಷೇತ್ರದ ಕೆಲಸವನ್ನು ಗಣ್ಯವೃತ್ತಿಯೆಂದು ಪರಿಗಣಿಸಲಾಗಿದೆ. ಆದರೂ ಮಹಿಳಾ ನ್ಯಾಯವಾದಿಗಳ ವೃತ್ತಿಪರ ಬದುಕು ಇನ್ನೂ ಕನಿಷ್ಠ ಮಟ್ಟದ ಸಹನೀಯ ಸ್ಥಿತಿಗೂ ತಲುಪದಿರುವುದು ವಿಪರ್ಯಾಸ.

ಇಂತಹ ಸಮಸ್ಯೆಗಳನ್ನು ಪರಸ್ಪರ ಚರ್ಚಿಸುವುದು, ಸಹೋದ್ಯೋಗಿಗಳ ಗಮನಕ್ಕೆ ತರುವುದು ಮತ್ತು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಮಹಿಳಾ ವಕೀಲರ ಸಮ್ಮೇಳನ ಒಂದು ಸಾಮೂಹಿಕ ವೇದಿಕೆ ಒದಗಿಸಿತ್ತು. ಈಗ ನ್ಯಾಯಾಧೀಶರಾಗಿದ್ದು ನೂರಾರು ಮಹಿಳೆಯರಿಗೆ ಸ್ಫೂರ್ತಿಯಾಗಿರುವ ಮಹಿಳಾ ನ್ಯಾಯಾಧೀಶರೂ ತಮ್ಮ ವೃತ್ತಿ ಆರಂಭದ ದಿನಗಳ ಏರು ಪೇರುಗಳನ್ನು, ಕಂಡ ಕಷ್ಟಗಳನ್ನು ಮತ್ತು ಅವುಗಳನ್ನು ಎದುರಿಸಿ ಪಡೆದುಕೊಂಡ ಯಶಸ್ಸನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದು ಕಾರ್ಯಕ್ರಮಕ್ಕೆ ಹೊಸ ತಿರುವು ನೀಡಿತು. ಪ್ರೇರೇಪಣೆಗೊಂಡ ಮಹಿಳಾ ವಕೀಲರುಗಳು ಸಮಸ್ಯೆಗಳನ್ನು ಮತ್ತವುಗಳ ಪರಿಹಾರಗಳನ್ನು ಮುಕ್ತವಾಗಿ ವ್ಯಕ್ತ ಪಡಿಸಿದರು.

ನ್ಯಾಯಾಲಯದಲ್ಲೇ ಕಾನೂನು ಪಾಲಕ ಸಮಿತಿ ಇಲ್ಲ! : ಪ್ರತೀ ಸಂಘ ಸಂಸ್ಥೆಯಲ್ಲೂ, ಕಂಪನಿಗಳಲ್ಲೂ, ವಿಶ್ವವಿದ್ಯಾನಿಲಯಗಳಲ್ಲೂ, ವೃತ್ತಿಪರ ಸಂಘಟನೆಗಳಲ್ಲೂ ಮತ್ತು ಎಲ್ಲೆಲ್ಲಿ ಮಹಿಳೆಯರು ಸಂಘಟಿತರಾಗಿ ಕಾರ್ಯ ನಿರ್ವಹಿಸುತ್ತಾರೋ ಅಲ್ಲೆಲ್ಲಾ ಅವರುಗಳ ಮೇಲೆ ನಡೆಯವ ಲೈಂಗಿಕ ಕಿರುಕುಳಗಳ (sexual harrassment) ಬಗ್ಗೆ ದೂರು ಸ್ವೀಕರಿಸಲು ಮತ್ತು ತನಿಖೆ ನಡೆಸಲು ನಿರ್ದಿಷ್ಟ ಸಂಖ್ಯೆಯ ಸದಸ್ಯರುಗಳನೊಳಗೊಂಡ, ಸ್ಥಾಯಿ ಸಮಿತಿಯೊಂದನ್ನು ಕಡ್ಡಾಯವಾಗಿ ರಚಿಸಲೇ ಬೇಕು ಎನ್ನುವ ಕಾನೂನು ನಮ್ಮಲ್ಲಿ ಇದೆ ಮತ್ತು ಅದಕ್ಕೆ ಸರ್ವೋಚ್ಛನ್ಯಾಯಾಲಯದ ಮಾರ್ಗದರ್ಶನವೂ ಪೂರಕವಾಗಿದೆ. ಆದರೆ ಕರ್ನಾಟಕದ ನ್ಯಾಯಾಲಯಗಳಲ್ಲಿ ಇಂತಹ ಒಂದು ಸಮಿತಿ ಇಲ್ಲವಾಗಿದ್ದು, ಅದನ್ನು ಕೂಡಲೆ ರಚಿಸಿ ಕಾರ್ಯಗತಗೊಳಿಸಬೇಕೆಂದು ಮಹಿಳಾ ನ್ಯಾಯವಾದಿಗಳು ಮನವಿ ಮಾಡಿಕೊಂಡರು.

ಹೊರಗೆ ಬಂದಾಗ ಕಾಡುವ ಸಮಸ್ಯೆಗಳು : ಮಹಿಳೆಯರು ಪುರುಷರಷ್ಟೇ ಸಮರ್ಥರು. ಕೆಲವೊಮ್ಮೆ ಅವರಿಗಿಂತಲೂ ಹೆಚ್ಚೇ ವಿಮರ್ಶನಾ ಶಕ್ತಿ ಉಳ್ಳವರು ಮತ್ತು ವಿವೇಚನೆ ಹೊಂದಿರುವವರು, ಮಾತ್ರವಲ್ಲ ಶ್ರಮ ಜೀವಿಗಳೂ ಹೌದು ಎನ್ನುವ ಮಾತು ಈಗ ವಿಶ್ವವ್ಯಾಪಿ ಕೇಳಿ ಬರುತ್ತಿದ್ದರೂ, ಮಹಿಳಾ ವಕೀಲರು ಮಾತ್ರ ತಾವು ಹೆಂಗಸರು ಎನ್ನುವ ಒಂದೇ ಕಾರಣದಿಂದ ವೃತ್ತಿಯಲ್ಲಿ ತಾರತಮ್ಯ ಎದುರಿಸುತ್ತಲೇ ಇದ್ದಾರೆ.

ಪುರುಷ ಹಿರಿಯ ವಕೀಲರುಗಳು ಮಹಿಳೆಯರನ್ನು ತಮ್ಮ ಸಹೋದ್ಯೋಗಿಗಳಾಗಿ ತೆಗೆದುಕೊಳ್ಳಲು ಹಿಂದು-ಮುಂದು ನೋಡುತ್ತಾರೆ ಮತ್ತು ಕೆಲಸ ಕಲಿಸಿಕೊಡುವುದರಲ್ಲೂ ‘‘ಅಯ್ಯೋ ಹೆಣ್ಣು ಮಕ್ಕಳಿಗೆ ಇದೆಲ್ಲಾ ಯಾಕೆ‘‘ ಎನ್ನುವ ತಾತ್ಸಾರ ಭಾವನೆ ಹೊಂದಿರುತ್ತಾರೆ. ತನಗೆ ಆಸಕ್ತಿ ಇರುವ ಶಾಖೆಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಮಹಿಳೆಯರಿಗೆ ಇಲ್ಲವಾಗಿದ್ದು ಇಚ್ಛೆ ಇದ್ದೊ ಇಲ್ಲವೋ ಕೆಲಸದ ರೀತಿಯಿಂದಾಗಿ ಬಹುಪಾಲು ಮಹಿಳಾ ವಕೀಲರು ಕೌಟುಂಬಿಕ ವ್ಯಾಜ್ಯಗಳ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳ ಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+