ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಗೋಮಾತೆ ; ಸ್ವಸ್ಥ ಜೀವನದ ಸುಖದಾತೆ

By Staff
|
Google Oneindia Kannada News
  • ಸಿರಿರಮಣ, ಬಸವನಗುಡಿ, ಬೆಂಗಳೂರು
ದೈನಂದಿನ ಆಹಾರ ಕ್ರಮದಲ್ಲಿ ಪ್ರತಿಯಾಬ್ಬರೂ ಉಪಯೋಗಿಸುತ್ತಿರುವ ಕಾಫಿ ಚಹಾ ಮತ್ತಿನ್ನಿತರ ಯಾವುದೇ ಪಾನೀಯದಲ್ಲಿ ಹಾಲು ಮುಖ್ಯವಾಗಿದೆ. ಹಾಲಿನ ಬದಲಾಗಿ ಉಪಯೋಗಿಸಲ್ಪಡುವ ಪರ್ಯಾಯ ದ್ರವ ಇನ್ನೊಂದಿಲ್ಲ. ಇದರಿಂದಲೇ ನಮ್ಮ ಜೀವನದಲ್ಲಿ ಗೋವಿನ ಮಹತ್ವ ಎಷ್ಟೆಂದು ತಿಳಿಯಬಹುದು.

ಓಜಸ್ಸನ್ನು ವೃದ್ಧಿಪಡಿಸುವ ಜೀವನೀಯ ಔಷಧಗಳಲ್ಲಿ ಶ್ರೇಷ್ಠವಾದ ರಸಾಯನವೇ ಹಾಲು. ಸನಾತನ ಕಾಲದಿಂದಲೂ ಯಾಗ ಯಜ್ಞಗಳಲ್ಲಿ ಬಳಸುವ ತುಪ್ಪ ಬೆಂಕಿಯಲ್ಲಿ ಕರಗಿ ಈ ವಾತಾವರಣದಲ್ಲಿರುವ ಮಾರಕ ಸೂಕ್ಷ್ಮಾಣುಗಳ ನಾಶಕ್ಕೆ ಕಾರಣವಾಗಿ ಪ್ರಕೃತಿಯನ್ನು ಶುದ್ಧಗೊಳಿಸುತ್ತದೆ. ಆರೋಗ್ಯದ ದೃಷ್ಟಿಯಿಂದ ನೊಡುವಾಗ ಕುಷ್ಠ, ತುರಿಕೆ, ಚರ್ಮರೋಗ ಮುಂತಾದ ರೋಗನಿವಾರಣೆಯಾಂದಿಗೆ ಕ್ಯಾನ್ಸರ್‌ ನಂತಹ ಪ್ರಾಣಾಂತಕ ರೋಗಕ್ಕೆ ದಿವ್ಯೌಷಧವಾಗಿ ಶುದ್ಧೀಕೃತ ಗೋಮೂತ್ರ ಬಳಕೆಯಾಗುತ್ತಿದೆ.

ಹಸು ಹಾಲಿಗಾಗಿ ಮಾತ್ರವಲ್ಲ ...

ಇಂದಿನ ವ್ಯಾವಹಾರಿಕ ಜಗತ್ತಿನಲ್ಲಿ ಹಾಲಿನ ಮಾರಾಟದಿಂದ ಆರಂಭವಾಗಿ ಭೂಮಿಯನ್ನು ಫಲವತ್ತತೆಯನ್ನು ಸಂವರ್ಧಿಸುವ ಗೋಮಯದ ಮಾರಾಟದ ತನಕ ಗೋವು ನಮಗೆ ಆರ್ಥಿಕವಾಗಿ ಲಾಭವನ್ನು ತರುತ್ತಿದೆ. ಇಂದಿಗೂ ನಮ್ಮ ಶುದ್ಧ ಸಾತ್ವಿಕ ಆಹಾರಗಳು ಗೋವಂಶದ ಶ್ರಮದ ಮೂಲಕವೇ ಬರುತ್ತಿದೆ. ಸಾಮಾನ್ಯ ಅಂದಾಜಿನಂತೆ ಒಂದು ಹಸು ವರ್ಷವೊಂದಕ್ಕೆ ಸರಾಸರಿ ಎಪ್ಪತ್ತು ಸಾವಿರ ರೂಪಾಯಿಗಳ ಆದಾಯವನ್ನು ತರಬಲ್ಲದು.

ಆಧುನಿಕ ಕೃಷಿಯು ಅಧಿಕ ಫಸಲನ್ನು ಪಡೆಯುವ ದುರಾಸೆಯಿಂದ ರಾಸಾಯನಿಕ ಗೊಬ್ಬರಗಳನ್ನು ಬಳಸಿ, ಬೆಳೆಯ ಸಂರಕ್ಷಣೆಯ ನೆವದಲ್ಲಿ ಕೀಟನಾಶಗಳನ್ನು ಬಳಸಿ ಭೂಮಿಯನ್ನು, ಆಹಾರವನ್ನೂ ವಿಷಯುಕ್ತಮಾಡುತ್ತ ರೋಗೋತ್ಪಾದನೆ ಮಾಡುತ್ತಾ ಸಾಗಿರುವಾಗ. ಪ್ರಕೃತಿಯನ್ನು ಪರಿಶುದ್ಧವಾಗಿರಿಸಿ, ಪೌಷ್ಠಿಕ ದವಸಧಾನ್ಯಗಳನ್ನು ಬೆಳೆಯಬಲ್ಲ ಗೋಮೂಲದ ಫಲವತ್ತಾದ ಸಾವಯವ ಗೊಬ್ಬರ ಉತ್ಪಾದನೆಯ ಆವಶ್ಯಕತೆ ಇದೆ. ಧರ್ಮ ಮತ್ತು ಶಾಂತಿಯ ಸಂಕೇತ ನಮ್ಮ ಭಾರತೀಯ ಗೋಸಂತತಿ ಸಮುದ್ರ ಮಥನಕಾಲದಲ್ಲಿ ಉದ್ಭವಿಸಿದ ಕಾಮಧೇನು ಸನಾತನ ಭಾರತೀಯ ಧಾರ್ಮಿಕ ಬದುಕಿನ ಆಧಾರ ಸ್ತಂಭ. ನಮ್ಮ ಪುರಾಣ ಇತಿಹಾಸದಂತೆ ಗೋವಿನ ಅನುಗ್ರಹದಿಂದ ಗೋಸೇವೆಯಿಂದ ಪುರಾತನ ರಾಜ ಮಹರ್ಷಿಗಳನೇಕರು. ಬದುಕಿನಲ್ಲಿ ನೆಮ್ಮದಿ ಶಾಂತಿ ಅರಸುವವರಿಗೆ ಗೊವಿನ ದರ್ಶನ ಮನೋಲ್ಲಾಸ ನೀಡಬಲ್ಲದು.

ಸರ್ವದೇವಮಯೀ ಗೌಃ ......

ಗೋವು ಭಗವಂತನ ಅನನ್ಯ ಸೃಷ್ಟಿ, ಗೋವಿನ ಆಧ್ಯಾತ್ಮಿಕ ಔನ್ನತ್ಯ ಧಾರ್ಮಿಕ ಆರ್ಥಿಕ ಸಾಮಾಜಿಕ ಮಹತ್ವ ಅಪಾರ. ಆರೋಗ್ಯ ರಕ್ಷಣೆಗೆ ಗೋವಂಶದ ಕೊಡುಗೆ ಅನನ್ಯ. ಮೂವತ್ಮೂರು ಕೋಟಿ ದೇವತೆಗಳ ಆವಾಸಸ್ಥಾನವಾಗಿರುವ ಭಾರತೀಯ ಗೋವು ಪ್ರಕೃತಿಜನ್ಯ ಪದಾರ್ಥಗಳನ್ನು ತಿಂದು ಔಷಧಯುಕ್ತ ಅಮೃತಸಮಾನ ಹಾಲನ್ನು ನೀಡುತ್ತದೆ. ಸರ್ವರೋಗನಿವಾರಕ ಗೊಮೂತ್ರ ಹಾಗೂ ಇತರ ದೃವ್ಯಗಳನ್ನು ನೀಡುವ ಮಾನವ ಜೀವನದ ಅವಿಭಾಜ್ಯ ಅಂಗವೇ ಅಗಿರುವ ಭಾರತೀಯ ಗೋವಂಶ ಇಂದು ಕ್ಷೀಣಿಸುತ್ತಿದೆ.

ಕಳೆದೆರಡು ಶತಮಾನಗಳಿಂದ 70 ಕ್ಕೂ ಹೆಚ್ಚಿದ್ದ ಗೋತಳಿ ಅವೈಜ್ಞಾನಿಕ ತಳಿಸಂಕರದಿಂದಾಗಿ ಮತ್ತು ಅನ್ಯ ಅವಿವೇಕದ ಕಾರಣಗಳಿಂದಾಗಿ ಉಳಿದಿರುವುದು 33 ವಂಶವಾಹಿಗಳು ಮಾತ್ರ. ಇವುಗಳಲ್ಲಿಯೂ ಕೆಲವು ಕಾಣಲು ವಿರಳವಾಗಿವೆ. ಲಭ್ಯವಿರುವ ತಳಿಗಳಲ್ಲಿ ಇಪ್ಪತ್ತೈದು ಹೊಸನಗರದ ರಾಮಚಂದ್ರಾಪುರ ಮಠದ ಅಮೃತಧಾರಾ ಗೋಶಾಲೆಯಲ್ಲಿ ಕಾಣಸಿಗುತ್ತವೆ. ಆರ್ಥಿಕ ದುರಾಗ್ರಹದಿಂದ ಗೋಸದೃಶ ವಿದೇಶೀ ಸಂತತಿಗಳನ್ನು ಬೆಳೆಸಿದ್ದರಿಂದ ಹಾಗು ವಿದೇಶೀ ತಳಿಸಂಕರದಿಂದ ರೋಗಕಾರಕಯುಕ್ತ ಬಿಳಿ ದ್ರವವನ್ನು ಹಾಲೆಂದು ಬಳಸುತ್ತಿದೇವೆ.

ಆಂದೋಲನ : ಭಾರತೀಯ ಗೋತಳಿಯ ರಕ್ಷಣೆಯ ಪಣತೊಟ್ಟು ತಮ್ಮ ಶಿಷ್ಯಕೋಟಿಗೆ ಗೋಮಾತೆಯ ಶ್ರೇಷ್ಠತೆಯನ್ನು ಮನದಟ್ಟು ಮಾಡಿಕೊಡುತ್ತಾ, ಹಲವಾರು ಗೋಶಾಲೆಗಳನ್ನು ತೆರೆದ ಸರ್ವವಂದ್ಯರೂ , ಪ್ರಾತಃ ಸ್ಮರಣೀಯರೂ ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರ ಶಂಕಾರಾಚಾರ್ಯ ಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳು ಗೋವಂಶ ರಕ್ಷಣೆಯ ಸೂತ್ರದಿಂದ ಮನುಕುಲೋದ್ಧಾರದ ಈ ಪರಿಕ್ರಮದ ಮಾಲಿಕೆಯಲ್ಲಿ ಭಾರತೀಯ ಗೋಯಾತ್ರೆಯೆಂಬ ಜನಜಾಗ್ರತಿ ಆಂದೋಲನವನ್ನು ಆರಂಭಿಸಲಿಸಲಿದ್ದಾರೆ. ರಾಜ್ಯಾದ್ಯಂತ ಗೋ ಸಾಂಕೇತಿಕ ರಥ 68 ದಿನಗಳಕಾಲ ಸಂಚರಿಸಿ, ಮಾಹಿತಿ ಪಸರಿಸಿ, ಜನಜಾಗೃತಿ ಮೂಡಿಸಿ ಮರಳಲಿದೆ.

ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಸಲುವಾಗಿ ಭಾರತೀಯ ಗೋತಳಿಗಳನ್ನು ಸಂರಕ್ಷಿಸುವ, ಸಂವರ್ಧಿಸುವ ಹಾಗೂ ಗೋಜನ್ಯ ಅನ್ಯ ಪದಾರ್ಥಗಳು ವಾಣಿಜ್ಯೋದ್ಯಮವಾಗಬಲ್ಲದೆಂಬುದನ್ನು ಜನಮನ ತಲುಪಿಸುವ ನಿಟ್ಟಿನಲ್ಲಿ ಭಾರತೀಯ ಗೋಯಾತ್ರೆ ಜನಾಂದೋಲನವಾಗಲಿದೆ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X