ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರೆತು ಹೋಗುತ್ತಿರುವ ಜನಪದ .......

By Staff
|
Google Oneindia Kannada News

ನಾಕೆಂಟು ಮಕ್ಕಳು ಕೂಡಿ ದುಂಡ್ಗೆ ಕೂತು ಅಂಗೈ ಕೆಳಮುಖ ಮಾಡಿ ನೆಲಕ್ಕಚ್ಚಿ ಒಂದನೆಯ ಕೈಯಿಂದ ಆರಂಭಿಸಿ- ಹತ್ತಿಕಟಗಿ .. ಬತ್ತಿ ಕಟಗಿ ಎನ್ನುತ್ತ ಆಟವಾಡುವ ಸಂಗತಿ ನಮಗೆ ಗೊತ್ತಿದೆ. ಇಲ್ಲಿರುವ ಆಟದ ಸ್ವರೂಪ ಕುರಿತು ಹೆಳುವುದು ನನ್ನ ಉದ್ದೇಶವಲ್ಲ . ಕೂಡಿ ಆಡುವುದರೊಂದಿಗೆ ಮಕ್ಕಳು ಪಡುವ ಸಂತೋಷದ ಕುರಿತು ಹೇಳುವ ಇರಾದೆಯೂ ನನಗಿಲ್ಲ. ಆಟದ ನಿಯಮ ಕುರಿತು ಶುಷ್ಕ ವಿವರಣೆ ನೀಡುವ ಗೋಜಿಗೂ ನಾನು ಹೋಗುವುದಿಲ್ಲ.

ನಾವೆಲ್ಲ ಬಾಲ್ಯದಲ್ಲಿ ಹಾಡಿದ ಈ ಹಾಡು ಇಂದಿಗೂ ಹಚ್ಚ ಹಸಿರು ! ಈ ಹಾಡಿನ ಅರ್ಥ ಏನಿರಬಹುದು ? ಅರ್ಥ ಇರಲಿ ಇಲ್ಲದಿರಲಿ ಅದು ನೀಡಿದ ಸಂತೋಷವನ್ನಂತೂ ಮರೆತಿಲ್ಲ ; ಮರೆಯುವಂತಹದಲ್ಲ ! ನಾನು ಕೇಳಿ ತಿಳಿದ ಅರ್ಥವನ್ನಂತೂ ಹೇಳುತ್ತೇನೆ. ಒಪ್ಪುವುದು ಬಿಡುವುದು ನಿಮಗೆ ಬಿಟ್ಟದ್ದು :

ಹತ್ತಿ ಕಟಗಿ ಎಂದರೆ ಜೀವವಿದ್ದ ಮನುಷ್ಯ. ಬತ್ತಿ ಕಟಗಿ ಯಾಗುವುದೆಂದರೆ ಸಾಯುವುದು. ಸತ್ತ ಮೇಲೆ ಶವ ಬಾಯುತ್ತದೆ. ಅದಕ್ಕೆ ಬಾಯುವ ಅಣ್ಣನವರು ಅವರು. ಎರಡು ದಿನ ಹಾಗೆಯೇ ಇಟ್ಟರೆ ಬಸಿಯಪ್ಪನವರೂ ಹೌದು. ಆದ್ದರಿಂದಲೇ ಅದು ಕಾಯ. ಧೂಳಾಗುವ ಕಾಯ. ಪಂಚ ಭೂತಗಳಲ್ಲಿ ಕರಗಿ ಹೋಗುವ ಕಾಯ. ಆ ದೇಹಕ್ಕೆ ಸಂಸ್ಕಾರ ಕೊಡಬೇಕಲ್ಲವೆ ? ನೆಲ ಕಡಿಯಲು ಹನುಮನಿಗೆ ಹೇಳಬೇಕಾಗುತ್ತದೆ. ಧನವಂತರಾದವರು ಧರ್ಮವನ್ನೂ ದಾನವನ್ನೂ ಮಾಡಬೇಕಾಗುತ್ತದೆ. ಮಾಡುತ್ತಾರೆ.

ಆದರೆ ಈವರೆಗಿನ ಅವನ ಜೀವನ ತಿಪ್ಪೆಯ ಮೇಲಿನ ಕೋಳಿಯಂತೆ. ಸಂಸಾರದ ಹೊಲಸನ್ನೇ ಕೆದರಿದೆ. ಇದಕ್ಕೆ ಫಲವಾಗಿ ರಕ್ತದಲ್ಲಿಯೇ ಹುಟ್ಟಿ ಹುಟ್ಟಿ ಬರುವ ಜನ್ಮಾಂತರವನ್ನು ಪಡೆದಿದೆ. ಇದೇ ತಿಪ್ಪೆಯ ಮೇಲೆಕೋಳಿ ರಗತಬೋಳಿ.

ಈ ಶಿಶುಪ್ರಾಸದ ಮೊದಲ ಭಾಗ ಇಲ್ಲಿಗೆ ಮುಗಿುತು. ಇನ್ನು ಮುಂದಿನ ಭಾಗ ಏನನ್ನು ಹೇಳುತ್ತದೆ ? ಪ್ರಶ್ನೋತ್ತರ ರೂಪದಲ್ಲಿರುವ ಇದು ವಸ್ತುವಿನ ಪರಿವರ್ತನೆಯ ಸತ್ಯವನ್ನು ಸಾಂಕೇತಿಕವಾಗಿ ತಿಳಿಸುತ್ತದೆ. ಜಗತ್ತಿನ ಯಾವ ವಸ್ತುವಿಗೂ ಜೀವಿಗೂ ನಿಜ ಅರ್ಥದಲ್ಲಿ ಸಾವಿಲ್ಲ.ಅದು ರೂಪಾಂತರ ಹೊಂದುತ್ತಿರುತ್ತದೆ ಅಷ್ಟೆ.

ಕಾಯ ಎಲ್ಲಿ ಹೋಯಿತು? ಕೈ ಕೈ ಎಲ್ಲಿ ಹೋಯಿತು? ಕದದ ಸಂದಿಯಲ್ಲಿ . ಇಲ್ಲಿಂದ ಹೊಲ ಏನ್‌ ಕೊಟ್ಟಿತು ಎನ್ನುವವರೆಗೆ ಚಕ್ಕಿ, ಬೂದಿ, ಗೊಬ್ಬರ ಮುಂತಾದವು ರೂಪಾಂತರದ ಸಂಗತಿಗಳನ್ನೇ ಹೇಳುತ್ತವೆ . ಕುತೂಹಲಕರ ಸಂಗತಿಯೆಂದರೆ, ಹೊಲ ಕೊಟ್ಟ ಜೋಳವನ್ನು ಚಲೊ ಇದ್ದವನ್ನು ತಾ ತಿಂದು ಸೆರಗು ಮುರಗನ್ನು ಕುಂಬಾರನಿಗೆ ಕೊಡುವ ವಿಧಾನದಲ್ಲಿ. ಕುಂಬಾರ ಗಡಿಗೆ, ಘಟ ಸೃಷ್ಟಿ ಮಾಡುವ ಸೃಷ್ಟಿಕರ್ತ. ಅವನಿಗೆ ಸೆರಗು ಜೋಳವನ್ನು ಮಾತ್ರ ಕೊಡುತ್ತಾನೆ !ನಮ್ಮ ವರ್ತನೆಗೆ ಈ ಸಂಗತಿಯನ್ನು ಹೋಲಿಸಿ ನೋಡಬಹುದು.

ಎಚ್ಚರಗೊಂಡ ಮನುಷ್ಯ ಗಡಿಗೆಯನ್ನು ಭಕ್ತಿಜಲ ತುಂಬಿಕೊಳ್ಳಲು ಬಾವಿಗೆ ಬಿಡುತ್ತಾನೆ. ಆ ಜಲವನ್ನೇ ಗಿಡಕ್ಕೆ ಹಾಕಿ ಜೀವಾತ್ಮ ಪುಷ್ಪ ಅರಳಲು ಕಾರಣವಾಗುತ್ತಾನೆ. ಹಾಗೆ ಅರಳಿದ ಹೂವನ್ನು ದೇವರಿಗೆ ಅರ್ಪಿಸಿ ಧನ್ಯನಾಗುತ್ತಾನೆ. ಇಲ್ಲಿಗೆ ಜೀವನ ಕತೆಗೆ ಒಂದು ಅರ್ಥ ಬರುತ್ತದೆ. ಜೀವನ ಸಾರ್ಥಕವಾಗುತ್ತದೆ. ಮೊದಲ ಭಾಗದ ಅಪೂರ್ಣತೆ ಇಲ್ಲಿ ಪೂರ್ಣವಾಗುತ್ತದೆ. ಇಡೀ ಬದುಕಿನ ಚಿತ್ರಣವನ್ನು ಇಷ್ಟೊಂದು ಅಡಕವಾಗಿ, ಅರ್ಥಪೂರ್ಣವಾಗಿ ಹೇಳಿದ ರೀತಿ ಬೆರಗು ಹುಟ್ಟಿಸುತ್ತದೆ !

ಜಾನಪದವೆಂದರೆ ಹಾಗೇನೆ- ಬೆರಗು, ಬೆಡಗು, ಜೀವನಪ್ರೀತಿಯ ಸುಗ್ಗಿ. ಇಂಥ ಜಾನಪದವನ್ನು ಕಡೆಗಣಿಸುತ್ತಿದ್ದೇವಲ್ಲ ?

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X