ಪದಮೂಲ : ಕಾಮಿನಿಯೆಂದರೆ ಹೆಣ್ಣು ; ಕಾಮಿಯೆಂದರೆ ಹೆಣ್ಣುಬೆಕ್ಕು!
ಪದಕೋಶಗಳು ಗಡಿಯಾರ ಇದ್ದ ಹಾಗೆ. ಯಾವುದೂ ಇಲ್ಲದಿರುವುದಕ್ಕಿಂತ ಕೆಟ್ಟದ್ದಾದರೂ ಒಂದಿದ್ದರೆ ಮೇಲು. ಅತ್ಯಂತ ಒಳ್ಳೆಯದಾಗಿದ್ದರೂ ಅದು ಸತ್ಯ ಹೇಳುತ್ತದೆ ಅಂತ ನಂಬುವಂತಿಲ್ಲ ಅಂತ ಸ್ಯಾಮ್ಯುಯೆಲ್ ಜಾನ್ಸನ್ ಹೇಳಿದ್ದು ಎಲ್ಲಾ ಭಾಷೆಯ ಪದಕೋಶಗಳಿಗೂ ಒಪ್ಪುತ್ತದೆ. ಯಾವುದೋ ಸಂದರ್ಭಕ್ಕೆ ಹೊಂದುವ ಪದಕ್ಕೆ ಕೇವಲ ಸಾಂದರ್ಭಿಕವಾದ ಅರ್ಥವಷ್ಟೇ ಇದ್ದಿರುವ ಸಾಧ್ಯಕೆ ಉಂಟು. ಆದರೆ ಅದು ಪದಕೋಶದೊಳಗೆ ಬಂದಾಗ ತುಂಬ ವಿಶಾಲವಾದ ಅರ್ಥವನ್ನು ಪಡೆದುಕೊಂಡು ಬಿಡುತ್ತದೆ.
ಉದಾಹರಣೆಗೆ ಸೆಕ್ಸಿ ಎಂಬ ಪದ. ಇವತ್ತು ಕನ್ನಡದ್ದೇ ಎಂಬಷ್ಟು ಸಲೀಸಾಗಿ ಬಳಕೆಯಾಗುತ್ತಿರುವ ಈ ಪದ ಮೊದಲು ಇಂಗ್ಲಿಷಿನಲ್ಲಿ ಕಾಣಿಸಿಕೊಂಡದ್ದು 1928ರಲ್ಲಿ ಅನ್ನುತ್ತಾರೆ. ಮತ್ತೊಬ್ಬ ಪಂಡಿತನ ಪ್ರಕಾರ 1925ರಲ್ಲಿ ಒಬ್ಬ ವ್ಯಕ್ತಿ ಈ ಪದವನ್ನು ಒಂದು ಪತ್ರದಲ್ಲಿ ಬಳಸಿದ್ದನಂತೆ. ಆದರೆ ಬಹಳ ವರುಷಗಳ ಕಾಲ ಅದನ್ನು ಅನೌಪಚಾರಿಕ ಪದ ಎಂದೇ ಇಂಗ್ಲಿಷ್ ಡಿಕ್ಷನರಿಗಳು ಭಾವಿಸಿದ್ದವು. ಆಕ್ಸಫರ್ಡ್ ಡಿಕ್ಷನರಿಯ ಪ್ರಕಾರ ಅದು 'ಒಳ್ಳೆಯ ಪದ".
ಸೆಕ್ಸಿ ಅಂದರೆ ತೀರಾ ಅಶ್ಲೀಲವೆನ್ನಿಸುವ ಮಟ್ಟದಲ್ಲಿ ಲೈಂಗಿಕವಾಗಿ ಆಕರ್ಷಕವಾಗಿರುವುದು. ಆರಂಭದಲ್ಲಿ ನೀವು ಸೆಕ್ಸಿಯಾಗಿದ್ದೀರಿ ಅಂತ ಯಾರಿಗಾದರೂ ಹೇಳಿದ್ದರೆ ಕಪಾಳಮೋಕ್ಷ ಆಗುತ್ತಿತ್ತು. ಈಗ ಮಹಿಳೆಯರೂ ಉದಾರವಾದಿಗಳಾಗಿದ್ದಾರೆ. ಸೆಕ್ಸಿಯಾಗಿದ್ದೀರಿ ಅಂದರೆ ಥ್ಯಾಂಕ್ಯು ಅನ್ನುವಷ್ಟು ಸಂಭಾವಿತೆಯರೂ ಆಗಿದ್ದಾರೆ!
ಆದರೆ ಸಂಸ್ಕೃತದಲ್ಲಿ ಇದಕ್ಕೆ ಸಂವಾದಿಯಾದ ಪದ ಬಹಳ ಹಿಂದೆಯೇ ಬಳಕೆಯಲ್ಲಿತ್ತು. ಮಂಗರಾಜರ ನಿಘಂಟಿನಲ್ಲಿ ಹೆಣ್ಣನ್ನು ನಿರ್ದೇಶಿಸಲು ಕೊಡುವ ಶಬ್ದಗಳು ಇವು;
ಭಾಮಿನಿ, ನಿತಂಬಿನಿ, ಪ್ರಮದೆ, ಸುಂದರಿ, ಲಲನೆ, ಕಾಮಿನಿ, ಪುರ್ರಂ, ವಧು, ಯುವತಿ, ಕಾಂತೆ, ಯುವತಿ, ಅಂಗನೆ, ರಮಣಿ, ವಾಮೆ, ಸೀಮಂತಿನಿ, ಸ್ತ್ರೀ, ವನಿತೆ, ನಾರಿ, ಯೋಷಿತ್, ಮಹಿಳೆ, ಅಬಲೆ, ರಾಮೆ, ವರವರ್ಣಿನಿ- ಎನಲ್ಕೆ ಹೆಂಗೂಸೆನಿಕ್ಕು.
ಇವುಗಳಲ್ಲಿ ಬಹಳಷ್ಟು ಪದಗಳ ಅರ್ಥ ಸೆಕ್ಸಿಗಿಂತ ವಿಶಾಲವಾಗಿದೆ. ಮಹ್ ಅಂದರೆ ಉತ್ತೇಜನಗೊಳಿಸುವುದು. ಆದ್ದರಿಂದ ಅವಳು ಮಹಿಳೆ. ರಮಿಸುತ್ತಾಳೆ ಆದ್ದರಿಂದ ರಮಣಿ. ಲಲ್ಲೆಗರೆಯುತ್ತಾಳೆ, ಆದ್ದರಿಂದ ಲಲನೆ. ಕಾಮೋನ್ಮಾದದಿಂದ ಗಂಡಸರನ್ನು ಕಾಮುಕರನ್ನಾಗಿಸುತ್ತಾಳೆ, ಆದ್ದರಿಂದ ಕಾಮಿನಿ. ಆಕೆಯನ್ನೇ ಕಾಮೋನ್ಮಾದ ಇದ್ದರೆ ಆಕೆ ಪ್ರಮದೆ.
ಹಾಗೇ ಆಕೆ ಆತ್ಮಗೌರವ ಇದ್ದವಳಾದರೆ ಮಾನಿನಿ, ಸಿಟ್ಟಾಗುವವಳೂ ಆಗಿದ್ದರೆ ಭಾಮಿನಿ.
(ಪಾವೆಂ ಪದದಂಗಡಿಯಿಂದ ಕಡ ತಂದದ್ದು .
ಸ್ನೇಹಸೇತು : ಓ ಮನಸೇ !)
-
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ












Click it and Unblock the Notifications