ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ-ಮನಸ್ಸು : ಜ್ಞಾನಪೀಠಿಗಳ ಮುಖಗಳು ಏನು ಹೇಳುತ್ತವೆ ?

By Staff
|
Google Oneindia Kannada News
‘ಮುಖ ಮನಸ್ಸಿನ ಅಭಿವ್ಯಕ್ತಿ’

ಇಲ್ಲವೆಂದವರಾರು ? ಬುದ್ಧನ ನಗು, ಗಾಂಧಿಯ ಮಖದಲ್ಲಿನ ಮುಗ್ಧತೆ, ತೆರೇಸಾ ಮುಖದಲ್ಲಿನ ಅಮ್ಮನತನ...... ದೊಡ್ಡವರ ಮಾತು ಬಿಡಿ; ಇಬ್ಬನಿಯ ಮುತ್ತಿಕುತ ಅರಳಿರುವ ಹೂವಿನಂಥ ಮಕ್ಕಳ ಮುಖ ನೋಡಿ- ಅವರ ಮನಸ್ಸಿನ ಮುಗ್ಧತೆಯೆಲ್ಲ ಮುಖದಲ್ಲಿ ಮೈತಾಳಿರುತ್ತದೆ. ಅದು ದೇವರನು ನಿವಾಳಿಸಿ ಬಿಸಾಡಬಲ್ಲಂಥ ಮುಗ್ಧತೆ. ಆ ಕಾರಣದಿಂದಲೇ ‘ಮುಖ ಮನಸ್ಸಿನ ಅಭಿವ್ಯಕ್ತಿ’ ಎಂಬುದು ಹದಿನಾರಾಣೆ ಅಪರಂಜಿ ಮಾತು.

ಒಬ್ಬೊಬ್ಬರ ಮುಖದ್ದು ಒಂದೊಂದು ವೈಶಿಷ್ಟ್ಯ. ಕೆಲವರಿಗೆ ಬೋಳು ಹಣೆ. ಕೆಲವರ ಮೂಗು ಗಿಡ್ಡ ಕೆಲವರದು ಖೆಡ್ಡ. ಕೆಲವರ ಮುಖ ಕೆಂಡಸಂಪಿಗೆ, ಕೆಲವರದು ಕೆಂದಾವರೆ. ಕಮಲಮುಖಿ ಇದ್ದಂತೆಯೇ ಕಪಿಮುಖಿಗಳೂ ಇದ್ದಾರೆ. ಹಾಗೆಂದು ಅವರ ಮನಸ್ಸೂ ಕಪಿಯೆಂದು ಭಾವಿಸುವುದು ಬೇಡ. ಮನಸ್ಸಿಗೆ ಸಂಬಂಧ ಪಟ್ಟಿದ್ದು ಮುಖದಲ್ಲಿನ ಭಾವನೆಗಳೇ ಹೊರತು ರೂಪವಲ್ಲ . ಕಪಿಯಂಥ ಮುಖದವರ ಮನಸ್ಸು ಮಲ್ಲಿಗೆಯಾಗಿರಬಹುದು; ಕಮಲಮುಖಿಯರ ಚಿತ್ತ ಹೆಂಡಕುಡಿದ ಮರ್ಕಟದಂತಿರಬಹುದು.

ಈಗ ಹೇಳಹೊರಟಿರುವ ಕನ್ನಡಿಗರ ಮುಖದ ಕುರಿತು. ಇವರ್ಯಾರೂ ಸಾಧಾರಣ ಕನ್ನಡಿಗರಲ್ಲ . ಸಾರಸ್ವತ ಲೋಕದ ಈ ದಿಗ್ಗಜಗಳು ಜ್ಞಾನಪೀಠಿಗಳು ; ಕನ್ನಡ ಸಾರಸ್ವತ ಸಂಪುಟದ ಆಜೀವ ಸಚಿವರು !

ಕುವೆಂಪು, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ವಿನಾಯಕ ಕೃಷ್ಣ ಗೋಕಾಕ್‌, ಯು.ಆರ್‌.ಅನಂತಮೂರ್ತಿ ಹಾಗೂ ಗಿರೀಶ್‌ ಕಾರ್ನಾಡ್‌. ಈ ಸಪ್ತರ್ಷಿ ಮಂಡಲದ ಮುಖ ಕಮಲಗಳ ಮೇಲೆ ದೃಷ್ಟಿ ಹಾಯಿಸಿದಾಗ ನನಗೆ ಅನ್ನಿಸಿದ್ದು ಹೀಗೆ-

  1. ಕುವೆಂಪು : ಕನಸುಗಾರ, ಚಿಂತಕ.
  2. ಕಾರಂತ : ಚಿಂತಕ, ಬುದ್ಧಿಜೀವಿ.
  3. ಮಾಸ್ತಿ : ಕೋಪಿಷ್ಠ , ಅಸಂತುಷ್ಟ
  4. ಬೇಂದ್ರೆ : ಹಸನ್ಮುಖಿ, ತೇಜಸ್ವಿ
  5. ಗೋಕಾಕ್‌ : ಜಂಟಲ್ಮೆನ್‌, ಅಧಿಕಾರಶಾಹಿ
  6. ಅನಂತಮೂರ್ತಿ : ಸ್ವಕೇಂದ್ರಿತ ರಾಜಕಾರಣಿ
  7. ಕಾರ್ನಾಡ್‌ : ಬುದ್ಧಿಜೀವಿ, ಚಿಂತಕ
ಇದು ಕನ್ನಡದ ಸಪ್ತರ್ಷಿಗಳನ್ನು ಗೇಲಿ ಮಾಡುವ ಪ್ರಯತ್ನವಲ್ಲ . ಸುಮ್ಮನೆ ಅವರ ಫೋಟೊ ನೋಡುತ್ತಿದ್ದಾಗ ಹೊಳೆದ ಭಾವನೆಗಳಿವು. ತಮಾಷೆಯಾಗಿವೆ ಅನ್ನಿಸಿದ್ದರಿಂದ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಿಮಗೆ ಏನನ್ನಿಸುತ್ತೋ ?

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X