ವಿಶ್ವದ ದೊಡ್ಡ ಸುಳ್ಳಾಡುವ ಭಾಷೆ ಇಂಗ್ಲಿಷ್‌-ಅನಂತಮೂರ್ತಿ

*ಮುಕುಂದ ತೇಜಸ್ವಿ

Dr.U.R.Ananthamurthy‘ಇಡೀ ಪ್ರಪಂಚದಲ್ಲಿ ಅತ್ಯಂತ ದೊಡ್ಡ ಸುಳ್ಳಾಡುವ ಭಾಷೆ ಎಂದರೆ ಇಂಗ್ಲಿಷ್‌. ಈ ಭಾಷೆಯಲ್ಲಿರುವಷ್ಟು ಸುಳ್ಳು ಮತ್ತಾವ ಭಾಷೆಯಲ್ಲೂ ಇಲ್ಲ. ಈ ಹಿನ್ನಲೆಯಲ್ಲಿಯೇ ಇರಾಕ್‌ ಮೇಲಿನ ಯುದ್ಧ ಬಿಡುಗಡೆಗಾಗಿ, ಪೆಟ್ರೋಲ್‌ಗಾಗಿ ಅಲ್ಲ ಎನ್ನುತ್ತಿದೆ ಅಮೆರಿಕಾ. 21ನೇ ಶತಮಾನದ ದಿಟ್ಟ ಪ್ರತಿಪಾದನೆಯಾದ ಸಮಾನತೆಯನ್ನು ನಾಶಮಾಡಲು ಅಮೆರಿಕಾ ಪ್ರಯತ್ನಿಸುತ್ತಿದೆ’.
ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಯು.ಆರ್‌. ಅನಂತಮೂರ್ತಿ ತಮ್ಮ ಸಾತ್ವಿಕ ಕೋಪ ಹೊರಹಾಕಿದ್ದು ಹೀಗೆ. ಸಂದರ್ಭ : ಕನ್ನಡ ಸಾಹಿತ್ಯ ಪರಿಷತ್‌ನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ , ಮಾ.28ರ ಶುಕ್ರವಾರ ನಡೆದ ಪು.ತಿ.ನ ಟ್ರಸ್ಟ್‌ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ ಪು.ತಿ.ನ ಸಮಗ್ರ ಗದ್ಯ ಸಂಪುಟ ಬಿಡುಗಡೆ ಸಮಾರಂಭ.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಯು.ಆರ್‌. ಅನಂತಮೂರ್ತಿ , ಪು.ತಿ.ನರಸಿಂಹಾಚಾರ್‌ ಅವರನ್ನು ಹೊಗಳಿದರು. ಸುಳ್ಳಾಡಲು ಇಂಗ್ಲಿಷನ್ನು ಬಳಸಿಕೊಳ್ಳುತ್ತಿರುವವರನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ಅಮೆರಿಕಾ ನಡೆಸುತ್ತಿರುವ ಯುದ್ಧವನ್ನು ಪ್ರತಿಭಟಿಸಿದರು. ಇದಕ್ಕಾಗೇ ಶುರುವಾಗಿರುವ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಅನಂತಮೂರ್ತಿ ಅವರಿಗೆ ಸಮಾರಂಭ ಹೊಸ ಚಳವಳಿಯ ಚಿಂತನೆಗಳನ್ನು ಹಂಚುವ ವೇದಿಕೆಯೂ ಆಯಿತು.

ಪು.ತಿ.ನ ಅವರ ಜತೆ ತಾವು ಕಳೆದ ಮಧುರ ದಿನಗಳನ್ನು ಮೆಲುಕು ಹಾಕಿದ ಅನಂತ ಮೂರ್ತಿ, ಪು.ತಿ.ನರಸಿಂಹಾಚಾರ್‌ ಜಗತ್ತಿನ ಮಹಾನ್‌ ಚಿಂತಕರಲ್ಲೊಬ್ಬರು. ರಸದ ಕಲ್ಪನೆಯಲ್ಲಿ ಭವವನ್ನು ಗ್ರಹಿಸಿದಾಗ ದೊಡ್ಡದು ಲಭಿಸುತ್ತದೆ ಎಂಬುದನ್ನು ಅವರು ಅರಿತಿದ್ದರು. ಅವರಿಗೆ ಸ್ವಲ್ಪ ತುಂಟತನ ಇಲ್ಲದಿದ್ದರೆ ಡಲ್‌ ಆಗಿರುತ್ತಿದ್ದರು ಎಂದರು.

ಇದಕ್ಕೂ ಮುನ್ನ ಕೃತಿಯ ಬಗ್ಗೆ ಮಾತನಾಡಿದ ಖ್ಯಾತ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ,
ಇಂಥ ಪುಸ್ತಕ ಓದುವುದರಿಂದ ಶ್ರೇಷ್ಠ ಹಾಗೂ ಸೃಜನಶೀಲ ಜನರ ಒಡನಾಟ ದಕ್ಕುತ್ತೆ . ಇಂಥ ಗ್ರಂಥದ ಓದು ನಮ್ಮನ್ನು ಚಲನಶೀಲವಾಗಿ, ಆರೋಗ್ಯವಾಗಿಟ್ಟುಕೊಳ್ಳಲು ಕಾರಣವಾಗುತ್ತದೆ ಎಂದು ಹೇಳಿದರು.

ಎದೆ ತುಂಬಿ ಬರೆವ ಕವಿ ಜಿ.ಎಸ್‌. ಶಿವರುದ್ರಪ್ಪನವರನ್ನು ಬಹಳವಾಗಿ ಮೆಚ್ಚಿಕೊಂಡ ನರಹಳ್ಳಿ ಬಾಲಸುಬ್ರಹ್ಮಣ್ಯ,
ಅವರು ಎಲ್ಲಿರುತ್ತಾರೋ ಅಲ್ಲಿ ಅತ್ಯುತ್ತಮ ಕೆಲಸ ಆಗುತ್ತೆ . ಪು.ತಿ.ನ. ಟ್ರಸ್ಟ್‌ನ ಅಧ್ಯಕ್ಷರಾಗಿ ಅವರು ಮಾಡುತ್ತಿರುವ ಸೇವೆ ಸ್ಮರಣೀಯ. ಪು.ತಿ.ನ ಅವರನ್ನು ನೆನಸಿಕೊಳ್ಳಲು ಟ್ರಸ್ಟ್‌ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಪುತಿನ ಟ್ರಸ್ಟ್‌ ಅಧ್ಯಕ್ಷ ಜಿ.ಎಸ್‌. ಶಿವರುದ್ರಪ್ಪ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಲ್ಲೇಪುರಂ ವೆಂಕಟೇಶ್‌ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಪೂರಕ ಓದಿಗೆ-
ಅಮೆರಿಕ ವಿರೋಧಿ ಆಂದೋಲನಕ್ಕೆ ಅನಂತಮೂರ್ತಿ ಜೈ !
ಡಾ। ಪುತಿನ ಪ್ರತಿಷ್ಠಾನ- ಇಣುಕು ನೋಟ!

Click here to go to top
ಮುಖಪುಟ / ಸಾಹಿತ್ಯ ಸೊಗಡು


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+