ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಹರೇಶ್ವರರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ

By Staff
|
Google Oneindia Kannada News

Shikaripura Harihareshwaraಮೈಸೂರು : ಸುಚಿತ್ರ ಕಲಾ ಗ್ಯಾಲರಿಯ ಕಲಾ ಮಂದಿರಲ್ಲಿ ಜನವರಿ 25 ರ ಶನಿವಾರ ಸಂಜೆ 5 ಗಂಟೆಗೆ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ.

ಗಣ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಮೈಸೂರು ಆಯೋಜಿಸಿರುವ ಈ ಗೋಷ್ಠಿಯನ್ನು ಕೆ.ಎನ್‌.ಶಿವತೀರ್ಥನ್‌ ಉದ್ಘಾಟಿಸಲಿದ್ದು, ಶಿಕಾರಿಪುರ ಹರಿಹರೇಶ್ವರ ಅಧ್ಯಕ್ಷತೆ ವಹಿಸಲಿದ್ದಾರೆ.

ಹದಿನಾಲ್ಕು ಮಂದಿ ಕವಿ/ಕವಯತ್ರಿಯರು ಕನ್ನಡ, ಹಿಂದಿ, ತೆಲುಗು, ಉರ್ದು, ತುಳು, ಕೊಂಕಣಿ, ಸಂಸ್ಕೃತ, ಮಲೆಯಾಳಿ, ರಾಜಾಸ್ಥಾನಿ ಹಾಗೂ ಮರಾಠಿ ಭಾಷೆಗಳಲ್ಲಿ ಕವನ ವಾಚನ ಮಾಡಲಿದ್ದಾರೆ. ಸಾಹಿತ್ಯಾಕಾಂಕ್ಷಿ ಹಾಗೂ ಸಹೃದಯರಿಗೆ ಅಪರೂಪದ ಅನುಭವ ಕಟ್ಟಿಕೊಡುವ ಕಾರ್ಯಕ್ರಮವಿದು. ನೀವೂ ಬಿಡುವು ಮಾಡಿಕೊಂಡು ಹೋಗಿಬನ್ನಿ.

ಗೋಷ್ಠಿಯಲ್ಲಿ ಕಾವ್ಯದೂಟ ಬಡಿಸುವವರು
ಡಾ। ಆರ್‌.ಜಿ.ಮಠಮತಿ- ಕನ್ನಡ
ಜಿ.ಕೆ.ರವೀಂದ್ರಕುಮಾರ್‌- ಕನ್ನಡ
ನಾಗಲಕ್ಷ್ಮಿ ಹರಿಹರೇಶ್ವರ- ಕನ್ನಡ
ಜೀನಹಳ್ಳಿ ಸಿದ್ಧಲಿಂಗಯ್ಯ- ಕನ್ನಡ
ಎನ್‌.ಜಿ.ಅಪೂರ್ವ- ಹಿಂದಿ
ವಸಂತಕುಮಾರ್‌ ಪೆರ್ಲ- ತುಳು
ಡಾ। ಕುಸುಮಾ ವಿ. ಪೈ- ಕೊಂಕಣಿ
ವಿದ್ವಾನ್‌ ಎಸ್‌. ಜಗನ್ನಾಥ್‌-ಸಂಸ್ಕೃತ
ಸನಲ್‌ಕುಮಾರ್‌ ಬಿ.ಎನ್‌.-ಮಲೆಯಾಳಂ
ಅಬ್ದುಲ್‌ ರೆಹಮಾನ್‌ ಖಾನ್‌ ಗೌಹರ್‌ ತರೀಕೆರೆ ವಿ.- ಉರ್ದು
ಸೈಯದ್‌ ಅಹಮದ್‌ ರಾಹಿಲ್‌- ಉರ್ದು
ಪಿ.ಎನ್‌.ಪ್ರೇಮ್‌ ಪರವಾಲ್‌- ರಾಜಸ್ಥಾನಿ
ಡಾ। ಮಾಣಿಕ್‌ ಬೆಂಗೇರಿ- ಮರಾಠಿ
ಡಾ। ಆರ್‌.ವಿ.ಎಸ್‌.ಸುಂದರಂ- ತೆಲುಗು

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X