70ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯಗಳು
ಬೆಳಗಾವಿ: ಪ್ರಾದೇಶಿಕ ಅಸಮತೋಲನ ನಿವಾರಣೆ ಹಾಗೂ ಕನ್ನಡ ಭಾಷೆಯ ಉಳಿವಿಗಾಗಿ ಹಕ್ಕೊತ್ತಾಯ-ನಿರ್ಣಯಗಳನ್ನು ಅಂಗೀಕರಿಸುವುದರೊಂದಿಗೆ ಮೂರು ದಿನಗಳ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಭಾನುವಾರ ಸಂಜೆ ಮುಕ್ತಾಯವಾಯಿತು.
ಸಮ್ಮೇಳನದಲ್ಲಿ ಅಂಗೀಕರಿಸಿದ ಪ್ರಮುಖ ನಿರ್ಣಯಗಳು :
- ಮುಂದಿನ ವರ್ಷದಿಂದ ವಿಶ್ವ ಕನ್ನಡ ಸಮ್ಮೇಳನ
- ರೈತರ ಮತ್ತು ಕಾರ್ಮಿಕ ಹಿತ ಕಾಪಾಡುವ ಹೊಣೆ ಸರಕಾರದ್ದು
- ಬೆಳಗಾವಿಯಲ್ಲಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಸಬೇಕು
- ಮಹಾಜನ ವರದಿಯನ್ನು ಯಥಾವತ್ ಜಾರಿ ಮಾಡಬೇಕು
- ಡಾ. ನಂಜುಡಪ್ಪ ವರದಿ ಅನುಷ್ಠಾನಕ್ಕೆ ಆಯವ್ಯಯದಲ್ಲಿ ಹಣ ಕಾದಿರಿಸಬೇಕು
- ಮಕ್ಕಳ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಲು ಮಕ್ಕಳ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಬೇಕು
- ತಾಂತ್ರಿಕ ಮತ್ತು ವೈದ್ಯಕೀಯ ಕೋರ್ಸ್‌ಗಳಲ್ಲಿ ಕನ್ನಡ ಬೋಧನೆಯನ್ನು ಕಡ್ಡಾಯಗೊಳಿಸಬೇಕು
ಮುಂದಿನ ಸಮ್ಮೇಳನ ಮೂಡಬಿದಿರೆಯಲ್ಲಿ
ಅಖಿಲ ಭಾರತ 71ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಕ್ಷಿಣ ಕನ್ನಡದ ಮೂಡಬಿದರೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ದ. ಕ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮೂಡಬಿದರೆಯಲ್ಲಿ ಸಮ್ಮೇಳನ ನಡೆಸುವ ಪ್ರಸ್ತಾಪವನ್ನು ಮಂಡಿಸಿದರು. ವ್ಯಾಪಕ ಚರ್ಚೆಯ ನಂತರ ಮುಂದಿನ ಸಮ್ಮೇಳನವನ್ನು ಮೂಡಬಿದರೆಯಲ್ಲಿ ನಡೆಸಲು ನಿರ್ಧರಿಸಲಾಯಿತು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications