ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಷತ್ತಿನ ವಿರುದ್ಧ ಸಿಡಿದೆದ್ದ ಪುಸ್ತಕ ಪ್ರಕಾಶಕರು

By Staff
|
Google Oneindia Kannada News

(ವಿಶೇಷ ಪ್ರತಿನಿಧಿಯಿಂದ)

ಬೆಳಗಾವಿ : ಪುಸ್ತಕ ಪ್ರದರ್ಶನ ಹಾಗೂ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಟ್ಟಿಲ್ಲ ಎಂದು ಆಪಾದಿಸಿ ಪುಸ್ತಕ ಪ್ರಕಾಶಕರು ಶನಿವಾರ ಬೆಳಗ್ಗೆ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದರು.

ಸಮ್ಮೇಳನ ನಡೆಯುತ್ತಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಪುಸ್ತಕ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿಲ್ಲ . ಇದರಿಂದಾಗಿ ಪುಸ್ತಕ ಮಾರಾಟಕ್ಕೆ ತೊಡಕುಂಟಾಗಿದೆ ಎಂದು ಪುಸ್ತಕ ಪ್ರಕಾಶಕರು ಧರಣಿ ನಡೆಸಿದರು. ಸುಮಾರು 330 ಕ್ಕೂ ಹೆಚ್ಚು ಪ್ರಕಾಶಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪುಸ್ತಕ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸದ ಕುರಿತು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು- ಕನ್ನಡ ಸಾಹಿತ್ಯ ಪರಿಷತ್ತಿನ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೆಲವು ಪ್ರತಿಭಟನಾಕಾರರು ‘ನಿಂತ ನೆಲ - ಬೆಳಗಾವಿ’ ಎಂಬ ಗೋಷ್ಠಿ ನಡೆಯುತ್ತಿದ್ದ ಸಂದರ್ಭದಲ್ಲಿ ವೇದಿಕೆಗೆ ನುಗ್ಗಲು ಪ್ರಯತ್ನಿಸಿದರು. ಸಕಾಲಕ್ಕೆ ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಪುಸ್ತಕ ಮಾರಾಟ ಡಲ್ಲೋ ಡಲ್ಲು !

ಒಂದೆಡೆ ಮಳೆಯ ಭೀತಿ, ಇನ್ನೊಂದೆಡೆ ವ್ಯಾಪಾರದಲ್ಲಿ ಇಳಿಮುಖ- ಇದರಿಂದಾಗಿ ಸಾಹಿತ್ಯ ಸಮ್ಮೇಳನದಲ್ಲಿ ಭರ್ಜರಿ ವ್ಯಾಪಾರ ನಿರೀಕ್ಷಿಸಿ ಆಗಮಿಸಿದ್ದ ಪುಸ್ತಕ ವ್ಯಾಪಾರಿಗಳು ಕಂಗೆಟ್ಟಿದ್ದಾರೆ.

ಸಾಹಿತ್ಯ ಸಮ್ಮೇಳನ ನಡೆಯುವ ಸಭಾಂಗಣದ ಸುತ್ತಮುತ್ತಲೂ ಪುಸ್ತಕ ಮಳಿಗೆಗಳನ್ನು ತೆರೆಯುವ ಸಂಪ್ರದಾಯವನ್ನು ಈ ಬಾರಿ ಮುರಿದು- ಸಮ್ಮೇಳನ ನಡೆಯುವ ಸ್ಥಳದಿಂದ ಸ್ವಲ್ಪ ದೂರದಲ್ಲಿ ಪುಸ್ತಕ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಪುಸ್ತಕ ಮಾರಾಟಕ್ಕೆ ಭಾರೀ ಪೆಟ್ಟು ಬಿದ್ದಿದೆ ಎನ್ನುವುದು ಪುಸ್ತಕ ವ್ಯಾಪಾರಿಗಳ ಅಳಲು.

ಈವರೆಗೂ ಸಮ್ಮೇಳನಗಳಲ್ಲಿ ಪುಸ್ತಕಗಳಿಗೆ ಮಹತ್ವದ ಸ್ಥಾನವಿತ್ತು . ಆದರೆ ಈ ಬಾರಿ ಪುಸ್ತಕಗಳ ಸ್ಥಳವನ್ನು ವಿದೇಶಿ ಕಂಪನಿಗಳ ಮೆದು ಪಾನೀಯಗಳು ಆಕ್ರಮಿಸಿಕೊಂಡಿವೆ. ಪುಸ್ತಕಗಳನ್ನು ಜನರಿಗೆ ತಲುಪಿಸುವ ಸುವರ್ಣಾವಕಾಶವನ್ನು ಸಾಹಿತ್ಯ ಪರಿಷತ್ತು ಹಾಳು ಮಾಡಿದೆ ಎಂದು ಕೆಲವು ಪ್ರಕಾಶಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X