ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ವಿಶ್ವವಿದ್ಯಾಲಯ : ನನಸಾದ ಬೇಂದ್ರೆ, ಕುವೆಂಪು ಕನಸು

By Staff
|
Google Oneindia Kannada News

(ವಿಶೇಷ ಲೇಖನ)

ಕನ್ನಡ ನಾಡಿನ ಭಾಷೆಯೇ ಕನ್ನಡವಾಗಿರುವಾಗ ಅದರ ಅಭಿವೃದ್ಧಿಗೊಂದು ಪ್ರಾಧಿಕಾರವೇಕೆ? ಕನ್ನಡ ಕಾವಲಿಗೊಂದು ಸಮಿತಿ ಏಕೆ ಎಂಬ ಸಹಜ ಪ್ರಶ್ನೆಗಳಂತೆಯೇ ರಾಜ್ಯದಲ್ಲಿ ಇಷ್ಟೊಂದು ವಿಶ್ವವಿದ್ಯಾಲಯಗಳಿರುವಾಗ ಕನ್ನಡ ವಿಶ್ವವಿದ್ಯಾಲಯದ ಅಗತ್ಯವೇನು? ಎಂಬ ಪ್ರಶ್ನೆ ಎರಡು ದಶಕಗಳ ಹಿಂದೆ ಉದ್ಭವಿಸಿತ್ತು.

ಆದರೆ, ಕನ್ನಡದ ಆಸ್ತಿ ಮಾಸ್ತಿ, ರಾಷ್ಟ್ರಕವಿ ಕುವೆಂಪು, ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಮೊದಲಾದವರು ಕನ್ನಡ ಭಾಷೆಯ ಬಗೆಗಿನ ಉನ್ನತ ಸಂಶೋಧನಗೆ ಕನ್ನಡ ನಾಡಿಗೊಂದು ಕನ್ನಡ ವಿವಿ ಬೇಕೆ ಬೇಕು ಎಂದು ಪ್ರತಿಪಾದಿಸಿದರು. ಕನ್ನಡ ವಿವಿಯ ಕನಸನ್ನು ಮೊದಲು ಕಟ್ಟಿದವರೇ ಬೇಂದ್ರೆ ಹಾಗೂ ಕುವೆಂಪು. ಇಂದು ಕುವೆಂಪು ಅವರ ಕನಸು ನನಸಾಗಿದೆ. ಕನ್ನಡ ವಿವಿಗೆ ಹತ್ತು ವರ್ಷವೂ ತುಂಬಿದೆ.

ಕುವೆಂಪು ಮೊದಲಾದವರು ಕನ್ನಡ ವಿವಿಯ ಕನಸು ಕಟ್ಟಿದ್ದರೂ, ಇದಕ್ಕೆ ಚಾಲನೆ ಸಿಕ್ಕಿದ್ದು 15-12-1985ರ ಭಾನುವಾರ ಮೈಸೂರು ನಗರದಲ್ಲಿ ಪ್ರಾರಂಭವಾದ ಐತಿಹಾಸಿಕ ವಿಶ್ವಕನ್ನಡ ಸಮ್ಮೇಳನದಲ್ಲಿ. ಕನ್ನಡ ವಿವಿಯ ಕೂಗು ವಿಶ್ವಕನ್ನಡ ಮೇಳದಲ್ಲೂ ಪ್ರತಿಧ್ವನಿಸಿತು. ಸಾಹಿತಿ ಕಲಾವಿದರು ಒಗ್ಗಟ್ಟಾಗಿ ಒಕ್ಕೊರಲಿನ ಬೇಡಿಕೆಯನ್ನು ಸರಕಾರದ ಮುಂದಿಟ್ಟರು.

ಬೇಡಿಕೆ ಬಲವಾದಾಗ ರಾಮಕೃಷ್ಣ ಹೆಗಡೆ ಅವರ ನೇತೃತ್ವದ ಅಂದಿನ ಸರಕಾರ ವಿಶ್ವಕನ್ನಡ ಮೇಳ ನಡೆದ ಕೇವಲ ಹದಿನೈದೇ ದಿನದಲ್ಲಿ ಕನ್ನಡ ವಿಶ್ವವಿದ್ಯಾಲಯದ ಅಗತ್ಯ- ಆವಶ್ಯಕತೆಯ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ಎಸ್‌.ಎಸ್‌. ಒಡೆಯರ್‌ ನೇತೃತ್ವದ ಏಕಸದಸ್ಯ ಸಮಿತಿಯನ್ನು ರಚಿಸಿತು.

ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಅಪಾರ ಅನುಭವ ಹೊಂದಿದ್ದ ಒಡೆಯರ್‌ ಅವರು, ನಾಡಿನ ಹಿರಿಯ ಸಾಹಿತಿ, ಕಲಾವಿದರು, ತಜ್ಞರು, ಶಿಕ್ಷಣತಜ್ಞರನ್ನು ಭೇಟಿ ಮಾಡಿ, ಅವರ ಅಭಿಪ್ರಾಯ ಸಂಗ್ರಹಿಸಿ, ವರದಿಯನ್ನು ಸರಕಾರಕ್ಕೆ ಸಲ್ಲಿಸಿದರು.

Hampi Kannada universityಅಷ್ಟೊತ್ತಿಗೆ ಸರಕಾರವೂ ಬದಲಾಗಿತ್ತು. ಮುಂದೆ ಬಂದ ಕಾಂಗ್ರೆಸ್‌ ಸರಕಾರ ಕೂಡ ಕನ್ನಡ ವಿವಿಯ ಮಹತ್ವ ಅರಿತು, 23-11-91ರಂದು ಡಾ. ಚಂದ್ರಶೇಖರ ಕಂಬಾರರನ್ನು ಕನ್ನಡ ವಿವಿಯ ವಿಶೇಷ ಆಡಳಿತಾಧಿಕಾರಿಯಾಗಿ ನೇಮಕ ಮಾಡಿತು.

ಕಂಬಾರರು ಅಷ್ಟೊತ್ತಿಗಾಗಲೇ ಇತರ ರಾಜ್ಯಗಳಲ್ಲಿ ಸ್ಥಾಪನೆಯಾಗಿದ್ದ ಪ್ರಾದೇಶಿಕ ಭಾಷೆಗಳ ವಿಶ್ವವಿದ್ಯಾಲಯಗಳ ಕಾರ್ಯವೈಖರಿಯ ಬಗ್ಗೆ ಸ್ಥೂಲ ಅಧ್ಯಯನ ನಡೆಸಿ, ಕನ್ನಡ ವಿವಿ ಹೇಗಿರಬೇಕು ಎಂಬ ಬಗ್ಗೆ ಸರಕಾರಕ್ಕೆ ತಮ್ಮ ಅಧ್ಯಯನ ವರದಿ ಸಲ್ಲಿಸಿದರು.

ವರದಿಯಲ್ಲಿದ್ದ ಅಂಶಗಳನ್ನು ಪರಿಶೀಲಿಸಿದ ಸರಕಾರ ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X