ನನ್ನ ಪತಿಗೆ ನೊಬೆಲ್‌ ಗ್ಯಾರಂಟಿ- ಅನಂತಮೂರ್ತಿ ಪತ್ನಿ ಎಸ್ತರ್‌ ವಿಶ್ವಾಸ

ತುಮಕೂರು: ‘ನಮ್ಮೆಜಮಾನ್ರು ಖಂಡಿತವಾಗಿಯೂ ನೊಬೆಲ್‌ ಪ್ರಶಸ್ತಿ ಪಡೆದೇ ಪಡೆಯುತ್ತಾರೆ.’
69 ನೇ ಅಖಿಲ ಭಾರತ ಸಮ್ಮೇಳನಾಧ್ಯಕ್ಷ ಡಾ.ಯು.ಆರ್‌.ಅನಂತಮೂರ್ತಿ ಕುರಿತು ಅವರ ಪತ್ನಿ ಎಸ್ತರ್‌ ಕಾಣುವ ಆತ್ಮ ವಿಶ್ವಾಸದ ಕನಸಿದು. ಶನಿವಾರ (ಫೆ.16) ಪತ್ರಿಕೆಯಾಂದಕ್ಕೆ ನೀಡಿದ ಸಂದರ್ಶನದಲ್ಲಿ ಎಸ್ತರ್‌ ಈ ವಿಷಯವನ್ನು ತಿಳಿಸಿದ್ದಾರೆ.

ನನ್ನ ಪತಿ ಒಬ್ಬ ಗ್ರೇಟ್‌ ಎಂದು ಹೇಳಲು ಸಂತೋಷವಾಗುತ್ತದೆ. ಅವರು ಯಾವುದೇ ಪ್ರಶಸ್ತಿ- ಗೌರವಕ್ಕೆ ಆಸೆ ಪಟ್ಟವರಲ್ಲ . ಆದರೆ, ನೊಬೆಲ್‌ ಪ್ರಶಸ್ತಿ ಅವರಿಗೆ ದೊರೆಯುವುದು ಖಂಡಿತ. ನನ್ನ ಮಾವನವರಾದ ರಾಜಗೋಪಾಲಾಚಾರಿ (ಅನಂತಮೂರ್ತಿ ಅವರ ತಂದೆ) ಅವರು ನೊಬೆಲ್‌ ದೊರೆಯುವಂತೆ ನನ್ನ ಪತಿಯನ್ನು ಆಶೀರ್ವದಿಸುತ್ತಿದ್ದರು ಎಂದು ಎಸ್ತರ್‌ ಹೇಳಿದರು.

ತುಮಕೂರು ಸಾಹಿತ್ಯ ಸಮ್ಮೇಳನದಲ್ಲಿ ಅನಂತಮೂರ್ತಿ ಬಗೆಗೆ ಜನರು ತೋರುತ್ತಿರುವ ಅಪಾರ ಪ್ರೀತಿ- ವಿಶ್ವಾಸಗಳ ಕುರಿತು ಪುಳಕಿತರಾಗಿದ್ದ ಎಸ್ತರ್‌, ಜನರ ಈ ಪ್ರೀತಿ- ವಿಶ್ವಾಸ ನೋಡಿದಾಗ ತಮ್ಮ ಪತಿ ನೊಬೆಲ್‌ ಪ್ರಶಸ್ತಿ ಪಡೆಯುವ ವಿಶ್ವಾಸ ಇನ್ನಷ್ಟು ಗಟ್ಟಿಯಾಗುತ್ತದೆ ಎಂದರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+