Women Speak: ಮಹಿಳೆಯರು ಪುರುಷರಿಗಿಂತ ಎಷ್ಟು ಪದ ಹೆಚ್ಚು ಮಾತನಾಡುತ್ತಾರೆ ಗೊತ್ತಾ- ಅಧ್ಯಯನ ಹೇಳುವುದೇನು..?
ಮಹಿಳೆಯರು ಇದ್ದಲ್ಲಿ ಮಾತು ಜಾಸ್ತಿ. ಈ ಮಾತು ಅಕ್ಷರಶ: ನಿಜ. ಯಾಕೆಂದರೆ ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರು ಹೆಚ್ಚಾಗಿ ಮಾತನಾಡುತ್ತಾರೆಂದು ಅಧ್ಯಯನಗಳು ಹೇಳುತ್ತವೆ. ಇದಕ್ಕೆ ಕಾರಣಗಳು ಹಲವಾರು ಇವೆ. ಬಹುತೇಕ ಪುರುಷರ ಕಾರ್ಯಗಳು ಮಾತಿನ ಮೂಲಕವೇ ನಡೆಯುವುದಿಲ್ಲ. ಆದರೆ ಹೆಚ್ಚಾನೆಚ್ಚು ಮಹಿಳೆಯರ ಕಾರ್ಯಗಳು ಮಾತಿನ ಮೂಲಕವೇ ನಡೆಯುತ್ತವೆ. ಹೀಗಾಗಿ ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರ ಮಾತು ಅಧಿಕವಾಡುತ್ತಾರೆ. ಹಾಗಾದರೆ ಮಹಿಳೆಯರ ಮಾತು ಪುರುಷರಿಗಿಂತ ಎಷ್ಟು ಹೆಚ್ಚಾಗಿರುತ್ತದೆ? ಇದಕ್ಕೆ ಕಾರಣವೇನು ಎಂದು ತಿಳಿಯೋಣ..
ಮಹಿಳೆಯರು ದಿನಕ್ಕೆ ಸುಮಾರು 20,000 ಪದಗಳನ್ನು ಮಾತನಾಡುತ್ತಾರೆ ಎಂದು ಹೇಳಲಾಗುತ್ತದೆ. ಇದು ಸರಾಸರಿ ಪುರುಷನಿಗಿಂತ ಸುಮಾರು 13,000 ಹೆಚ್ಚಾಗಿದೆ. ಯಾವುದೇ ಒಂದು ವಿಷಯವನ್ನು ತುಂಬಾ ವಿವರವಾಗಿ ಮಾತನಾಡುವ ಗುಣ ಇರುವುದು ಮಹಿಳೆಯರಿಗೆ. ಯಾರ ಬಗ್ಗೆಯಾಗಲಿ, ಯಾವುದೇ ವಿಷಯವಾಗಲಿ, ಯಾವುದೇ ಸಂದರ್ಭವಾಗಲಿ ವಿವರಿಸುವುದರಲ್ಲಿ ಮಹಿಳೆಯರು ಪರಿಣಿತರು. ಜೊತೆಗೆ ಮಹಿಳೆಯರು ಹೆಚ್ಚಾಗಿ ಪ್ರಶ್ನೆ ಮಾಡುತ್ತಾರೆ.

ಯಾವುದೇ ಒಂದು ವಿಷಯದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸಕ್ತಿಯನ್ನು ಅವರು ಹೊಂದಿರುತ್ತಾರೆ. ಅಲ್ಲದೆ ಜಗಳವಾಡುವ ಸಂದರ್ಭದಲ್ಲೂ ಕೂಡ ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರದ್ದೇ ಮಾತು ಜಾಸ್ತಿ ಎನ್ನಲಾಗುತ್ತದೆ. ಪುರುಷರು ತಮ್ಮ ತಾಳ್ಮೆ ಕಳೆದುಕೊಂಡರೆ ಕೋಪದಲ್ಲಿ ಒಂದು ಏಟು ಹೊಡೆದು ಕೋಪವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ ಮಹಿಳೆಯರು ಮಾತಿನಿಂದ ಜಗಳ ಆರಂಭಿಸಿ ಕೊನೆಗೆ ಮಾತಿನಿಂದಲೂ ಮುಕ್ತಾಯಗೊಳಿಸುತ್ತಾರೆ. ಅಂದರೆ ಪುಷರಿಗಿಂತ ಮಹಿಳೆಯರ ಮಾತುಗಳೇ ಇಲ್ಲಿ ಅಧಿಕವಾಗಿರುತ್ತವೆ.
ಮಹಿಳೆಯರ ದಿನ ಶುರುವಾಗುವುದು ಹೇಗೆ?
*ಮಹಿಳೆಯ ದಿನ ಶುರುವಾಗುವುದು ದೇವರನ್ನು ನೆನೆಯುವ ಮೂಲಕ. ಪ್ರಾರ್ಥನೆ ಪೂಜೆಯಿಂದ ಅವರ ದಿನ ಶುರುವಾಗುತ್ತದೆ.
* ನಂತರ ಹೂವು, ಹಣ್ಣು, ತರಕಾರಿ, ಹಾಲು, ಪೇಪರ್, ದಿನಸಿ ಹೀಗೆ ಮನೆಗೆ ಬರುವ ಪ್ರತಿಯೊಬ್ಬರೊಂದಿಗೂ ಅವರು ಮಾತನಾಡುತ್ತದೆ. ಚೌಕಾಸಿ ಮಾಡುತ್ತಾರೆ. ತಾವಂದುಕೊಂಡತೆ ಅದೆಲ್ಲವೂ ಇಲ್ಲವಾದಲ್ಲಿ ಅವರೊಂದಿಗೆ ವಾದಕ್ಕೂ ಇಳಿಯುತ್ತಾರೆ.
* ಮನೆಯಲ್ಲಿ ಮಕ್ಕಳಿದ್ದರೆ ಅವರನ್ನು ಎಬ್ಬಿಸುವುದರಿಂದ ಹಿಡಿದು ಅವರಿಗೆ ಹೋಮ್‌ವರ್ಕ್ ಮಾಡಿಸಿ ಶಾಲೆಗೆ ಕಳುಹಿಸುವವರೆಗೂ ಮಾತನಾಡುತ್ತಲೇ ಇರುತ್ತಾರೆ.
* ಇನ್ನೂ ಗಂಡ ಆಫೀಸ್ ಹೋಗುವವರಿಗೂ ಹೆಂಡತಿ ಸ್ನಾನ ಮಾಡಿ, ತಿಂಡಿ ಮಾಡಿ, ಲಂಚ್ ಬಾಕ್ಸ್ ತೆಗೆದುಕೊಳ್ಳಿ ಹೀಗೆ ಅವರನ್ನು ಮನೆಯಿಂದ ಆಫೀಸ್ ಕಳುಹಿಸುವವರೆಗೂ ಮಹಿಳೆಯರು ಮಾತನಾಡುತ್ತಲೇ ಇರುತ್ತಾರೆ.
* ಇನ್ನೂ ಮನೆ ಖಾಲಿಯಾದ ಬಳಿಕ ತನ್ನ ತವರು ಮನೆಗೆ ಕರೆ ಮಾಡಿಯೋ, ಅಕ್ಕಪಕ್ಕದವರೊಂದಿಗೆ ಕುಳಿತು ಮಾತನಾಡುತ್ತಾ ರಾತ್ರಿ ಅಡುಗೆ ತಯಾರಿ ಮಾಡಿಕೊಳ್ಳುತ್ತಾರೆ.
* ಇನ್ನೂ ಸಂಜೆ ಮಕ್ಕಳು, ಗಂಡ ಮನೆಗೆ ಬಂದ ಬಳಿಕವೂ ಅವರದ್ದೇ ಮಾತು ಜಾಸ್ತಿ.. ಹೀಗೆ ಬೆಳಗ್ಗೆಯಿಂದ ರಾತ್ರಿ ಮಲಗುವವರೆಗೂ ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರೇ ಹೆಚ್ಚು ಮಾತನಾಡುತ್ತಾರೆ.

ಮಹಿಳೆಯರು ಹೆಚ್ಚು ಪ್ರಶ್ನೆ ಕೇಳುತ್ತಾರೆ:-
ಮಹಿಳೆಯರು ಹಲವಾರು ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಸಹ ಗಮನಿಸಲಾಗಿದೆ. ಪ್ರಸಿದ್ಧ ಸಂಬಂಧ ಮಾರ್ಗದರ್ಶಿ ಹಾಗೂ ಲೇಖಕ ಜಾನ್ ಗ್ರೇ ಅವರ ಪ್ರಕಾರ, ಅಧ್ಯಯನ ಮಾಡಲು 100,000 ಪುರುಷ ಮತ್ತು ಮಹಿಳೆಯರನ್ನು ಸಂದರ್ಶಿಸಿದರು. ಸಮೀಕ್ಷೆ ನಡೆಸಿದ ಶೇಕಡ 72 ರಷ್ಟು ಪುರುಷರು ಮಹಿಳೆಯರು ಹಲವು ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಹೇಳಿದ್ದಾರೆ. ಕೆಲವು ಪುರುಷರು ಈ ಪ್ರಶ್ನೆಗಳು ಪ್ರಗತಿಯನ್ನು ನಿಧಾನಗೊಳಿಸುತ್ತದೆ ಮತ್ತು ನಿರ್ಧಾರ ತೆಗೆದುಕೊಳ್ಳುವುದನ್ನು ವಿಳಂಬಗೊಳಿಸುತ್ತದೆ ಎಂದಿದ್ದಾರೆ. ಇತರರು ಮಹಿಳೆಯರು ತುಂಬಾ ನಿಯಂತ್ರಿಸುವ ಅಥವಾ ವಿಮರ್ಶಾತ್ಮಕವಾಗಿರುವುದರ ಸಂಕೇತವೆಂದು ಹೇಳಿದ್ದಾರೆ.
ಆದರೆ ಮಹಿಳೆಯರು ಪ್ರಶ್ನೆ ಮಾಡುವುದನ್ನು ಸಮರ್ಥಿಸಿಕೊಂಡಿದ್ದಾರೆ. ಅದು ಕಾಳಜಿಯನ್ನು ತೋರಿಸುತ್ತದೆ. ಪ್ರಶ್ನೆಗಳಿಂದ ಕಿರಿಕಿರಿಗೊಳ್ಳುವ ಬದಲು ಸರಿಯಾಗಿ ಉತ್ತರ ನೀಡಿದರೆ ಎಲ್ಲವೂ ಸುಲಭವಾಗುತ್ತದೆ ಎಂದು ಮಹಿಳೆಯರು ಹೇಳಿದ್ದಾರೆ.
ಮಹಿಳೆಯರು ಹೆಚ್ಚು ಮಾತನಾಡುತ್ತಾರೆ...
ಮಹಿಳೆಯರ ಮಾತನಾಡುವ ಸ್ವಭಾವ ಅನೇಕ ಅಧ್ಯಯನಗಳಲ್ಲಿ ದೃಢಪಟ್ಟಿದೆ. ಸ್ವಯಂ-ವರದಿ ಮಾಡಿದ ಹೆಚ್ಚಿನ ಅಧ್ಯಯನಗಳು ಮಹಿಳೆಯರು ಪುರುಷರಿಗಿಂತ ಸ್ವಲ್ಪ ಹೆಚ್ಚು ಮಾತನಾಡುತ್ತಾರೆ ಎಂದಿವೆ. 11 ವಿಶ್ವ ಪ್ರದೇಶಗಳಲ್ಲಿ 58 ರಾಷ್ಟ್ರಗಳ ಅಧ್ಯಯನದಲ್ಲಿ; ಆಫ್ರಿಕಾ ಮತ್ತು ಪೂರ್ವ ಏಷ್ಯಾ ಸೇರಿದಂತೆ ವಿಶ್ವದ ಬಹುತೇಕ ಪ್ರದೇಶಗಳಲ್ಲಿ "ನಾನು ಹೆಚ್ಚು ಮಾತನಾಡುವ ವ್ಯಕ್ತಿ" ಎಂಬ ಹೇಳಿಕೆಯನ್ನು ಪುರುಷರಿಗಿಂತ ಮಹಿಳೆಯರೇ ಒಪ್ಪಿಕೊಂಡಿದ್ದಾರೆ.

ಕೆಲವು ಅಧ್ಯಯನಗಳು ಇಲ್ಲ ಎಂದು ವಾದಿಸುತ್ತವೆ...
ಇತರ ಕೆಲವು ಸಂಶೋಧಕರು ಮಹಿಳೆಯರಿಗೆ ಮಾತನಾಡುವ ಅವಕಾಶ ನೀಡಲಾಗುವುದಿಲ್ಲ.
ಈಶಾನ್ಯ ವಿಶ್ವವಿದ್ಯಾಲಯದ ಪ್ರೊಫೆಸರ್ ಡೇವಿಡ್ ಲೇಜರ್ ಮತ್ತು ಅವರ ತಂಡ ನಡೆಸಿದ ಅಧ್ಯಯನವು ಹೆಚ್ಚು ಮಾತನಾಡುವ ಲಿಂಗವು ಸಂದರ್ಭವನ್ನು ಅವಲಂಭಿಸಿದೆ. ವಾಸ್ತವವಾಗಿ, ಪುರುಷರು ತಮ್ಮ ಸ್ನೇಹಿತರ ಸಹವಾಸದಲ್ಲಿ ದೀರ್ಘಕಾಲ ಉತ್ಸಾಹದಿಂದ ಮಾತನಾಡುತ್ತಾರೆ ಎಂದು ಅಧ್ಯಯನಗಳು ಹೇಳುತ್ತವೆ.
ಮಹಿಳೆಯರು ಏಕೆ ಹೆಚ್ಚು ಮಾತನಾಡುತ್ತಾರೆ...
ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದ ಸಂಶೋಧಕರ ಹೊಸ ಅಧ್ಯಯನ ಮಹಿಳೆಯರ ಹೆಚ್ಚು ಮಾತಿಗೆ ಕಾರಣವನ್ನು ಕಂಡು ಹಿಡಿದಿದೆ. ಸ್ತ್ರೀ ಮೆದುಳಿನಲ್ಲಿ ಹೆಚ್ಚಿನ ಮಟ್ಟದ ಪ್ರೋಟೀನ್ ಕಂಡುಬರುತ್ತದೆ ಎಂದು ಅದು ಸೂಚಿಸುತ್ತದೆ.
US ಸಂಶೋಧಕರು ಜೀವಿ ಮಿದುಳಿನಲ್ಲಿ ಹೆಚ್ಚು Foxp2 ಅನ್ನು ಹೊಂದಿರುತ್ತಾರೆ. ಇದನ್ನು 'ಭಾಷಾ ಪ್ರೋಟೀನ್' ಎಂದು ಕರೆಯಲಾಗುತ್ತದೆ. ಇದು ಮಹಿಳೆಯರಿಗೆ ಹೆಚ್ಚಾಗಿರುವುದರಿಂದ ಮಾನವರಲ್ಲಿ ಮಹಿಳೆಯರು ಹೆಚ್ಚು ಮಾತನಾಡುತ್ತಾರೆ ಎಂದು ಸಂಶೋಧನೆಗಳು ಹೇಳುತ್ತವೆ.
ಸಂಶೋಧಕರು ಮೂರರಿಂದ ಐದು ವರ್ಷದೊಳಗಿನ ಹತ್ತು ಹುಡುಗರು ಮತ್ತು ಹುಡುಗಿಯರ ಮಾದರಿಗಳನ್ನು ಪರೀಕ್ಷಿಸಿದರು. ಹುಡುಗಿಯರು Foxp2 ಪ್ರೋಟೀನ್ ಅನ್ನು ಹುಡುಗರಿಗಿಂತ ಶೇಕಡಾ 30ರಷ್ಟು ಹೆಚ್ಚು ಹೊಂದಿದ್ದಾರೆಂದು ಇದು ತೋರಿಸಿದೆ. ಹೀಗಾಗಿ ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರೇ ಹೆಚ್ಚು ಮಾತನಾಡುತ್ತಾರೆನ್ನುವುದನ್ನು ಸಂಶೋಧನೆಗಳು ಹೇಳುತ್ತವೆ.












Click it and Unblock the Notifications