Winter Food: ಚಳಿಗಾಲದಲ್ಲಿ ಈ 6 ಆಹಾರ ತಿನ್ನುವುದನ್ನು ತಪ್ಪಿಸಿ
Winter Foods: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೈಕೊರೆಯುವ ಚಳಿ ಮುಂದುವರಿದಿದೆ. ಈ ಚಳಿಯ ಸಮಯದಲ್ಲಿ ನೀವು ಕೆಲವೊಂದು ಪ್ರಮುಖ ಆಹಾರಗಳನ್ನು ಸೇವಿಸದೆ ಇರುವುದೇ ಒಳ್ಳೆಯದು. ಹೌದು ನೀವು ಚಳಿಗಾಲದಲ್ಲಿ ಏನಾದರೂ ಈ ಆಹಾರಗಳನ್ನು ಸೇವಿಸುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದರೆ ಕೂಡಲೇ ಬಿಟ್ಟುಬಿಡುವುದು ಒಳ್ಳೆಯದು. ಹಾಗಾದರೆ ಚಳಿಗಾಲದಲ್ಲಿ ಯಾವೆಲ್ಲ ಆಹಾರಗಳನ್ನು ಸೇವಿಸಬಾರದು ಎನ್ನುವ ಲಿಸ್ಟ್ ಇಲ್ಲಿದೆ. ಚಳಿಗಾಲ ಈ ಬಾರಿ ಕಳೆದ ಬಾರಿಗಿಂತ ತೀವ್ರವಾಗಿದೆ. ಸಂಜೆ ಬಿಡಿ ಈಗೆಲ್ಲ ಮುಂಜಾನೆ 10ರ ನಂತರವೂ ಚಳಿ ಪ್ರಮಾಣ ಇಳಿಕೆಯಾಗುತ್ತಿಲ್ಲ. ಈ ಚಳಿಗಾಲದಲ್ಲಿ ನೀವು ಕೆಲವೊಂದು ಒಳ್ಳೆಯ ಆಹಾರ ಪದ್ಧತಿಗಳನ್ನು ರೂಢಿಸಿಕೊಳ್ಳುವುದು ಒಳ್ಳೆಯದು.
ಕೆಲವು ಉತ್ತಮ ಆಹಾರಗಳು ಸಹ ಚಳಿಗಾದಲ್ಲಿ ಸೇವಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಚಳಿಗಾಲದಲ್ಲಿ ಯಾವ ಆಹಾರಗಳನ್ನು ಸೇವಿಸುವುದು ಒಳ್ಳೆಯದು. ಯಾವ ಆಹಾರಗಳನ್ನು ತಿನ್ನದೆ ಇದ್ದರೆ ಆರೋಗ್ಯ ಒಳ್ಳೆಯದು ಎನ್ನುವ ವಿವರ ಇಲ್ಲಿದೆ.

ಚಳಿಗಾಲದಲ್ಲಿ ನೀವು ಕೆಲವೊಂದು ಆಹಾರಗಳನ್ನು ತಿನ್ನದೆ ಇರುವುದೇ ಒಳ್ಳೆಯದು. ಯಾಕೆಂದರೆ ಈ ಏಳು ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚು.
ಹಸಿ ತರಕಾರಿಗಳು: ಹಸಿ ತರಕಾರಿಗಳನ್ನು ತಿನ್ನುವುದು ದೇಹಕ್ಕೆ ತುಂಬಾ ಒಳ್ಳೆಯದು. ಆದರೆ ನೀವು ಚಳಿಗಾಲದಲ್ಲಿ ಹಸಿ ತರಕಾರಿಗಳನ್ನು ತಿನ್ನದೆ ಇರುವುದೇ ಒಳ್ಳೆಯದು. ಸೌತೆಕಾಯಿ, ಟೊಮೆಟೊ ಹಾಗೂ ಕ್ಯಾರೆಟ್ ಸೇರಿದಂತೆ ವಿವಿಧ ಹಸಿ ತರಕಾರಿಗಳನ್ನು ತಿನ್ನುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಈ ತರಕಾರಿಗಳು ಚಳಿಗಾಲದಲ್ಲಿ ನಿಮ್ಮ ದೇಹವನ್ನು ತಂಪಾಗಿ ಇರಿಸುತ್ತದೆ. ಈಗಾಗಲೇ ಹವಾಮಾನದಿಂದ ನಿಮ್ಮ ದೇಹ ತಂಪಾಗಿ ಇರುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಹಸಿ ತರಕಾರಿ ತಿನ್ನುವ ಅವಶ್ಯಕತೆ ಇರುವುದಿಲ್ಲ. ಚಳಿಗಾಲದಲ್ಲಿ ಹಸಿ ತರಕಾರಿ ಸೇವಿಸುವುದರಿಂದ ಜೀರ್ಣಕ್ರಿಯೆ ನಿಧಾನವಾಗುವ ಸಾಧ್ಯತೆ ಇದೆ. ಇದರ ಬೆದಲು ನೀವು ಸೂಪ್ ಇಲ್ಲವೇ ಬೇಯಿಸಿದ ತರಕಾರಿಗಳನ್ನು ತಿನ್ನುವುದು ಒಳ್ಳೆಯದು.
ತಣ್ಣಗಿನ ಹಾಲು: ಚಳಿಗಾಲದಲ್ಲಿ ತಣ್ಣಗಿನ ಹಾಲು ಕುಡಿಯುವುದನ್ನು ತಪ್ಪಿಸಿ. ತಣ್ಣಗಿನ ಹಾಲು ಕುಡಿಯುವುದರಿಂದ ಕೆಮ್ಮು, ಶೀತ ಹಾಗೂ ಕಫ ಆಗುವ ಸಾಧ್ಯತೆ ಇದೆ. ಅಲ್ಲದೆ ಕೆಲವರಿಗೆ ಉಸಿರಾಟದ ಸಮಸ್ಯೆ ಸಹ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಲಿನಲ್ಲಿ ಕ್ಯಾಲ್ಸಿಯಂ ಹಾಗೂ ಪೋಷಕಾಂಶಗಳಿವೆ ನಿಜ. ಆದರೆ, ಚಳಿಗಾಲದಲ್ಲಿ ತಣ್ಣಗಿನ ಹಾಲು ಕುಡಿಯುವುದು ಒಳ್ಳೆಯದಲ್ಲ. ಇದರ ಬದಲಾಗಿ ನೀವು ಹಾಲಿಗೆ ಅರಿಶಿನಪುಡಿ ಸೇರಿದಂತೆ ಮಸಾಲೆ ಸೇರಿಸಿ ಕುಡಿಯಬಹುದು. ಇದರಿಂದ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಎಳನೀರು: ಎಳನೀರು ಸಹ ದೇಹಕ್ಕೆ ತುಂಬಾ ಒಳ್ಳೆಯದು. ಆದರೆ ಎಳನೀರು ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸುವುದಕ್ಕೆ ಒಳ್ಳೆಯದು. ಆದರೆ ಚಳಿಗಾಲದಲ್ಲಿ ಇದು ನಿಮ್ಮ ದೇಹದಲ್ಲಿ ಉಷ್ಣತೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಚಳಿ ಜಾಸ್ತಿ ಇದ್ದಾಗ ಸಾಧ್ಯವಾದಷ್ಟು ಎಳನೀರು ಸೇವನೆ ಸಹ ಕಡಿಮೆ ಮಾಡಿ.
ಚಳಿಗಾಲದಲ್ಲಿ ಎಲ್ಲಾ ಹಣ್ಣುಗಳು ಸೂಕ್ತವಲ್ಲ: ಇನ್ನು ಚಳಿಗಾಲದಲ್ಲಿ ಎಲ್ಲಾ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದಲ್ಲ. ಈ ಸಮಯದಲ್ಲಿ ಕಲ್ಲಂಗಡಿ ಸೇರಿದಂತೆ ನೀರಿನಂಶ ಹೆಚ್ಚಾಗಿರುವ ಹಣ್ಣುಗಳ ಸೇವನೆಯನ್ನು ತಪ್ಪಿಸಿ. ನೀರಿನ ಅಂಶಗಳು ಹೆಚ್ಚಾಗಿರುವ ಹಣ್ಣುಗಳು ಈ ಸಮಯದಲ್ಲಿ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತವೆ. ಕಿತ್ತಳೆ, ಪೇರಳೆ ಹಾಗೂ ಆ್ಯಪಲ್ ತಿನ್ನಬಹುದು. ಇನ್ನು ಕೆಲವರಿಗೆ ಆ್ಯಪಲ್ ಸಹ ಚಳಿಗಾಲದಲ್ಲಿ ಶೀತ ಉಂಟು ಮಾಡುತ್ತದೆ. ಹೀಗಾಗಿ ಎಚ್ಚರಿಕೆ ವಹಿಸುವುದು ಒಳ್ಳೆಯದು.
ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳು: ಇನ್ನು ಈ ಚಳಿಗಾಲದಲ್ಲಿ ಪಕೋಡಾ ಹಾಗೂ ಸಮೋಸಾ ಸೇರಿದಂತೆ ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳನ್ನು ಸಾಧ್ಯವಾದಷ್ಟು ತಿನ್ನುವುದು ಕಡಿಮೆ ಮಾಡಿ. ಇದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಅಲ್ಲದೆ ದೇಹದ ತೂಕ ಹೆಚ್ಚಾಗುತ್ತದೆ. ಹೀಗಾಗಿ ಚಳಿಗಾಲದಲ್ಲಿ ಎಣ್ಣೆಯಿಂದ ಕರಿದ ಆಹಾರ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಿ.
ಮೊಸರು: ಚಳಿಗಾಲದಲ್ಲಿ ಮೊಸರು ಸೇವಿಸುವ ಬಗ್ಗೆ ಎರಡು ಭಿನ್ನ ಅಭಿಪ್ರಾಯಗಳು ಇವೆ. ಚಳಿಗಾಲದಲ್ಲಿ ಮೊಸರನ್ನು ತಿನ್ನುವುದರಿಂದ ಶೀತ ಹಾಗೂ ಕೆಮ್ಮು ಹೆಚ್ಚಾಗುವ ಸಾಧ್ಯತೆ ಇದೆ. ಮೊಸರು ಕೆಲವರಿಗೆ ಹೊಂದಾಣಿಕೆಯಾದರೆ ಇನ್ನೂ ಕೆಲವರ ಆರೋಗ್ಯಕ್ಕೆ ಹೊಂದಾಣಿಕೆ ಆಗಲ್ಲ. ಹೀಗಾಗಿ ಈ ಆಹಾರಗಳನ್ನು ಚಳಿಗಾಲದಲ್ಲಿ ತಪ್ಪಿಸುವುದು ಒಳ್ಳೆಯದು.












Click it and Unblock the Notifications