ಖಾಲಿ ಹೊಟ್ಟೆಯಲ್ಲಿ ಮೊಸರು ತಿನ್ನುವುದರಿಂದ ಆಗುವ ಲಾಭಗಳೇನು?
ಜನರು ಈಗ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ವಹಿಸುತ್ತಾರೆ. ಬೆಳಗ್ಗೆ ಎದ್ದ ಮೇಲೆ ಹೆಲ್‌ಗೆ ಅನುಕೂಲವಾಗು ಪಾನಿಯಗಳನ್ನು ಸೇವಿಸುತ್ತಾರೆ. ಇನ್ನು ಕೆಲವರು ಚಹಾ, ಕಾಫಿಯಿಂದ ತಮ್ಮ ದಿನಚರಿಯನ್ನು ಆರಂಭಿಸುತ್ತಾರೆ. ಇವುಗಳೆಲ್ಲದರ ಬದಲು ಮೊಸರು ತಿನ್ನುವುದು ಹೆಚ್ಚು ಪ್ರಯೋಜನಕಾರಿ ಎಂದು ತಿಳಿದು ಬಂದಿದೆ.
ಮನೆಯಲ್ಲಿ ಯಾವುದೇ ಶುಭ ಕಾರ್ಯಕ್ಕೆ ಮಕ್ಕಳಿಗೆ ತಾಯಿ ಮೊಸರು ಹಾಗೂ ಸಕ್ಕರೆ ತಿನ್ನಿಸುತ್ತಾರೆ. ಇದು ಶುಭ ಸೂಚನೆ ಎಂದು ಪರಿಗಣಿಸಲಾಗಿದೆ. ಅದರಂತೆ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಮೊಸರನ್ನು ತಿನ್ನುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳನ್ನು ಪಡೆಯಬಹುದು. ಮೊಸರು ಹಾಗೂ ಸಕ್ಕರೆ ಸೇವನೆಯಿಂದ ದೇಹ ದ್ವಿಗುಣವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ನಂಬಿಕೆ.

ಬೆಳ್ಳಂಬೆಳಗ್ಗೆ ಮೊಸರು ತಿನ್ನುವುದರಿಂದ ದೇಹ ಮತ್ತು ಮನಸ್ಸು ಎರಡೂ ಆರೋಗ್ಯಕರವಾಗಿರುತ್ತದೆ. ಇದನ್ನು ಸೂಪರ್ ಫುಡ್ ಎಂದೇ ಕರೆಯಲಾಗುತ್ತದೆ. ಇದನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಬಲ ಗೊಳ್ಳುತ್ತದೆ. ಬೇಸಿಗೆಯಲ್ಲಿ ಮೊಸರನ್ನು ಬೆಳಗ್ಗೆ ತಿನ್ನುವುದರಿಂದ ಹೊಟ್ಟೆಯ ಸಮಸ್ಯೆ ಕಡಿಮೆಯಾಗುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ -12, ವಿಟಮಿನ್ ಬಿ -2, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳನ್ನು ಹೇರಳವಾಗಿ ಇರುತ್ತವೆ. ಬೆಳಗ್ಗೆ ಮೊಸರಿಗೆ ಸಕ್ಕರೆಯನ್ನು ಮಿಕ್ಸ್ ಮಾಡಿ ತಿನ್ನುವುದರಿಂದ ದೇಹದಲ್ಲಿ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸುತ್ತದೆ.
ಬೆಳಿಗ್ಗೆ ಮೊಸರು ತಿಂದರೆ ಏನು ಲಾಭ?
ಬೆಳಗಿನ ಜಾವ ಮೊಸರನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಉರಿ ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡಬಹುದು. ಇದರಿಂದ ಪಿತ್ತದ ಸಮಸ್ಯೆ ಕಡಿಮೆ ಆಗುತ್ತದೆ. ಇದನ್ನು ಸೇವಿಸುವುದರಿಂದ ಮೂತ್ರ ವಿಸರ್ಜನೆಯ ಸಮಸ್ಯೆ ಕಡಿಮೆ ಆಗುತ್ತದೆ.

ಮೊಸರು ತಿನ್ನುವುದು ಯುಟಿಐ ಮತ್ತು ಸಿಸ್ಟೈಟಿಸ್ (cystitis) ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಕಡಿಮೆ ನೀರು ಕುಡಿಯುವವರು ಮೊಸರು ತಿನ್ನಬೇಕು.
ಹೊಟ್ಟೆಯ ಸಮಸ್ಯೆ ಇದ್ದವರು ಇದ್ದನ್ನು ಸೇವಿಸಬಹುದಾ?
ಮೊಸರಿನಲ್ಲಿ ಹೊಟ್ಟೆ ಮತ್ತು ಕರುಳಿಗೆ ಬೇಕಾಗಿರುವ ಒಳ್ಳೆಯ ಬ್ಯಾಕ್ಟೀರಿಯಾಗಳಿವೆ. ಬೇಸಿಗೆಯಲ್ಲಿ ಹೊಟ್ಟೆಯ ಸಮಸ್ಯೆ ಕಾಣಿಸಿಕೊಂಡಾಗ ಮೊಸರು ತಿನ್ನುವುದರಿಂದ ಕಡಿಮೆ ಆಗಬಹುದು. ಇದನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸಮನಾಗಿಸುತ್ತದೆ. ಇದನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ.
ಚರ್ಮದ ಆರೈಕೆಗೆ ಮೊಸರು ಬೆಸ್ಟ್
ಮೊಸರು ಚರ್ಮದ ಮೊಶ್ಚಿರೈಸ್ ಕಡಿಮೆ ಮಾಡುವುದು ಮತ್ತು ಇದು ಒಣ ಚರ್ಮದ ಸಮಸ್ಯೆಯನ್ನು ನಿವಾರಿಸುತ್ತದೆ. ಇದನ್ನು ಮಿತವಾಗಿ ಸೇವಿಸುವುದರಿಂದ ಜಠರಕರುಳಿನ ಸಮಸ್ಯೆಯಿಂದ ಕೊಂಚ ಪರಿಹಾರವನ್ನು ಪಡೆಯಬಹುದು. ಮೊಸರು ಹೊಟ್ಟೆಯನ್ನು ಆರೋಗ್ಯವಾಗಿಟ್ಟುಕೊಂಡು ಚರ್ಮದ ಆರೋಗ್ಯ ಕಾಪಾಡುವುದು.
ಮೊಸರನ್ನು ತಾಜಾ ಹಣ್ಣುಗಳ ಜೊತೆಗೆ ಸೇವಿಸುವುದರಿಂದ ಹೆಚ್ಚಿನ ಲಾಭ ಪಡೆಯಬಹುದು. ಇದರಿಂದ ಹೆಚ್ಚಿನ ನಾರಿನಾಂಶವೂ ಲಭಿಸುತ್ತದೆ. ಹೀಗಾಗಿ ಮೊಸರನ್ನು ತಿನ್ನುವುದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಮೊಸರು ಜೀರ್ಣಿಸಿಕೊಳ್ಳಲು ಸುಲಭ. ಕೆಲವರು ಬೆಳಿಗ್ಗೆ ಹಾಲು ಅಥವಾ ಅದರ ಉತ್ಪನ್ನಗಳನ್ನು ಇಷ್ಟಪಡುವುದಿಲ್ಲ, ಅಂತಹ ಜನರಿಗೆ ಮೊಸರು ಉತ್ತಮ ಆಯ್ಕೆಯಾಗಿದೆ. ಬೆಳಿಗ್ಗೆ ಮೊಸರು ತಿನ್ನುವುದು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಇದರಿಂದ ನೀವು ದಿನವಿಡೀ ಚಟುವಟಿಕೆಯಿಂದ ಇರುತ್ತೀರಿ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications