Happiness: ಮನೆಯಲ್ಲಿ ನೆಮ್ಮದಿ ನೆಲೆಸಬೇಕಾದರೆ ಏನು ಮಾಡಬೇಕು? ಯಾವ ವಸ್ತುವನ್ನು ಎಲ್ಲಿಡಬೇಕು?

ನಾವು ಖುಷಿಯಾಗಿರ ಬೇಕಾದರೆ ನಾವೆಲ್ಲಿದ್ದೇವೆಯೋ ಅಲ್ಲಿ ಖುಷಿಯ ವಾತಾವರಣವಿರಬೇಕು. ಅದು ಸಾಧ್ಯವಾಗಬೇಕಾದರೆ ಅಲ್ಲಿ ಸ್ವಚ್ಛತೆಯಿರಬೇಕು. ಸ್ವಚ್ಛತೆಯಿರುವ ಸ್ಥಳದಲ್ಲಷ್ಟೆ ನಾವು ಒಂದಷ್ಟು ಹೊತ್ತು ಇರುತ್ತೇವೆಯೋ ಹೊರತು ಗಲೀಜು ಇರುವ ಸ್ಥಳದಲ್ಲಲ್ಲ. ಹೀಗಿರುವಾಗ ನಾವು ಸದಾ ಇರುವ ಮನೆ ಸ್ವಚ್ಛವಾಗಿರದಿದ್ದರೆ ನಾವು ನೆಮ್ಮದಿಯಾಗಿ, ಖುಷಿಯಾಗಿ ಇರೋಕೆ ಸಾಧ್ಯನಾ?

ಸಾಮಾನ್ಯವಾಗಿ ನಾವು ಎಲ್ಲಿಗೆ ಹೋದರೂ ಮರಳಿ ಮನೆಗೆ ಬಂದ ಮೇಲೆಯೇ ನಮಗೊಂದು ತೃಪ್ತಿ. ಮನೆ ಹೇಗೆಯೇ ಇರಲಿ. ಅದು ನಮ್ಮ ಮನೆ. ಮನೆ ಅರಮನೆಯಾಗಿರಬೇಕಿಲ್ಲ. ಗುಡಿಸಲಾದರೂ ನಡೆಯುತ್ತದೆ. ಆ ಮನೆ ನಮಗೆ ಒಂದಷ್ಟು ನೆಮ್ಮದಿ, ವಿಶ್ರಾಂತಿ ನೀಡುವಂತಿದ್ದರೆ ಸಾಕು. ಆಫೀಸಿನಲ್ಲಿ ಕೆಲಸ ಮಾಡಿ ಸುಸ್ತಾಗಿರುತ್ತೇವೆ. ಇನ್ನೇನೋ ಕಾರಣಗಳಿಗೆ ದೇಹ ದಣಿದಿರುತ್ತದೆ ಆಗಲೆಲ್ಲಾ ಮನೆಗೆ ಹೋಗಿ ವಿಶ್ರಾಂತಿ ಪಡೆಯೋಣ ಎಂದುಕೊಳ್ಳುತ್ತೇವೆ.

What Should Be Done To Have Peace At Home

ಮನೆ ತಲುಪಿದ ಮೇಲೆ ಅಬ್ಬಾ ಎಂದು ನಿಟ್ಟುಸಿರು ಬಿಡುತ್ತೇವೆ. ಪ್ರತಿಯೊಬ್ಬ ಮನುಷ್ಯನಿಗೆ ತನ್ನದೇ ಆದ ಮನೆ ಇರಬೇಕು (ಸ್ವಂತದ್ದೇ ಆಗಬೇಕೆಂದಿಲ್ಲ) ಅಲ್ಲಿ ನಮ್ಮ ಸಂಸಾರದೊಂದಿಗೆ ಖುಷಿಯಾಗಿ ಆನಂದದಿಂದ ಜೀವನ ಸಾಗಿಸಬೇಕು ಎಂಬ ಬಯಕೆಗಳಿರುತ್ತವೆ.

ಯಾವ ವಸ್ತುವನ್ನು ಎಲ್ಲಿಡಬೇಕು? ಹೇಗಿಡಬೇಕು?

ಮನೆಗಳು ಸ್ವಂತದ್ದೇ ಆಗಿರಬೇಕಿಂದಿಲ್ಲ ನಾವು ಇರುವಷ್ಟು ದಿನ ನಮ್ಮ ಮನೆ. ಅದನ್ನು ನಾವು ಸ್ವಚ್ಚವಾಗಿಟ್ಟುಕೊಳ್ಳುವುದರಿಂದ ನಮಗೆ ಲಾಭ. ಮನೆ ಹೇಗಿದೆ ಎಂಬುದು ಮುಖ್ಯವಲ್ಲ. ಅದನ್ನು ನಾವು ಹೇಗಿಟ್ಟಿರುತ್ತೇವೆ ಎಂಬುದು ಮುಖ್ಯವಷ್ಟೆ. ಶ್ರೀಮಂತರ ಮನೆಗಳನ್ನು ನೋಡಿ ಕೊರಗುವುದನ್ನು ಬಿಟ್ಟು ನಮ್ಮ ಮನೆಯನ್ನು ನಮಗಿರುವ ಸಾಮರ್ಥ್ಯಕ್ಕೆ ಹೇಗಿಟ್ಟುಕೊಳ್ಳಬಹುದು ಎಂಬುವುದನ್ನು ನಾವು ಕಲಿತುಕೊಳ್ಳಬೇಕು.

ಯಾವ ವಸ್ತುವನ್ನು ಎಲ್ಲಿಡಬೇಕು? ಹೇಗಿಡಬೇಕು? ಹೀಗೆ ಇರುವುದರಲ್ಲೇ ಜಾಣ್ಮೆ ವಹಿಸಬೇಕಷ್ಟೆ. ಮನೆ ಸ್ವಚ್ಛವಾಗಿದ್ದಷ್ಟು ಮನಸ್ಸು ತಿಳಿಯಾಗಿರುತ್ತದೆ. ಮನದಲ್ಲಿ ಉಲ್ಲಾಸ ತುಂಬುತ್ತಿರುತ್ತದೆ. ಆ ಉಲ್ಲಾಸ ನಮ್ಮನ್ನು ಕೆಲಸ ಕಾರ್ಯಗಳಿಗೆ ಪ್ರೇರೇಪಿಸುತ್ತದೆ. ಮನೆ ಎನ್ನುವುದು ನಮ್ಮ ಹೊರಗಿನ ಎಲ್ಲ ಒತ್ತಡಗಳನ್ನು ದೂರ ತಳ್ಳಿ ಒಂದಷ್ಟು ನೆಮ್ಮದಿ ನೀಡುವ ತಾಣ ಮನೆ. ಇಂತಹ ಮನೆಯ ಬಗ್ಗೆ ಒಂದಷ್ಟು ಮುತುವರ್ಜಿ ವಹಿಸಿ ಸುಂದರವಾಗಿಟ್ಟುಕೊಂಡರೆ ಆರೋಗ್ಯ ವೃದ್ಧಿಸುತ್ತದೆ.

What Should Be Done To Have Peace At Home

ಸ್ವಚ್ಛವಾಗಿದ್ದರೆ ಮೈಮನ ಹಗುರ

ಇವತ್ತು ನಮ್ಮನ್ನು ಕೆಲವು ರೋಗಗಳು ಕಾಡುತ್ತಿದ್ದರೆ ಅದಕ್ಕೆ ಕಾರಣ ನಮ್ಮ ಮನೆ ಮತ್ತು ಸುತ್ತಮುತ್ತಲಿನ ಅಶುಚಿತ್ವ ಎಂದರೆ ತಪ್ಪಾಗಲಾರದು. ಆದುದರಿಂದ ಅಡುಗೆಮನೆ, ಸ್ನಾನ, ಶೌಚಾಲಯ ಎಲ್ಲವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕಾಗುತ್ತದೆ. ಅದರಲ್ಲೂ ಮಕ್ಕಳಿರುವ ಮನೆಯಾದರೆ ಇನ್ನಷ್ಟು ಕಾಳಜಿ ಅಗತ್ಯ. ಹೊರಗೂ ಒಳಗೂ ದುಡಿಯುವ ಮಹಿಳೆಯರಿಗೆ ಮನೆ ಕೆಲಸ ಎನ್ನುವುದು ತಲೆನೋವು ತರುತ್ತದೆ. ಆದರೂ ಇರುವ ಕಾಲಾವಕಾಶದಲ್ಲಿ ಮನೆಯತ್ತವೂ ನಿಗಾ ವಹಿಸಲೇ ಬೇಕು.

ಬಹಳಷ್ಟು ಜನಕ್ಕೆ ಬೇರೆಯವರ ಮನೆಯಲ್ಲಿ ಇರುವುದೆಲ್ಲವೂ ನಮ್ಮ ಮನೆಗೆ ಬೇಕು. ಆದರೆ ಅದನ್ನು ಹೇಗಿಡಬೇಕೆಂಬುದೇ ಗೊತ್ತಿಲ್ಲ. ಸಿಕ್ಕಿದನೆಲ್ಲ ತಂದು ಸ್ಟೋರ್ ರೂಂ ರೀತಿ ಗುಡ್ಡೆ ಹಾಕುವುದಕ್ಕಿಂತ ಅಗತ್ಯ ವಸ್ತುಗಳನ್ನು ಮಾತ್ರ ಮನೆಗೆ ತರುವುದು ಉತ್ತಮ. ಮತ್ತು ಅವುಗಳನ್ನು ಜೋಡಿಸಿಡುವುದು ಕೂಡ ಕಲೆಯೇ. ಅಗತ್ಯವಿಲ್ಲದ ವಸ್ತು ತಂದು ಅವುಗಳನ್ನು ಎಲ್ಲೋ ಒಂದು ಕಡೆ ಇಟ್ಟು ಧೂಳು ಹಿಡಿಸೋದಕ್ಕಿಂತ ತರದಿರುವುದೇ ಉತ್ತಮ.

What Should Be Done To Have Peace At Home

ಪ್ರತಿ ಮನೆಗೂ ವಾಸನೆ ಇರುತ್ತದೆ

ಪ್ರತಿ ಮನೆಗೂ ಒಂದು ವಾಸನೆಯಿರುತ್ತದೆ. ಅದು ದುರ್ವಾಸನೆಯಾಗಬಾರದು. ಇತ್ತೀಚೆಗೆ ಮನೆಗಳು ಸುವಾಸನೆಯಿಂದ ಕೂಡಿರಲು ಹಲವು ಬಗೆಯ ರೂಂ ಪ್ರಷ್ನರ್ ಗಳು ಬಂದಿವೆ. ಅವುಗಳನ್ನು ಬಳಸಬಹುದು. ಮನೆ ಸ್ವಚ್ಛವಾಗಿಲ್ಲಾಂದ್ರೆ ಜಿರಳೆ, ಇಲಿ, ತಿಗಣೆಗಳು ವಾಸ್ತವ್ಯ ಹೂಡಿಬಿಡುತ್ತವೆ. ಅವುಗಳಿಂದ ದೂರವಿರಬೇಕಾದರೆ ಮನೆಯನ್ನು ಚೊಕ್ಕಟವಾಗಿಡುವುದು ಒಳ್ಳೆಯದು. ದೊಡ್ಡ ಬೆಲೆ ಬಾಳುವ ವಸ್ತುಗಳು ಮನೆಯನ್ನು ಅಲಂಕರಿಸಬಹುದು ಆದರೆ ಎಲ್ಲದಕ್ಕಿಂತ ಆರೋಗ್ಯ ಮುಖ್ಯ. ಅದು ಸಾಧ್ಯವಾಗಬೇಕಾದರೆ ಮನೆ ಸ್ವಚ್ಛವಾಗಿರಬೇಕಷ್ಟೆ. ಅದನ್ನು ಸ್ವಚ್ಛವಾಗಿಟ್ಟು ಕೊಳ್ಳುವುದು ಕೂಡ ನಮ್ಮ ಕೈನಲ್ಲೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+