ಮನೆಯ ಅಲಂಕಾರಕ್ಕೆ ರಂಗು ತರುವ ಪಾಪಾಸುಕಳ್ಳಿ ಈ ಆರೋಗ್ಯದ ಸಮಸ್ಯೆಗೆ ರಾಮಬಾಣ

ಒಂದು ಕಾಲದಲ್ಲಿ ಬಂಜರು ಭೂಮಿಯ ಸಸ್ಯವಾಗಿ ಮನುಷ್ಯನಿಂದ ಬಹು ದೂರವಾಗಿಯೇ ಉಳಿದಿದ್ದ ಪಾಪಾಸುಕಳ್ಳಿ ಅರ್ಥಾತ್ ಕ್ಯಾಕ್ಟೇಸಿ ಇತ್ತೀಚೆಗೆ ಉದ್ಯಾನವನದಲ್ಲಿ ಆಶ್ರಯ ಪಡೆಯುವುದರೊಂದಿಗೆ ಸುಧಾರಿತ ಪ್ರಬೇಧದೊಂದಿಗೆ ಮನೆಯ ಅಲಂಕಾರಿಕ ಗಿಡಗಳ ನಡುವೆ ಸ್ಥಾನ ಪಡೆದು ಮನೆಯ ಅಂದವನ್ನು ಹೆಚ್ಚಿಸಿ ಜನಮನ್ನಣೆಗೆ ಪಾತ್ರವಾಗಿದೆ.

ಸಾಮಾನ್ಯವಾಗಿ ಪಾಪಾಸುಕಳ್ಳಿಗಳು ಬಂಜರು ಭೂಮಿಯಲ್ಲಿ ಕಾಣಿಸುತ್ತಿದ್ದವು. ಮೈತುಂಬಾ ಮುಳ್ಳುಗಳಿದ್ದ ಈ ಸಸ್ಯದ ಬಳಿಗೆ ಯಾರೂ ಸುಳಿಯುತ್ತಿರಲಿಲ್ಲ. ಆದರೀಗ ಅವುಗಳ ಸ್ವರೂಪವೇ ಬದಲಾಗಿದ್ದು, ಹೂ ಕುಂಡಗಳಲ್ಲಿ ನೆಲೆಯೂರಿ ಆಕರ್ಷಿಸಲು ಆರಂಭಿಸಿವೆ.

What Are The Benefits Of Cactus Plant

"ಕ್ಯಾಕ್ಟೇಸಿ" ಕುಟುಂಬಕ್ಕೆ ಸೇರಿದ ಪಾಪಾಸುಕಳ್ಳಿಯ ಶಾಸ್ತ್ರೀಯ ಹೆಸರು 'ಬಿಪನ್ಯಿ' ಆಗಿದ್ದು, ಇವುಗಳಲ್ಲಿ ಸುಮಾರು ಇನ್ನೂರ ಐವತ್ತರಿಂದ ಮುನ್ನೂರವರೆಗೂ ಪ್ರಭೇದಗಳಿವೆ ಎಂದು ಹೇಳಲಾಗಿದೆ. ಇವುಗಳಲ್ಲಿ ಮೂರು ಬಗೆಯ ಅಂದರೆ ಡಿಲೆನಿಯೈ, ಮಾನಕ್ಯಾಂತ, ಇಲೆಟಿಯರ್ ಇವುಗಳು ಮಾತ್ರ ಭಾರತದಲ್ಲಿ ಕಂಡು ಬರುತ್ತವೆ ಎಂದು ಹೇಳಲಾಗಿದೆ.

ಮೂಲತಃ ಅಮೇರಿಕಾದ ಸಸ್ಯ

ಹಿಮಾಲಯದ ಎರಡು ಸಾವಿರ ಮೀಟರ್ ಎತ್ತರದ ಪ್ರದೇಶಗಳಲ್ಲೂ ಪಾಪಾಸುಕಳ್ಳಿಗಳು ಕಂಡು ಬರುತ್ತಿವೆಯಾದರೂ, ಇದು ಭಾರತ ದೇಶದ ಸಸ್ಯವಲ್ಲ ಎನ್ನಲಾಗಿದೆ. ಪಾಪಾಸುಕಳ್ಳಿಯ ತವರು ಅಮೆರಿಕ ಎಂದು ಹೇಳಲಾಗಿದೆ. ಅಲ್ಲಿಂದ ಪೋರ್ಚುಗೀಸರು ಭಾರತಕ್ಕೆ ತಂದಿದ್ದು, ಇಲ್ಲಿನ ಹವೆ ಮತ್ತು ಮಣ್ಣು ಇದಕ್ಕೆ ಸೂಕ್ತವಾದುದರಿಂದ ಇಲ್ಲಿ ಭದ್ರವಾಗಿ ನೆಲೆಯೂರಲು ಕಾರಣವಾಯಿತು.

ಪಾಪಾಸುಕಳ್ಳಿಯ ಮೂಲಕಾಂಡಗಳು ಸ್ಥಂಭಾಕೃತಿಯಲ್ಲಿದ್ದು, ಇದರಿಂದ ಚಪ್ಪಟೆಯಾಕಾರದ ಅಂಡಾಕಾರದ ಕವಲುಗಳು ಹೊರಟಿರುತ್ತವೆ. ಇವುಗಳನ್ನು ದೂರದಿಂದ ವೀಕ್ಷಿಸಿದ್ದೇ ಆದರೆ ಒಂದರ ಮೇಲೊಂದರಂತೆ ಜೋಡಿಸಿಟ್ಟಿದ್ದಾರೇನೋ? ಎಂಬಂತೆ ಕಂಡು ಬರುತ್ತದೆ.

What Are The Benefits Of Cactus Plant

ವಿಚಿತ್ರ ವಿನ್ಯಾಸದ ಪಾಪಾಸುಕಳ್ಳಿ

ಈ ಕವಲುಗಳ ಮೇಲೆ ಅನೇಕ ಗಂಟುಗಳಿದ್ದು, ಪ್ರತಿಯೊಂದು ಗಂಟುಗಳ ಮೇಲೂ ಮುಳ್ಳುಗಳ ಗೊಂಚಲಿವೆ. ಈ ಮುಳ್ಳುಗಳ ಮಧ್ಯೆ ಕೊಂಕು ತುದಿಯುಳ್ಳ ಬಿರುಗೂದಲುಗಳಿದ್ದು, ಕಾಂಡದ ಎಳೆಯ ಕವಲುಗಳಲ್ಲಿ ಎಲೆಗಳು ಪೊರೆಯಂತಿರುತ್ತವೆ. ಆದರೆ, ಬೆಳೆದ ಕವಲುಗಳಲ್ಲಿ ಈ ಎಲೆಗಳು ಕಂಡು ಬರುವುದಿಲ್ಲ. ಇವುಗಳ ಕಂಕುಳ ಮೊಗ್ಗುಗಳ ಎಲೆಗಳು ಮುಂದೆ ಮುಳ್ಳುಗಳಾಗಿ ಬೆಳೆಯುವುದು ಕಂಡು ಬರುತ್ತದೆ.

ಪಾಪಾಸುಕಳ್ಳಿಯ ಕಾಂಡವು ಇತರೆ ಕಳ್ಳಿಗಳ ಕಾಂಡದಂತೆ ಎಲೆಯ ರೂಪದ ಕಾಂಡವಾಗಿಯೇ ಅಂದರೆ ಚಪ್ಪಟೆಯಾಕಾರವಾಗಿಯೂ ಅಥವಾ ಸ್ಥಂಭಾಕಾರವಾಗಿಯೂ, ದಪ್ಪವಾಗಿಯೂ ಇದ್ದು, ಹಸಿರು ಬಣ್ಣವನ್ನು ಹೊಂದಿದೆ. ಈ ರೀತಿಯ ಮಾರ್ಪಾಡನ್ನು ಹೊಂದಿರುವುದರಿಂದ ಇದು ನೀರಿಲ್ಲದಂಥ ಪ್ರದೇಶಗಳಲ್ಲೂ ಬದುಕುವ ಸಾರ್ಮಥ್ಯವನ್ನು ಹೊಂದಿದೆ.

ನೀರನ್ನು ಹಿಡಿದಿಟ್ಟುಕೊಳ್ಳುವ ಸಸ್ಯವಿದು

ಇತರೆ ಸಸ್ಯಗಳಲ್ಲಾಗುವ ನೀರಿನ ನಷ್ಟ ಈ ಪಾಪಾಸುಕಳ್ಳಿಯಲ್ಲಿ ಆಗುವುದಿಲ್ಲ. ಏಕೆಂದರೆ ಇದರ ಎಲೆಗಳು ಮುಳ್ಳುಗಳಾಗಿ ಮಾರ್ಪಾಡು ಹೊಂದಿದ್ದು, ಬಾಷ್ಪ ವಿಸರ್ಜನೆ ಆಗುವುದಿಲ್ಲವಾಗಿದೆ. ಇದರ ಕಾಂಡದಲ್ಲಿ ಕ್ಲೋರೋಫಿಲ್ ಇದ್ದು, ಇದೇ ದ್ಯುತಿಸಂಶ್ಲೇಷಣೆಯನ್ನು ನಡೆಸುತ್ತದೆಯಲ್ಲದೆ, ಇದರ ಕಾಂಡದಲ್ಲಿ ಲೋಳೆಯನ್ನೊಳಗೊಂಡ ಅಂಗಾಂಶವಿದ್ದು, ಇದು ನೀರನ್ನು ಬಹಳ ಸಮಯಗಳ ತನಕವೂ ಸಂಗ್ರಹಿಡುವಲ್ಲಿ ಸಹಕಾರಿಯಾಗಿದೆ.

What Are The Benefits Of Cactus Plant

ಪಾಪಾಸುಕಳ್ಳಿಯ ವಂಶಾಭಿವೃದ್ಧಿಯನ್ನು ಗೆಲ್ಲುಗಳಿಂದ ಹಾಗೂ ಬೀಜಗಳಿಂದ ಮಾಡಲಾಗುತ್ತಿದೆ. ಪಾಪಾಸುಕಳ್ಳಿಯಿಂದ ಹಲವಾರು ಉಪಯೋಗಗಳಿದ್ದು, ಕೆಲವೆಡೆಗಳಲ್ಲಿ ಮುಳ್ಳಿನ ಸಸ್ಯವಾದುದರಿಂದ ಮನೆ ಹಾಗೂ ಹೊಲಗಳ ಸುತ್ತಲೂ ಶತ್ರುಗಳಿಂದ ರಕ್ಷಿಸಲು ಬೇಲಿಗಳಂತೆ ನೆಡುತ್ತಾರೆ. ಅಲ್ಲದೆ ಇದರಿಂದ ಪಡೆದ ಒರಟು ನಾರನ್ನು ಕಾಗದದ ತಯಾರಿಕೆಯಲ್ಲೂ ಉಪಯೋಗಿಸಬಹುದಾಗಿದೆ.

ಜಾನುವಾರುಗಳಿಗೆ ಮೇವಾಗಿ ಬಳಕೆ

ಮುಳ್ಳುಗಳನ್ನು ಬೇರ್ಪಡಿಸಿ ದನಕರುಗಳಿಗೆ ಮೇವಾಗಿಯೂ ಉಪಯೋಗಿಸಬಹುದು. ರಾಜಸ್ಥಾನದಲ್ಲಿ ಮುಳ್ಳುಗಳಿಲ್ಲದ ಪಾಪಾಸು ಕಳ್ಳಿಯನ್ನು ಬೆಳೆಸಿ ದನಕರುಗಳಿಗೆ ಮೇವಾಗಿ ಉಪಯೋಗಿಸಲಾಗುತ್ತಿದೆ. ಪಾಪಾಸುಕಳ್ಳಿಯಲ್ಲಿ ಹಲವು ರೀತಿಯ ಔಷಧೀಯ ಗುಣಗಳಿದ್ದು, ಇದರ ಕಾಂಡವನ್ನು ಗನರೀಯ ರೋಗಕ್ಕೆ ಔಷಧಿಯಾಗಿ ಉಪಯೋಗಿಸುತ್ತಾರೆ. ಹಣ್ಣಿನ ರಸವನ್ನು ಪಿತ್ತರಸ ಸ್ರಾವಕ ಹಾಗೂ ಕೆಮ್ಮು, ಕಫ, ಮೊದಲಾದವುಗಳಿಗೆ ಔಷಧಿಯಾಗಿ ಉಪಯೋಗಿಸಬಹುದಾಗಿದೆ. ಹಣ್ಣು ತಿನ್ನಲು ರುಚಿಯಾಗಿದ್ದು, ಇದರಲ್ಲಿ ತಂಪುಕಾರಕ ಹಾಗೂ ಚೈತನ್ಯದಾಯಕ ಗುಣಗಳಿವೆ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಸ್ವಯಂ ಔಷಧಿ ಒಳ್ಳೆಯದಲ್ಲ ತಜ್ಞರ ಸಲಹೆ ಪಡೆಯುವುದು ಒಳ್ಳೆಯದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+