ನಿಮ್ಮ ಪ್ರೇಮ ಸಂಗಾತಿಯನ್ನು ತಬ್ಬಿಕೊಳ್ಳುವುದರಿಂದ ನಿಮಗಾಗುವ ಲಾಭಗಳೇನು?
ಪ್ರೀತಿ ಅಂದರೆ ಬಹುತೇಕ ಮಂದಿ ಬರೀ ಹುಡುಗ, ಹುಡುಗಿ ಸೇರುವುದು ಅಂದುಕೊಂಡಿರುತ್ತಾರೆ. ಆದರೆ ಇದರಿಂದಾಚೆಗೂ ಕೂಡ ಒಮ್ಮ ಯೋಚನೆ ಮಾಡಲೇಬೇಕಾಗುತ್ತದೆ. ತಂದೆ, ತಾಯಿ ಸೇರಿಂದತೆ ಸಂಬಂಧಿಕರ ನಡುವೆ ಇರುವ ಉತ್ತಮ ಬಾಂಧವ್ಯವೂ ಕೂಡ ಪ್ರೀತಿಯೇ ಆಗಿರುತ್ತದೆ. ಸಾಮಾನ್ಯವಾಗಿ ಅಂದುಕೊಂಡ ಕನಸ್ಸುಗಳು ಈಡೇರಿದಾಗ, ಸಾಧನೆ ಮಾಡಿದಾಗ, ಅತೀ ದುಃಖವಾದಾಗ ತಮ್ಮ ಪ್ರೀತಿ ಪಾತ್ರರನ್ನು ತಬ್ಬಿಕೊಳ್ಳುತ್ತಾರೆ. ಇದನ್ನು ಆಗ್ಲ ಭಾಷೆಯಲ್ಲಿ Hug ಎನ್ನುತ್ತಾರೆ. ಹಾಗೆಯೇ ಈ ಅಪ್ಪುಗೆಯಿಂದ ಏನೆಲ್ಲ ಪ್ರಯೋಜನೆಗಳಿವೆ ಎನ್ನುವ ಮಾಹಿತಿಯನ್ನು ಕೂಡ ನೀವು ತಿಳಿದುಕೊಳ್ಳಲೇಬೇಕಿದೆ.
ನೀವು ಗಮನಿಸಿರಬಹುದು, ದುಃಖವಾದಾಗ ಪ್ರೀತಿಪಾತ್ರರನ್ನು (ತಂದೆ, ತಾಯಿ, ಸಂಬಂಧಿಕರು, ಪ್ರೇಯಸಿ, ಪ್ರಿಯಕರ) ಯಾರೇ ಆಗಿರಬಹುದು ಅಪ್ಪಿಕೊಂಡಾಗ ಮನಸ್ಸಿಗೆ ಎಷ್ಟೋ ನೆಮ್ಮದಿಯಾಗುತ್ತದೆ. ಹಾಗೆಯೇ ಇನ್ನು ಏನೆಲ್ಲ ಪ್ರಯೋಜನೆಗಳು ಇವೆ ಎಂದು ನೀವು ಇಲ್ಲಿ ಗಮನಿಸಲೇಬೇಕಿದೆ.

ಆತ್ಮವಿಶ್ವಾಸದ ಭಾವನೆ: ಸ್ನೇಹಿತ ಅಥವಾ ಪ್ರೀತಿಪಾತ್ರರೊಂದ ಸರಳವಾದ ಅಪ್ಪುಗೆಯು ನಿಮ್ಮ ಒತ್ತಡದ ಮನಸ್ಥಿತಿಯನ್ನು ಸರಳಗೊಳಿಸುತ್ತದೆ. ಇನ್ನು ಸಂತೋಷದ ಸಂದರ್ಭಗಳಲ್ಲಿ ನಿಮ್ಮ ಪ್ರೀತಿಪಾತ್ರರನ್ನು ತಬ್ಬಿಕೊಳ್ಳುವುದರಿಂದ ಸಂತೋಷವನ್ನು ದ್ವಿಗುಣಗೊಳಿಸಬಹುದು ಮತ್ತು ಆತ್ಮವಿಶ್ವಾಸದ ಭಾವನೆಯನ್ನು ತುಂಬುತ್ತದೆ. ಇದು ಪ್ರೀತಿಯ ಸಂಕೇತವಾಗಿದೆ.
ಸಂಬಂಧವನ್ನು ಗಟ್ಟಿಗೊಳಿಸುತ್ತದೆ: ಇನ್ನು ನಿಮಗೆ ಅತೀ ಹೆಚ್ಚು ವಿಶ್ವಾಸಾರ್ಹ ಎನಿಸಿರುವ ವ್ಯಕ್ತಿಯನ್ನು ತಬ್ಬಿಕೊಳ್ಳುವುದರಿಂದ ಇಬ್ಬರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದು ವೈದ್ಯಕೀಯ ಸಂಶೋಧನೆಗಳು ಹೇಳುತ್ತವೆ. ಅಲ್ಲದೆ, ಅಪ್ಪುಗೆಯ ಆವರ್ತನವನ್ನು ಹೆಚ್ಚಿಸುವುದು, ಒತ್ತಡವನ್ನು ಕಡಿಮೆ ಮಾಡುವ ಪರಿಣಾಮಕಾರಿ ವಿಧಾನವಾಗಿದೆ.
ನೀವು ಯಾರನ್ನಾದರೂ ತಬ್ಬಿಕೊಂಡಾಗ, ಈ ಒತ್ತಡವು ಮೂಳೆ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಇದು ಭಾವನಾತ್ಮಕವಾಗಿ ಧನಾತ್ಮಕ ಆಲೋಚನೆಯನ್ನು ಸೃಷ್ಟಿಸುತ್ತದೆ. ಇದು ಥೈಮಸ್ ಗ್ರಂಥಿಗಳಿಗೆ ಸಹಾಯ ಮಾಡುತ್ತದೆ. ಈ ಗ್ರಂಥಿಯು ದೇಹದಲ್ಲಿ ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊಂದಿದ್ದು, ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ.
ಪ್ರೀತಿಪಾತ್ರರನ್ನು ತಬ್ಬಿಕೊಳ್ಳುವುದರಿಂದ ನಿಮಗೆ ಸುಮಾರು 12 ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಇದರರ್ಥ ನೀವು ಯಾರನ್ನಾದರೂ ತಬ್ಬಿಕೊಂಡಾಗ, ನೀವು ಕ್ಯಾಲೊರಿಗಳನ್ನು ಸುಡುತ್ತೀರಿ ಎಂದರ್ಥ. ಒಂದು ಅಪ್ಪುಗೆಯು ಮನಸ್ಸಿನ ನೋವನ್ನು ಎದುರಿಸುವುದರ ಜೊತೆಗೆ, ರಕ್ತ ಪರಿಚಲನೆಯನ್ನು ಸುಧಾರಿಸುವ ಮೂಲಕ ದೇಹವನ್ನು ಆರೋಗ್ಯವಾಗಿರಿಸುತ್ತದೆ. ಮೃದು ಅಂಗಾಂಶಗಳಲ್ಲಿ ರಕ್ತದ ಹರಿವನ್ನು ಉತ್ತೇಜಿಸುತ್ತದೆ ಹಾಗೂ ಒತ್ತಡದ ಸ್ನಾಯುಗಳ ವಿಶ್ರಾಂತಿಗೆ ಸಹಾಯ ಮಾಡುತ್ತದೆ.
ಜ್ಞಾಪಕ ಶಕ್ತಿಯನ್ನು ಸುಧಾರಿಸಲು ಸಹಕಾರಿ: ಜ್ಞಾಪಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಯೋಚನಾ ಶಕ್ತಿಯನ್ನು ಹೆಚ್ಚಿಸುತ್ತದೆ. ಚಟುವಟಿಕೆ ಮತ್ತು ಶಾಂತತೆಯ ನಡುವೆ ಉತ್ತಮ ಸಮತೋಲನವನ್ನು ಸಾಧಿಸಲು ಸಹಾಯ ಮಾಡುತ್ತದೆ. ನಿಮ್ಮ ಹತ್ತಿರವಿರುವ ಯಾರನ್ನಾದರೂ ನೀವು ತಬ್ಬಿಕೊಂಡಾಗ, ಆಕ್ಸಿಟೋಸಿನ್ ಮಟ್ಟವು ಹೆಚ್ಚಾಗುತ್ತದೆ. ದೇಹದಲ್ಲಿನ ಕಾರ್ಟಿಸೋಲ್ ಅನ್ನು ಕಡಿಮೆ ಮಾಡಲು ಈ ಹಾರ್ಮೋನ್ ಬಹಳ ಮುಖ್ಯವಾಗಿದೆ. ಇದರಿಂದಾಗಿ ನಿಮ್ಮ ರಕ್ತದೊತ್ತಡ ಕಡಿಮೆ ಆಗುತ್ತದೆ.












Click it and Unblock the Notifications