Vegetable Soup Recipe: ಮಕರ ಸಂಕ್ರಾಂತಿ ಖಾದ್ಯ- ಈ ದಿನ ತರಕಾರಿ ಸೂಪ್ ಮಾಡಿ ಕುಡಿಯಿರಿ ಆರೋಗ್ಯ ಸೂಪರ್

ಆರೋಗ್ಯ ಉತ್ತಮವಾಗಿರಲು ತರಕಾರಿಯನ್ನು ಹೆಚ್ಚಾಗಿ ಆಹಾರದಲ್ಲಿ ಬಳಕೆ ಮಾಡುವುದು ತುಂಬಾ ಮುಖ್ಯ. ಈ ಬಾರಿ ಸಂಕ್ರಾಂತಿ ಹಬ್ಬಕ್ಕೆ ಗೃಹಿಣಿಯರು ಬಗೆ ಬಗೆಯ ಖಾದ್ಯಗಳನ್ನು ತಯಾರಿಸಲು ಆರಂಭಿಸಿರುತ್ತಾರೆ. ನೀವೇನಾದ್ರೂ ನಿಮ್ಮ ಮನೆಗೆ ಊಟಕ್ಕಾಗಿ ಸ್ನೇಹಿತರನ್ನ ಹಾಗೂ ಸಂಬಂಧಿಕರನ್ನ ಆಹ್ವಾನಿಸಿದ್ದರೆ ನಿಮ್ಮ ಎಲ್ಲಾ ಖಾದ್ಯಗಳೊಂದಿಗೆ ಇದೊಂದು ಸೂಪ್ ಸೇರಿಸಿಕೊಂಡು ಬಿಡಿ.

ಯಾಕೆಂದರೆ ಇದು ನಿಜಕ್ಕೂ ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪೋಷಕಾಂಶಗಳನ್ನು ನೀಡುತ್ತದೆ. ಚಕುಲಿ, ಕೋಡುಬಳೆ, ಉಂಡೆ ಹೀಗೆ ಬಗೆ ಬಗೆಯ ಕರಿದ ಖಾದ್ಯಗಳನ್ನು ನೀಡುವುದಕ್ಕಿಂತ ಆರೋಗ್ಯಕರವಾದ ಒಂದು ಸೂಪ್‌ ಅನ್ನು ನೀಡಿ ಹೆಮ್ಮೆಯಿಂದ ಇದನ್ನು ನೀವು ಹೇಳಿಕೊಳ್ಳಬಹುದು. ಹಾಗಾದರೆ ಈ ತರಕಾರಿ ಸೂಪ್ ಅನ್ನು ಯಾವುದೇ ಪೌಡರ್ ಬಳಸದೇ ಮನೆಯಲ್ಲೇ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿಯೋಣ.

vegetable soup recipe - making it at home and drinking it will be super healthy

ಸಾಮಾನ್ಯವಾಗಿ ಹಬ್ಬ ಎಂದ ಕೂಡಲೇ ಮನೆಯಲ್ಲಿ ಬಗೆ ಬಗೆಯ ಕರಿದ ತಿಂಡಿಗಳನ್ನು ತಯಾರಿಸಲಾಗುತ್ತದೆ. ಇದರ ಹೊರತಾಗಿ ನೀವೇನಾದ್ರು ವಿಭಿನ್ನವಾಗಿ ತಯಾರಿಸಬೇಕು ಅಂದುಕೊಂಡಿದ್ದರೆ ತರಕಾರಿ ಸೂಪ್‌ ಅನ್ನು ಪ್ರಯತ್ನಿಸಬಹುದು. ಹಾಗಾದರೆ ತಡ ಮಾಡುವುದು ಬೇಡ ತರಕಾರಿ ಸೂಪ್ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿಯೋಣ.

ತಯಾರಿಸಲು ಬೇಕಾಗುವ ಪದಾರ್ಥಗಳು:-

* ಅಕ್ಕಿ ಒಂದು ಕಪ್

* ಹೆಸರು ಕಾಳು 2 ಟೇಬಲ್ ಸ್ಪೂನ್ (ನೆನಸಿ ಮೊಳಕೆ ಬಂದ)

* ಕ್ಯಾರೆಟ್ 1 (ಚಿಕ್ಕ ಗಾತ್ರ)

* ಹಸಿ ಬಟಾಣಿ 1 ಟೇಬಲ್ ಸ್ಪೂನ್

* ಈರುಳ್ಳಿ ಸೊಪ್ಪು 1 ಟೇಬಲ್ ಸ್ಪೂನ್ (ಚಿಕ್ಕದಾಗಿ ಹೆಚ್ಚಿದ)

* ಸಿಹಿ ಹಸಿ ಮೆಕ್ಕೆಜೋಳ 4 ಟೇಬಲ್ ಸ್ಪೂನ್

* ಸಾಬುದಾನ ಅಕ್ಕಿ 1 ಟೇಬಲ್ ಸ್ಪೂನ್ (ರಾತ್ರಿ ಇಡಿ ನೆನೆಸಿದ)

* ಕಾಳು ಮೆಣಸು ಪುಡಿ ಕಾಲ್ ಚಮಚ

* ಉಪ್ಪು ರುಚಿಗೆ

ತಯಾರಿಸುವ ವಿಧಾನ:-

* ಮೊದಲಿಗೆ ಚೆನ್ನಾಗಿ ತೊಳೆದ ಅಕ್ಕಿಯನ್ನು ಕುಕ್ಕರ್‌ನಲ್ಲಿ ಹಾಕಿ ಒಂದು ಕಪ್ ಅಕ್ಕಿಗೆ 8 ಕಪ್ ನೀರು ಬೆರೆಸಿ, ಇದಕ್ಕೆ ನೆನೆಸಿದ ಸಾಬುದಾನ ಅಕ್ಕಿ ಹಾಕಿ ಸ್ವಲ್ಪ ಉಪ್ಪು ಹಾಕಿ ಕುಕ್ಕರ ಮುಚ್ಚಳ ಮುಚ್ಚಿ 4-5 ವಿಸಿಲ್ ಆಗಲು ಬಿಡಿ.

* ವಿಸಿಲ್ ಅದ ಬಳಿಕ ಕುಕ್ಕರ್ ಮುಚ್ಚಳ ತೆಗೆದು ಇದಕ್ಕೆ ಮನೆಯಲ್ಲೇ ಕುಟ್ಟಿ ಪುಡಿ ಮಾಡಿದ ಕಾಳು ಮೆಣಸು ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಚೆನ್ನಾಗಿ ಮಿಕ್ಸ್ ಮಾಡಿ ಕುದಿಸಿ. ಇದರಲ್ಲಿ ಅನ್ನದ ಕಾಳು ಸಿಗದಂತೆ ಎಲ್ಲವೂ ಕರುವವರೆಗೂ ಕುದಿಸಬೇಕು.

* ಇದಕ್ಕೆ ಕುದಿಯುವಾಗ ಹೆಸರು ಕಾಳು, ಸಣ್ಣದಾಗಿ ಹೆಚ್ಚಿದ ಕ್ಯಾರೆಟ್, ಹಸಿ ಬಟಾಣಿ, ಈರುಳ್ಳಿ ಸೊಪ್ಪು, ಸಿಹಿ ಹಸಿ ಮೆಕ್ಕೆಜೋಳ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನೀರಿನ ಅಗತ್ಯವಿದ್ದರೆ ಸೂಪ್ ಹದಕ್ಕೆ ನೀರು ಬೆರೆಸಿ ಕುಕ್ಕರ್ ಮುಚ್ಚಳ ಮುಚ್ಚಿ 1-2 ವಿಸಿಲ್ ಹಾಕಲು ಬಿಡಿ.

* ಬಳಿಕ ಇದನ್ನು ಸ್ವಲ್ಪ ಹೊತ್ತು ಬಿಟ್ಟು ಸವಿಯಲು ಬಡಸಿ. ಈ ಚಳಿಗಾಲಕ್ಕೆ ಇದನ್ನು ಕುದಿಯಲು ಹಿತವಾಗಿರುತ್ತದೆ. ಜೊತೆಗೆ ನಿಮ್ಮ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳನ್ನು ಇದು ಹೊಂದಿರುತ್ತದೆ. ಹಾಗಾದರೆ ಮನೆಯಲ್ಲಿ ನೀವು ಒಮ್ಮೆ ಇದನ್ನು ಟ್ರೈ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+