ನಿಮ್ಮ ಆಫೀಸ್ ಟೇಬಲ್ ಮೇಲೆ ಈ ವಸ್ತುಗಳನ್ನು ಇಡಬೇಡಿ.. ಇಲ್ಲದಿದ್ದರೆ ಯಶಸ್ಸು ಇರಲ್ಲ...
ನಿಮ್ಮ ಕಛೇರಿಯಲ್ಲಿ ನೀವು ಎಷ್ಟೇ ಚೆನ್ನಾಗಿ ಕೆಲಸ ಮಾಡಿದರೂ, ಉನ್ನತ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಹೊಂದಲು ನಿಮಗೆ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನಿಮಗೆ ನಿಯೋಜಿಸಲಾದ ಯಾವುದೇ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗದೇ ಇರಬಹುದು.
ನಿಮ್ಮ ಕಚೇರಿಯಲ್ಲಿ ನೀವು ಯಾವುದೇ ಪ್ರಗತಿಯನ್ನು ಹೊಂದುತ್ತಿಲ್ಲ ಅಂತಾದರೆ ಅದಕ್ಕೆ ಕಾರಣ ನಕರಾತ್ಮಕ ಶಕ್ತಿ ಆಗಿರಬಹುದು. ನಿಮ್ಮ ಆಫೀಸ್ ಟೇಬಲ್ ನಿಮ್ಮ ಪ್ರಗತಿಗೆ ಅಡ್ಡಿಯಾಗುವ ನಕಾರಾತ್ಮಕ ವಿಷಯಗಳನ್ನು ಹೊಂದಿರುವ ಸಾಧ್ಯತೆಯಿದೆ. ವಾಸ್ತು ಶಾಸ್ತ್ರದ ಪ್ರಕಾರ, ನಾವು ಸಕಾರಾತ್ಮಕ ಶಕ್ತಿಗಳಿಂದ ಸುತ್ತುವರೆದಿದ್ದರೆ ಮಾತ್ರ ಬಯಸಿದ ಫಲಿತಾಂಶಗಳನ್ನು ಮತ್ತು ಪ್ರಗತಿಯನ್ನು ಕಾಣಬಹುದು. ವಾಸ್ತು ಮನೆಗೆ ಮಾತ್ರವಲ್ಲ ನಾವು ಕೆಲಸ ಮಾಡುವ ಸ್ಥಳಕ್ಕೂ ಅನ್ವಯಿಸುತ್ತದೆ.

ಹೀಗಾಗಿ ಕೆಲಸದ ಸ್ಥಳದಲ್ಲಿ ಪ್ರಗತಿಯನ್ನು ಕಾಣಲು ಯಾವ ರೀತಿಯ ವಸ್ತುಗಳನ್ನು ಟೇಬಲ್ ಮೇಲೆ ಇರಿಸಬೇಕು ಮತ್ತು ಯಾವುದನ್ನು ಇರಿಸಬಾರದು ಎಂಬುದನ್ನು ವಾಸ್ತು ಶಾಸ್ತ್ರ ಹೇಳುತ್ತದೆ. ಹಾಗಾದರೆ ಕಚೇರಿಯಲ್ಲಿ ಯಶಸ್ಸು ಮತ್ತು ಲಾಭಕ್ಕಾಗಿ ಯಾವ ವಸ್ತು ಇರಬೇಕು ಮತ್ತು ಯಾವ ವಸ್ತು ಇರಬಾರದು ಎಂದು ನೋಡೋಣ.
ಕಚೇರಿ ಟೇಬಲ್ ಸ್ಥಳ ಹೇಗಿರಬೇಕು
ವಾಸ್ತು ಪ್ರಕಾರ ನೀವು ಕಚೇರಿಯಲ್ಲಿ ಪ್ರಗತಿಯನ್ನು ನೋಡಲು ಬಯಸಿದರೆ ನಿಮ್ಮ ಟೇಬಲ್ ಸ್ಥಳ ಮತ್ತು ದಿಕ್ಕನ್ನು ಗಮನಿಸಬೇಕು. ನಿಮ್ಮ ಕಚೇರಿಯ ಟೇಬಲ್ ಹಿಂದೆ ಗೋಡೆ ಇರಬೇಕು. ಅಲ್ಲದೆ ನೀವು ಕುಳಿತುಕೊಳ್ಳುವಾಗ ನಿಮ್ಮ ಹಿಂದೆ ಯಾವುದೇ ಪ್ರವೇಶ ದ್ವಾರ, ಕಿಟಕಿ ಇತ್ಯಾದಿ ಇರಬಾರದು. ಉತ್ತರ ಮತ್ತು ಈಶಾನ್ಯ ದಿಕ್ಕಿಗೆ ಮುಖಮಾಡಿ ಕಚೇರಿಯಲ್ಲಿ ಕುಳಿತುಕೊಳ್ಳಬೇಡಿ. ಕಚೇರಿಯಲ್ಲಿ ಎಲ್ಲರೂ ನಿಮ್ಮನ್ನು ನೋಡುವಂತೆ ಅಂದರೆ ನಿಮಗೆ ಕಾಣಿಸುವಂತೆ ಕುಳಿತುಕೊಳ್ಳಿ.

ಆಫೀಸ್ ಟೇಬಲ್ ಮೇಲೆ ಇಡಬೇಕಾದ ವಸ್ತುಗಳು
ಕಚೇರಿಯಲ್ಲಿ ಸುಧಾರಣೆ ಕಾಣಲು ಕಚೇರಿಯ ಮೇಜಿನ ಮೇಲೆ ಯಾವ ವಸ್ತುಗಳನ್ನು ಇಡಬೇಕು ಎಂದು ಹಲವರು ಕೇಳಬಹುದು. ಅದಕ್ಕೆ ಉತ್ತರ ವಾಸ್ತುಶಾಸ್ತ್ರದಲ್ಲಿ ಇದೆ. ಆಫೀಸ್ ಟೇಬಲ್ ಮೇಲೆ ಪೇಪರ್ ಇರುತ್ತೆ, ಅದನ್ನು ಗಾಳಿಗೆ ಹಾರಾಡುವಂತೆ ಇಡಬೇಡಿ. ನಿಮ್ಮ ಮೇಜಿನ ಮೇಲೆ ನೀವು ಕಾಗದ ಅಥವಾ ಪುಸ್ತಕಗಳನ್ನು ಇಟ್ಟುಕೊಂಡಿದ್ದರೆ, ಅದನ್ನು ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿ ಇರಿಸಿ.
ಆಫೀಸ್ ಟೇಬಲ್ ಮೇಲಿರುವ ಇನ್ನೊಂದು ವಸ್ತುವೆಂದರೆ ನೀರಿನ ಬಾಟಲಿ. ಈ ನೀರಿನ ಬಾಟಲಿಯನ್ನು ಉತ್ತರಕ್ಕೆ ಇಡಿ. ಜೊತೆಗೆ ಕಚೇರಿಯ ಮೇಜಿನ ಮೇಲೆ ಪ್ರಮುಖ ದಾಖಲೆಗಳು ಇದ್ದರೆ ಅದನ್ನು ಯಾವಾಗಲೂ ಉತ್ತರ ಭಾಗದಲ್ಲಿ ಇಡಬೇಕು.
ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವ ಉತ್ಪನ್ನಗಳು
ಕಚೇರಿಯಲ್ಲಿ ಧನಾತ್ಮಕ ಶಕ್ತಿಯು ನಿಮ್ಮನ್ನು ಸುತ್ತುವರಿಯಲು ನೀವು ಬಯಸಿದರೆ, ನಿಮ್ಮ ಮೇಜಿನ ಮೇಲೆ ಟೇಬಲ್ ಗಡಿಯಾರ, ನೋಟ್‌ಪ್ಯಾಡ್-ಪೆನ್ ಮತ್ತು ಪಿರಮಿಡ್ ಅನ್ನು ಇರಿಸಬಹುದು. ಅಲ್ಲದೆ ಕಚೇರಿ ಮೇಜಿನ ಮೇಲೆ ಬಿದಿರಿನ ಗಿಡವನ್ನು ಇಡುವುದು ತುಂಬಾ ಒಳ್ಳೆಯದು. ಅದು ಅದೃಷ್ಟವನ್ನು ಆಕರ್ಷಿಸುತ್ತದೆ ಮತ್ತು ಪ್ರಗತಿಗೆ ಕಾರಣವಾಗುತ್ತದೆ.
ಇವುಗಳನ್ನು ಮೇಜಿನ ಮೇಲೆ ಇಡಬೇಡಿ
ವಾಸ್ತು ಪ್ರಕಾರ ಯಾವುದೇ ಕಪ್ಪು ಅಥವಾ ಕೆಂಪು ಬಣ್ಣದ ವಸ್ತುಗಳನ್ನು ಕಚೇರಿಯ ಮೇಜಿನ ಮೇಲೆ ಇಡಬೇಡಿ. ಹಾಗೆಯೇ ಗಾಜಿನ ಸಾಮಾನುಗಳನ್ನು ಮೇಜಿನ ಮೇಲೆ ಇಡಬಾರದು. ಇದಲ್ಲದೇ ಕಚೇರಿಯ ಮೇಜಿನ ಮೇಲೆ ಚೂಪಾದ ವಸ್ತುಗಳನ್ನು ಇಡಬೇಡಿ. ಅಲ್ಲದೆ ಆಫೀಸ್ ಟೇಬಲ್ ನಲ್ಲಿ ಕುಳಿತು ಏನನ್ನೂ ತಿನ್ನಬೇಡಿ ಅಥವಾ ಕುಡಿಯಬೇಡಿ. ನೀವು ಹೀಗೆ ಮಾಡಿದರೆ ಅದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಪ್ರಗತಿಗೆ ಅಡ್ಡಿಯಾಗುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications