Valentine's Day: ನಿಮ್ಮ ಪ್ರೇಮಿಗೆ, ಸಂಗಾತಿಗೆ, ನೆಚ್ಚಿನ ಫ್ರೆಂಡ್ಸ್‌ಗೆ ಡಿಫ್ರೆಂಟಾಗಿ ವಿಶ್ ಮಾಡಲು ಉಡುಗೊರೆ ಫೋಟೋ ಕಳುಹಿಸಿ
ಫೆಬ್ರವರಿ ಪ್ರೇಮಿಗಳಿಗೆ ಸಂತೋಷದ ತಿಂಗಳು. ಯಾಕೆಂದರೆ ಈ ತಿಂಗಳಲ್ಲೇ ವ್ಯಾಲೆಂಟೈನ್ಸ್ ಡೇ ಬರುತ್ತದೆ. ಈ ಪ್ರೇಮಿಗಳ ದಿನವನ್ನು ಒಂದು ದಿನ ಮಾತ್ರವಲ್ಲದೆ ಒಂದು ವಾರ ಆಚರಿಸಲಾಗುತ್ತದೆ. ಪ್ರೇಮಿಗಳ ವಾರ ಫೆಬ್ರವರಿ 07 ರಂದು ಪ್ರಾರಂಭವಾಗಿ ಫೆಬ್ರವರಿ 14 ರಂದು ಅಂದರೆ ಪ್ರೇಮಿಗಳ ದಿನದಂದು ಕೊನೆಗೊಳ್ಳುತ್ತದೆ. ಈ ವಾರದಲ್ಲಿ ನೀವು ನಿಮ್ಮ ಪ್ರೇಮಿಗೆ, ಸಂಗಾತಿಗೆ ಹಾಗೂ ನೆಚ್ಚಿನ ಸ್ನೇಹಿತರಿಗೆ ವಿಶೇಷವಾಗಿ ವಿಶ್ ಮಾಡಬೇಕು ಅಂದುಕೊಂಡಿದ್ದರೆ ಇಲ್ಲಿದೆ ಸಲಹೆ...
ಈ ಎಂಟು ದಿನಗಳಲ್ಲಿ ನೀವು ನಿಮ್ಮ ಪ್ರೀತಿ ಪಾತ್ರರಿಗೆ ವಿಶೇಷವಾಗಿ ಶುಭಾಶಯ ತಿಳಿಸಬಹುದು. ಜೊತೆಗೆ ಉಡುಗೊರೆಯಗಳನ್ನು ನೀಡಬಹುದು. ಇಲ್ಲಿ ವಿಶೇಷ ಏನಾಪ್ಪ ಅಂದರೆ ನೀವು ನಿಮ್ಮ ಜೀವನ ಸಂಗಾತಿ, ಪ್ರೇಮಿ ಅಥವಾ ನೆಚ್ಚಿನ ಸ್ನೇಹಿತರಿಗೆ ಉಡುಗೊರೆಗಳನ್ನು ನೀಡಿ ಈ ಪ್ರೇಮಿಗಳ ದಿನವನ್ನು ಆಚರಿಸಲು ಬಯಸಿದ್ದರೆ ಆ ಉಡುಗೊರೆಯ ಫೋಟೋವನ್ನು ನಮಗೆ ಕಳುಹಿಸಿ. ಜೊತೆಗೆ ನೀವು ನಿಮ್ಮವರಿಗೆ ಶುಭ ಕೋರುವ ವ್ಯಾಖ್ಯಾನವನ್ನು ಹಾಗೂ ನಿಮ್ಮ ಹೆಸರು ನೀವು ಶುಭಕೋರಲು ಬಯಸುವವರ ಹೆಸರು, ಸ್ಥಳವನ್ನು ಈ-ಮೇಲ್ ಮಾಡಿ. ನೀವು ಬಯಸಿದಲ್ಲಿ ನಿಮ್ಮ ಪ್ರೇಮಿಯೊಂದಿಗಿನ ಫೋಟೋ ಕೂಡ ನಮ್ಮೊಂದಿಗೆ ಹಂಚಿಕೊಳ್ಳಬಹುದು.

ಪ್ರೇಮಿಗಳು ಮಾತ್ರ ಫೋಟೋ ಕಳುಹಿಸಬೇಕು ಎಂದಿಲ್ಲ. ದಂಪತಿಗಳು, ಸ್ನೇಹಿತರು ಕೂಡ ನೀವು ನಿಮ್ಮ ನೆಚ್ಚಿನವರಿಗೆ ನೀಡಲು ಬಯಸುವ ಉಡುಗೊರೆಯ ಫೋಟೋವನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು. ನೀವು ಬಯಸಿದಲ್ಲಿ ನಿಮ್ಮ ಸಂಗಾತಿ ಹಾಗೂ ಪ್ರೇಮಿಯ ಫೋಟೋ ಕೂಡ ನಮ್ಮೊಂದಿಗೆ ಹಂಚಿಕೊಳ್ಳಬಹುದು. ಇಲ್ಲಿ ನಿಮ್ಮ ಹೆಸರು, ಸ್ಥಳ ಹಾಗೂ ನಿಮ್ಮ ಮನದಾಳದ ಮಾತನ್ನು ಹಂಚಿಕೊಳ್ಳಲು ಅವಕಾಶವಿರುತ್ತದೆ.
ಉದಾ: ಹೆಸರು- ಮಹೇಶ್
ಸ್ಥಳ: ಬೆಂಗಳೂರು
ಪತ್ನಿ/ಪ್ರೇಮಿ/ಸ್ನೇಹಿತೆ: ಹೇಮಾ
ಪ್ರೇಮಿಗಳ ದಿನದ ಶುಭಾಶಯಗಳು- 'ನಾನು ಏನು ಎಂದು ನನಗಿಂತ ಚೆನ್ನಾಗಿ ಗೊತ್ತಿರುವುದು ನಿನಗೆ ಮಾತ್ರ. ನಗುವಾಗ ಜೊತೆಗೂಡುವ, ಅಳುವಾಗ ಹೆಗಲು ಕೊಡುವ ಈ ಸಂಬಂಧ ಎಲ್ಲಾ ಬಂಧಗಳನ್ನು ಮೀರಿದ್ದು'

ನೀವು ಕಳುಹಿಸುವ ಉಡುಗೊರೆಯ ಫೋಟೋದೊಂದಿಗೆ ನೀವು ಶುಭ ಹಾರೈಸುವ ವ್ಯಾಖ್ಯಾನವನ್ನು ಸಹ ನಾವು ನಮ್ಮ ಒನ್‌ಇಂಡಿಯಾಕನ್ನಡ ವೆಬ್‌ಸೈಟ್‌ನಲ್ಲಿ ಪ್ರಸ್ತುತಪಡಿಸುತ್ತೇವೆ. ಹೀಗೆ ಈ ಬಾರಿ ಪ್ರೇಮಿಗಳ ದಿನವನ್ನು ಎಂದಿಗಿಂತ ವಿಶೇಷವಾಗಿ ನೀವು ಆಚರಿಸಬಹುದು. ಇಂದಿನಿಂದ ಅಂದರೆ ಫೆಬ್ರವರಿ 6ರಿಂದ ಎಂಟು ದಿನಗಳ ಕಾಲ ಅಂದರೆ ಫೆಬ್ರವರಿ 14ರವರೆಗೂ ನೀವು ನಿಮ್ಮ ಸಂಗಾತಿಗೆ ಆಯ್ಕೆ ಮಾಡಿಕೊಂಡ ವಿಶೇಷ ಉಡುಗೊರೆಯ ಫೋಟೋವನ್ನು ಹಾಗೂ ಉಲ್ಲೇಖಗಳನ್ನು (quotes) ನಮ್ಮೊಂದಿಗೆ ಹಂಚಿಕೊಳ್ಳಬಹುದು.
ಪ್ರೇಮಿಗಳ ವಾರ
ಪ್ರೇಮಿಗಳ ವಾರದಲ್ಲಿ ಫೆಬ್ರವರಿ 7ರಂದು ರೋಸ್ ಡೇ (Rose Day), ಫೆಬ್ರವರಿ 8ಕ್ಕೆ ಪ್ರೇಮ ಪ್ರಸ್ತಾಪದ ದಿನ(Propose Day), ಫೆಬ್ರವರಿ 9ರಂದು ಚಾಕಲೇಟ್ ಡೇ(Chocolate Day), ಫೆಬ್ರವರಿ 10ರಂದು ಟೆಡ್ಡಿ ಡೇ (Teddy Day), ಫೆಬ್ರವರಿ 11ಕ್ಕೆ ಪ್ರಾಮಿಸ್ ಡೇ (Promise Day), ಫೆಬ್ರವರಿ 12ಕ್ಕೆ ಅಪ್ಪಿಕೊಳ್ಳುವ ದಿನ (Hug Day), ಫೆಬ್ರವರಿ 13ರಂದು ಚುಂಬಿಸುವ ದಿನ (Kiss Day) ಹಾಗೂ ಫೆಬ್ರವರಿ 14ರಂದು ಪ್ರೇಮಿಗಳ ದಿನ (Valentine's Day)ವನ್ನು ಆಚರಿಸಲಾಗುತ್ತದೆ.

ಈ ಎಂಟು ದಿನಗಳನ್ನು ನೀವು ಆಚರಿಸಿದಲ್ಲಿ ಆ ಅದ್ಬುತ ಕ್ಷಣದ ಸವಿ ನೆನಪನ್ನು ಇನ್ನಷ್ಟು ವಿಶೇಷವಾಗಿಸಲು ನಮ್ಮೊಂದಿಗೆ ಫೋಟೋವನ್ನು ಹಂಚಿಕೊಳ್ಳಿ. ಹೀಗೆ ವಿಶೇಷ ದಿನವನ್ನು ಮತ್ತಷ್ಟು ವಿಶೇಷವಾಗಿಸಲು [email protected] ಮೇಲ್ ಐಡಿಗೆ ನಿಮ್ಮ ಹೆಸರು, ಸ್ಥಳ, ನೀವು ಯಾರಿಗೆ ಶುಭಾಶಯ ತಿಳಿಸಲು ಬಯಸುವಿರಿ ಅವರ ಹೆಸರು, ಶುಭಾಶಯ ಅಥವಾ ಉಲ್ಲೇಖಗಳು ಹಾಗೂ ಉಡುಗೊರೆಯ ಫೋಟೋ ಅಥವಾ ನಿಮ್ಮ ಫೋಟೋ ಕಳುಹಿಸಬಹುದು.












Click it and Unblock the Notifications