Rose day: ರೋಸ್ ಡೇಗೆ ಗುಲಾಬಿ ಕೊಟ್ಟು ಬೋರ್ ಆಗಿದೆಯೇ? ಇಲ್ಲಿದೆ ಹಲವು ರೋಮ್ಯಾಂಟಿಕ್ ಐಡಿಯಾಗಳು
ಇದು ವ್ಯಾಲೆಂಟೈನ್ ವೀಕ್, ಈ ಫೆಬ್ರವರಿ ತಿಂಗಳು ಪೂರ್ತಿ ಪ್ರೇಮಿಗಳದ್ದೆ ಕಾರುಬಾರು. ತಮ್ ನಡುವಿನ ಪ್ರೀತಿಯನ್ನು ಒಬ್ಬರಿಗೊಬ್ಬರು ವಿನಿಮಯ ಮಾಡುತ್ತಾ ತಮ್ಮದೆ ಲೋಕದಲ್ಲಿ ವಿಹರಿಸುವ ಪ್ರೇಮ ಪಕ್ಷಿಗಳ ವಾರ ಆರಂಭವಾಗಿದೆ. ಅದರ ಮೊದಲ ದಿನವೇ ರೋಸ್ ಡೇ. ಫೆಬ್ರವರಿ 14 ರಂದು ಪ್ರೇಮಿಗಳ ದಿನ ನಡೆದರೂ ಇಡೀ ವಾರ ಒಂದಲ್ಲ ಒಂದು ದಿನ ಆಚರಣೆ ಮಾಡಲು ದಿನಗಳಿವೆ.
ರೋಸ್ ಡೇ ವ್ಯಾಲೆಂಟೈನ್ಸ್ ವಾರದ ಆರಂಭ ಸೂಚಿಸುತ್ತದೆ. ನಿಮ್ಮ ಪ್ರೀತಿಪಾತ್ರರನ್ನು ನೀವು ಎಷ್ಟು ಮೆಚ್ಚುತ್ತೀರಿ ಮತ್ತು ಪ್ರೀತಿಸುತ್ತೀರಿ ಎಂಬುದನ್ನು ತೋರಿಸುವ ಅದ್ಭುತ ಸಂದರ್ಭ ಇದು. ಈ ವರ್ಷ, ಸಾಂಪ್ರದಾಯಿಕತೆಯಿಂದ ದೂರವಿರಿ ಮತ್ತು ನಿಮ್ಮವರ ಜೊತಗೆ ರೋಸ್ ಡೇಯನ್ನು ಸ್ಪೇಷಲ್ ಆಗಿ ಆಚರಿಸಿ. ಆದರೆ, ಪ್ರತಿ ವರ್ಷ ಬರೀ ಗುಲಾಬಿ ಕೊಟ್ಟು ಬೋರ್ ಆಗಿದ್ದರೇ, ಇಲ್ಲಿವೆ ಹಲವು ರೋಮ್ಯಾಂಟಿಕ್ ಐಡಿಯಾಗಳು.

1. ಪರ್ಸನಲೈಸ್ಡ್ ರೋಸ್‌ಗಳು: ನಿಮ್ಮ ಪ್ರೀತಿಪಾತ್ರರಿಗೆ ಸಾಂಪ್ರದಾಯಿಕ ಪುಷ್ಪಗುಚ್ಛದ ಬದಲಿಗೆ ನೀವೇ ಮಾಡಿಸಿದ ಪರ್ಸನಲೈಸ್ಡ್ ರೋಸ್‌ಗಳ ಗುಚ್ಚ ನೀಡಿ. ಇದರ ಜೊತೆಗೆ ನಿಮ್ಮ ಕೃತಜ್ಞತೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುವ ಸಣ್ಣ ಟಿಪ್ಪಣಿ ಅಥವಾ ಸಂದೇಶ ಇರಲಿ. ಇದು ನಿಮ್ಮ ರೋಸ್ ಡೇಗೆ ಸ್ಪೇಷಲ್ ಕಿಕ್ ನೀಡುತ್ತದೆ. ಜೊತೆಗೆ ನಿಮ್ಮ ಸರಳ ಉಡುಗೊರೆಯನ್ನು ಅಮೂಲ್ಯವಾಗಿಸುತ್ತದೆ.
2. ಗುಲಾಬಿ ಅಲಂಕಾರದೊಂದಿಗೆ ರೊಮ್ಯಾಂಟಿಕ್ ಡಿನ್ನರ್: ಎಲ್ಲಾ ಪ್ರೇಮಿಗಳಿಗೂ ಡಿನ್ನರ್‌ಗೆ ಹೊರಗೆ ಹೋಗುವುದು ಅಷ್ಟು ಇಷ್ಟವಾಗುವುದಿಲ್ಲ. ನಿಮ್ಮವರೂ ಹಾಗೆ ಇದ್ದರೇ, ಅವರಿಗಾಗಿ ಮನೆಯಲ್ಲಿ ವಿಶೇಷ ಅಡುಗೆ ಮಾಡಿ. ಟೇಬಲ್ ಅನ್ನು ಅಲಂಕರಿಸಲು ಗುಲಾಬಿ ದಳಗಳನ್ನು ಬಳಸಿ. ಸಿಹಿ ಅಡುಗೆಯಲ್ಲಿ ಗುಲಾಬಿ ಬಳಸುವ ಅಡುಗೆಯನ್ನು ಆರಿಸಿಕೊಳ್ಳಿ. ಇದು ರೋಸ್ ಡೇಯನ್ನು ನಿಮ್ ಡೇ ಆಗಿ ಪರಿವರ್ತಿಸಲಿದೆ.

3. ಗುಲಾಬಿ ಚಿತ್ತಾರ ಹೊಂದಿರುವ ಒಡವೆಗಳು: ನಿಮ್ಮ ಸಂಗಾತಿಗಾಗಿ ಈ ರೋಸ್ ಡೇ ಅಂದು ಗುಲಾಬಿ ಮೋಟಿಫ್ (ಚಿತ್ತಾರ) ಹೊಂದಿರುವ ಆಭರಣವನ್ನು ಉಡುಗೊರೆಯಾಗಿ ನೀಡಿ. ಗುಲಾಬಿಗಳ ಆಕಾರದಲ್ಲಿನ ಕೆತ್ತನೆಗಳು ಅಥವಾ ಗುಲಾಬಿ ಪೆಂಡೆಂಟ್ ಇರುವ ಕಿವಿಯೋಲೆ ಸೆಟ್, ಬ್ರೆಸ್‌ಲೇಟ್ ಅಥವಾ ನೆಕ್ಲೇಸ್ ನೀಡಬಹುದು. ಈ ಗುಲಾಬಿ ಬಾಡುವುದಿಲ್ಲ ಜೊತೆಗೆ ಎಷ್ಟು ವರ್ಷವಾದರೂ ಜೊತೆಗೆ ಇರುತ್ತದೆ.
4. ಗುಲಾಬಿ ಪರಿಮಳಯುಕ್ತ ಸ್ನಾನ ಮತ್ತು ಸ್ಪಾ: ನಿಮ್ಮ ಸಂಗಾತಿಗೆ ಮತ್ತೊಂದು ವಿಭಿನ್ನ ಉಡುಗೊರೆ ನೀಡುವ ಮನಸ್ಸು ನಿಮಗಿದ್ದರೇ, ಅವರಿಗೆ ಐಷಾರಾಮಿ ಮತ್ತು ಉತ್ತಮವಾದ ಸ್ಪಾ ಟ್ರಿಟ್‌ಮೆಂಟ್ ಗಿಫ್ಟ್ ಮಾಡಬಹುದು. ಹೌದು.... ಒಂದು ಹಿತವಾದ ಮಸಾಜ್ ಮತ್ತು ಸ್ನಾನ ಅವರಿಗೆ ನೆಮ್ಮದಿ ನೀಡಬಲ್ಲದು. ಇದಕ್ಕೆ ವಿಶೇಷ ಟಚ್ ನೀಡಲು ಗುಲಾಬಿಗಳ ಪರಿಮಳಯುಕ್ತ ಲೋಷನ್‌ಗಳು, ಎಣ್ಣೆ ಮತ್ತು ಐಷಾರಾಮಿ ಸ್ನಾನದ ಸೆಟ್ ಅನ್ನು ನೀಡಿ. ಇದು ನಿಮ್ಮ ಸಂಗಾತಿಯ ಯೋಗಕ್ಷೇಮದ ಬಗ್ಗೆ ನಿಮ್ಮ ಕಾಳಜಿಯನ್ನು ತಿಳಿಸುತ್ತದೆ.
5. ಪ್ರಿಸರ್ವೆಡ್ ರೋಸ್ (Preserved roses): ನಿಮ್ಮ ಮನೆಗೆ ಬಣ್ಣ ಮತ್ತು ತಾಜಾ ಪರಿಮಳವನ್ನು ಸೇರಿಸಲು ಸುಲಭವಾದ ಮತ್ತು ಕಡಿಮೆ-ನಿರ್ವಹಣೆಯ ಮಾರ್ಗವೆಂದರೆ ಪ್ರಿಸರ್ವೆಡ್ ರೋಸ್‌ಗಳು. ಇದು ಅನೇಕ ತಿಂಗಳುಗಳು ಅಥವಾ ಮುಂಬರುವ ವರ್ಷಗಳವರೆಗೆ ಹಾಗೆ ಇರುತ್ತದೆ. ಪದೇ ಪದೇ ನಿಮ್ಮ ನಡುವಿನ ಪ್ರೀತಿಯನ್ನು ನೆನಪಿಸುತ್ತಿರುತ್ತದೆ. ಗುಲಾಬಿಗಳು ಸುಂದರ ಮತ್ತು ಪ್ರೀತಿಯ ಸಂಕೇತವಾಗಿದೆ. ವಿಷಕಾರಿಯಲ್ಲದ ತಂತ್ರವನ್ನು ಬಳಸಿಕೊಂಡು ಪ್ರಿಸರ್ವ್ ಮಾಡಿದ ತಾಜಾ ಹೂವುಗಳನ್ನು ಬಳಸಿ ಇವುಗಳನ್ನು ಮಾಡಲಾಗಿರುತ್ತದೆ. ಹೀಗಾಗಿ ನಿಮ್ಮ ರೋಸ್ ಡೇಗೆ ಮತ್ತಷ್ಟು ಮೆರುಗು ನೀಡುತ್ತವೆ.












Click it and Unblock the Notifications