ವಿಶ್ವದ Top 10 ದುಬಾರಿ ನಾಯಿ ತಳಿಗಳು: ಬೆಲೆ, ವೈಶಿಷ್ಟ್ಯಗಳು ಮತ್ತು ಲಕ್ಸುರಿ ಪೆಟ್ ಗೈಡ್

ಪೆಟ್ ಪ್ರಿಯರಿಗೆ ನಾಯಿಗಳು ಕೇವಲ ನಿಷ್ಟಾವಂತ ಅಷ್ಟೇ ಅಲ್ಲ ಬುದ್ದಿವಂತ ಗುಣಗಳನ್ನು ಹೊಂದಿರುತ್ತವೆ, ಇವುಗಳು ನಮ್ಮ ಭಾವನೆ ಮತ್ತು ದಿನಚರಿಯನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತವೆ. ಕೆಲವು ತಳಿಗಳು ಐಷಾರಾಮಿ ಜೀವನಶೈಲಿಯ ಸಂಕೇತವಾಗಿವೆ. ಅಪರೂಪದ ವಂಶಾವಳಿಯ, ಶುದ್ಧ ತಳಿಗಳು ಮತ್ತು ಹೆಚ್ಚಿನ ಬೇಡಿಕೆಯ ಕಾರಣದಿಂದ ಇವುಗಳ ಬೆಲೆ ಲಕ್ಷಾಂತರ ರೂಪಾಯಿಗಳವರೆಗೂ ಇರುತ್ತದೆ.

ವಿಶ್ವದ ಅತ್ಯಂತ ದುಬಾರಿ ನಾಯಿ ತಳಿಗಳ ಪಟ್ಟಿಯನ್ನು ನೀಡಲಾಗಿದೆ:

1. ಟಿಬೆಟಿಯನ್ ಮಾಸ್ಟಿಫ್ (Tibetan Mastiff) - 9,00,000 ರಿಂದ 10,00,000 ಲಕ್ಷವರೆಗೆ

ಹಿಮಾಲಯದ ರಕ್ಷಕ ಎಂದು ಕರೆಯಲ್ಪಡುವ ಈ ಬೃಹತ್ ಮತ್ತು ಶಕ್ತಿಶಾಲಿ ನಾಯಿಯನ್ನು ಪ್ರಾಚೀನ ಕಾಲದಿಂದಲೂ ಕಾವಲು ಮತ್ತು ರಕ್ಷಣಾ ಕಾರ್ಯಗಳಿಗೆ ಬಳಸಲಾಗುತ್ತದೆ. ಇವುಗಳ ಕುತ್ತಿಗೆ ಸುತ್ತಲು ದಟ್ಟವಾದ ರೋಮಗಳು ಇರುತ್ತವೆ ಆದ್ದರಿಂದ ಇವುಗಳನ್ನು ಸಿಂಹದಂತಹ ನಾಯಿಗಳೆಂದು ಕರೆಯಲಾಗುತ್ತದೆ.

Top 10 Most Expensive Dog

2. ಅಕಿಟಾ (Akita) - 75,000 ರಿಂದ 7,50,000 ಲಕ್ಷವರೆಗೆ

ಜಪಾನ್ ಮೂಲದ ಈ ನಾಯಿ ತನ್ನ ನಿಷ್ಠೆ ಮತ್ತು ಧೈರ್ಯಕ್ಕಾಗಿ ಪ್ರಸಿದ್ಧ. "ಹಚಿಕೋ" ಎಂಬ ನಾಯಿಯ ಕಥೆಯಿಂದ ಜಾಗತಿಕವಾಗಿ ಖ್ಯಾತಿಯಾಗಿದೆ.

3. ಅಜವಾಖ್ (Azawakh) - 4,15,000 ರಿಂದ 7,00,000 ಲಕ್ಷವರೆಗೆ

ಅಜವಾಖ್ ಹೆಸರಿನ ನಾಯಿ ಪಶ್ಚಿಮ ಆಫ್ರಿಕಾದ ಅಪರೂಪದ ಸೈಟ್‌ಹೌಂಡ್ ತಳಿಯಾಗಿದೆ. ತನ್ನ ಅಸಾಧಾರಣ ವೇಗ ಮತ್ತು ಸೊಗಸಾದ ದೇಹ ರಚನೆ ಇದರ ವಿಶೇಷತೆ.

4. ಫರೋ ಹೌಂಡ್ (Pharaoh Hound) - 1,00,000 ರಿಂದ 4,00,000 ಲಕ್ಷವರೆಗೆ

ಈಜಿಪ್ಟ್‌ನ ಪುರಾತನ ಕಲಾಕೃತಿಗಳಲ್ಲಿರುವ ನಾಯಿಗಳನ್ನೇ ಹೋಲುವ ಈ ತಳಿ ಮಾಲ್ಟಾ ಮೂಲದ್ದಾಗಿದೆ. ತನ್ನ ಅಸಾಧಾರಣ ವೇಗ, ಚುರುಕುತನ ಮತ್ತು ಆಕರ್ಷಕ ಸ್ವಭಾವಕ್ಕೆ ಇದು ಹೆಸರುವಾಸಿ.

5. ಸಲೂಕಿ (Saluki) - 1,40,000 ರಿಂದ 4,00,000 ಲಕ್ಷವರೆಗೆ

'ರಾಯಲ್ ಡಾಗ್ ಆಫ್ ಈಜಿಪ್ಟ್' ಎಂದು ಕರೆಯಲ್ಪಡುವ ಈ ತಳಿ ಜಗತ್ತಿನ ಅತ್ಯಂತ ಪುರಾತನ ನಾಯಿ ತಳಿಗಳಲ್ಲಿ ಒಂದಾಗಿದೆ. ತನ್ನ ರಾಜಗಾಂಭೀರ್ಯದ ನೋಟ ಮತ್ತು ಅಪ್ರತಿಮ ವೇಗಕ್ಕೆ ಇದು ಹೆಸರುವಾಸಿ.

6. ಅಫ್ಘಾನ್ ಹೌಂಡ್ (Afghan Hound) - 1,20,000 ರಿಂದ 4,50,000 ಲಕ್ಷವರೆಗೆ

ಉದ್ದವಾದ ಮತ್ತು ರೇಷ್ಮೆಯಂತಹ ಅತಿ ಸುಂದರವಾದ ರೋಮಗಳನ್ನು ಹೊಂದಿರುವ ಈ ನಾಯಿಯನ್ನು 'ಕಿಂಗ್ ಆಫ್ ಡಾಗ್ಸ್' ಎಂದು ಕರೆಯಲಾಗುತ್ತದೆ. ಇದರ ರಾಜಗಾಂಭೀರ್ಯದ ನೋಟವನ್ನು ಕಾಪಾಡಿಕೊಳ್ಳಲು ನಿರಂತರ ಮತ್ತು ಹೆಚ್ಚಿನ ಆರೈಕೆಯ ಅಗತ್ಯವಿರುತ್ತದೆ.

7. ಸ್ಯಾಮೊಯೆಡ್ (Samoyed) - 1,75,000 ರಿಂದ 2,50,000 ಲಕ್ಷವರೆಗೆ

ಹಿಮದಂತೆ ಬೆಳ್ಳಗಿರುವ ರೋಮದ ಈ ನಾಯಿಯನ್ನು "ನಡೆಯುವ ಮೋಡ" ಎಂದೆ ಪ್ರಸಿದ್ಢವಾಗಿದೆ. ಸೈಬೀರಿಯಾದಲ್ಲಿ ಹಿಮಸಾರಂಗಗಳನ್ನು ಮೇಯಿಸಲು ಇದನ್ನು ಬಳಸಲಾಗುತಿದ್ದ ಈ ತಳಿಯು ತನ್ನ ಅದ್ಬುತವಾದ ಸ್ನೇಹಪರ ಗುಣದಿಂದಾಗಿಯೇ ಇಂದು ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯ ನಾಯಿ ಎಂದೆ ಹೇಳಬಹುದು.

8. ಚೌ ಚೌ (Chow Chow) - 1.20,000 ರಿಂದ 1.40,000 ಲಕ್ಷವರೆಗೆ

ಚೀನಾದ ಮೂಲದ ಅತ್ಯಂತ ಪುರಾತನ ತಳಿಗಳಲ್ಲಿ ಒಂದಾಗಿದೆ. ಸಿಂಹದಂತೆ ಇರುವ ಇದರ ಭವ್ಯವಾದ ದೇಹ ಮತ್ತು ನೀಲಿ-ಕಪ್ಪು ನಾಲಿಗೆ ಇದರ ವಿಶೇಷ ಲಕ್ಷಣವಾಗಿದೆ.

9. ಡೋಗೋ ಅರ್ಜೆಂಟಿನೋ (Dogo Argentino)- 50,000 ರಿಂದ 1,20,000 ಲಕ್ಷವರೆಗೆ

ಡೋಗೋ ಅರ್ಜೆಂಟಿನಾ ಮೂಲದ ಈ ನಾಯಿ ಅತ್ಯಂತ ಶಕ್ತಿಶಾಲಿ ಬೇಟೆಗಾರ ತಳಿಯಾಗಿದೆ. ಬಲಿಷ್ಠ ದೇಹ, ಸದೃಡ ಸ್ನಾಯುಗಳು ಮತ್ತು ಅಪ್ರತಿಮ ಧೈರ್ಯಶಾಲಿ ಸ್ವಭಾವಕ್ಕೆ ಇದು ಹೆಸರುವಾಸಿಯಾಗಿದೆ.

10. ಲೋಚೆನ್ (Löwchen) - 50,000 ರಿಂದ 1,00,000 ಲಕ್ಷವರೆಗೆ

ಯುರೋಪಿಯನ್ ರಾಜಮನೆತನದ ಆಸ್ಥಾನಗಳಲ್ಲಿ ಲ್ಯಾಪ್ ಡಾಗ್ ಆಗಿ ಮುದ್ದಿಸಲ್ಪಡುತ್ತಿದ್ದ ಈ ಅಪರೂಪದ ತಳಿ, ತನ್ನ ಸಿಂಹದಂತಿರುವ ಕೂದಲಿಗೆ ಹೆಸರುವಾಸಿ. ಇಂದಿಗೂ ಇವು ವಿಶ್ವದ ದುಬಾರಿ ನಾಯಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+