Tomato Salna Recipe: ತಿಂಡಿ ಆಯ್ತಾ? ದೋಸೆ, ಇಡ್ಲಿ, ಪೂರಿ, ಚಪಾತಿಗೆ ಇದೇ ಚಟ್ನಿ ತಿನ್ನಿ... ಸೂಪರ್ ಇರುತ್ತೆ...
ಪ್ರತಿದಿನ ಬೆಳಿಗ್ಗೆ ಇಡ್ಲಿ, ದೋಸೆ, ಚಪಾತಿ ಇತರ ಆಹಾರವನ್ನು ನೀವು ತಯಾರಿಸುವಿರಿ. ಆದರೆ ಇದೆಲ್ಲದಕ್ಕೂ ಸಾಂಬರ್, ಆಲುಗಡ್ಡೆ ಪಲ್ಯ ಬಿಟ್ಟರೆ ಚಟ್ನಿ ಮಾಡಬೇಕು. ನಿತ್ಯ ಒಂದೇ ಬಗೆಯ ಚಟ್ನಿ ಮಾಡಲಾಗಲಿ ತಿನ್ನಲಾಗಲಿ ಬೇಸರವಾಗುತ್ತದೆ. ಇಂತೆಲ್ಲಾ ತಿಂಡಿಗಳಿಗೆ ನೀವು ದಿನಕ್ಕೊಂದು ಚಟ್ನಿ ತಯಾರಿಸಬಹುದು.
ಹಾಗಾದರೆ ಟೊಮೆಟೊ ಸಾಲ್ನಾ ತಯಾರಿಸಿ. ಇದು ಯಾವುದೇ ತಿಂಡಿಗೂ ಸರಿಹೊಂದುತ್ತದೆ. ಜೊತೆಗೆ ರುಚಿಯಾಗಿಯೂ ಇರುತ್ತದೆ. ಮನೆಯಲ್ಲಿ ಚಿಕ್ಕಮಕ್ಕಳಿಂದ ಹಿರಿಯರವರೆಗೂ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಮುಖ್ಯವಾಗಿ ಇದು 15 ನಿಮಿಷಗಳಲ್ಲಿ ಮಾಡಬಹುದಾದ ಸುಲಭವಾದ ಪಾಕವಿಧಾನವಾಗಿದೆ. ಹಾಗಾದರೆ ಮತ್ಯಾಕ್ ತಡ ಟೊಮೆಟೊ ಸಾಲ್ನಾ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ. ಇದನ್ನು ಓದಿ ರುಚಿ ನೋಡಿ ಮತ್ತು ನಿಮ್ಮ ಪ್ರತಿಕ್ರಿಯೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ಅಗತ್ಯವಿರುವ ವಸ್ತುಗಳು:
* ದೊಡ್ಡ ಈರುಳ್ಳಿ - 1 (ಕತ್ತರಿಸಿದ)
* ಟೊಮೇಟೊ - 3 (ಕತ್ತರಿಸಿದ)
* ಎಣ್ಣೆ - 1 tbsp
* ಶುಂಠಿ - 1/2 ಇಂಚು
* ಬೆಳ್ಳುಳ್ಳಿ - 1 ಎಸಳು
* ತೆಂಗಿನ ತುರಿ - 1/4 ಕಪ್
* ಗಸಗಸೆ - 1 tbsp
* ಚಕ್ಕೆ - 1 ಇಂಚು
* ಲವಂಗ - 2
* ಏಲಕ್ಕಿ - 2
* ಸೋಂಪು - 1 tbsp
* ಜೀರಿಗೆ - 1 tbsp
* ಪುದೀನಾ - 10 ಎಲೆಗಳು
* ಉಪ್ಪು - ರುಚಿಗೆ ತಕ್ಕಂತೆ
* ತುಪ್ಪ - 1 ಟೇಬಲ್ಸ್ಪೂನ್
* ಮೆಣಸಿನ ಪುಡಿ - 1/2 ಟೀಸ್ಪೂನ್
* ಅರಿಶಿನ ಪುಡಿ - 1/4 ಟೀಸ್ಪೂನ್
* ಕೊತ್ತಂಬರಿ ಸೊಪ್ಪು - ಸ್ವಲ್ಪ
*ಮೆಂತೆ ಸ್ವಲ್ಪ
ಪಾಕವಿಧಾನ:
* ಮೊದಲು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ.
* ಎಣ್ಣೆ ಬಿಸಿಯಾದಾಗ ಚಕ್ಕೆ, ಲವಂಗ, ಏಲಕ್ಕಿ, ಸೋಂಪು, ಜೀರಿಗೆ ಹಾಕಿ ಚೆನ್ನಾಗಿ ಹುರಿದು, ಶುಂಠಿ ಬೆಳ್ಳುಳ್ಳಿ ಹಾಕಿ ಒಂದು ನಿಮಿಷ ಹುರಿಯಿರಿ.
* ನಂತರ ಈರುಳ್ಳಿ ಹಾಕಿ ಒಂದು ನಿಮಿಷ ಹುರಿಯಿರಿ.
* ನಂತರ ಟೊಮೆಟೊ ಹಾಕಿ ಮೃದುವಾಗುವವರೆಗೆ ಹುರಿಯಿರಿ.
* ಮುಂದೆ ಅದಕ್ಕೆ ಮೆಂತೆ, ತೆಂಗಿನ ತುರಿ ಮತ್ತು ಗಸಗಸೆ ಹಾಕಿ ಒಂದು ನಿಮಿಷ ಚೆನ್ನಾಗಿ ಹುರಿದು ತಣ್ಣಗಾಗಲು ಬಿಡಿ, ಮಿಕ್ಸರ್ ಜಾರ್ ಗೆ ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
* ಮುಂದೆ ಒಲೆಯ ಮೇಲೆ ಬಾಣಲೆ ಇಟ್ಟು ಅದರಲ್ಲಿ ತುಪ್ಪ ಹಾಕಿ ಬಿಸಿ ಮಾಡಿ ಅರಿಶಿನ ಪುಡಿ, ಮೆಣಸಿನ ಪುಡಿ ಹಾಕಿ ಬಾಡಿಸಿ, ರುಬ್ಬಿದ ಪೇಸ್ಟ್ ಹಾಕಿ ಚೆನ್ನಾಗಿ ಕಲಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಬೇಕಾದಷ್ಟು ನೀರು ಹಾಕಿ ಕುದಿಸಿ.
* ಹಸಿ ವಾಸನೆ ಹೋಗುವಷ್ಟು ಚೆನ್ನಾಗಿ ಕುದಿದಾಗ ಸ್ಟವ್ ಆಫ್ ಮಾಡಿ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ರುಚಿಯಾದ ಟೊಮೆಟೊ ಸಾಲ್ನಾ ರೆಡಿ.












Click it and Unblock the Notifications