Tomato Bath Recipe: ರುಚಿ ರುಚಿಯಾಗಿ ಟೊಮೆಟೊ ಬಾತ್ ಮಾಡುವ ವಿಧಾನ

ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಟೊಮೆಟೊ ಬಾತ್ ತಯಾರಿಸುತ್ತಾರೆ. ಆದರೆ ಅದನ್ನು ರುಚಿಯಾಗಿ ತಯಾರಿಸುವುದು ಒಂದು ಕಲೆ. ಈ ಕಲೆ ಎಲ್ಲ ಗೃಹಿಣಿಯರಿಗೂ ತಿಳಿದಿರುವುದಿಲ್ಲ.ಒಮ್ಮೆ ಈ ಪಾಕ ವಿಧಾನವನ್ನು ತಿಳಿದರೆ ಮತ್ತೆ ಮತ್ತೆ ಟೊಮೆಟೊ ಬಾತ್ ತಯಾರಿಸಿಕೊಂಡು ಸವಿಯುವುದು ಗ್ಯಾರಂಟಿ. ಅಲ್ಲದೆ ಇದು ಮನೆಯಲ್ಲಿ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ. ಹಾಗಾದರೆ ತಡ ಮಾಡುವುದು ಬೇಡ ರುಚಿಯಾಗಿ ಟೊಮೆಟೊ ಬಾತ್ ಮನೆಯಲ್ಲಿ ತಯಾರಿಸುವುದು ಹೇಗೆ ಅನ್ನೋದನ್ನು ಈಗ ತಿಳಿಯೋಣ.

ನೀವು ಇದನ್ನು ಮನೆಯಲ್ಲಿ ಒಂದು ಬಾರಿ ಟ್ರೈ ಮಾಡಿ. ನಿಮ್ಮ ಅನುಭವವನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ. ಹಾಗಾದರೆ ಮನೆಯಲ್ಲಿ ಟೊಮೆಟೊ ಬಾತ್ ತಯಾರಿಸುವುದು ಹೇಗೆ? ಇದಕ್ಕೆ ಬೇಕಾಗುವ ಪದಾರ್ಥಗಳು ಯಾವುವು? ಎಲ್ಲದರ ಬಗ್ಗೆ ಕಂಪ್ಲೀಟ್ ಆಗಿ ಈಗ ತಿಳಿಯೋಣ.

tomato bath recipe - how to make tasty tomato bath at home in kannada

ಬೇಕಾಗುವ ಪದಾರ್ಥಗಳು:

* ನಾಟಿ ಟೊಮೆಟೊ 5

* ಈರುಳ್ಳಿ 1

* ಜೀರಿಗೆ ಕಾಲ್ ಟೇಬಲ್ ಸ್ಪೂನ್

* ಸಾಸಿವೆ ಕಾಲ್ ಟೇಬಲ್ ಸ್ಪೂನ್

* ಕರಿಬೇವು ಸ್ವಲ್ಪ

* ಕಾರದ ಪುಡಿ 1 ಟೇಬಲ್ ಸ್ಪೂನ್

* ಅರಿಶಿಣ ಕಾಲ್ ಟೇಬಲ್ ಸ್ಪೂನ್

* ಉಪ್ಪು ರುಚಿಗೆ ತಕ್ಕಷ್ಟು

* ಗರಂ ಮಸಾಲ ಪೌಡರ್ ಅರ್ಧ ಟೇಬಲ್ ಸ್ಪೂನ್

* ದನಿಯಾ ಪೌಡರ್ ಅರ್ಧ ಟೇಬಲ್ ಸ್ಪೂನ್

* ಲವಂಗಾ 2

* ಕಾಳು ಮೆಣಸು 2

* ಅಡುಗೆ ಎಣ್ಣೆ

*ಒಣಮೆಣಸಿನ ಕಾಯಿ

* ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ:

* ಟೊಮೆಟೊ ಬಾತ್ ತಯಾರಿಸಲು ಮೊದಲಿಗೆ ಒಂದು ಪಾತ್ರೆಯನ್ನು ಗ್ಯಾಸ್‌ ಮೇಲೆ ಇಟ್ಟು ಅದು ಬಿಸಿಯಾದ ಬಳಿಕ ಎಣ್ಣೆಯನ್ನು ಹಾಕಿ.

* ಎಣ್ಣೆ ಬಿಸಿ ಆದ ಬಳಿಕ ಇದಕ್ಕೆ ಜೀರಿಗೆ, ಸಾಸಿವೆ ಹಾಕಿ ಚಟಪಟ ಎನ್ನುವವರೆಗೂ ಬಿಡಿ. ಬಳಿ ಒಣಮೆಣಸಿನಕಾಯಿ ಹಾಕಿ ಹುರಿದುಕೊಳ್ಳಿ.

* ಬಳಿಕ ಇದಕ್ಕೆ ಸಣ್ಣಕೆ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಕರಿಬೇವಿನ ಸೊಪ್ಪು ಹಾಕಿ ಚೆನ್ನಾಗಿ ಬಾಡಿಸಿ.

* ಇದಾದ ನಂತರ ನುಣ್ಣಗೆ ರುಬ್ಬಿಕೊಂಡ ಟೊಮೆಟೊ ಪೇಸ್ಟ್‌ ಅನ್ನು ಈ ಒಗ್ಗರಣೆಗೆ ಹಾಕಿ ಹಸಿ ವಾಸನೆ ಹೋಗಿ ಎಣ್ಣೆ ಮೇಲೆ ತೇಲುವವರೆಗೂ ಬಿಡಿ.

* ಬಳಿಕ ಕಾರದ ಪುಡಿ, ಅರಿಶಿಣ, ಗರಂ ಮಸಾಲಾ ಹಾಗೂ ದನಿಯಾ ಪೌಡರ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕೈ ಆಡಿಸಿ. 1-2 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ.

* ನಂತರ ಲವಂಗಾ ಹಾಗೂ ಕಾಳು ಮೆಣಸು ಜಜ್ಜಿ ಪುಡಿ ಮಾಡಿ ಅದಕ್ಕೆ ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ಇದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ.

ಇದರಲ್ಲಿ ಉಪ್ಪು, ನಾಟಿ ಟೊಮೆಟೊ ಹುಳಿ ಹಾಗೂ ಖಾರ ಸಮವಾಗಿ ಇರುವುದರಿಂದ ಇದರ ರುಚಿ ಹೆಚ್ಚಾಗಲಿದೆ. ಜೊತೆಗೆ ಮಕ್ಕಳಿಂದ ಮನೆಯ ಎಲ್ಲಾ ಸದಸ್ಯರೂ ಕೂಡ ಹೆಚ್ಚು ಇಷ್ಟಪಟ್ಟು ಸೇವಿಸುತ್ತಾರೆ. ಈ ಸರಳ ವಿಧಾನವನ್ನು ಒಮ್ಮೆ ನೀವು ಮನೆಯಲ್ಲಿ ಟ್ರೈ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+