ಬೇಸಿಗೆಯ ಶಾಖದಿಂದ ಉಂಟಾಗುವ ಹೊಟ್ಟೆನೋವಿಗೆ ಪರಿಣಾಮಕಾರಿ ಮನೆ ಮದ್ದುಗಳು

ಬೇಸಿಗೆ ಪ್ರಾರಂಭವಾಗಿದೆ. ತೀವ್ರವಾದ ಸೂರ್ಯನ ಬಿಸಿಲು ಡಿ ಹೈಡ್ರೇಶನ್‌ ಮತ್ತು ವಿವಿಧ ಕಾಯಿಲೆಗಳಿಗೆ ಕಾರಣವಾಗಬಹುದು. ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಯೆಂದರೆ ಹೊಟ್ಟೆ ನೋವು. ಹೊಟ್ಟೆ ನೋವು ಬೇಸಿಗೆಯಲ್ಲಿ ಅನೇಕರನ್ನು ಕಾಡುತ್ತದೆ. ದೇಹದಲ್ಲಿ ಎದುರಾಗುವ ನೀರಿನ ಕೊರತೆ, ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದು ಮುಂತಾದ ಕಾರಣಗಳಿಂದ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಬೇಸಿಗೆಯಲ್ಲಿ ಕಾಡುವ ಹೊಟ್ಟೆನೋವು ಗಂಭೀರವಾಗಿಯೇನು ಇರುವುದಿಲ್ಲ, ಆದರೆ ಕಿರಿ ಕಿರಿ ಉಂಟು ಮಾಡುತ್ತದೆ.

ಬೇಸಿಗೆಯಲ್ಲಿ ಕಾಡುವ ಹೊಟ್ಟೆ ನೋವಿಗೆ ತ್ವರಿತ ಮತ್ತು ಸುಲಭ ಪರಿಹಾರಗಳು:

ಹೀಟಿಂಗ್‌ ಪ್ಯಾಡ್ ಬಳಸಿ:

ಬೇಸಿಗೆಯಲ್ಲಿ ಕಾಡುವ ಹೊಟ್ಟೆ ನೋವು ಹೆಚ್ಚಾಗಿ ಸೆಳೆತದಿಂದ ಉಂಟಾಗಬಹುದು. ನೋವು ಅನುಭವಿಸುತ್ತಿರುವ ಹೊಟ್ಟೆಯ ಜಾಗದಲ್ಲಿ ಹೀಟಿಂಗ್‌ ಪ್ಯಾಡ್ ಅನ್ನು ಇಡುವುದರಿಂದ ಈ ನೋವನ್ನು ಸುಲಭವಾದ ಪರಿಹರಿಸಿಕೊಳ್ಳಬಹುದು. ಶಾಖವು ಹೊಟ್ಟೆಯ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಈ ಮೂಲಕ ಜೀರ್ಣಾಂಗವ್ಯೂಹದಲ್ಲಿನ ಚಲನೆಯನ್ನು ಹೆಚ್ಚು ಮಾಡುತ್ತದೆ. ನೀವು ಮಲಗಿರುವ ಭಂಗಿಯಲ್ಲಿದ್ದಾಗ ಹೊಟ್ಟೆಯ ಮೇಲೆ ಹೀಟಿಂಗ್‌ ಪ್ಯಾಡ್‌ ಇಡುವುದರಿಂದ ನೋವು ನಿವಾರಣೆಯಾಗುವುದು.

Summer Stomach Pain

ಸಾಕಷ್ಟು ನೀರು ಮತ್ತು ORS ಕುಡಿಯುವುದು:

ನೀರಿನ ಕೊರತೆಯು ದೇಹದಲ್ಲಿನ ಎಲೆಕ್ಟ್ರೋಲೈಟ್ ಸಮತೋಲನವನ್ನು ಅಡ್ಡಿಪಡಿಸುತ್ತದೆ. ಆಗ ಹೊಟ್ಟೆ ಸೆಳೆತ ಮತ್ತು ಜೀರ್ಣಕಾರಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ, ಪ್ರತಿದಿನ ಕನಿಷ್ಠ 3-4 ಲೀಟರ್ ನೀರು ಕುಡಿಯಬೇಕು. ಅಲ್ಲದೆ, ಹೊರಗೆ ಹೋಗುವಾಗ ORS ಅಥವಾ ಎಲೆಕ್ಟ್ರೋಲೈಟ್ ಪ್ಯಾಕೆಟ್ ಅನ್ನು ನಿಮ್ಮ ಜೊತೆಗೆ ಇಟ್ಟುಕೊಳ್ಳುವುದು ಒಳ್ಳೆಯದು. ಅಗತ್ಯವಿದ್ದಾಗ ಅದನ್ನು ಕುಡಿಯುತ್ತಿದ್ದರೆ ಹೊಟ್ಟೆ ನೋವು ಬರದಂತೆ ತಡೆಯಬಹುದು.

ಬೇಸಿಗೆಯಲ್ಲಿ ಡಯಾಲಿಸಿಸ್ ರೋಗಿಗಳಲ್ಲಿ ಸೋಂಕಿನ ಅಪಾಯ ಹೆಚ್ಚಾಗುವುದೇಕೆ? ಸಮಸ್ಯೆ ಉಲ್ಬಣಿಸದಂತೆ ಏನು ಮಾಡಬೇಕು
ಬೇಸಿಗೆಯಲ್ಲಿ ಡಯಾಲಿಸಿಸ್ ರೋಗಿಗಳಲ್ಲಿ ಸೋಂಕಿನ ಅಪಾಯ ಹೆಚ್ಚಾಗುವುದೇಕೆ? ಸಮಸ್ಯೆ ಉಲ್ಬಣಿಸದಂತೆ ಏನು ಮಾಡಬೇಕು

ಹೆಚ್ಚು ತಿನ್ನಬಾರದು:

ಅತಿಯಾಗಿ ತಿನ್ನುವುದರಿಂದ ಹೊಟ್ಟೆ ಉಬ್ಬುತ್ತದೆ ಮತ್ತು ಇತರ ಆಂತರಿಕ ಅಂಗಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಅತಿಯಾಗಿ ತಿನ್ನುವುದರಿಂದ ಕರುಳುಗಳು ಹೆಚ್ಚು ಹೈಡ್ರೋಕ್ಲೋರಿಕ್ ಆಮ್ಲವನ್ನು ಉತ್ಪಾದಿಸಲು ಕಾರಣವಾಗುತ್ತದೆ. ಇದು ನಿಮ್ಮ ಹೊಟ್ಟೆಗೆ ಮೇಲ್ಮುಖವಾಗಿ ಹರಿಯುವಾಗ ನೋವು ಉಂಟುಮಾಡುತ್ತದೆ. ನೀವು ತಿನ್ನುವ ಆಹಾರವನ್ನು ನಿಯಂತ್ರಿಸುವುದು ತೂಕ ಹೆಚ್ಚಾಗುವುದನ್ನು ತಡೆಯಲು ಸಹಾಯ ಮಾಡುವುದರ ಜೊತೆಗೆ ಕರುಳಿನ ಒಟ್ಟಾರೆ ಆರೋಗ್ಯ ಮತ್ತು ಕಾರ್ಯವನ್ನು ಸುಧಾರಿಸುತ್ತದೆ.

ನಿಂಬೆ ಪಾನಕ:

ಕೆಲವೊಮ್ಮೆ, ಗ್ಯಾಸ್‌ನಿಂದ ಕೂಡಾ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಆದರೆ ಅದು ನಮಗೆ ತಿಳಿದಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಈ ಹೊಟ್ಟೆ ಸಮಸ್ಯೆ ನಿವಾರಣೆಗೆ ನಿಂಬೆ ನೀರು ಹೆಚ್ಚು ಪರಿಣಾಮಕಾರಿಯಾಗಿದೆ. ನಿಂಬೆ ನೀರು ಅಥವಾ ಪಾನಕ ಗ್ಯಾಸ್‌ನಿಂದ ಕಾಣಿಸಿಕೊಳ್ಳುವ ಹೊಟ್ಟೆನೋವು ತಡೆಗೆ ಬೆಸ್ಟ್‌ ಮನೆಮದ್ದು.

ಹಸಿ ಹಾಲಿನೊಂದಿಗೆ ಈ ಪುಡಿ ಬೆರೆಸಿ ಹಚ್ಚಿದರೆ ಬೇಸಿಗೆಯಲ್ಲಿಯೂ ಮುಖದ ಕಾಂತಿ ಕಾಪಾಡಬಹುದು!
ಹಸಿ ಹಾಲಿನೊಂದಿಗೆ ಈ ಪುಡಿ ಬೆರೆಸಿ ಹಚ್ಚಿದರೆ ಬೇಸಿಗೆಯಲ್ಲಿಯೂ ಮುಖದ ಕಾಂತಿ ಕಾಪಾಡಬಹುದು!

ಹೆಚ್ಚುವರಿಯಾಗಿ, ನಿಂಬೆ ಪಾನಕಕ್ಕೆ ಒಂದು ಚಿಟಿಕೆ ಅಡಿಗೆ ಸೋಡಾವನ್ನು ಸೇರಿಸುವುದರಿಂದ ಹೊಟ್ಟೆಯ ಆಮ್ಲದಲ್ಲಿ ಕ್ಷಾರೀಯ ಸಮತೋಲನವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.ಇದು ಹೊಟ್ಟೆ ನೋವಿನಿಂದ ಉಂಟಾಗುವ ಕಿರಿಕಿರಿಯನ್ನು ಶಮನ ಮಾಡುತ್ತದೆ. ಆದರೆ, ನೆನಪಿರಲಿ ದಿನಕ್ಕೆ ಒಂದು ಅಥವಾ ಎರಡು ಲೋಟದಷ್ಟು ಮಾತ್ರ ನಿಂಬೆ ಪಾನಕ ಸೇವಿಸಬೇಕು.

ವೈದ್ಯರ ಬಳಿ ಯಾವಾಗ ಹೋಗಬೇಕು ?

ನಿರಂತರ ಹೊಟ್ಟೆ ನೋವು ಗಂಭೀರ ಸಮಸ್ಯೆಯ ಸಂಕೇತವಾಗಿರಬಹುದು. ದಿನಾ ಹೊಟ್ಟೆ ನೋವಿನ ಸಮಸ್ಯೆ ಬಾಧಿಸುತ್ತಿದೆ ಎಂದಾದರೆ ಮನೆ ಮದ್ದಿನ ಬದಲು ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ನಿರಂತರ ಹೊಟ್ಟೆ ಸೆಳೆತ, ಅತಿಸಾರ ಅಥವಾ ರಕ್ತ ವಾಂತಿ ಮಾಡುವಂತಹ ಗಂಭೀರ ಲಕ್ಷಣಗಳು ಕಾಣಿಸಿಕೊಂಡರೆ ತಡ ಮಾಡದೆ ಆಸ್ಪತ್ರೆಗೆ ತೆರಳಬೇಕು. ಇನ್ನು ಕೆಲವು ಆಹಾರಗಳನ್ನು ಸೇವಿಸಿದ ನಂತರ ಅಥವಾ ಕೆಲವು ಚಟುವಟಿಕೆಗಳನ್ನು ಮಾಡಿದ ನಂತರ ನಿರಂತರ ಹೊಟ್ಟೆ ನೋವು ಕಾಡುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+