ಮೊಡವೆ ಕಲೆಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಸಿಂಪಲ್‌ ಟ್ರಿಕ್ಸ್‌ : ಬೇಸಿಗೆಯಲ್ಲಿ ಅನುಸರಿಸಿ ಈ 9 ಟಿಪ್ಸ್‌

Summer Skin Care Tips: ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಎದುರಿಸುವ ಸಮಸ್ಯೆ ಎಂದರೆ ಮೊಡವೆ. ಹುಡುಗರೇ ಆಗಿರಲಿ ಹುಡುಗಿಯರೇ ಆಗಿರಲಿ ಮೊಡವೆ ಸಮಸ್ಯೆ ಇಬ್ಬರನ್ನೂ ಕಾಡುತ್ತದೆ.ಅದರಲ್ಲಿಯೂ ಬೇಸಿಗೆಯಲ್ಲಿ ಈ ಮೊಡವೆ ಸಮಸ್ಯೆ ತುಸು ಹೆಚ್ಚಾಗಿಯೇ ಕಾಡುತ್ತದೆ.ಮುಖದ ಮೇಲೆ ಮೂಡುವ ಮೊಡವೆಗಳು ಮುಖದ ಅಂದವನ್ನೇ ಕೆಡಿಸಿ ಬಿಡುತ್ತದೆ. ಕೆಲವೊಮ್ಮೆ ಮೊಡವೆಗಳು ಮುಜುಗರಕ್ಕೂ ಕಾರಣವಾಗಬಹುದು.

ಮೊಡವೆಗಳು ಚರ್ಮದ ಮೇಲ್ಮೈಯಲ್ಲಿ ಬಿಳಿ ಅಥವಾ ಕೆಂಪು ಚುಕ್ಕೆಗಳಾಗಿ ಕಾಣಿಸಿಕೊಳ್ಳುತ್ತವೆ. ಕೆಲವು ನೋವಿನಿಂದ ಕೂಡಿದ್ದರೆ, ಇನ್ನು ಕೆಲವು ನೋವುರಹಿತವಾಗಿಯೂ ಇರುವುದಿದೆ. ಒಂದು ವೇಳೆ ಮೊಡವೆಗಳು ತೆರೆದುಕೊಂಡರೆ ಅದರ ಕಲೆ ಹಾಗೆಯೇ ಉಳಿದು ಬಿಡುತ್ತದೆ.ಮುಖದ ಮೇಲೆ ಮೊಡವೆ ಕಲೆಗಳು ಉಳಿಯಬಾರದು ಅಥವಾ ಮೊಡವೆ ಮೂಡದಂತೆ ಮಾಡುವುದು ಹೇಗೆ ಎಂದು ನೀವು ಕೂಡಾ ಯೋಚಿಸುತ್ತಿದ್ದರೆ ಅದಕ್ಕೆ ಸರಳ ಉಪಾಯಗಳು ಇಲ್ಲಿವೆ.

Summer Skin Care 9 Tips

ಮೊಡವೆ ಮತ್ತು ಮೊಡವೆ ಕಲೆಗಳಿಂದ ಮುಕ್ತಿ ಪಡೆಯಲು ಇರುವ ಸಿಂಪಲ್‌ ಟಿಪ್ಸ್‌ :

ಚರ್ಮ ಒಣಗಲು ಬಿಡಬೇಡಿ:

ನಿಮ್ಮ ಚರ್ಮ ಡ್ರೈ ಆಗಲು ಬಿಡಬೇಡಿ.ಇದಕ್ಕಾಗಿ ಸೌಮ್ಯವಾದ ಫೇಸ್‌ ಪ್ರಾಡಕ್ಟ್ ಗಳನ್ನು ಬಳಸಿ. ಆಲ್ಕೋಹಾಲ್ ಆಧಾರಿತ ಕ್ರೀಮ್‌ಗಳು ಚರ್ಮದ ಆರೋಗ್ಯವನ್ನು ಮತ್ತಷ್ಟು ಕೆಡಿಸಬಹುದು.ಆದ್ದರಿಂದ ಆಲ್ಕೋಹಾಲ್ ರಹಿತ ಕ್ರೀಂಗಳ ಬಳಕೆಗೆ ಹೆಚ್ಚು ಒತ್ತು ನೀಡಿ. ಸಾಧ್ಯವಾದಷ್ಟು ನೈಸರ್ಗಿಕ ಪದಾರ್ಥಗಳನ್ನೇ ಬಳಸಿ.

ತಣ್ಣೀರಿನ ಬಳಕೆ:

ಮುಖವನ್ನು ತಣ್ಣೀರಿನಿಂದಲೇ ತೊಳೆಯುವ ಅಭ್ಯಾಸ ರೂಢಿಸಿಕೊಂಡರೆ ಒಳ್ಳೆಯದು. ಮೊಡವೆಗಳಿದ್ದಾಗ ಬಿಸಿ ನೀರಿನಿಂದ ಮುಖ ತೊಳೆಯುವುದರಿಂದ ಸಮಸ್ಯೆ ಇನ್ನಷ್ಟು ಹದಗೆಡಬಹುದು. ತಣ್ಣೀರು ಮುಖದ ಮೇಲಿನ ರಂಧ್ರಗಳನ್ನು ಬಿಗಿಗೊಳಿಸುತ್ತದೆ.

ಕೈ ಮತ್ತು ಉಗುರುಗಳು ಸ್ವಚ್ಛವಾಗಿರಲಿ:

ಕ್ರೀಮ್ ಹಚ್ಚುವ ಮೊದಲು ಯಾವಾಗಲೂ ನಿಮ್ಮ ಕೈ ಮತ್ತು ಉಗುರುಗಳನ್ನು ಸ್ವಚ್ಛಗೊಳಿಸಿ. ನಮ್ಮ ದೇಹದ ಕೆಲವೊಂದು ಭಾಗಗಳು ಬ್ಯಾಕ್ಟೀರಿಯಾಗಳಿಗೆ ನಿಜವಾದ ಸಂತಾನೋತ್ಪತ್ತಿಯ ಸ್ಥಳವಾಗಿದೆ. ಅದರಲ್ಲಿ ಉಗುರು ಕೂಡಾ ಒಂದು.

ಸ್ಪಾಚ್ಯುಲಾ ಬಳಸಿ:

ಮುಖಕ್ಕೆ ಕ್ರೀಂ ಹಚ್ಚುವಾಗ ನಿಮ್ಮ ಕೈಗಳು ನೇರವಾಗಿ ಮುಖಕ್ಕೆ ತಾಗಬಾರದು ಎಂದಾದರೆ ಫೇಸ್‌ ಸ್ಪಾಚ್ಯುಲಾ ಬಳಸಿ. ಸ್ಪಾಚ್ಯುಲಾ ಸಹಾಯದಿಂದಲೇ ಜಾರ್ ನಿಂದ ಕ್ರೀಮ್ ತೆಗೆದು ಮುಖಕ್ಕೆ ಹಚ್ಚಿಕೊಳ್ಳಿ. ಕೊಳಕು ಕೈಗಳು ಕ್ರೀಮ್ ಅನ್ನು ಕೂಡಾ ಕಲುಷಿತಗೊಳಿಸಬಹುದು.

ಟವಲ್ ಅನ್ನು ಸ್ವಚ್ಛವಾಗಿಡಿ:

ನಿಮ್ಮ ಟವೆಲ್‌ಗಳನ್ನು (ಸ್ನಾನದ ಟವೆಲ್‌ಗಳು) ನಿಯಮಿತವಾಗಿ ಬದಲಾಯಿಸಿ. ಜೊತೆಗೆ ಇತರ ಬಟ್ಟೆಗಳಂತೆ ಟವಲ್‌ ಗಳನ್ನು ಕೂಡಾ ನಿತ್ಯ ಒಗೆದು ಸ್ವಚ್ಛವಾಗಿಡಿ. ಸಾಧ್ಯವಾದರೆ ಮುಖಕ್ಕೆ ಬಳಸಲು ಪ್ರತ್ಯೇಕವಾದ, ಸ್ವಚ್ಛವಾದ ಟವಲ್ ಅನ್ನು ಇಟ್ಟುಕೊಳ್ಳುವುದು ಹೆಚ್ಚು ಸೂಕ್ತ.

ಮುಖವನ್ನು ಉಜ್ಜಬೇಡಿ:

ನಿಮ್ಮ ಮುಖವನ್ನು ಎಂದಿಗೂ ಉಜ್ಜಬೇಡಿ. ಬದಲಿಗೆ ನಿಧಾನವಾಗಿ ಒರೆಸಿ ಒಣಗಿಸಿ. ಉಜ್ಜುವುದರಿಂದ ಚರ್ಮ ಉರಿಯಲು ಶುರುವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಶುದ್ಧ ಉತ್ಪನ್ನಗಳನ್ನು ಬಳಸಿ:

ನಿಮ್ಮ ಮುಖಕ್ಕೆ ತಾಕುವ ಯಾವುದೇ ವಸ್ತು ಇದ್ದರೂ ಅದು ಸೋಂಕುರಹಿತವಾಗಿರುವಂತೆ ನೋಡಿಕೊಳ್ಳಿ. ದಿಂಬಿನ ಕವರ್‌ ಗಳು, ಟವೆಲ್‌ಗಳು, ಮೇಕಪ್ ಪರಿಕರಗಳು (ಬ್ರಷ್‌ಗಳು), ಸ್ಮಾರ್ಟ್‌ಫೋನ್‌ ಇತ್ಯಾದಿ ವಸ್ತುಗಳು ಸೋಂಕು ರಹಿತವಾಗಿರುವಂತೆ ನೋಡಿಕೊಳ್ಳಿ.

ಮೇಕಪ್ ತೆಗೆಯಲು ಮರೆಯಬೇಡಿ:

ನಿಮ್ಮ ತ್ವಚೆಯನ್ನು ಸ್ವಚ್ಛ ಮತ್ತು ತಾಜಾವಾಗಿಡಲು ಮುಖ ತೊಳೆಯುವುದು ಬಹಳ ಮುಖ್ಯ. ವಿಶೇಷವಾಗಿ ರಾತ್ರಿ ವೇಳೆ ಅಂದರೆ ಮಲಗುವ ಮುನ್ನ ಮುಖದ ಮೇಲಿರುವ ಮೇಕಪ್ ಅನ್ನು ಸಂಪೂರ್ಣವಾಗಿ ತೆಗೆಯುವುದನ್ನು ಮರೆಯಬೇಡಿ.

ಸ್ಟೀಮ್ ಬಳಸಿ:

ತ್ವಚೆಯ ಮೇಲಿನ ರಂಧ್ರಗಳನ್ನು ಅಗಲಗೊಳಿಸಲು ಸ್ಟೀಮ್ ಮೆಷಿನ್ ಬಳಸಿ. ಇದು ನಿಮ್ಮ ತ್ವಚೆಯನ್ನು ನಿರ್ವಿಷಗೊಳಿಸುತ್ತದೆ ಮತ್ತು ಸ್ಕಿನ್‌ ಕೇರ್‌ ಪ್ರಾಡಕ್ಟ್ ಗಳು ಉತ್ತಮವಾಗಿ ಹೀರಿಕೊಳ್ಳುವಂತೆ ಮಾಡುತ್ತದೆ.

ಬಹಳ ಮುಖ್ಯವಾದ ಮತ್ತೊಂದು ಅಂಶ ಎಂದರೆ ಮೊಡವೆಗಳನ್ನು ಪದೇ ಪದೇ ಮುಟ್ಟುವುದು, ಒಡೆಯುವುದು, ಮೊಡವೆ ಮೇಲೆ ಇಡೀ ದಿನ ಕೈಯಾಡಿಸುವುದನ್ನು ತಪ್ಪಿಸಿ. ಇಲ್ಲವಾದರೆ ಮೊಡವೆ ಗುರುತುಗಳು ಹಾಗೆಯೇ ಶಾಶ್ವತವಾಗಿ ಉಳಿದು ಬಿಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+