Summer Health Tips: ಬೇಸಿಗೆ ಸಮಯದಲ್ಲಿ ಇರಲಿ ಆರೋಗ್ಯ ಕಾಳಜಿ, ಇಲ್ಲಿದೆ ಸಿಂಪಲ್ ಟಿಪ್ಸ್!
Summer Heat Tips: ಕರ್ನಾಟಕದಲ್ಲಿ ಶಾಖದ ಅಲೆ / ಬಿಸಿಲಿನ ಝಳ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ತೀವ್ರವಾದ ಬಿಸಿಲು ಕಾಣಿಸಿಕೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ಕೊಟ್ಟಿದೆ. ಈ ಬಾರಿ ಕರ್ನಾಟಕದ ಬೆಂಗಳೂರು ಸೇರಿ ವಿವಿಧೆಡೆ ದೆಹಲಿ ಮಾದರಿಯ ಬಿಸಿಲು ಕಾಣಿಸಿಕೊಳ್ಳಲಿದೆ ಎಂದು ಹೇಳಿರುವುದು ಜನರ ಆತಂಕ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ. ಬಿಸಿಲು ಹೆಚ್ಚಾಗಿ ಇರುವಾಗ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎನ್ನುವ ಬಗ್ಗೆ ಐಎಂಡಿ ಕೆಲವೊಂದು ಮಹತ್ವದ ಸೂಚನೆಗಳನ್ನು ಕೊಟ್ಟಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ರಾಜ್ಯದಲ್ಲಿ ತೀವ್ರ ಬಿಸಿಲು ತೀವ್ರವಾಗಿ ಹೆಚ್ಚಳವಾಗಿದೆ. ಶಾಖದ ಅಲೆಯ ಸಂದರ್ಭದಲ್ಲಿ ಏನು ಮಾಡಬೇಕು ಹಾಗೂ ಏನೆಲ್ಲಾ ಮಾಡಬಾರದು ಎನ್ನುವ ವಿವರ ಇಲ್ಲಿದೆ. ಶಾಖದ ಅಲೆಯ ಅಥವಾ ತೀವ್ರ ಬಿಸಿಲಿನಿಂದ ಸಾವು ಸಹ ಸಂಭವಿಸುವಂತಹ ಸಾಧ್ಯತೆ ಇರುತ್ತದೆ. ಇದು ದೈಹಿಕ ಒತ್ತಡಕ್ಕೂ ಕಾರಣವಾಗಬಹುದು. ಶಾಖದ ಅಲೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಕೆಲವೊಂದು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

ಬಿಸಿಲು ಹೆಚ್ಚಾದಾಗ ಈ ಕೆಲಸಗಳನ್ನು ಮಾಡಿ & ಮಾಡಬೇಡಿ
* ವಿಶೇಷವಾಗಿ ಮಧ್ಯಾಹ್ನ 12ರಿಂದ ಮಧ್ಯಾಹ್ನ 3ಗಂಟೆ ವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ.
* ಬಾಯಾರಿಕೆ ಆಗದಿದ್ದರೂ ಸಹ ಸಾಕಷ್ಟು ನೀರು ಕುಡಿಯಿರಿ ಅಲ್ಲದೇ ಸಾಧ್ಯವಾದಷ್ಟು ಹೆಚ್ಚಾಗಿ ನೀರು ಕುಡಿಯಿರಿ.
* ಹಗುರವಾದ, ತಿಳಿ ಬಣ್ಣದ ಹಾಗೂ ಹತ್ತಿ ಬಟ್ಟೆಗಳನ್ನು ಧರಿಸಿ. ಬಿಸಿಲಿನಲ್ಲಿ ಹೋಗುವಾಗ ಬಿಸಿಲು ನೇರವಾಗಿ ನಿಮ್ಮ ಮೇಲೆ ಬೀಳದಂತೆ ಎಚ್ಚರಿಕೆ ವಹಿಸಿ. ಕಪ್ಪು ಕನ್ನಡಕ, ಛತ್ರಿ/ಟೋಪಿ ಹಾಗೂ ಶೂ ಧರಿಸಿ.
* ಪ್ರಯಾಣ ಮಾಡುವ ಸಂದರ್ಭದಲ್ಲಿ ತಪ್ಪದೇ ನೀರಿನ ಬಾಟಲಿಯನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ.
* ಬಿಸಿಲು ಹೆಚ್ಚಾಗಿ ಇರುವಾಗ ಮದ್ಯಪಾನ, ಚಹಾ, ಕಾಫಿ ಮತ್ತು ತಂಪು ಪಾನೀಯಗಳನ್ನು ಕುಡಿಯುವುದನ್ನು ತಪ್ಪಿಸಿ.
* ಮಾಂಸಾಹಾರ ಅಥವಾ ಹೆಚ್ಚಿನ ಪ್ರೋಟೀನ್‌ಯುಕ್ತ ಆಹಾರವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಮುಖ್ಯವಾಗಿ ತಣ್ಣಗಾಗಿರುವ ಆಹಾರವನ್ನು ಸೇವಿಸಬೇಡಿ. ಬಿಸಿಬಿಸಿ ಆಹಾರವನ್ನು ಸೇವಿಸಿ.
* ನೀವು ಹೊರಗೆ ಕೆಲಸ ಮಾಡುತ್ತಿದ್ದರೆ, ಟೋಪಿ ಅಥವಾ ಛತ್ರಿ ಬಳಸಿ. ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಕವರ್ ಆಗುವಂತೆ ಬಟ್ಟೆ ಧರಿಸಿ.
* ನಿಮ್ಮ ಮಕ್ಕಳು ಅಥವಾ ಸಾಕುಪ್ರಾಣಿಗಳನ್ನು ನಿಲ್ಲಿಸಿದ ವಾಹನಗಳಲ್ಲಿ ಬಿಡಬೇಡಿ.

* ಮೂರ್ಛೆ ಅಥವಾ ಅನಾರೋಗ್ಯ ಸಮಸ್ಯೆ ಇದ್ದರೆ ಹೆಚ್ಚಿನ ಕಾಳಜಿ ವಹಿಸಿ ಕೂಡಲೇ ವೈದ್ಯರನ್ನು ಭೇಟಿ ಮಾಡಿ.
* ದೇಹವನ್ನು ಹೈಡ್ರೇಟ್ / ನಿರ್ಜಲೀಕರಣವನ್ನು ತಪ್ಪಿಸುವಂತಹ ಲಸ್ಸಿ, ನಿಂಬೆರಸ, ಮಜ್ಜಿಗೆ ಸೇರಿದಂತೆ ಮನೆಯಲ್ಲಿ ತಯಾರಿಸಿದ ತಂಪು ಪಾನೀಯಗಳನ್ನು ಸೇವಿಸಿ. ಸಾಧ್ಯವಾದಷ್ಟು ಹೆಚ್ಚು ಓಆರ್‌ಎಸ್ ಬಳಸಿ.
* ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ಕೊಡಿ
* ನಿಮ್ಮ ಮನೆಯನ್ನು ಇರಿಸುವ ಅಥವಾ ಬಿಸಿಲು ಹೆಚ್ಚಾಗಿ ಬೀಳದಂತೆ ಪರದೆಗಳನ್ನು ಅಳವಡಿಸಿ. ಸಾಧ್ಯವಾದಷ್ಟು ರಾತ್ರಿ ವೇಳೆಯಲ್ಲಿ ಕಿಟಕಿಗಳನ್ನು ತೆಗೆಯಿರಿ.
* ಫ್ಯಾನ್, ಒದ್ದೆ ಬಟ್ಟೆಗಳನ್ನು ಬಳಸಿ ಮತ್ತು ಆಗಾಗ್ಗೆ ತಣ್ಣೀರಿನಲ್ಲಿ ಸ್ನಾನ ಮಾಡಿ.
ಶಾಖದ ಅಲೆಯಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮಗಳು
ಶಾಖದ ಅಲೆಯಿಂದಾಗಿ ಆರೋಗ್ಯದಲ್ಲಿ ನಿರ್ಜಲೀಕರಣ, ಶಾಖದ ಬಳಲುವಿಕೆ ಹಾಗೂ ನಿಶಕ್ತಿ ಹೆಚ್ಚಾಗುತ್ತವೆ. ಮೂರ್ಛೆ ರೋಗ, ತೀವ್ರ ಜ್ವರ ಕಾಣಿಸಿಕೊಳ್ಳವು ಸಾಧ್ಯತೆಗಳು ಇರುತ್ತವೆ. ಆಯಾಸ, ತಲೆತಿರುಗುವುದು, ತಲೆನೋವು, ವಾಕರಿಕೆ, ವಾಂತಿ, ಸ್ನಾಯು ಸೆಳೆತ ಹಾಗೂ ಹೆಚ್ಚು ಬೆವರುವುದು ಕಾಣಿಸಿಕೊಳ್ಳುತ್ತದೆ.
ಶಾಖದ ಅಲೆಯ ಸಮಸ್ಯೆ ಎದುರಾದರೆ ಈ ರೀತಿ ಮಾಡಿ
ಶಾಖದ ಅಲೆಯಿಂದ ಯಾರಾದರೂ ಸಮಸ್ಯೆ ಒಳಗಾದರೆ ಕೂಡಲೇ ಆ ವ್ಯಕ್ತಿಯನ್ನು ತಂಪಾದ ಸ್ಥಳಕ್ಕೆ ಕರೆದುಕೊಂಡು ಹೋಗಿ, ಒದ್ದೆಯಾದ ಬಟ್ಟೆಯಿಂದ ಅವರ ಮುಖ ಹಾಗೂ ಕೈಕಾಕಲುಗಳನ್ನು ಒರಸಿ. ಆ ವ್ಯಕ್ತಿಯ ತಲೆಯ ಮೇಲೆ ನೀರನ್ನು ಚುಮುಕಿಸಿ. ಈ ರೀತಿ ಮಾಡುವುದರಿಂದ ದೇಹದ ಉಷ್ಣತೆ ಕಡಿಮೆ ಆಗುತ್ತದೆ.
* ಬಿಸಿಲಿನಿಂದ ಆರೋಗ್ಯದಲ್ಲಿ ಏರುಪೇರಾದ ವ್ಯಕ್ತಿಗೆ ಓಆರ್‌ಎಸ್ ಕುಡಿಸಿ. ಇಲ್ಲವೇ ನಿಂಬೆ ಹಣ್ಣಿನ ರಸ, ನೀರು ಕೊಡಿ. ತಕ್ಷಣವೇ ಆ ವ್ಯಕ್ತಿಯನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ.
ಶಾಖದ ಅಲೆ ಎಂದರೇನು ?
ಒಂದು ನಿರ್ದಿಷ್ಟ ಪ್ರದೇಶದಲ್ಲಿ ಸಾಮಾನ್ಯವಾಗಿ ನಿರೀಕ್ಷೆಗಿಂತ ಹೆಚ್ಚು ಅಥವಾ ಅಸಮಾನ್ಯ ತಾಪಮಾನ ದಾಖಲಾದರೆ ಅದನ್ನು ಶಾಖ ಅಲೆ ಎಂದು ಕರೆಯಲಾಗುತ್ತದೆ. ಆ ಪ್ರದೇಶದ ತಾಪಮಾನವನ್ನು ಹಾಗೂ ಗಾಳಿಯನ್ನು ಆಧಾರಿಸಿ ಶಾಖದ ಅಲೆಯನ್ನು ಘೋಷಿಸಲಾಗುತ್ತದೆ.

ಕರಾವಳಿ ಪ್ರದೇಶಗಳಲ್ಲಿ ಉಷ್ಣ ಅಲೆ ಯಾವಾಗ ನಿರ್ಧಾರವಾಗುತ್ತದೆ ?
ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 45 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿದ್ದರೆ ವಾಸ್ತವಿಕ ಗರಿಷ್ಠ ತಾಪಮಾನವು 37 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿದ್ದರೆ ಉಷ್ಣ ಅಲೆ ಎಂದು ಹೇಳಲಾಗುತ್ತದೆ.
ತಾಪಮಾನದ ರಾತ್ರಿ ಎಂದರೇನು: ಗರಿಷ್ಠ ತಾಪಮಾನವು 40C ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದಾಗ ಮಾತ್ರ ತಾಪಮಾನದ ರಾತ್ರಿ ಎಂದು ಘೋಷಿಸಲಾಗುತ್ತದೆ.
ಭಾರತದಲ್ಲಿ ಶಾಖದ ಅಲೆ ಅವಧಿ ಎಷ್ಟು ?
ಭಾರತದಲ್ಲಿ ಶಾಖದ ಅಲೆಗಳನ್ನು ಮುಖ್ಯವಾಗಿ ಮಾರ್ಚ್‌ನಿಂದ ಜೂನ್ ವರೆಗೆ ಮತ್ತು ಕೆಲವು ಅಪರೂಪದ ಸಂದರ್ಭಗಳಲ್ಲಿ ಜುಲೈನಲ್ಲಿಯೂ ಸಹ ಸಂಭವಿಸುತ್ತವೆ. ಭಾರತದಲ್ಲಿ ಶಾಖದ ಅಲೆಯ ಗರಿಷ್ಠ ಮೇ ತಿಂಗಳಿನಲ್ಲಿ ಕಾಣಿಸಿಕೊಳ್ಳುತ್ತದೆ.
ಭಾರತದಲ್ಲಿ ಅತೀ ಹೆಚ್ಚು ಬಿಸಿಲು ಕಾಣಿಸಿಕೊಳ್ಳುವ ರಾಜ್ಯಗಳು ಯಾವುವು ?
ಮಾರ್ಚ್ ನಿಂದ ಜೂನ್ ವರೆಗೆ ದಕ್ಷಿಣ ಭಾರತವೂ ಸೇರಿದಂತೆ ವಿವಿಧ ಭಾಗದಲ್ಲಿ ಶಾಖದ ಅಲೆ ಕಾಣಿಸಿಕೊಳ್ಳುತ್ತದೆ. ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲವು ಭಾಗಗಳು, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳದಲ್ಲೂ ಶಾಖದ ಅಲೆ ಕಾಣಿಸಿಕೊಳ್ಳುತ್ತದೆ.
ಬೇಸಿಗೆ ಸಮಯದಲ್ಲಿ ಸಾಧ್ಯವಾದಷ್ಟು ಮುನ್ನೆಚ್ಚರಿಕೆಗಳನ್ನು ಕ್ರಮಗಳನ್ನು ತೆಗೆದುಕೊಳ್ಳಿ. ಮಕ್ಕಳು ಹಾಗೂ ವಯೋವೃದ್ಧರ ಬಗ್ಗೆ ಈ ಸಮಯದಲ್ಲಿ ಹೆಚ್ಚಿನ ಕಾಳಜಿ ಇರಲಿ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications