Virat Kohli Diet: ಫಿಟ್ ಆಗಿರಲು ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಏನೇನು ತಿನ್ನುತ್ತಾರೆ?
ಮಾಜಿ ಭಾರತೀಯ ಪುರುಷರ ಕ್ರಿಕೆಟ್ ತಂಡದ ನಾಯಕ, ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಫಿಟ್‌ನೆಸ್‌ನಿಂದ ಎಲ್ಲರಿಗೂ ಸ್ಫೂರ್ತಿ ತುಂಬುವ ವ್ಯಕ್ತಿಗಳಲ್ಲಿ ಒಬ್ಬರು. ತಮ್ಮ ಆಹಾರದ ಆಯ್ಕೆಗಳು, ಫಿಟ್‌ನೆಸ್ ಬಗ್ಗೆ ಇರುವ ಒಲವು ಅವರ ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರವಲ್ಲ ಫೀಟ್‌ನೆಸ್ ಪ್ರಿಯರಿಗೂ ಅಚ್ಚುಮೆಚ್ಚು.
ಆಹಾರದ ಆಯ್ಕೆಗಳು ಕೂಡ ಅವರ ದೇಹ ಅಷ್ಟು ಫಿಟ್ ಆಗಿರಲು ಕಾರಣ. ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಫಿಟ್‌ನೆಸ್ ಕಾಯ್ದುಕೊಳ್ಳುವ ಅವರ ಬದ್ಧತೆಗಾಗಿಯೂ ಅವರನ್ನು ಫ್ಯಾನ್ಸ್ ಮೆಚ್ಚುತ್ತಾರೆ. ಹಲವು ವರ್ಷಗಳಿಂದ ಬದಲಾಗುತ್ತಿರುವ ಆಹಾರ ಪದ್ಧತಿಯ ಬಗ್ಗೆ ಪಾರದರ್ಶಕವಾಗಿರುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಆಯ್ಕೆ ಮಾಡಿಕೊಳ್ಳಲು ವಿರಾಟ್ ಕೊಹ್ಲಿ ಅನೇಕರನ್ನು ಪ್ರೋತ್ಸಾಹಿಸಿದ್ದಾರೆ.

ಫಿಟ್ ಮತ್ತು ಆರೋಗ್ಯಕರವಾಗಿರಲು ವಿರಾಟ್ ಕೊಹ್ಲಿ ಏನು ತಿನ್ನುತ್ತಾರೆ?
ಸ್ಟಾರ್ ಸ್ಪೋರ್ಟ್ಸ್ ಸಂದರ್ಶನವೊಂದರಲ್ಲಿ ಮಾತನಾಡಿರುವ ವಿರಾಟ್ ಕೊಹ್ಲಿ, ತಮ್ಮ ಕಠಿಣ ಆಹಾರ ಪದ್ಧತಿಯನ್ನು ಬಹಿರಂಗಪಡಿಸಿದ್ದಾರೆ. "ನಿಮ್ಮ ಫಿಟ್‌ನೆಸ್ ಪ್ರಯಾಣವನ್ನು ನೀವು ಲೆಕ್ಕಾಚಾರ ಮಾಡುವಾಗ, ನೀವು ಎಲ್ಲಾ ರೀತಿಯ ವಸ್ತುಗಳು, ವಿಟಮಿನ್‌ಗಳು, ಹೆಚ್ಚುವರಿ ಹೈಡ್ರೇಷನ್, ಪ್ರೋಟೀನ್, ಇದು, ಅದು, ಒಂದು ಹಂತಕ್ಕೆ ಎಲ್ಲವನ್ನು ಲೆಕ್ಕಾಚಾರ ಮಾಡಲು ಪ್ರಯತ್ನಿಸುತ್ತಿದ್ದೀರಿ. ನಿಮಗೆ ಅದು ಸರಿ ಎಂದು ಅನಿಸುವುದಿದೆಯಲ್ಲ ಅದೇ ಸರಿಯಾದ ಲೆಕ್ಕಾಚಾರ" ಎಂದಿದ್ದಾರೆ.
"ಫಿಟ್‌ನೆಸ್ ವಿಷಯದಲ್ಲಿ ನಾನು ಅನುಭವಿಸಿದ ಮೊದಲ ಸವಾಲು ಆಹಾರ. ನೀವು ಜಿಮ್‌ಗೆ ಹೋಗಿ ಕಷ್ಟಪಟ್ಟು ವರ್ಕೌಟ್ ಮಾಡಬಹುದು. ಆದರೆ ಆಹಾರ ಸೇವಿಸುವಾಗ ಗಮನ ಇರದಿದ್ದರೇ ತುಂಬಾ ಕಷ್ಟ. ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸಬೇಕು. ಇದಕ್ಕೆ ದೃಢ ಮನಸ್ಸು ಬೇಕು" ಎಂದು ಹೇಳುತ್ತಾರೆ.
ಹೆಚ್ಚಾಗಿ ಏನು ತಿನ್ನುತ್ತಾರೆ ವಿರಾಟ್?
ವಿರಾಟ್ ಕೊಹ್ಲಿ ಹೆಚ್ಚಾಗಿ ಆವಿಯಲ್ಲಿ ಬೇಯಿಸಿದ ಆಹಾರವನ್ನು ತಿನ್ನುತ್ತಾರೆ. ಆದರೆ ಅವರು ಕೆಲವೊಮ್ಮೆ ಸ್ವಲ್ಪ ಆಲಿವ್ ಎಣ್ಣೆ ಅಥವಾ ಇತರ ಮಸಾಲೆಗಳೊಂದಿಗೆ ಮಾಡಿದ ತಿಂಡಿಗಳನ್ನು ಪ್ಯಾನ್ ಗ್ರಿಲ್ ಮಾಡಿ ತಿನ್ನುತ್ತಾರೆ. ಹುರಿದ ಅಥವಾ ಬಿಸಿಯಾಗಿರುವ ಆಹಾರಗಳನ್ನು ಕೊಹ್ಲಿ ತಿನ್ನುವುದಿಲ್ಲ. ಅವರು ಸಾಮಾನ್ಯವಾಗಿ ದಾಲ್, ರಾಜ್ಮಾ ಮತ್ತು ಅಲಸಂದೆಯನ್ನು ತಿನ್ನುತ್ತಾರೆ ಮತ್ತು ಮಸಾಲೆಯುಕ್ತ ಭಕ್ಷ್ಯಗಳಿಂದ ದೂರವಿರುತ್ತಾರೆ.

ತಮ್ಮ ಆಹಾರದಲ್ಲಿ ತಾಜಾ ತರಕಾರಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಇದು ಅಗತ್ಯವಾದ ಜೀವಸತ್ವಗಳು ಮತ್ತು ಫೋಷಕಾಂಶಗಳನ್ನು ನೀಡುತ್ತದೆ. ಊಟದ ಸಮತೋಲನಕ್ಕೆ ಸಹಾಯ ಮಾಡುತ್ತದೆ. ಇನ್ನು, ವಿರಾಟ್ ಕೊಹ್ಲಿ ಕಾಫಿ ಪ್ರಿಯರಾಗಿದ್ದು, ಸಾಮಾನ್ಯವಾಗಿ ದಿನಕ್ಕೆ ಎರಡು ಕಪ್ ಕಾಫಿ ಸೇವಿಸುತ್ತಾರೆ. ಅವರು ಸಂಸ್ಕರಿಸಿದ ಅಥವಾ ಹೆಚ್ಚಿನ ಸಕ್ಕರೆ ಹೊಂದಿರುವ ಪಾನೀಯಗಳನ್ನು ಕುಡಿಯುವುದಿಲ್ಲ. ಪೌಷ್ಟಿಕ ಕಾರ್ಬೋಹೈಡ್ರೇಟ್‌ಗಳನ್ನು ಒಡೆಯಲು ಸ್ಮೂಥಿಗಳು, ಮೊಳಕೆ ಕಾಳುಗಳು ಅಥವಾ ಸಲಾಡ್‌ಗಳನ್ನು ತಿನ್ನುತ್ತಾರೆ.
ವಿರಾಟ್ ಕೊಹ್ಲಿ ಕ್ವಿನೋವಾ, ಪಾಲಕ ಮತ್ತು ಹೇರಳವಾಗಿ ಸೊಪ್ಪು, ತರಕಾರಿಗಳನ್ನು ತಿನ್ನುತ್ತಾರೆ. ಸಾಮಾನ್ಯವಾಗಿ ಬೇಯಿಸಿದ ಅಥವಾ ಆವಿಯಲ್ಲಿ ಬೇಯಿಸಿದ ಆಹಾರ. ಆಹಾರವನ್ನು ನಿಂಬೆ ರಸ, ಉಪ್ಪು ಮತ್ತು ಮೆಣಸುಗಳ ಜೊತೆಗೆ ತಿನ್ನಲು ಬಯಸುತ್ತಾರೆ. ವಿವಿಧ ರೀತಿಯ ಅನ್ನದಿಂದ ಮಾಡಿದ ತಿಂಡಿಗಳನ್ನು ತಿನ್ನುತ್ತಾರೆ. ಕೆಲವೊಮ್ಮೆ ದೋಸೆಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಇದರ ಜೊತೆಗೆ ಸೂಪ್‌ಗೂ ಆದ್ಯತೆ ನೀಡುತ್ತಾರೆ.
ವಿರಾಟ್ ಕೊಹ್ಲಿ ಏನೇನು ತಿನ್ನಲ್ಲ ಗೊತ್ತಾ?
ವಿರಾಟ್ ಕೊಹ್ಲಿ ಅವರು ಕರಿದ ಆಹಾರಗಳು, ಗ್ರೇವಿಗಳು ಮತ್ತು ಹೆಚ್ಚು ಮಸಾಲೆಯುಕ್ತ ಭಕ್ಷ್ಯಗಳನ್ನು ಕಟ್ಟುನಿಟ್ಟಾಗಿ ತಿನ್ನುವುದಿಲ್ಲ. ಅವರು ಸಸ್ಯಾಹಾರಿಯಾದ ನಂತರ ಡೈರಿ ಉತ್ಪನ್ನಗಳ ಸೇವನೆಯನ್ನು ಕಡಿಮೆ ಮಾಡಿದ್ದಾರೆ. ಅವರು ತಮ್ಮ ಆಹಾರದಲ್ಲಿ ಹೆಚ್ಚುವರಿ ಟೋಫು ಮತ್ತು ಸೋಯಾ ಆಧಾರಿತ ಪದಾರ್ಥಗಳನ್ನು ಸೇರಿಸುತ್ತಾರೆ. ಇನ್ನು ತಮ್ಮ ಡಯಟ್‌ನಲ್ಲಿ ಯಾವುದೇ ಸಕ್ಕರೆ ಅಂಶವನ್ನು ಸೇರಿಸಿಕೊಳ್ಳುವುದಿಲ್ಲ.












Click it and Unblock the Notifications