Sleeping: ರಾತ್ರಿ ವೇಳೆ ಹೀಗೆ ಮಲಗುವುದರಿಂದ ಏನೆಲ್ಲ ಪ್ರಯೋಜನೆಗಳಿವೆ? ತಜ್ಞರ ಸಲಹೆಗಳೇನು?
ಆರೋಗ್ಯದ ಜೀವನಕ್ಕೆ ನಿದ್ರೆ ತುಂಬಾ ಮುಖ್ಯವಾಗಿರುತ್ತದೆ. ಸರಿಯಾಗಿ ನಿದ್ರೆ ಇಲ್ಲದಿದ್ದರೆ, ತಲೆನೋವು, ಕಣ್ಣು ಉರಿ ಸೇರಿದಂತೆ ಇನ್ನಿತರ ಸಮಸ್ಯೆಗಳು ಉದ್ಭವಿಸುತ್ತದೆ ಎಂದು ವೈದ್ಯರ ಅಧ್ಯಯನಗಳು ಹೇಳುತ್ತವೆ. ಅದರಲ್ಲೂ ರಾತ್ರಿ ವೇಳೆ ಮಾಡುವ ನಿದ್ರೆ ಮಾತ್ರ ತುಂಬಾ ಪ್ರಮುಖವಾಗಿರುತ್ತದೆ ಅಂತಲೂ ಹೇಳುತ್ತಾರೆ. ಈ ವೇಳೆ ಮಲಗುವಾಗ ಯಾವ ರೀತಿಯ ಉಡುಪುಗಳನ್ನು ಧರಿಸಿತ್ತೀರಿ ಅನ್ನೋದರ ಮೇಲೂ ನಿರ್ಧಾರವಾಗುತ್ತದೆ. ಹಾಗಾದರೆ ರಾತ್ರಿ ನೀವು ಮಲಗುವಾಗ ಯಾವ ರೀತಿಯ ಬಟ್ಟೆಗಳನ್ನು ಧರಿಸಿ ನಿದ್ದೆ ಮಾಡಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸೋಣ ಬನ್ನಿ.
ರಾತ್ರಿ ನಿದ್ರೆ ಬರಲ್ಲ ಎನ್ನುವುದೇ ಸುಮಾರು ಜನರ ಸಮಸ್ಯೆಯಾಗಿರುತ್ತದೆ. ಅಲ್ಲದೆ ಇವರು ನಿದ್ರೆ ಇಲ್ಲದೆ, ತುಂಬಾ ಸಮಸ್ಯೆಗಳನ್ನು ಕೂಡ ಅನುಭವಿಸುತ್ತಿರುತ್ತದೆ. ಹಾಗಾದರೆ ಇಂತಹವರು ಸರಿಯಾಗಿ ನಿದ್ದೆ ಮಾಡಬೇಕೆಂದರೆ, ಯಾವೆಲ್ಲ ಮಾರ್ಗಗಳನ್ನು ಅನುಸರಿಸಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.

* ಹಲವರು ಒಬ್ಬೊಂಟಿಯಾಗಿದ್ದಲೂ ಹಲವು ಕಾರಣಗಳಿಂದ ಬೆತ್ತಲೆಯಾಗಿ ಮಲಗಲು ಇಷ್ಟ ಪಡುವುದಿಲ್ಲ ಹಾಗೂ ಆ ಸಂಸ್ಕೃತಿಯೂ ಇಲ್ಲ. ಯಾಕೆಂದರೆ ಹೀಗೆ ಮಲಗಲು ತುಂಬಾ ನಾಚಿಕೆ ಪಡುತ್ತಾರೆ. ಆದರೆ ನಿಮಗೆ ಯಾವುದೇ ರೀತಿಯ ಕೌಟುಂಬಿಕ ಸಮಸ್ಯೆಗಳು ಇಲ್ಲದಿದ್ದರೆ, ಬೆತ್ತಲೆಯಾಗಿ ಮಲಗುವುದರಿಂದ ಉತ್ತಮ ಆರೋಗ್ಯದ ದೃಷ್ಟಿಯಿಂದ ತುಂಬಾ ಲಾಭ ಸಿಕ್ಕಾಂತಾಗುತ್ತದೆ ಅಂತಾ ವೈದ್ಯರ ಮೂಲಗಳು ಹೇಳುತ್ತವೆ.
* ಹಲವು ತಜ್ಞರ ಪ್ರಕಾರ, ಬೆತ್ತಲೆಯಾಗಿ ಮಲಗುವುದರಿಂದ ನಿಮ್ಮ ನಿದ್ರೆಯ ಆಳವನ್ನು ಹೆಚ್ಚ ಮಾಡುತ್ತದೆ. ಉಡುಪುಗಳು ಎಷ್ಟೇ ದುಬಾರಿ, ಸುಂದರ ಆಗಿರಲಿ ಆದರೆ ಅವುಗಳು ನಮ್ಮ ಆರೋಗ್ಯಕರ ನಿದ್ರೆಯನ್ನು ಕಸಿದುಬಿಡುತ್ತವೆ ಹೇಗೆ ಅಂತೀರಾ. ಸುಮಾರು ಜನರು ರಾತ್ರಿ ವೇಳೆಯೂ ಬ್ರಾಂಡೆಡ್ ಬಟ್ಟೆ ಅಂತಾ ಫುಲ್ ಟೈಲ್ ಆಗಿದ್ದರೂ ಅದನ್ನೇ ಧರಿಸಿ ಮಲಗುತ್ತಾರೆ. ಆದರೆ ಇಂತಹ ಉಡುಪುಗಳು ಕಿರಿಕಿರಿ ಮಾಡುವುದಲ್ಲದೆ, ನಿದ್ರೆಗೆ ತುಂಬಾ ತೊಂದರೆ ಮಾಡುತ್ತವೆ ಅನ್ನುವುದನ್ನು ಮರೆಯದಿರಿ.
* ರಾತ್ರಿ ವೇಳೆ ಮಲಗುವಾಗ ನಮ್ಮ ದೇಹಕ್ಕೆ ಸಾಕಷ್ಟು ಗಾಳಿಯ ಅಗತ್ಯ ಇರುತ್ತದೆ. ಆದರೆ ಟೈಲ್ ಬಟ್ಟೆ ಹಾಕಿಕೊಂಡೆ ಮಲಗಿದರೆ, ದೇಹಕ್ಕೆ ಯಾವುದೇ ರೀತಿಯ ಗಾಳಿ ಆಡುವುದಿಲ್ಲ. ಇದರಿಂದ ನಮ್ಮ ನಿದ್ರೆ ಹಾಳಾಗುವುದಲ್ಲದೆ, ರಾಶಿಗಟ್ಟಲೇ ಅನಾರೋಗ್ಯದಂತಹ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಆದ್ದರಿಂದ ಮಲಗುವಾಗ ಆದಷ್ಟು ಮಟ್ಟಿಗೆ ಟೈಟ್ ಆಗುವ ಬಟ್ಟೆಗಳನ್ನು ಬಿಟ್ಟು ಸ್ವಲ್ಪ ಅಗಲವಾದ ಉಡುಪುಗಳನ್ನು ಧರಿಸುವುದೇ ಉತ್ತಮ.
* ಮತ್ತೊಂದೆಡೆ ಒಂದು ವೇಳೆ ನೀವು ಒಬ್ಬೊಂಟಿಯಾಗಿದ್ದರೆ, ರಾತ್ರಿ ವೇಳೆ ಆದಷ್ಟು ಬೆತ್ತಲೆಯಾಗಿ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳಿ. ಹೀಗೆ ನಿದ್ರಿಸುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಉತ್ತಮವಾಗಿ ಆಗುತ್ತದೆ. ಅಷ್ಟೇ ಅಲ್ಲದೆ, ಈ ಮಾರ್ಗವನ್ನು ಅನುಸರಿಸಿದ್ರೆ ಉತ್ತಮವಾಗಿ ನಿದ್ರೆ ಮಾಡುವ ಮೂಲಕ ಆರೋಗ್ಯಕರ ಮನಸ್ಥಿತಿಯಿಂದ ಇರಬಹುದು ಎಂದು ಹೇಳುತ್ತಾರೆ ತಜ್ಞರು.
* ಅಲ್ಲದೆ, ರಾತ್ರಿ ವೇಳೆ ನಿಮ್ಮ ಸಂಗಾತಿಯೊಂದಿಗೆ ಬೆತ್ತಲೆಯಾಗಿ ಮಲಗುವುದರಿಂದ ಇಬ್ಬರ ನಡುವಿನ ಉತ್ತಮ ಬಾಂದವ್ಯವನ್ನು ಬೆಳೆಸುತ್ತದೆ. ಹಾಗೂ ಧನಾತ್ಮಕ ಆಲೋಚಗಳಿಂದಿರುವಂತೆ ಮಾಡುತ್ತದೆ. ಪರಸ್ಪರ ಸ್ಪರ್ಶದಿಂದ ದೇಹದಲ್ಲಿ ವಿಶೇಷ ಹಾರ್ಮೋನುಗಳು ಬಿಡುಗಡೆ ಆಗುತ್ತವೆ. ಇದರಿಂದ ದೈಹಿಕ ಆಯಾಸ ಮಾಯವಾಗುತ್ತದೆ. ಇದರಿಂದ ಮುಜುಗರವಾಗುತ್ತದೆ ಎನ್ನುವುದಾದರೆ, ನೀವು ಸಡಿಲವಾದ ಬಟ್ಟೆಯಲ್ಲಿ ಮಲಗುವುದು ಸೂಕ್ತ ಅಂತಾರೆ ತಜ್ಞರು.
ಒಟ್ಟಿನಲ್ಲಿ ಮಲಗುವಾಗ ಟೈಟ್ ಆಗುವ ಬಟ್ಟೆಯನ್ನು ಧರಿಸುವುದನ್ನು ಬಿಟ್ಟು, ಅಗಲವಾದ ಬಟ್ಟೆಗಳನ್ನು ಧರಿಸಿದರೆ ಗಾಢ ನಿದ್ರೆಗೆ ಜಾರಬಹುದು. ಹೀಗೆ ಉತ್ತಮ ನಿದ್ರೆಯಾದರೆ, ಯಾವುದೇ ಖಾಯಿಲೆಗಳು ನಮ್ಮ ಬಳಿ ಸುಳಿಯುವುದಿಲ್ಲ ಎನ್ನುವುದೇ ವೈದ್ಯರ ಸಲಹೆಯಾಗಿದೆ.












Click it and Unblock the Notifications