Shenga Chikki Recipe: ಮಕರ ಸಂಕ್ರಾಂತಿಗೆ ತಯಾರಿಸಿ ಕಟುಂ ಕುಟುಂ ಶೇಂಗಾ ಚಿಕ್ಕಿ
ಮಕರ ಸಂಕ್ರಾಂತಿ ಬಂತು. ಇದಕ್ಕಾಗಿ ಮನೆಗಳಲ್ಲಿ ಬಗೆ ಬಗೆಯ ಖಾದ್ಯಗಳು ರೆಡಿ ಮಾಡಲು ಗೃಹಿಣಿಯರು ಪ್ರಾರಂಭಿಸಿದ್ದಾರೆ. ಎಳ್ಳುಂಡೆ, ಚಕುಲಿ, ಶೇಂಗಾ ಹೋಳಿಗೆ ಕೂಡ ಸಿದ್ಧವಾಗುತ್ತಿವೆ. ಇನ್ನೂ ಸ್ವಲ್ಪ ಕುರುಕಲು ಹಾಗೂ ಸಿಹಿ ರುಚಿಯನ್ನು ನೀಡುವ ಶೇಂಗಾ ಚಿಕ್ಕಿಯನ್ನು ಕೂಡ ಈ ದಿನ ನೀವು ತಯಾರಿಸಬಹುದು. ಬೆಲ್ಲ ಮತ್ತು ಶೇಂಗಾ/ ಕಡ್ಲೇಬೀಜಾ/ ಎಳ್ಳಿನಿಂದ ತಯಾರಿಸಲಾಗುವ ಈ ತಿಂಡಿ ಮಕ್ಕಳ ಪ್ರೀತಿಯ ತಿಂಡಿಗಳಲ್ಲಿ ಒಂದಾಗಿದೆ. ಇದು ಆರೋಗ್ಯದಲ್ಲಿ ಸಾಕಷ್ಟು ಧನಾತ್ಮಕ ಪರಿಣಾಮ ಬೀರುವುದು ಮಾತ್ರವಲ್ಲದೆ ಬಾಯಿಗೆ ರುಚಿ ಕೂಡ ನೀಡುತ್ತದೆ. ಹಾಗಾದರೆ ಶೇಂಗಾ ಚಿಕ್ಕಿ ಕುರುಕುಲಾಗಿ ತಯಾರಿಸುವುದು ಹೇಗೆ ಅನ್ನೋದನ್ನು ಈಗ ತಿಳಿಯೋಣ.
ಶೇಂಗಾ ಚಿಕ್ಕಿಯನ್ನು ಸಂಜೆಯ ಕುರುಕುಲು ತಿಂಡಿ ಬದಲಾಗಿ ಸವಿಯಬಹುದು. ಅಲ್ಲದೆ ಇದನ್ನು ಮನೆಯಲ್ಲಿ ತುಂಬಾ ಸರಳವಾಗಿ, ಸರಳ ವಿಧಾನಗಳ ಮೂಲಕ ತಯಾರಿಸಬಹುದು. ಹಾಗಾದರೆ ತಡ ಮಾಡುವುದು ಬೇಡ ಈ ಶೇಂಗಾ ಚಿಕ್ಕಿಯನ್ನು ಕಟುಂ ಕುಟಂ ಎನ್ನುವಂತೆ ತಯಾರಿಸುವ ವಿಧಾನವನ್ನು ತಿಳಿಯೋಣ. ನೀವು ಒಂದು ಬಾರಿ ಮನೆಯಲ್ಲಿ ಇದನ್ನು ಟ್ರೈ ಮಾಡಿ. ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ಬೇಕಾಗುವ ಪದಾರ್ಥಗಳು:-
* ಕಡಲೆಕಾಯಿ ಬೀಜ 1 ಕಪ್
* ಬೆಲ್ಲ 3/4 ಕಪ್
* ತುಪ್ಪ 1 ಚಮಚ
ತಯಾರಿಸುವ ವಿಧಾನ
* ಕಟುಂ ಕುಟುಂ ಶೇಂಗಾ ಚಿಕ್ಕಿಯನ್ನು ತಯಾರಿಸಲು ಮೊದಲಿಗೆ ಶೇಂಗಾವನ್ನು ತುಂಬಾ ಕಡಿಮೆ ಉರಿಯಲ್ಲಿ ಕನಿಷ್ಠ 5ರಿಂದ 6 ನಿಮಿಷ ಹುರಿದುಕೊಳ್ಳಬೇಕು. ಶೇಂಗಾ ಯಾವುದೇ ಕಾರಣಕ್ಕೂ ಸೀದಿ ಹೋಗದಂತೆ ನೋಡಿಕೊಳ್ಳಬೇಕು. ಶೇಂಗ ಸೀದಿ ಹೋದರೆ ಚಿಕ್ಕಿ ಕಹಿಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಕಟುಂ ಕುಟುಂ ಶೇಂಗಾ ಚಿಕ್ಕಿಯನ್ನು ತಯಾರಿಸಲು ಪ್ರಮುಖವಾಗಿ ಶೇಂಗಾವನ್ನು ಸೀದಿ ಹೋಗದಂತೆ ಹುರಿದುಕೊಳ್ಳುವುದು ತುಂಬಾ ಮುಖ್ಯ.
* ಶೇಂಗಾ ಹುರಿದ ಬಳಿಕ ಅದನ್ನು ಕೈಯಿಂದ ಉಜ್ಜಿ ಅದರ ಸಿಪ್ಪೆಯನ್ನು ತೆಗೆಯಿರಿ. ಒಂದೆಡೆ ತೆಗೆದಿಡಿ.
* ಒಲೆಯ ಮೇಲೆ ಒಂದು ಪಾತ್ರೆಯನ್ನು ಇಟ್ಟು ಬಿಸಿಯಾದ ಬಳಿಕ ಅದಕ್ಕೆ ಸ್ಪಲ್ಪ ತುಪ್ಪವನ್ನು ಹಾಕಿ ಉರಿಯನ್ನು ಕಡಿಮೆ ಇಡಿ.
* ಒಂದು ಮಿಕ್ಸಿ ಜಾರ್‌ಗೆ ಹುರಿದು ಸಿಪ್ಪೆ ತೆಗೆದ ಶೇಂಗಾ ಬೀಜವನ್ನು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ (ಬೇಡವಾದಲ್ಲಿ ಹಾಗೇ ಶೇಂಗಾವನ್ನು ಬಳಕೆ ಮಾಡಬಹುದು)
* ನಂತರ ಇದಕ್ಕೆ ಬೆಲ್ಲವನ್ನು ಹಾಕಿ. ಚೆನ್ನಾಗಿ ಕದಡಿ ನಂತರ ಬೆಲ್ಲ ತೆಗೆದುಕೊಂಡು ಕಪ್‌ನಲ್ಲಿ ಕಾಲು ಬಾಗದಷ್ಟು ಮಾತ್ರ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುದಿಯಲು ಬಿಡಿ.
* ಚಿಕ್ಕಿ ತಯಾರಿಸಲು ಬೆಲ್ಲದ ಪಾಕ ರೆಡಿಯಾಗಬೇಕು. ಈ ಪಾಕ ಎಷ್ಟು ಕುದಿಯಬೇಕು ಅಂದರೆ ಈ ಪಾಕವನ್ನು ಬೆಳಿನ ಮಧ್ಯ ಇಟ್ಟಾಗ ಅದು ಅಂಟಿಕೊಳ್ಳುವಂತಿರಬೇಕು.
* ಹೀಗಾದಲ್ಲಿ ಮಾತ್ರ ಬೆಲ್ಲದ ಪಾಕ ರೆಡಿಯಾಗಿದೆ ಎಂದರ್ಥ. ಇದಕ್ಕೆ ರುಬ್ಬಿಕೊಂಡ ಶೇಂಗಾವನ್ನು ಹಾಕಿ ಚೆನ್ನಾಗಿ ಕಲಿಸಬೇಕು.
* ಮಿಕ್ಸ ಮಾಡುವಾಗ ಸೀದಿ ಹೋಗದಂತೆ ನೀಡಿಕೊಳ್ಳಿ. ಬೆಲ್ಲದ ಪಾಕ ಹಾಗೂ ಶೇಂಗಾ ಪುಡಿ ಚೆನ್ನಾಗಿ ಮಿಕ್ಸ್ ಆದ ಬಳಿಕ ಒಂದು ಪಾತ್ರೆಗೆ ತುಪ್ಪವನ್ನು ಸವರಿಗೆ ಅದನ್ನು ಹಾಕಿ ಚೆನ್ನಾಗಿ ಹರಡಿ ಬಿಟ್ಟು ಬಿಡಿ.
* ಕೆಲ ಸಮಯದವರೆಗೆ ಗಟ್ಟಿಯಾಗಲು ಬಿಟ್ಟರೆ ಕಟುಂ ಕುಟುಂ ಶೇಂಗಾ ಚಿಕ್ಕಿ ಸವಿಯಲು ಸಿದ್ಧ.












Click it and Unblock the Notifications