Sandige Recipe: ಸಂಡಿಗೆ ರೆಸಿಪಿ- ಬ್ಯಾಸಿಗಿ ಬಿಸುಲು ಬಂತು ಸಂಡಿಗೆ ಮಾಡೋಣ್ ಬನ್ರಿ...

ಬೇಸಿಗೆ ಬಂದರೆ ಸಾಕು ಗೃಹಿಣಿಯರು ನಾನಾ ಬಗೆಯ ಸಂಡಿಗೆಗಳನ್ನು ತಯಾರಿಸುತ್ತಾರೆ. ಮನೆಯಲ್ಲಿ ಸಂಡಿಗೆ ಮಾಡುವುದು ಅಂದರೆ ಅದೊಂದು ರೀತಿ ಸಡಗರವೇ ಸರಿ. ಬೆಳಿಗ್ಗೆ ಎದ್ದ ತಕ್ಷಣ ಸಂಡಿಗೆ ಮಾಡಲು ಬೇಕಾದ ವ್ಯವಸ್ಥೆ ಮಾಡಿಕೊಂಡು ಬಿಸಿಲು ಬರುವ ಹೊತ್ತಿಗಾಗಲೇ ಸಂಡಿಗೆಯನ್ನು ಹಾಕಬೇಕು. ಮನೆಯಲ್ಲಿ ಮಾಡಿದ ಸಂಡಿಗೆ ಆರೋಗ್ಯ ಹಾಗೂ ರುಚಿಯಲ್ಲಿ ಒಂದು ಪಟ್ಟು ಜಾಸ್ತಿ. ಹೀಗೆ ಮನೆಯಲ್ಲಿ ಸಂಡಿಗೆ ಮಾಡುವವರಿಗಾಗಿ ಇಲ್ಲಿದೆ ರುಚಿಯಾಗಿ ಸಂಡಿಗೆ ತಯಾರಿಸುವ ವಿಧಾನ.

ಹಾಗಾದರೆ ತಡ ಮಾಡುವುದು ಬೇಡ. ಮನೆಯಲ್ಲಿ ಸಂಡಿಗೆಯನ್ನು ಸರಳವಾಗಿ ಹಾಗೂ ರುಚಿಯಾಗಿ ತಯಾರಿಸುವುದು ಹೇಗೆ ಎಂದು ತಿಳಿಯೋಣ. ಮೊದಲಿಗೆ ಸಂಡಿಗೆ ತಯಾರಿಸಲು ಬೇಕಾಗುವ ಪದಾರ್ಥಗಳನ್ನು ತಿಳಿಯೋಣ. ನಂತರ ಸಂಡಿಗೆ ಹಿಟ್ಟು ಹಾಗೂ ಅದನ್ನು ಹಾಕುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

Sandige recipe how to make sandige at home

ಸಂಡಿಗೆ ಮಾಡಲು ಬೇಕಾಗುವ ಪದಾರ್ಥಗಳು:-

* ಅಕ್ಕಿ 2 ಕಪ್

* ಜೀರಿಗೆ 2 ಟೇಬಲ್ ಸ್ಪೂನ್

* ಅಡುಗೆ ಬಣ್ಣ

* ಸೋಡ ಚಿಟಿಕೆ

* ಒಣ ಮೆಣಸಿನಕಾಯಿ 5

* ಉಪ್ಪು ರುಚಿಗೆ ತಕ್ಕಷ್ಟು

ಸಂಡಿಗೆ ತಯಾರಿಸುವ ವಿಧಾನ:-

* ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಬಿಸಿಲಿಗೆ ಒಣಗಿಸಿಕೊಳ್ಳಿ

* ನಂತರ ಅದನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು.

*ಬಳಿಕ ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಒಂದು ಕಪ್ ಹಿಟ್ಟಿಗೆ ಮೂರು ಕಪ್ ನೀರು ಹಾಕಿಕೊಂಡು ಕುದಿಯಲು ಬಿಡಿ.

* ಬಳಿಕ ಇದಕ್ಕೆ ಉಪ್ಪು ಹಾಕಿ, ಸಣ್ಣ ಉರಿಯಲ್ಲಿ ಹಿಟ್ಟು ಹಾಕಿ ಗಂಟು ಇರದಂತೆ ಚೆನ್ನಾಗಿ ಕಲಸಬೇಕು.

* ಬಳಿಕ ಇದಕ್ಕೆ ಜೀರಿಗೆ, ಅಡುಗೆ ಬಣ್ಣ, ಸೋಡಾ, ತರಿ ತರಿಯಾಗಿ ರುಬ್ಬಿಕೊಂಡ ಒಣ ಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಕೆಲ ಹೊತ್ತು ಬಿಟ್ಟುಬಿಡಿ.

* ಬಳಿಕ ಇದನ್ನು ಒತ್ತು ಮಣಿ ತೆಗೆದುಕೊಂಡು ನಿಮಗೆ ಬೇಕಾದ ಆಕಾರದಲ್ಲಿ ಸಂಡಿಗೆ ಹಾಕಿ.

* ಇದನ್ನು ಬಿಸಿಲಿಗೆ ಚೆನ್ನಾಗಿ ಒಣಗಿಸಬೇಕು.

* ಸಂಡಿಗೆ ಒಣಗಿದ ಬಳಿಕ ಇದನ್ನು ಶೇಖರಿಸಿಟ್ಟುಕೊಂಡು ಬೇಕಾದಾಗ ಎಣ್ಣೆಯಲ್ಲಿ ಕರೆದು ಊಟದ ಜೊತೆಗೆ ಅಥವಾ ಶಾವಿಗೆ ಪಾಯಸದ ಜೊತೆಗೆ ಸೇವಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+