First Night Rose: ಮೊದಲ ರಾತ್ರಿಯ ಕೋಣೆಯನ್ನು ಗುಲಾಬಿ ಹೂವುಗಳಿಂದ ಅಲಂಕರಿಸುವುದೇಕೆ?
ಮದುವೆ ಅಂದರೆ ಗಂಡು ಮತ್ತು ಹೆಣ್ಣಿಗೆ ಅದೇನೋ ಹೇಳಿಕೊಳ್ಳಲಾರದ ಸಂಭ್ರಮ. ಮದುವೆಯ ಜೀವನದ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟುತ್ತಾ ಮದುವೆ ಮಂಟಪಕ್ಕೆ ವಧು-ವರ ಕಾಲಿಡುತ್ತಾರೆ. ಮದುವೆಯ ಪ್ರಮುಖ ಘಟ್ಟಗಳಲ್ಲಿ ಮೊದಲ ರಾತ್ರಿ ಕೂಡ ಒಂದು. ಈ ರಾತ್ರಿಯನ್ನು ಜೀವನದುದ್ದಕ್ಕೂ ಗಂಡಾಗಲಿ ಹೆಣ್ಣಾಗಲಿ ಮರೆಯಲು ಸಾಧ್ಯವೇ ಇಲ್ಲ. ಹೀಗಾಗಿ ಈ ಮೊದಲ ರಾತ್ರಿಯನ್ನು ಮತ್ತಷ್ಟು ಸುಂದರವಾಗಿಸಲು ಬಗೆ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗುತ್ತದೆ.
ವಿಶೇಷವಾಗಿ ಮೊದಲ ರಾತ್ರಿಯ ಹಾಸಿಗೆಯನ್ನು ಗುಲಾಬಿ ಹೂವುಗಳಿಂದ ಅಲಂಕರಿಸಲಾಗುತ್ತದೆ. ಇದನ್ನು ನೀವು ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ಅಥವಾ ಸಂಬಂಧಿಕರ ಮದುವೆಗಳಲ್ಲಿ ನೋಡಿರಬಹುದು. ಅಷ್ಟಕ್ಕೂ ಮೊದಲ ರಾತ್ರಿಯಲ್ಲಿ ಹಾಸಿಗೆಯನ್ನು ಗುಲಾಬಿಗಳಿಂದಲೇ ಏಕೆ ಅಲಂಕರಿಸಲಾಗುತ್ತದೆ? ಇದರ ಹಿಂದಿನ ಕಾರಣವನ್ನು ತಿಳಿಯೋಣ.

ಗುಲಾಬಿ (rose) ಅನ್ನು ಪ್ರಪಂಚದಾದ್ಯಂತ ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ನೈಸರ್ಗಿಕ ಕಾಮಾಸಕ್ತಿ ವರ್ಧಕವಾಗಿದೆ. ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಇದರ ಸುಗಂಧವು ಮನಸ್ಥಿತಿಯೊಂದಿಗೆ ಬಹಳಷ್ಟು ಸಂಬಂಧವನ್ನು ಹೊಂದಿದೆ. ಇಂದು ಪ್ರೇಮಿಗಳ ವಾರದ ಮೊದಲನೇಯ ದಿನವಾಗಿದ್ದು ರೋಸ್ ಡೇ ಅನ್ನು ಆಚರಿಸಲಾಗುತ್ತದೆ. ಪ್ರೇಮಿಗಳು ಸಹ ಈ ದಿನ ತಮ್ಮ ಪ್ರೇಮ ಪ್ರಸ್ತಾಪಕ್ಕಾಗಿ ಕೆಂಪು ಗುಲಾಬಿಯನ್ನು ನೀಡುತ್ತಾರೆ. ಹಾಗಾದರೆ ಮದುವೆಯ ರಾತ್ರಿ ಮತ್ತು ಗುಲಾಬಿಗಳ ನಡುವಿನ ಸಂಬಂಧವೇನು ಎಂದು ತಿಳಿಯೋಣ.
ಕಾಮವನ್ನು ಹೆಚ್ಚಿಸುವ ಗುಲಾಬಿ
ಆಯುರ್ವೇದದ ಪ್ರಕಾರ, ಗುಲಾಬಿ ನೈಸರ್ಗಿಕ ಕಾಮೋತ್ತೇಜಕವಾಗಿದೆ. ಅಂದರೆ ಇದು ಲೈಂಗಿಕತೆಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ. ಇದರ ಎಲೆಗಳು ದೇಹದ ದೋಷಗಳನ್ನು ಹೋಗಲಾಡಿಸುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ ಒಬ್ಬ ವ್ಯಕ್ತಿಯು ತ್ವರಿತವಾಗಿ ಲೈಂಗಿಕವಾಗಿ ಸಕ್ರಿಯವಾಗಿರುತ್ತಾನೆ. ಆಯುರ್ವೇದದಲ್ಲಿ ಲೈಂಗಿಕ ಜೀವನವನ್ನು ಸುಧಾರಿಸಲು ಕೆಲವು ಗುಲಾಬಿ ಎಲೆಗಳನ್ನು ತೊಳೆದು ತಿನ್ನಲು ಸಲಹೆ ನೀಡಲಾಗುತ್ತದೆ. ಜೊತೆಗೆ ಅದರ ವಾಸನೆಯು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಅದು ಮನಸ್ಥಿತಿಯನ್ನು ಸುಧಾರಿಸುತ್ತದೆ ಎನ್ನಲಾಗಿದೆ.
ರೋಮ್ಯಾಂಟಿಕ್ ಮೂಡ್
ವೈವಾಹಿಕ ಜೀವನದ ಮೊದಲ ದಿನದಂದು ವಾತಾವರಣವನ್ನು ರೋಮ್ಯಾಂಟಿಕ್ ಮಾಡಲು ಕೋಣೆಯನ್ನು ಹೂವುಗಳಿಂದ ಅಲಂಕರಿಸಲಾಗುತ್ತದೆ. ಅನೇಕ ಜನರು ಕೋಣೆಯಲ್ಲಿ ಪರಿಮಳಯುಕ್ತ ಹೂವುಗಳ ಜೊತೆಗೆ ಸಿಹಿತಿಂಡಿಗಳನ್ನು ಇಡುತ್ತಾರೆ. ವಧು ಮತ್ತು ವರನ ಜೀವನದಲ್ಲಿ ಮಾಧುರ್ಯ ಉಳಿಯಲು ಇದನ್ನು ಮಾಡಲಾಗುತ್ತದೆ. ಮತ್ತೊಂದೆಡೆ ವೈಜ್ಞಾನಿಕವಾಗಿ ಹೂವುಗಳು ಮತ್ತು ಅವುಗಳ ಸುಗಂಧವು ಕಾಮವನ್ನು ಹೆಚ್ಚಿಸುತ್ತದೆ. ಇದು ವೈವಾಹಿಕ ಜೀವನದಲ್ಲಿ ತೃಪ್ತಿಗೆ ಅವಶ್ಯಕವಾಗಿದೆ. ಅದಕ್ಕಾಗಿಯೇ ಕೋಣೆಯನ್ನು ಪರಿಮಳಯುಕ್ತ ಹೂವುಗಳಿಂದ ಅಲಂಕರಿಸಲಾಗುತ್ತದೆ.

ಒತ್ತಡ ಕಡಿಮೆ
ತುಂಬಾ ಬಿಡುವಿಲ್ಲದ ಮದುವೆ ಸಂಭ್ರಮ ಮತ್ತು ನಿದ್ರೆಯ ಕೊರತೆಯಿಂದಾಗಿ ವಧು ಹಾಗೂ ವರನಲ್ಲಿ ಒತ್ತಡ ಹೆಚ್ಚಾಗುತ್ತದೆ. ಹೀಗಾಗಿ ಮದುವೆಯ ಮೊದಲ ರಾತ್ರಿ ಶಾಂತ ಮನಸ್ಸು ಮತ್ತು ಆರಾಮದಾಯಕ ಜೀವನವನ್ನು ಆರಂಭಿಸಲು ವಧುವರರ ಕೋಣೆಯಲ್ಲಿ ಗುಲಾಬಿಗಳನ್ನು ಇಡಲಾಗುತ್ತದೆ.
ಗುಲಾಬಿ ದಳಗಳ ಪರಿಮಳ ಮನಸ್ಸನ್ನು ಶಾಂತಗೊಳಿಸುತ್ತದೆ. ಉಲ್ಲಾಸವನ್ನು ನೀಡುತ್ತದೆ. ಇದಲ್ಲದೇ ಈ ಸಂದರ್ಭದಲ್ಲಿ ಮೂಡ್ ಚೆನ್ನಾಗಿಲ್ಲದಿದ್ದರೆ ಅಥವಾ ಒತ್ತಡದಲ್ಲಿದ್ದರೆ, ಗುಲಾಬಿ ಹೂವಿನ ವಾಸನೆಯನ್ನು ತೆಗೆದುಕೊಳ್ಳಬಹುದು. ಇದರಿಂದ ಒತ್ತಡ ಕಡಿಮೆಯಾಗಿ ಮನಸ್ಸು ಉಲ್ಲಾಸಗೊಳ್ಳುತ್ತದೆ. ಇದು ಮನಸ್ಥಿತಿಯನ್ನು ತಕ್ಷಣವೇ ಸುಧಾರಿಸುತ್ತದೆ. ಇದು ಸಂಶೋಧನೆಯಲ್ಲೂ ಸಾಬೀತಾಗಿದೆ.
ಗುಲಾಬಿ ಪ್ರೀತಿಯ ಸಂಕೇತ
ಸ್ವಾಭಾವಿಕವಾಗಿ ಗುಲಾಬಿ ಪ್ರೀತಿ ಮತ್ತು ಸಂತೋಷದಂತಹ ಎಲ್ಲಾ ಭಾವನೆಗಳನ್ನು ವಿವರಿಸುತ್ತದೆ. ಯಾವುದೇ ಸಂತೋಷದ ಆಚರಣೆಯಾಗಿರಲಿ ಜನರು ಹೆಚ್ಚಾಗಿ ಗುಲಾಬಿಗಳನ್ನು ಬಳಸುತ್ತಾರೆ. ಗುಲಾಬಿ ಪ್ರೀತಿಯ ಸಂಕೇತವಾಗಿದ್ದು ಪ್ರೇಮಿಗಳ ದಿನದಂದು ಸಂಗಾತಿಗೆ ಪ್ರೀತಿಯನ್ನು ವ್ಯಕ್ತಪಡಿಸಲು ಇದನ್ನು ನೀಡಲಾಗುತ್ತದೆ. ಮದುವೆಯಲ್ಲಿ ಸ್ನೇಹಿತರಿಗೆ ಗುಲಾಬಿಗಳ ಪುಷ್ಪಗುಚ್ಛವನ್ನು ಉಡುಗೊರೆಯಾಗಿ ನೀಡುವುದು ಕಂಡುಬರುತ್ತದೆ. ಗುಲಾಬಿಗಳನ್ನು ಮುಖ್ಯವಾಗಿ ಭಾರತೀಯ ವಿವಾಹಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.











Click it and Unblock the Notifications