Red Rose Pakoda Recipe: ಕೆಂಪು ಗುಲಾಬಿ ಪಕೋಡಾ ತಯಾರಿಸುವ ವಿಧಾನ: ವಿಡಿಯೋ ನೋಡಿ....
ಸಾಮಾನ್ಯವಾಗಿ ರೆಡ್ ರೋಸ್ ಅನ್ನು ತಲೆಯಲ್ಲಿ ಮುಡಿದುಕೊಳ್ಳಲು, ಪೂಜೆಗೆ ಇಡಲು, ಕೆಲ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ತಯಾರಿಸಲು ಬಳಕೆ ಮಾಡುತ್ತಾರೆ. ಆದರೀಗ ಅದನ್ನು ಅಡುಗೆಗೂ ಕೂಡ ಬಳಕೆ ಮಾಡಬಹುದು. ರೆಡ್ ರೋಸ್ ಅನ್ನು ಅಡುಗೆಗೆ ಬಳಕೆ ಮಾಡೋದಾ? ಹೇಗೆ ಅಂತ ಯೋಚನೆ ಮಾಡ್ತಾಯಿದಿರಾ? ಇಲ್ಲಿದೆ ನೋಡಿ ವಿಧಾನ...
ಹೌದು... ರೆಡ್ ರೋಸ್ ಅನ್ನು ಪಕೋಡ ತಯಾರಿಸಲು ಬಳಕೆ ಮಾಡಲಾಗುತ್ತದೆ. ಇದರ ರುಚಿ ಕೊಂಚ ವಿಭಿನ್ನವಾಗಿರುವುದು ಮಾತ್ರವಲ್ಲದೆ ಎಲ್ಲರ ನೆಚ್ಚಿನ ತಿಂಡಿ ಆಗೋದರಲ್ಲಿ ಅನುಮಾನವೇ ಇಲ್ಲ. ಹಾಗಾದರೆ ಈ ರೆಡ್ ರೋಸ್ ಪಕೋಡ ಹೇಗೆ ತಯಾರಿಸಲಾಗುತ್ತದೆ? ಇದಕ್ಕೆ ಬೇಕಾದ ಪದಾರ್ಥಗಳು ಯಾವುವು? ಎನ್ನುವುದನ್ನು ನೋಡೋಣ.

ನೀವು ಕೂಡ ಇದನ್ನು ಒಮ್ಮೆ ಮನೆಯಲ್ಲಿ ಟ್ರೈ ಮಾಡಿ. ನಿಮ್ಮ ಅನುಭವವನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.
ಬೇಕಾದ ಪದಾರ್ಥಗಳು
* ರೆಡ್ ರೋಸ್ 10
* ಕಡಲೆ ಬೇಳೆ ಹಿಟ್ಟು ಒಂದು ಕಪ್
* ಉಪ್ಪು ರುಚಿಗೆ ತಕ್ಕಷ್ಟು
* ಕಾರ್ನ್ ಫ್ಲೋರ್ 1 ಸ್ಪೂನ್
* ಅಕ್ಕಿ ಹಿಟ್ಟು 1 ಸ್ಪೂನ್
* ಅರಿಶಿಣ ಕಾಲು ಚಮಚ
* ಹಸಿರು ಮೆಣಸಿನಕಾಯಿ 2
* ಕೊತ್ತಂಬರಿ ಸೊಪ್ಪು ಸ್ವಲ್ಪ
* ಓಂಕಾಳು ಅರ್ದ ಸ್ಪೂನ್
* ಅಡುಗೆ ಸೋಡಾ ಚಿಟಿಕೆ
* ಎಣ್ಣೆ ಕರಿಯಲು ಬೇಕಾದಷ್ಟು
ತಯಾರಿಸುವ ವಿಧಾನ
* ಮೊಡಲು ರೆಡ್ ರೋಸ್ ತೆಗೆದುಕೊಂಡು ನೀರಿನಲ್ಲಿ ಅದ್ದಿ ತೆಗೆದಿಟ್ಟುಕೊಳ್ಳಿ
* ಕೆಂಪು ಗುಲಾಬಿ ಹೂವಿನ ಸುತ್ತಲು ಒಣಗಿದ ಪೆಟಲ್ಸ್ ಇದ್ದರೆ ಅದನ್ನು ತೆಗೆದು ಬಿಡಿ, ಜೊತೆಗೆ ಅದರ ಹಿಂದಿನ ಕಡ್ಡಿಯನ್ನು ಒಂದೇ ಗಾತ್ರದಲ್ಲಿ ಕತ್ತರಿಸಿ.
* ನಂತರ ಒಂದು ಪಾತ್ರೆಯಲ್ಲಿ ಕಡಲೆಬೇಳೆ ಹಿಟ್ಟು ತೆಗೆದುಕೊಂಡು, ಇದಕ್ಕೆ ಕಾರ್ನ್ ಫ್ಲೋರ್, ಅಕ್ಕಿ ಹಿಟ್ಟು ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕಿ ಚೆನ್ನಾಗಿ ಗಂಡಿಲ್ಲದಂತೆ ಕಲಸಿಕೊಳ್ಳಿ.
* ಬಳಿಕ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿಣ, ಓಂಕಾಳು, ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಕ್ಸ ಮಾಡಿಕೊಳ್ಳಿ

* ನಂತರ ಇದಕ್ಕೆ ಚಿಕ್ಕದಾಗಿ ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ, ಜೊತೆಗೆ ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.
* ಇದು ದೋಸೆ ಹಿಟ್ಟಿಗಿಂತ ಕೊಂಚ ಗಟ್ಟಿಯಾಗಿರುವಂತೆ ಕಲಸಿಕೊಂಡು ಸ್ವಲ್ಪ ಹೊತ್ತು ಮುಚ್ಚಿಡಿ.
* ಅಷ್ಟರಲ್ಲಿ ಒಂದು ಬಾಣಲೆಗೆ ಕರಿಯಲು ಬೇಕಾಗುವಷ್ಟು ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
* ಬಳಿಕ ಹಿಟ್ಟಿನಲ್ಲಿ ಗುಲಾಬಿ ಹೂವುಗಳನ್ನು ಅದ್ದಿ ಎಣ್ಣೆಯಲ್ಲಿ ಬಿಡಿ
* ಕಡಿಮೆ ಉರಿಯಲ್ಲಿ ಅದನ್ನು ಗರಿ ಗರಿಯಾಗುವವರೆಗೂ ಕೈ ಆಡಿಸಿ ನಂತರ ತೆಗೆದು ತಿನ್ನಲು ಬಡಿಸಿ.
ಈ ರೆಡ್ ರೋಸ್ ಪಕೋಡ ತಯಾರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರ ವಿಡಿಯೋ ಇಲ್ಲಿದೆ ವೀಕ್ಷಿಸಿ-












Click it and Unblock the Notifications