Weight Loss: ಚಿಕನ್ ಬಿರಿಯಾನಿ, ಜಾಮೂನ್ ತಿನ್ನುತ್ತಲೇ 20 ಕೆ.ಜಿ ತೂಕ ಕಳೆದುಕೊಂಡ ಮಹಿಳೆ ಕಥೆ
ಪ್ರತಿಯೊಬ್ಬರಿಗೂ ಕೂಡ ತಮ್ಮ ದೇಹ ಸೌಂದರ್ಯದ ಬಗ್ಗೆ ಅತಿಯಾದ ಕಾಳಜಿ ಇದ್ದೇ ಇರುತ್ತದೆ. ದೇಹ ಸೌಂದರ್ಯಕ್ಕಾಗಿ ತೂಕ ಇಳಿಸಿಕೊಳ್ಳುವುದು ಸಾಮಾನ್ಯವಾಗಿದೆ. ದೇಹದ ತೂಕ ಕಳೆದುಕೊಳ್ಳುಲು ಆಹಾರ ಸೇವನೆಯಲ್ಲಿ ಕಠಿಣತೆ, ದೇಹ ದಂಡನೆ ಮುಖ್ಯವಾಗಿರುತ್ತದೆ. ಆಹಾರ ಶೈಲಿ ಬದಲಿಸಿಕೊಳ್ಳುವುದು, ದೇಹದ ಮೇಲೆ ಹೆಚ್ಚು ಒತ್ತಡ ಹಾಕುವುದು ಮಾಡಬೇಕಾಗುತ್ತದೆ.
ಪ್ರತಿಯೊಬ್ಬರ ತೂಕ ನಷ್ಟದ ಅನುಭವವು ವಿಭಿನ್ನವಾಗಿರುತ್ತದೆ. ದೈಹಿಕ ಮತ್ತು ಮಾನಸಿಕ ನಿಶ್ಚಿತದಿಂದ ತೂಕ ಕಡಿಮೆ ಮಾಡಿಕೊಂಡ ಅನೇಕರನ್ನು ನೀವು ನಿಮ್ಮ ಸುತ್ತಲೇ ನೋಡಬಹುದು. ತೂಕ ಕಳೆದುಕೊಳ್ಳುವವ ಬದ್ಧತೆ ಇತರರಿಗೆ ಸ್ಪೂರ್ತಿದಾಯಕವಾಗಿರುತ್ತದೆ. ಇಂತಹದ್ದೇ ಕಥೆಯನ್ನು ಹುದಾ ಬುಶ್ರಾ ಎಂಬ ಮಹಿಳೆ ಹೊಂದಿದ್ದು. India.com ಮಾಧ್ಯಮದ ಜೊತೆ ತಮ್ಮ ತೂಕ ನಷ್ಟದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.

'ಅಂದು ನನ್ನ ಸಹೋದರಿಯ ನಿಶ್ಚಿತಾರ್ಥವಿತ್ತು. ಆ ದಿನ ನಾನು ತುಂಬಾ ದುಬಾರಿ ಉಡುಗೆ ತೊಟ್ಟು ಸುಂದರವಾಗಿ ಕಾಣುತ್ತಿದ್ದೇನೆ ಎಂದುಕೊಂಡಿದ್ದೆ. ಆದರೆ ಕಾರ್ಯಕ್ರಮದ ಫೋಟೋಗಳನ್ನು ನೋಡಿದಾಗ ನನಗೆ ಬೇಸರವಾಯಿತು. ನಾನು ನನ್ನ ದೇಹದ ತೂಕ ಕಡಿಮೆ ಮಾಡಬೇಕು ಎಂದು ನಿಶ್ಚಯಿಸಿಕೊಂಡೆ. ನನ್ನ ತಂಗಿಯ ಮದುವೆಯೊಳಗೆ ಸುಂದರವಾದ ದೇಹ ಆಕಾರ ಪಡೆಯಬೇಕು ಎಂದುಕೊಂಡು ಅಂದಿನಿಂದ ತೂಕ ಇಳಿಸುವ ಬಗ್ಗೆ ಕಾಳಜಿ ವಹಿಸಿದೆ' ಎಂದು ಹುದಾ ಬುಶ್ರಾ ತಮ್ಮ ತೂಕ ಇಳಿಸಿದ ಅನುಭವವನ್ನು ಹಂಚಿಕೊಳ್ಳಲು ಆರಂಭಿಸುತ್ತಾರೆ.
ಹುದಾ ಬುಶ್ರಾ ತೂಕ ಇಳಿಕೆ ಕಥೆ ವಿಶೇಷವಾಗಿದೆ ಯಾಕೆಂದರೆ ಅವರು ಚಿಕನ್ ಬಿರಿಯಾನಿ ಹಾಗೂ ಗುಲಾಬ್ ಜಾಮೂನ್ ತಿನ್ನುತ್ತಲೇ ಒಂದೂವರೆ ವರ್ಷದಲ್ಲಿ ಸುಮಾರು 20 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ.
ಹುದಾ ಬುಶ್ರಾ ಆಹಾರ ಕ್ರಮ ಹೇಗಿತ್ತು?
ನಾನು ನಿರ್ದಿಷ್ಟವಾದ ಕಠಿಣವಾದ ಆಹಾರ ಪದ್ಧತಿಯನ್ನು ಅನುಸರಿಸಿಲ್ಲ. ಕೋಳಿ, ಮೊಟ್ಟೆ ಸೇರಿದಂತೆ ಸಾಮಾನ್ಯವಾಗಿ ಮನೆಯಲ್ಲಿ ಮಾಡಿದ ಊಟವನ್ನು ಸೇವಿಸುತ್ತಿದೆ. ನೀರ ಕುಡಿಯುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇನೆ ಏಕೆಂದರೆ ನೀರು ಕೊಬ್ಬನ್ನು ಕರಗಿಸುವಲ್ಲಿ ಸಹಾಯ ಮಾಡುತ್ತದೆ. ಯೂಟ್ಯೂಬ್ ಚಾನೆಲ್ ನೋಡಿ ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದೆ. ಮನೆಯಲ್ಲೇ ವರ್ಕ್‌ಔಟ್‌ಗಳನ್ನು ಮಾಡುವ ಮೂಲಕ 15 ಕೆ.ಜಿ ಕಳೆದುಕೊಂಡಿದ್ದೆ. ಬಳಿಕ ಮತ್ತಷ್ಟು ತೂಕ ಕಳೆದುಕೊಳ್ಳಲು ಜುಲೈ 2023ರಲ್ಲಿ ಜಿಮ್‌ಗೆ ಸೇರಿಕೊಂಡೆ ಎಂದು ಸ್ವತಃ ಹುದಾ ಬುಶ್ರಾ ವಿವರಿಸಿದ್ದಾರೆ.

ನಾನು ಮೊದಲು ಸಿಹಿ ತಿಂಡಿಗಳನ್ನು ತುಂಬಾ ಇಷ್ಟಪಡುತ್ತಿದೆ. ಆದರೆ ತೂಕ ಕಳೆದುಕೊಳ್ಳಲು ಸಿಹಿ ತಿಂಡಿ ತಿನ್ನುವುದನ್ನು ನಿಲ್ಲಿಸಿ. ಶುಗರ್ ಫ್ರೀ ಕಾಫಿ, ಚಹಾ ಅಭ್ಯಾಸ ಮಾಡಿಕೊಂಡೆ ಬದಲಿಗೆ ಚಾಕೊಲೇಟ್ ಹಾಗೂ ಗುಲಾಬ್ ಜಾಮೂನ್ ಸೇವಿಸುತ್ತೇನೆ. ವಾರಾಂತ್ಯದಲ್ಲಿ ನಾನು ಚಿಕನ್ ಬಿರಿಯಾನಿಯನ್ನು ಮಿಸ್ ಮಾಡದೇ ತಿನ್ನುತ್ತಿದೆ ಎಂದು ಹುದಾ ಬುಶ್ರಾ ವಿವರಿಸಿದ್ದಾರೆ.
ತೂಕ ಕಳೆದುಕೊಳ್ಳುವವರಿಗೆ ಹುದಾ ಬುಶ್ರಾ ಸಲಹೆ ಏನು?
ತೂಕ ಕಳೆದುಕೊಳ್ಳಲು ಬಯಸುವವರಿಗೆ ಬದ್ಧತೆ ಮುಖ್ಯ. ನಾನು ಆರಂಭದಲ್ಲಿ ಅಪಮಾನ, ನೆಗೆಟಿವ್ ಕಮೆಂಟ್‌ಗಳನ್ನು ಕೇಳಿದ್ದೇನೆ. ಆದರೆ ನನ್ನ ಗುರಿ ಸ್ಥಿರವಾಗಿತ್ತು. ನಾನು ಪ್ರತಿದಿನ 15,000 ಹೆಜ್ಜೆಗಳನ್ನು ನಡೆಯುತ್ತಿದ್ದೆ. ನಂತರ ಕೆಲವು ಸಂದರ್ಭದಲ್ಲಿ ಉಪವಾಸ ಮಾಡುತ್ತಿದ್ದೆ. ಮಧ್ಯಂತರ ಉಪವಾಸ ತೂಕ ಕಳೆದುಕೊಳ್ಳು ಸಹಾಯವಾಗುತ್ತದೆ. ಕೆಲವು ಸಮಯದ ನಂತರ ನನ್ನ ತೂಕ ಕಡಿಮೆಯಾಗದಿದ್ದಾಗ, ನಾನು ಇದನ್ನು ಬಿಟ್ಟುಕೊಡಬೇಕೆಂದುಕೊಂಡಿದ್ದೆ. ಆದರೆ 10 ನಿಮಿಷಗಳ ಕಾಲ ಕನ್ನಡಿಯ ಮುಂದೆ ನಿಂತು ನನ್ನನ್ನು ನೋಡಿಕೊಂಡು ಮತ್ತೆ ಮುಂದುವರಿಸಿದೆ.

ಕಡಿಮೆ ತಿನ್ನುವುದರಿಂದ ತೂಕವನ್ನು ಕಳೆದುಕೊಳ್ಳಬಹುದು ಎನ್ನುವ ಮಾತು ಸಂಪೂರ್ಣವಾಗಿ ಸತ್ಯವಲ್ಲ. ಸರಿಯಾಗಿ ತಿನ್ನುವುದರ ಜೊತೆಗೆ ನಿಯಮಿತ ತರಬೇತಿ, ವ್ಯಾಯಾಮ, ವಾಕಿಂಗ್‌ನಿಂದ ತೂಕ ಕಳೆದುಕೊಳ್ಳಬಹುದು. ಆದರೆ ಸಮಯ ತೆಗೆದುಕೊಳ್ಳುತ್ತದೆ. ಕಾಯಬೇಕು ಎಂದು ಹುದಾ ಬುಶ್ರಾ ತೂಕ ಕಳೆದುಕೊಳ್ಳ ಬಯಸುವವರಿಗೆ ಸಲಹೆ ನೀಡಿದ್ದಾರೆ.












Click it and Unblock the Notifications