ಹಸಿ ಹಾಲಿನೊಂದಿಗೆ ಈ ಪುಡಿ ಬೆರೆಸಿ ಹಚ್ಚಿದರೆ ಬೇಸಿಗೆಯಲ್ಲಿಯೂ ಮುಖದ ಕಾಂತಿ ಕಾಪಾಡಬಹುದು!

ಬೇಸಿಗೆಯಲ್ಲಿ ಚರ್ಮದ ಆರೈಕೆ ಅಂದುಕೊಂಡಷ್ಟು ಸುಲಭವಲ್ಲ. ತೀವ್ರವಾದ ಬಿಸಿಲು, ಶಾಖದಿಂದಾಗಿ ಮೈ ಮುಖವಲ್ಲಾ ನಿರಂತರ ಬೆವರುತ್ತಿರುತ್ತದೆ. ಧೂಳು ಚರ್ಮದ ಅಲರ್ಜಿಗೆ ಕಾರಣವಾಗುತ್ತದೆ. ಇದರಿಂದ ತುರಿಕೆ ಮತ್ತು ಕಿರಿಕಿರಿಯನ್ನು ಉಂಟು ಮಾಡುತ್ತದೆ.ಇದು ತ್ವಚೆಯ ನೈಸರ್ಗಿಕ ಹೊಳಪನ್ನು ಹಾಳು ಮಾಡುತ್ತದೆ. ಹೀಗಿರುವಾಗ ಕೆಲವರು ತ್ವಚೆಯ ಆರೈಕೆಗಾಗಿ ದುಬಾರಿ ಉತ್ಪನ್ನಗಳಿಗಾಗಿ ಹಣ ವ್ಯಯಿಸುತ್ತಾರೆ. ಈ ಎಲ್ಲಾ ಪ್ರಾಡಕ್ಟ್‌ಗಳು ಸರಿಯಾಗಿ ಕೆಲಸ ಮಾಡುತ್ತದೆ ಎಂದೇನಲ್ಲ. ಸ್ಕಿನ್‌ ಕೇರ್‌ ಪ್ರಾಡಕ್ಟ್‌ಗಳು ಪ್ರತಿಯೊಂದು ಚರ್ಮದ ಪ್ರಕಾರದ ಮೇಲೆ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ಎಲ್ಲವೂ ಎಲ್ಲಾ ರೀತಿಯ ತ್ವಚೆಯ ಮೇಲೆ ಕೆಲಸ ಮಾಡುತ್ತದೆ ಎನ್ನುವುದು ಸುಳ್ಳು. ಇದರ ಬದಲು ಹಾಲು ಮತ್ತು ಮುಲ್ತಾನಿ ಮಿಟ್ಟಿಯ ಮಿಶ್ರಣ ಹಚ್ಚುವ ಮೂಲಕ ತ್ವಚೆಯ ಕಾಂತಿಯನ್ನು ನೈಸರ್ಗಿಕವಾಗಿ ಹೆಚ್ಚಿಸಬಹುದು.

ಬೇಸಿಗೆಯಲ್ಲಿಯೂ ಹೊಳೆಯುವ ತ್ವಚೆಗೆ ಪರಿಹಾರ:

ಬೇಸಿಗೆಯಲ್ಲಿ ಒಣ ಚರ್ಮಕ್ಕೆ ಹಸಿ ಹಾಲು:

ಹಸಿ ಹಾಲು ಚರ್ಮಕ್ಕೆ ನೈಸರ್ಗಿಕ ಮಾಯಿಶ್ಚರೈಸರ್ ರೂಪದಲ್ಲಿ ಕೆಲಸ ಮಾಡುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ. ಇದರ ಜಿಡ್ಡು ಸಂಪೂರ್ಣವಾಗಿ ಸಮತೋಲಿತವಾಗಿದ್ದು, ಇದು ತ್ವಚೆಯನ್ನು ಒಣಗಲು ಬಿಡುವುದಿಲ್ಲ. ಒಣ ಚರ್ಮ ಹೊಂದಿರುವವರು ರಾತ್ರಿ ಹೊತ್ತು ಮುಖಕ್ಕೆ ಹಸಿ ಹಾಲನ್ನು ಹಚ್ಚಿ, ಕನಿಷ್ಠ 20 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ನಂತರ ಮಲಗುವ ಮುನ್ನ ಸರಳ ನೀರಿನಿಂದ ತೊಳೆಯಬೇಕು.

Raw Milk and Multani Mitti

ಬೇಸಿಗೆಯಲ್ಲಿ ಮುಖಕ್ಕೆ ಮುಲ್ತಾನಿ ಹಚ್ಚುವುದರಿಂದಾಗುವ ಪ್ರಯೋಜನಗಳು:

ಮುಲ್ತಾನಿ ಮಿಟ್ಟಿ ಚರ್ಮಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಇದು ಬೇಸಿಗೆಯಲ್ಲಿ ಚರ್ಮವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಮುಲ್ತಾನಿ ಮಿಟ್ಟಿ ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ವಿಶೇಷವಾಗಿ ಹಸಿ ಹಾಲಿನೊಂದಿಗೆ ಮುಲ್ತಾನಿ ಮಿಟ್ಟಿಯನ್ನು ಬಳಸಿದರೆ ಅದು ಇನ್ನೂ ಹೆಚ್ಚು ಪರಿಣಾಮ ಬೀರುತ್ತದೆ.

ಚರ್ಮವು ನೈಸರ್ಗಿಕವಾಗಿ ಹೊಳೆಯುತ್ತದೆ:

ಚರ್ಮವು ನೈಸರ್ಗಿಕ ಹೊಳಪನ್ನು ಪಡೆಯಲು ಅಗತ್ಯ ಪೋಷಕಾಂಶಗಳು ಬೇಕಾಗುತ್ತವೆ. ಸರಿಯಾದ ಸಮಯದಲ್ಲಿ ಸರಿಯಾದ ಪೋಷಕಾಂಶಗಳನ್ನು ಚರ್ಮಕ್ಕೆ ಒದಗಿಸಿದರೆ, ಅದು ನೈಸರ್ಗಿಕವಾಗಿ ಹೊಳೆಯುತ್ತದೆ. ಬೇಸಿಗೆಯ ಕಾರಣದಿಂದ ಉಂಟಾಗುವ ಟ್ಯಾನಿಂಗ್ ಅನ್ನು ಹಸಿ ಹಾಲು ಕಡಿಮೆ ಮಾಡಬಹುದು. ಹಸಿ ಹಾಲು ಮತ್ತು ಮುಲ್ತಾನಿ ಮಿಟ್ಟಿಯನ್ನು ಬೆರೆಸಿ ಮಲಗುವ ಮುನ್ನ ಪೇಸ್ಟ್ ತಯಾರಿಸಿ ಮುಖಕ್ಕೆ 10 ನಿಮಿಷಗಳ ಕಾಲ ಹಚ್ಚಬೇಕು.

ಉರಿ ಮತ್ತು ತುರಿಕೆಯಿಂದ ಪರಿಹಾರ:

ಬೆವರು, ಧೂಳು ಮತ್ತು ಬಿಸಿ ವಾತಾವರಣವು ಮುಖದ ಮೇಲೆ ತುರಿಕೆ, ಉರಿಯನ್ನು ಉಂಟು ಮಾಡುವುದರ ಜೊತೆಗೆ ಮುಖವನ್ನು ಕೆಂಪು ಬಣ್ಣಕ್ಕೆ ತಿರುಗಿಸುತ್ತದೆ. ಹಸಿ ಹಾಲು ಈ ಎಲ್ಲಾ ಸಮಸ್ಯೆಗಳನ್ನು ಶಮನ ಮಾಡುತ್ತದೆ. ಜೊತೆಗೆ ಮುಲ್ತಾನಿ ಮಿಟ್ಟಿ ತಂಪಾಗಿಸುವ ಪರಿಣಾಮವನ್ನು ಬೀರುತ್ತದೆ. ಎರಡೂ ಬೇಸಿಗೆಗೆ ಸಂಬಂಧಿಸಿದ ಮುಖದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಗರಿಷ್ಠ ಪ್ರಯೋಜನಗಳಿಗಾಗಿ, ಹಸಿ ಹಾಲು ಮತ್ತು ಮುಲ್ತಾನಿ ಮಿಟ್ಟಿಯ ಪೇಸ್ಟ್ ಅನ್ನು ಮುಖಕ್ಕೆ ಹಚ್ಚುವ ಮೊದಲು 10 ರಿಂದ 15 ನಿಮಿಷಗಳ ಕಾಲ ರೆಫ್ರಿಜರೇಟರ್‌ನಲ್ಲಿಡಿ.

ಇವುಗಳನ್ನು ಯಾರು ಮುಖಕ್ಕೆ ಹಚ್ಚಬಾರದು?:

ಕೆಲವು ಜನರಿಗೆ ತುಂಬಾ ಸೂಕ್ಷ್ಮ ಚರ್ಮವಿರುತ್ತದೆ. ಅವರು ಈ ಮಿಶ್ರಣವನ್ನು ಹಚ್ಚಿದರೆ ಕಿರಿಕಿರಿ ಉಂಟಾಗಬಹುದು.ಹಸಿ ಹಾಲು ಇಂಥಹ ಪದಾರ್ಥಗಳಲ್ಲಿ ಒಂದಾಗಿದೆ. ಈಗಾಗಲೇ ಎಣ್ಣೆಯುಕ್ತ ಚರ್ಮ ಹೊಂದಿರುವವರು ಕೂಡಾ ಹಸಿ ಹಾಲನ್ನು ಬಳಸಬಾರದು. ಇದಲ್ಲದೆ ಪದೇ ಪದೇ ಮುಖದ ಮೇಲೆ ಮೊಡವೆಗಳು ಬರುವವರು ಕೂಡಾ ಈ ಮಿಶ್ರಣದಿಂದ ದೂರ ಇರಬೇಕು. ಹಸಿ ಹಾಲು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಮೊಡವೆಗಳಂತಹ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚು ಮಾಡಬಹುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+