Prajwal Revanna: ಪ್ರಜ್ವಲ್ ರೇವಣ್ಣನಂತೆ ನಿಮ್ಮ ಮಕ್ಕಳು ದಾರಿ ತಪ್ಪಬಾರದು ಅಂದ್ರೆ ಹೀಗೆ ಮಾಡಿ...
ದೇಶ ವಿದೇಶದಲ್ಲಿ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಮನುಕುಲವೇ ತಲೆ ತಗ್ಗಿಸುವಂತಹ ಈ ಕೃತ್ಯಕ್ಕೆ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶ ವಿದೇಶದಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ. ಮಾದ್ಯಮಗಳಲ್ಲಿ ನಿತ್ಯ ಇದೇ ಸುದ್ದಿಗಳು ಹರಿದಾಡುತ್ತಿದ್ದು ಜನ ಬೆಚ್ಚಿ ಬಿದ್ದಿದ್ದಾರೆ. ಅದೆಷ್ಟೋ ಜನ ಪ್ರಜ್ವಲ್ ರೇವಣ್ಣ ವಿಚಾರ ಪ್ರಸಾರ ಆದರೆ ಸಾಕು ಟಿವಿ ಆಫ್ ಮಾಡುತ್ತಿದ್ದಾರೆ.
ಅದಾಗ್ಯೂ ಸಾಮಾಜಿಕ ಮಾದ್ಯಮಗಳಲ್ಲಿ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿದ್ದು ಪೋಷಕರು ತಮ್ಮ ಮಕ್ಕಳ ಬಗ್ಗೆ ಆತಂಕಗೊಂಡಿದ್ದಾರೆ. ಮಕ್ಕಳು ಇಂಥಹ ದೃಶ್ಯಗಳನ್ನು ನೋಡಿದರೆ ಅವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುವ ಭಯ ಆವರಿಸಿದೆ. ವಿಡಿಯೋವನ್ನು ನೋಡಿದ ಅದೆಷ್ಟೋ ಪೋಷಕರು ತಮ್ಮ ಮಕ್ಕಳು ಇಂಥಹ ಅಡ್ಡ ದಾರಿ ಹಿಡಿಯುವುದು ಬೇಡ ಅಂತ ಆ ದೇವರನ್ನ ಬೇಡಿಕೊಳ್ಳುತ್ತಿದ್ದಾರೆ.
ನಿಮಗೂ ಹೀಗೇ ಅನಿಸಿದ್ದರೆ ನಿಮ್ಮ ಮಕ್ಕಳ ಬಗ್ಗೆ ನೀವು ಕೆಲ ವಿಚಾರದಲ್ಲಿ ಕಾಳಜಿ ಹಾಗೂ ಜಾಗೃತ ವಹಿಸಲೇಬೇಕು. ಹಾಗಾದರೆ ಪ್ರಜ್ವಲ್ ರೇವಣ್ಣನಂತೆ ನಿಮ್ಮ ಮಕ್ಕಳು ದಾರಿ ತಪ್ಪಬಾರದು ಅಂದ್ರೆ ಏನು ಮಾಡಬೇಕು? ನಿಮ್ಮ ಮಕ್ಕಳ ಬಗ್ಗೆ ನೀವು ಹೇಗೆ ಕಾಳಜಿ ವಹಿಸಬೇಕು ಅನ್ನೋದನ್ನು ತಿಳಿಯಿರಿ.
ನಿಮ್ಮ ಮಕ್ಕಳು ದಾರಿ ತಪ್ಪಬಾರದು ಅಂದ್ರೆ ಹೀಗೆ ಮಾಡಿ:

1. ಮಕ್ಕಳ ಕೈಯಲ್ಲಿ ಮೊಬೈಲ್
ನಿಮ್ಮ ಮಕ್ಕಳ ಬಳಿ ಮೊಬೈಲ್ ಫೋನ್ ಇದ್ದರೆ, ಅದರಲ್ಲಿ ಅವರು ಏನು ನೋಡುತ್ತಾರೆ? ಏನು ಮಾಡುತ್ತಾರೆನ್ನುವುದರ ಬಗ್ಗೆ ಆಗಾಗ ಪರಿಶೀಲಿಸಿ. ಒಂದು ವೇಳೆ ತಪ್ಪಾದ ಮಾಹಿತಿ ಅಥವಾ ಅಶ್ಲೀಲತೆಯ ಬಗ್ಗೆ ಅವರು ಆಸಕ್ತಿ ತೋರುತ್ತಿರುವುದು ನಿಮ್ಮ ಗಮನಕ್ಕೆ ಬಂದರೆ ಅದನ್ನು ತಡೆಯಲು ಪ್ರಯತ್ನಿಸಿ.
ಮೊಬೈಲ್ ಒಳ್ಳೆಯ ವಿಚಾರಗಳು ತಿಳಿಯಲು ಆಸಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಯಾಮಾರಿದರೆ ಕೆಟ್ಟ ವಿಷಯಗಳಿಗೂ ಅದು ಆಸಕ್ತಿಯನ್ನು ಹೆಚ್ಚಿಸಬಹುದು. ಹೀಗಾಗಿ ಮೊಬೈಲ್ ಫೋನ್ ನಿಮ್ಮ ಮಕ್ಕಳ ಕೈಯಲ್ಲಿ ಇದ್ದರೆ ಜಾಗರೂಕರಾಗಿರಿ. ಆಗಾಗ ಮೊಬೈಲ್ ಹಿಸ್ಟ್ರಿ ಅಥವಾ ಅವರು ಏನು ನೋಡುತ್ತಾರೆನ್ನುವುದರ ಬಗ್ಗೆ ಗಮನ ಹರಿಸಿ.
ನಿಮ್ಮ ಮಗು ಮೊಬೈಲ್ ಫೋನ್ ಹಿಡಿದು ನಿಮ್ಮಂದ ದೂರ ಇರಲು ಪ್ರಯತ್ನಿಸಿದರೆ ಇದನ್ನು ನಿರ್ಲಕ್ಷಿಸಬೇಡಿ. ಅವರು ನಿಮ್ಮಿಂದ ಏನೋ ಮುಚ್ಚುಡುತ್ತಿದ್ದಾರೆ ಎಂದು ಅನಿಸಿದರೆ ಅದನ್ನು ತಕ್ಷಣ ಪರಿಶೀಲಿಸಿ. ಮೊಬೈಲ್ ಹಿಡಿದುಕೊಂಡಾಗ ಅವರ ಹಾವಭಾವವನ್ನು ಗಮನಿಸಿ. ವ್ಯತ್ಯಾಸ ಕಂಡು ಬಂದರೆ ಅದನ್ನು ತಕ್ಷಣ ಪ್ರಶ್ನಿಸಿ.

2. ಸ್ನೇಹಿತರ ಬಳಗ
ಪ್ರತಿಯೊಬ್ಬರಿಗೂ ಸ್ನೇಹ ಅತ್ಯಾವಶ್ಯಕ. ದೊಡ್ಡವರಾಗಲಿ ಚಿಕ್ಕವರಾಗಲಿ ಸ್ನೇಹಿತರು ಇದ್ದೇ ಇರುತ್ತಾರೆ. ಆದರೆ ದೊಡ್ಡವರಿಗೆ ಸ್ನೇಹಿತರಿರುವುದಕ್ಕೂ ಮಕ್ಕಳಿಗೆ ಸ್ನೇಹಿತರು ಇರುವುದಕ್ಕೂ ತುಂಬಾ ವ್ಯತ್ಯಾಸವಿದೆ. ಮಕ್ಕಳಿಗೆ ಒಳ್ಳೆಯದು ಕೆಟ್ಟದರ ಅರಿವು ಇದ್ದರೂ ಸ್ನೇಹದಿಂದಾಗಿ ಕೆಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
ಯಾಕೆಂದರೆ ಮಕ್ಕಳು ಮನೆಯಲ್ಲಿ ಇರುವುದಕ್ಕಿಂತ ಶಾಲಾ-ಕಾಲೇಜುಗಳಲ್ಲಿ ಇರುವುದು ಹೆಚ್ಚು. ಈ ವೇಳೆ ಅವರು ಸ್ನೇಹಿತರೊಂದಿಗೆ ಹೆಚ್ಚಾಗಿ ಕಾಲ ಕಳೆಯುತ್ತಾರೆ. ಸ್ನೇಹಿತರು ಏನು ಮಾಡುತ್ತಾರೆ? ಏನು ಆಡುತ್ತಾರೆ? ಹೇಗೆ ಮಾತನಾಡುತ್ತಾರೆ? ಎಲ್ಲಿಗೆ ಹೋಗುತ್ತಾರೆ? ಯಾವುದನ್ನು ಇಷ್ಟ ಪಡುತ್ತಾರೆ ಎಲ್ಲವನ್ನೂ ಮಕ್ಕಳು ಅನುಸರಿಸುತ್ತಾರೆ. ಹೀಗಾಗಿ ನಿಮ್ಮ ಮಕ್ಕಳ ಸುತ್ತಲು ಇರುವ ಸ್ನೇಹಿತರ ಬಗ್ಗೆ ಕೂಡ ನೀವು ಗಮನ ಹರಿಸಬೇಕು.
ಬಹುತೇಕ ಪೋಷಕರಿಗೆ ನಾವು ಶಾಲಾ-ಕಾಲೇಜುಗಳಿಗೆ ಹೋಗುವುದಿಲ್ಲ, ಹೀಗಿರುವಾಗ ನಮ್ಮ ಮಕ್ಕಳ ಕೆಟ್ಟ ಸ್ನೇಹಿತರನ್ನು ಗುರುತಿಸುವುದು ಹೇಗೆ ಎನ್ನುವ ಪ್ರಶ್ನೆ ಕಾಡಬಹುದು. ಮಕ್ಕಳನ್ನು ತುಂಬಾ ಹತ್ತಿರದಿಂದ ಬಲ್ಲವರಿಗೆ ಇದನ್ನು ಕಂಡು ಹಿಡಿಯುವುದು ಕಷ್ಟವಾಗುವುದಿಲ್ಲ. ಮಕ್ಕಳು ಯಾರ ಬಗ್ಗೆ ನಿಮ್ಮ ಬಳಿ ಹೆಚ್ಚು ಹೇಳಿಕೊಳ್ಳುತ್ತಾರೆ ಅವರ ಬಗ್ಗೆ ನಿಮಗೆ ಗೊತ್ತಿರಬೇಕು. ಮಕ್ಕಳು ಹೇಳಿಕೊಳ್ಳದೇ ಇದ್ದಾಗ ನೀವು ಅವರನ್ನು ಪ್ರಶ್ನೆ ಮಾಡಿ ಅವರ ಸ್ನೇಹಿತರ ಬಗ್ಗೆ ತಿಳಿದುಕೊಳ್ಳಬೇಕು. ನಿಮ್ಮ ಮಕ್ಕಳ ಮಾತು, ನಡೆ, ನೋಟದಲ್ಲೇ ನಿಮ್ಮ ಮಕ್ಕಳು ಎಂಥವರೊಂದಿಗೆ ಸಹವಾಸ ಮಾಡಿದ್ದಾರೆನ್ನುವುದನ್ನು ಕಂಡು ಹಿಡಿಯಬಹುದು.

3. ಮಕ್ಕಳ ನಡೆ-ನುಡಿ
ಮಕ್ಕಳು ಮಾತು ಕಲಿಯುವ ಹಂತದಲ್ಲಿ ತಪ್ಪು ಮಾತನಾಡುವುದು ಸಹಜ. ಆದರೆ ಮಾತನಾಡಲು ಬರುವಾಗ ಅವರು ತಪ್ಪಾಗಿ ಮಾತನಾಡಿದರೆ ಅದು ಅವರ ಮೇಲೆ ಇನ್ನಿತರ ಮಾತು ಪ್ರಭಾವ ಬೀರಿದೆ ಅಂತಲೇ ಅರ್ಥ. ನಿಮ್ಮ ಮಕ್ಕಳು ನೆರೆಹೊರೆಯವರೊಂದಿಗೆ ಆಟ ಆಡುವಾಗ ಅವರ ಬಾಯಿಯಿಂದ ಸಹಜವಾಗಿ ಕೆಲ ಕೆಟ್ಟ ಮಾತುಗಳು ಬರುತ್ತವೆ. ಅದು ಬಳಕೆಗೆ ಅರ್ಹವಲ್ಲ ಅಂತಾದರೆ ನಿಮ್ಮ ಮಕ್ಕಳಿಗೆ ಬುದ್ದಿ ಹೇಳಿ. ಅಂಥಹ ಪದಗಳನ್ನು ಬಳಕೆ ಮಾಡದಂತೆ ತಡೆಯಿರಿ. ಬೇರೆಯವರು ಮಾತನಾಡುತ್ತಾರೆಂದು ನಿಮ್ಮ ಮಕ್ಕಳು ಅದೇ ರೀತಿ ಕೆಟ್ಟ ಶಬ್ದಗಳನ್ನು ಬಳಕೆ ಮಾಡಿದರೆ ಅಂಥಹ ಸ್ನೇಹಿತರಿಂದ ನಿಮ್ಮ ಮಕ್ಕಳನ್ನು ದೂರವಿಡಿ.
ಇನ್ನೂ ನಿಮ್ಮ ಮಕ್ಕಳು ಯಾರನ್ನಾದರೂ ಅಧಿಕವಾಗಿ ಅನುಸರಿಸುತ್ತಿದ್ದರೆ ಅದರ ಬಗ್ಗೆ ಕೂಡ ನೀವು ಜಾಗರೂಕರಾಗಿರಬೇಕು. ಕೆಲವೊಮ್ಮೆ ಮಕ್ಕಳು ಸಿನಿಮಾ ತಾರೆಯರನ್ನು, ರಾಜಕಾರಣಿಗಳನ್ನ ಹಾಗೂ ಕ್ರೀಡಾಪಟುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಅವರಂತೆ ಇರಲು, ಮಾತನಾಡಲು ಬಯಸುತ್ತಾರೆ. ಅಷ್ಟೇ ಅಲ್ಲದೆ ಅವರ ಫೋಟೋಗಳನ್ನು ತಮ್ಮ ಬಳಿ ಇಷ್ಟುಕೊಳ್ಳುತ್ತಾರೆ.
ತಮ್ಮ ನೆಚ್ಚಿನ ನಟ-ನಟಿಯರ ಸಿನಿಮಾ ಯಾವುದೇ ಆಗಿರಲಿ ಅದನ್ನು ನೋಡದೇ ಇರುವುದಿಲ್ಲ. ಆದರೆ ಮಕ್ಕಳು ಇಷ್ಟಪಡುವ ಈ ವ್ಯಕ್ತಿಗಳಿಂದ ತಪ್ಪು ನಡೆದಾಗಲೂ ಅವರು ಆ ಬಗ್ಗೆ ಹೆಚ್ಚು ತಿಳಿಯಲು ಆಸಕ್ತಿ ತೋರುತ್ತಾರೆ. ಇದು ಮಕ್ಕಳ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರಬಹುದು. ಈ ಬಗ್ಗೆ ಪೋಷಕರು ಹೆಚ್ಚು ಜಾಗರೂಕರಾಗಿರಬೇಕು.

4. ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ತಿಳಿವಳಿಕೆ
ಬಾಲ್ಯವನ್ನು ಪೂರ್ಣಗೊಳಿಸಿದ ಬಳಿಕ ಮಕ್ಕಳಿಗೆ ಕೆಲ ಸೂಕ್ಷ್ಮ ವಿಚಾರಗಳನ್ನು ಪೋಷಕರು ಮುಕ್ತವಾಗಿ ಹೇಳಿ ತಿಳಿಸಬೇಕಾಗುತ್ತದೆ. ಗಂಡಾಗಲಿ ಹೆಣ್ಣಾಗಲಿ ಆ ಮಕ್ಕಳಿಗೆ ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ತಿಳಿವಳಿಕೆ ಮೂಡಿಸುವುದು ಪೋಷಕರ ಜವಬ್ದಾರಿ. ಮಕ್ಕಳಿಗೆ ಮುಟ್ಟುವ ವಿಚಾರದಲ್ಲಿ ಅರಿವು ಇರುವುದಿಲ್ಲ. ಮಕ್ಕಳು ತಮ್ಮ ಸಹಪಾಠಿಗಳೊಂದಿಗೆ ಮಾತ್ರವಲ್ಲದೆ ಬೇರೆಯವರೊಂದಿಗೆ ಮಾತನಾಡುತ್ತಾರೆ ಬೆರೆಯುತ್ತಾರೆ. ಆಗ ಅವರಿಗೆ ಯಾರಾದರೂ ಕೆಟ್ಟದಾಗಿ ಮುಟ್ಟಿದರೆ ಅದರ ತಿಳುವಳಿಕೆ ಇರಬೇಕಾಗುತ್ತದೆ.
ಮಕ್ಕಳೊಂದಿಗೆ ಯಾರಾದರ ಕೆಟ್ಟ ವಿಚಾರಗಳ ಬಗ್ಗೆ ಮಾತನಾಡಬಹುದು. ಅವರ ಮನ ಪರಿವರ್ತನೆಗೆ ಪ್ರಯತ್ನಿಸಬಹುದು. ಅದನ್ನು ಪೋಷಕರು ಮಕ್ಕಳಿಗೆ ಮೊದಲೇ ತಿಳಿಸಿದ್ದರೆ ಉತ್ತಮ. ಇದರಿಂದ ಮಕ್ಕಳು ಅಂಥವರಿಂದ ಅಂತರ ಕಾಯ್ದುಕೊಳ್ಳುತ್ತಾರೆ. ನಿಮ್ಮ ಮಕ್ಕಳು ತಮ್ಮ ಸಹಪಾಠಿಗಳಲ್ಲದೆ ಯಾರೊಂದಿಗಾದರೂ ಹೆಚ್ಚು ಬೆರೆಯುತ್ತಿದ್ದರೆ, ಹೆಚ್ಚು ಮಾತನಾಡಲು ಬಯಸುತ್ತಿದ್ದರೆ ಅದನ್ನು ನಿರ್ಲಕ್ಷಿಸಲೇಬೇಡಿ. ನಿಮ್ಮ ಮಕ್ಕಳ ಆಸಕ್ತಿಗಳು ಆಟ-ಪಾಠ, ಕಲಿಕೆ ಹೊರತಾಗಿ ಬೇರೆಡೆ ಇದ್ದರೆ ಅದಕ್ಕೆ ಕಡಿವಾಣ ಹಾಕಿ.

5. ಲೈಂಗಿಕ ಶಿಕ್ಷಣ
ಮುಂದುವರೆದ ಕಾಲಮಾನದಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ಮುಖ್ಯವಾಗಿದೆ. ಅವರು ಎಲ್ಲೋ ಏನೋ ನೋಡಿ ಅದರ ಬಗ್ಗೆ ತಪ್ಪಾಗಿ ಅರ್ಥೈಸಿಕೊಂಡು ತಪ್ಪು ಮಾಡುವ ಮುನ್ನ ಶಾಲೆಯಲ್ಲಿ ಲೈಂಗಿಕ ಶಿಕ್ಷಣ ನೀಡಿದರೆ ಮಕ್ಕಳು ದಾರಿ ತಪ್ಪುವುದನ್ನು ತಡೆಯಬಹುದು. ಜೊತೆಗೆ ಅದರಿಂದ ಮಕ್ಕಳು ಹಾಲಾಗುವುದನ್ನು ತಡೆದಂತಾಗುತ್ತದೆ.
ಆದರೆ ಈ ಕಾಲದಲ್ಲಿ ಲೈಂಗಿಕ ಶಿಕ್ಷಣ ನೀಡುವವರು ಹೇಗಿರುತ್ತಾರೋ? ಏನೋ? ಮಕ್ಕಳಿಗೆ ಗೊತ್ತಿಲ್ಲದ ವಿಷಯಗಳನ್ನು ನಾವೇ ಅವರ ಮುಂದೆ ಪ್ರಸ್ತಾಪಿಸಿ ಆಸಕ್ತಿ ಹೆಚ್ಚಿಸಿದಂತಾಗುತ್ತದೆ ಎಂದು ಮಕ್ಕಳಿಗೆ ಲೈಂಗಿಕ ಶಿಕ್ಷಣದ ಅವಶ್ಯಕತೆ ಇಲ್ಲ ಎನ್ನುವುದು ಕೆಲವರ ವಾದ. ಅದರೆ ಲೈಂಗಿಕ ಶಿಕ್ಷಣ ಮಕ್ಕಳು ಓದುವ ಸ್ಥಳ, ಅವರ ಸ್ನೇಹಿತರ ಬಳಕ, ಅವರ ಕೈಯಲ್ಲಿರುವ ಮೊಬೈಲ್ ಇನ್ನಿತರ ಸಾಧನಗಳ ಮೇಲೆ ಅವಲಂಭಿತವಾಗಿದೆ. ಮಕ್ಕಳು ಸಣ್ಣ ವಯಸ್ಸಿನಲ್ಲಿ ಎಲ್ಲವನ್ನೂ ತಿಳಿದುಕೊಳ್ಳಬೇಕು ಎನ್ನುವ ಪೋಷಕರು ನಮ್ಮ ನಡುವೆ ಇದ್ದಾರೆ. ಹೀಗಾಗಿ ಲೈಂಗಿಕ ಶಿಕ್ಷಣ ಮಕ್ಕಳ ಜೀವನ ಶೈಲಿಯ ಮೇಲೆ ಅವಲಂಬಿತವಾಗಿದೆ.

6. ಆರೋಗ್ಯಕಾರಿ ಲೈಂಗಿಕತೆ ಕುರಿತು ಮುಕ್ತ ಚರ್ಚೆ
ನಿಮ್ಮ ಮಗು ಐಷಾರಾಮಿ ಶಾಲಾ-ಕಾಲೇಜುಗಳಲ್ಲಿ ಓದುತ್ತಿದ್ದರೆ, ಅಲ್ಲಿನ ಮಕ್ಕಳು ಕೆಲ ಸೂಕ್ಷ್ಮ ವಿಚಾರಗಳನ್ನು ತಿಳಿದವರಾಗಿದ್ದರೆ ಅಥವಾ ಕೆಲ ವಿಷಯಗಳನ್ನು ನಿಮ್ಮ ಮಕ್ಕಳಿಗೆ ಹೇಳಲೇಬೇಕು ಎಂದೆನಿಸಿದರೆ ಅದನ್ನು ಮನದಲ್ಲಿಟ್ಟುಕೊಳ್ಳಬೇಡಿ. ಬೇರೆಯವರು ನಿಮ್ಮ ಮಕ್ಕಳಿಗೆ ಏನೋ ಹೇಳಿ ಕಲಿಸುವ ಮುನ್ನ ನೀವು ನಿಮ್ಮ ಮಕ್ಕಳಿಗೆ ಲೈಂಗಿಕ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿ.
ಜೊತೆಗೆ ಅಂಥಹ ವಿಷಯಗಳ ಬಗ್ಗೆ ನಿಮ್ಮ ಮಗು ನಿಮ್ಮನ್ನು ಕೇಳಿದಾಗ ಅಥವಾ ಮಾತನಾಡಿದಾಗ ಗದರಬೇಡಿ. ಅದು ನಿಮ್ಮ ಮಕ್ಕಳ ಮೇಲೆ ಪರಿಣಾಮ ಬೀರಬಹುದು. ಅಥವಾ ಅದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯನ್ನೂ ಹೆಚ್ಚಿಸಬಹುದು. ಆರೋಗ್ಯಕಾರಿ ಲೈಂಗಿಕತೆಯ ಬಗ್ಗೆ ನಿಮ್ಮ ಮಕ್ಕಳೊಂದಿಗೆ ಮುಕ್ತವಾಗಿ ಚರ್ಚೆ ಮಾಡಿ.

7. ಮಕ್ಕಳನ್ನು ಹೆಚ್ಚು ಬಂಧಿಸಬೇಡಿ
ಮಕ್ಕಳು ಹಾಳಾಗುವುದನ್ನು ಸಾಮಾನ್ಯವಾಗಿ ಯಾವ ಪೋಷಕರು ಸಹಿಸುವುದಿಲ್ಲ. ಹೀಗಾಗಿ ಪೋಷಕರು ಮಕ್ಕಳ ಸುತ್ತಲು ಕೆಲ ಬಂಧನದ ಬೇಲಿ ಹಾಕಿ ಬಿಡುತ್ತಾರೆ. ಮಕ್ಕಳು ಏನೇ ಮಾಡಿದರೂ ಅದನ್ನು ತಡೆಯುತ್ತಾರೆ. ಅದರ ಬಗ್ಗೆ ಭಯ ಹುಟ್ಟಿಸುತ್ತಾರೆ. ಮಕ್ಕಳಿಗೆ ಓದು, ಕಲಿಕೆ, ಆಟ ಬಿಟ್ಟರೆ ಬೇರೆದರ ಕಡೆ ಗಮನ ಹರಿಸಲಾಗಲಿ ಅಥವಾ ಬೇರೆದರ ಬಗ್ಗೆ ತಿಳಿದುಕೊಳ್ಳಲಾಗಲಿ ಬಿಡುವುದಿಲ್ಲ.
ಆದರೆ ಈ ತಪ್ಪನ್ನು ಯಾವ ಪೋಷಕರು ಮಾಡಬಾರದು. ನಿಮ್ಮ ಮಕ್ಕಳು ಮಾಡುವ ಕೆಲಸ ಒಳ್ಲೆದೇ ಆಗಿದ್ದರೆ ಅವರೊಂದಿಗೆ ನೀವು ನಿಂತುಕೊಳ್ಳಿ. ಅವರಿಗೆ ಸಹಾಯ ಮಾಡಿ. ಅವರು ಮಾಡುವ ಕೆಲಸಗಳ ಬಗ್ಗೆ ಕಣ್ಣಿಟ್ಟಿರಿ. ಅವರೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ. ಮನೆ ಕಲಿಯಲ್ಲೇ ಮಕ್ಕಳನ್ನು ನಿರ್ಬಂಧಿಸಬೇಡಿ.

8. ಮಕ್ಕಳ ಮುಂದೆ ಪೋಷಕರು ಹೇಗಿರಬೇಕು?
ಸಾಮಾನ್ಯವಾಗಿ ಬಹುತೇಕ ಪೋಷಕರು 'ತಿನ್ನುವುದು ಬದನೆಕಾಯಿ ಹೇಳುವುದು ಶಾಸ್ತ್ರ' ಎನ್ನುವಂತಿರುತ್ತಾರೆ. ಮಕ್ಕಳಿಗೆ ಮಾಡಬೇಡ ಎನ್ನುವುದನ್ನೆಲ್ಲವೂ ಪೋಷಕರು ಮಕ್ಕಳ ಮುಂದೆ ಮಾಡುತ್ತಿರುತ್ತಾರೆ. ಕೆಲಸ ಮುಗಿಸಿ ಮನೆಗೆ ಬಂದಾಗಲೂ ಮಕ್ಕಳ ಮುಂದೆ ಮೊಬೈಲ್ ಹಿಡಿದುಕೊಂಡು ಕುಳಿತುಕೊಳ್ಳುವುದು. ಅವರ ಮುಂದೆ ಕೆಲ ಕೆಟ್ಟ ಶಬ್ದಗಳನ್ನು ಬಳಕೆ ಮಾಡುವುದು. ಮಕ್ಕಳ ಮುಂದೆ ಕೆಟ್ಟ ದೃಶ್ಯಗಳನ್ನು ನೋಡುತ್ತಾರೆ. ಸದಾ ಜಗಳವಾಡುವುದು. ಇವೆಲ್ಲವೂ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.
ಹೀಗಾಗಿ ಮನೆಯಲ್ಲಿದ್ದಾಗ ವಿಶೇಷವಾಗಿ ಮಕ್ಕಳು ನಿಮ್ಮ ಜೊತೆಗೆ ಇದ್ದಾಗ ಮಕ್ಕಳೊಂದಿಗೆ ಕಾಲ ಕಳೆಯಿರಿ. ಇದರಿಂದ ಅವರಿಗೂ ಖುಷಿ ಆಗುತ್ತದೆ. ನಿಮ್ಮ ಮನಸ್ಸು ಹಗುರವಾಗುತ್ತದೆ. ಕೆಲಸ ಒತ್ತಡದಿಂದ ನೀವು ಕೂಡ ದೂರವಾಗಬಹುದು. ಅದಾಗ್ಯೂ ನಿಮಗೆ ಕೆಲಸದ ಒತ್ತಡದಿಂದಾಗಿ ಮೊಬೈಲ್ ಹಿಡಿದುಕೊಳ್ಳುವ ಅನಿವಾರ್ಯತೆ ಎದುರಾದರೆ ಅದನ್ನು ನಿಮ್ಮ ಮಕ್ಕಳ ಮುಂದೆ ಮುಕ್ತವಾಗಿ ಪ್ರಸ್ತಾಪಿಸಿ. ಅವರಿಗೆ ಕ್ಷೆಮೆ ಕೇಳಿ ನಿಮ್ಮ ಕೆಲಸ ಮಾಡಿ. ಯಾಕೆಂದರೆ ನಿಮ್ಮ ಮಕ್ಕಳು ಪೋಷಕರು ಮಾಡು ಕೆಲಸಗಳನ್ನೇ ಹೆಚ್ಚು ಅನುಸರಿಸುತ್ತಾರೆ. ಹೀಗಾಗಿ ಮನೆಯಲ್ಲಿ ಮಕ್ಕಳಿರುವಾಗ ಜಾಗರೂಕರಾಗಿರಿ.

9. ಮಕ್ಕಳ ಆಸಕ್ತಿ ತಿಳಿಯಿರಿ
ಮಕ್ಕಳಿಗೆ ಎಲ್ಲವನ್ನು ನಿಮ್ಮ ಮುಂದೆ ಮುಕ್ತವಾಗಿ ಹಂಚಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಿ. ಎಲ್ಲದಕ್ಕೂ ನಿರ್ಬಂಧಿಸಬೇಡಿ. ಅವರ ಆಸಕ್ತಿಗನುಗುಣವಾಗಿ ಅವರನ್ನು ಬೆಳೆಯಲು ಬಿಡಿ. ಅವರು ಏನಾದರೂ ಹೇಳಲು ಬಂದಾಗ ಗದರಿಸಬೇಡಿ. ತಕ್ಷಣ ಮಕ್ಕಳು ಕೇಳುವುದನ್ನು ಕಡೆಗಣಿಸಬೇಡಿ. ಮಕ್ಕಳ ಆಸಕ್ತಿಗೆ ಬೆಲೆ ಕೊಡಿ. ಅವರ ಆಸೆಗಳು ಮಿತಿಯಲ್ಲಿದ್ದರೆ ಈಡೇರಿಸಿ.
ಎಲ್ಲಾ ಮಕ್ಕಳಂತೆ ಅವರನ್ನು ಮುಕ್ತವಾಗಿ ಬೆಳೆಯುವಂತೆ ನೋಡಿಕೊಳ್ಳಿ. ಅವರು ಆಟ, ಪಾಠ, ಹಾಡು, ನೃತ್ಯದಂತಹ ಚಟುವಟಿಕೆಗಳಲ್ಲಿ ತೊಡಗುವಂತೆ ನೋಡಿಕೊಳ್ಳಿ. ಹಿಂಜರಿಕೆ ಭಯ ಮುಜುಗರ ಇದ್ದರೆ ಅದನ್ನು ಮಕ್ಕಳಿಂದ ದೂರ ಮಾಡಿ. ನಿಮ್ಮ ಮಕ್ಕಳಿಗೆ ಧೈರ್ಯ ತುಂಬಿ. ಮುನ್ನುಗ್ಗುವ ಶಕ್ತಿ ನೀವಾಗಬೇಕು.

10. ಮಕ್ಕಳೊಂದಿಗೆ ಪ್ರವಾಸ
ನಿಮ್ಮ ಮಕ್ಕಳೊಂದಿಗೆ ನೀವು ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳಬೇಡಿ. ಇದು ಮಕ್ಕಳಿಗೆ ಬೇಸರ ತರಬಹುದು. ಅವರು ಬೇರೆ ಮಕ್ಕಳನ್ನು ನೋಡಿ ತಾವು ಕೂಡ ಅವರಂತೆ ಇರಬೇಕು ಎನ್ನುವ ಮನಸ್ಸಾಗಿ ಹತಾಶರಾಗಬಹುದು. ಹೀಗಾಗಿ ಅವರೊಂದಿಗೆ ನಿಮ್ಮ ಬಿಡುವಿನ ಸಮಯವನ್ನು ಕಳೆಯುವುದು ಉತ್ತಮ.
ಬಿಡುವು ಮಾಡಿಕೊಂಡು ಪ್ರವಾಸಕ್ಕೆ ಹೋಗಿ. ಅಲ್ಲಿರುವಷ್ಟು ಸಮಯ ನಿಮ್ಮ ಮಕ್ಕಳೊಂದಿಗೆ ಕಳೆಯಿರಿ. ನಿಮ್ಮ ಹಾಗೂ ನಿಮ್ಮ ಮಕ್ಕಳ ಮನಸ್ಸು ಕೂಡ ಒತ್ತಡದಿಂದ ಹೊರಬರಲು ಸಾಧ್ಯವಾಗುತ್ತದೆ. ಅವರೊಂದಿಗೆ ಆಟ ಆಡಿ, ಅವರೊಂದಿಗೆ ಉತ್ತಮ ಸಮಯ ಕಳೆಯಿರಿ. ಅವರನ್ನು ಪ್ರವಾಸ, ಉತ್ತಮ ಸ್ಥಳಗಳಿಗೆ ಕರೆದುಕೊಂಡು ಹೋಗಿ. ಇದು ನಿಮ್ಮ ಹಾಗೂ ನಿಮ್ಮ ಮಕ್ಕಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.

11. ಮನೋರೋಗ ತಜ್ಞರನ್ನು ಸಂಪರ್ಕಿ
ಮಕ್ಕಳು ದಾರಿ ತಪ್ಪುವುದು ಸಹಜ. ಆದರೆ ಪೋಷಕರು ತಿಳಿ ಹೇಳಬೇಕಾಗುತ್ತದೆ. ಮಕ್ಕಳು ನಿಮ್ಮ ಮಾತು ಕೇಳದೇ ಇದ್ದಲ್ಲಿ ಸಮಸ್ಯೆಯನ್ನು ತಾಳ್ಮೆಯಿಂದ ಪತ್ತೆ ಹಚ್ಚಬೇಕು. ಮಕ್ಕಳ ವಿಚಾರದಲ್ಲಿ ದುಡುಕಿ ನಿರ್ಧಾರಗಳನ್ನ ತೆಗೆದುಕೊಳ್ಳಬೇಡಿ. ಅವರ ಮೇಲೆ ಪ್ರತೀ ಬಾರಿ ಕೈ ಮಾಡಲು ಮುಂದಾಗಬೇಡಿ.
ಮಕ್ಕಳಲ್ಲಿ ಅನೈಸರ್ಗಿಕ ಲೈಂಗಿಕ ವರ್ತನೆಗಳು ಕಂಡುಬಂದಲ್ಲಿ ಮನೋರೋಗ ತಜ್ಞರನ್ನು ಸಂಪರ್ಕಿಸಿ. ವೈದ್ಯರ ಸಲಹೆಯಂತೆ ಮಕ್ಕಳನ್ನು ನೋಡಿಕೊಳ್ಳಿ. ಹೀಗೆ ನೀವು ನಿಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಿದಲ್ಲಿ ನಿಮ್ಮ ಮಕ್ಕಳನ್ನು ದೇಶದ ಉತ್ತಮ ಪ್ರಜೆಯನ್ನಾಗಿ ಮಾಡಬಹುದು. ಅಲ್ಲದೆ ಇತರರಿಗೆ ಮಾದರಿಯಾಗಿ ಬೆಳೆಸಬಹುದು.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications