ಮಹಿಳೆಯರ ಕೋಪ, ಕಿರಿಕಿರಿಗೆ PMS ಸಹ ಪ್ರಮುಖ ಕಾರಣ, ಏನಿದು ?
PMS: ಮಹಿಳೆಯರು ಹಾಗೂ ಯವತಿಯರು ಆಗಾಗ ಕೋಪ ಮಾಡಿಕೊಳ್ಳುವುದು. ಟೆಕ್ಷನ್ ಆಗುವುದು ಮತ್ತು ಸಣ್ಣ ಸಣ್ಣ ವಿಷಯಗಳಿಗೂ ಕಿರಿಕಿರಿಗೆ ಒಳಗಾಗುವುದು ಇದೆ. ಆದರೆ ಇದರ ಹಿಂದೆ ದೇಹದಲ್ಲಿ ಆಗುವ ಪ್ರಮುಖ ಬದಲಾವಣೆಯೇ ಕಾರಣ. ಮಹಿಳೆಯರು ಸಾಮಾನ್ಯವಾಗಿ ಕೋಪ ಮಾಡಿಕೊಳ್ಳುವುದು ಹಾಗೂ ಕಿರಿಕಿರಿಗೆ ಒಳಗಾವುದಕ್ಕೆ ಪ್ರಮುಖ ಕಾರಣಗಳಲ್ಲಿ Premenstrual syndrome (PMS) ಸಹ ಒಂದಾಗಿದೆ. ಸಾಮಾನ್ಯವಾಗಿ ಬಹುತೇಕ ಮಹಿಳೆಯರಲ್ಲಿ ಮಾಸಿಕ ಋತುಚಕ್ರದ ಸಮಯದಲ್ಲಿ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ಕಾಣಿಸಿಕೊಳ್ಳುತ್ತದೆ. ಈ ರೀತಿ ಆದಾಗ ಮಹಿಳೆಯರು ಅವರಿಗೇ ಅರಿವಿಲ್ಲದಂತೆ ರಿಯಾಕ್ಟ್ ಮಾಡುವುದು ಇದೆ.
ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ (PMS) ಎನ್ನುವುದು ಮುಟ್ಟಿಗಿಂತ ಮುಂಚಿನ ದಿನಗಳಲ್ಲಿ ಸಂಭವಿಸುವ ದೈಹಿಕ ಮತ್ತು ಭಾವನಾತ್ಮಕ ಲಕ್ಷಣವಾಗಿದೆ. ಸರಳವಾಗಿ ಅಥವಾ ಮತ್ತೊಂದು ಅರ್ಥವೆಂದರೆ ಮೂಡ್‌ಸ್ವಿಂಗ್ ಎನ್ನಬಹುದು. ಮುಟ್ಟಾಗುವ ಎಲ್ಲರಲ್ಲೂ PMS ಪರಿಣಾಮ ಬೀರುವುದಿಲ್ಲ. ಆದರೆ, ಕೆಲವರಲ್ಲಿ ಈ ಸಮಸ್ಯೆ ಪ್ರತಿ ತಿಂಗಳೂ ಕಾಣಿಸಿಕೊಳ್ಳುತ್ತದೆ. ಹಾಗಾದರೆ ಈ ಸಮಸ್ಯೆಯ ಲಕ್ಷಣಗಳು ಏನು, ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಏನು ಮಾಡಬೇಕು ಹಾಗೂ ಇದರ ಪರಿಹಾರವೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ಲಕ್ಷಣಗಳು: ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ಎನ್ನುವುದು ದೈಹಿಕ ಹಾಗೂ ಮಾನಸಿಕ ಕಿರಿಕಿರಿಯನ್ನು ಉಂಟು ಮಾಡುತ್ತದೆ. ತೂಕ ಹೆಚ್ಚಾಗುವುದು, ಮೊಡವೆ, ತಲೆನೋವು, ಕೀಲು ನೋವು, ಬೆನ್ನು ನೋವು, ಮಲಬದ್ಧತೆ, ಅತಿಸಾರ ಅನುಭವಗಳು ಆಗುತ್ತವೆ. ಅಲ್ಲದೆ ಭಾವನಾತ್ಮಕ ಕಿರಿಕಿರಿ ಆಗುವುದು, ಸಣ್ಣ ಸಣ್ಣ ವಿಷಯಗಳಿಗೂ ಕೋಪ ಬರುವುದು. ಖಿನ್ನತೆ, ಆತಂಕ, ಅಳಬೇಕು ಎಂದು ಅನಿಸುವುದು. ನೆನಪಿನ ಶಕ್ತಿ ಕಡಿಮೆ ಆಗುವುದು. ಹಸಿವು ಆಗದೆ ಇರುವುದು ಸೇರಿದಂತೆ ಹಲವು ಅನುಭವಗಳು ಈ ಸಮಯದಲ್ಲಿ ಆಗುತ್ತವೆ.
ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್‌ಗೆ ಪರಿಹಾರ: ಸಾಮಾನ್ಯವಾಗಿ ಋತುಸ್ರಾವದ ಸಮಯದಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ರೀತಿ ಆಗುವುದನ್ನು ತಪ್ಪಿಸುವುದಕ್ಕೆ ನಿಯಮಿತವಾಗಿ ವ್ಯಾಯಾಮ ಮಾಡುವುದು. ಆರೋಗ್ಯಕರ ಆಹಾರ, ಉತ್ತಮ ನಿದ್ರೆ ಮತ್ತು ವಿಶ್ರಾಂತಿ ಪಡೆಯುವುದು ಅವಶ್ಯವಾಗಿದೆ. ಅಲ್ಲದೆ ಜೀವನಶೈಲಿಯಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.
ಕೆಲವೊಂದು ಔಷಧಿಗಳನ್ನು ನಿಯಮಿತವಾಗಿ ಸೇವಿಸಬಹುದು. ಅವುಗಳಲ್ಲಿ ಕ್ಯಾಲ್ಸಿಯಂ, ಮೆಗ್ನಾಸಿಯಮ್, ವಿಟಮಿನ್ ಬಿ 6, ಒಮೆಗಾ -3 ಮತ್ತು ಒಮೆಗಾ -6 ಸೇರಿವೆ. ಆದರೆ, ಈ ರೀತಿ ಔಷಧಿಗಳನ್ನು ಸೇವಿಸುವ ಮುನ್ನ ವೈದ್ಯರನ್ನು ಕಡ್ಡಾಯವಾಗಿ ಭೇಟಿ ಮಾಡಿ ಸಲಹೆಗಳನ್ನು ಪಡೆದುಕೊಳ್ಳಿ.
ಅರ್ಥ ಮಾಡಿಕೊಳ್ಳಿ: ಮುಟ್ಟಿನ ಮುಂಚಿನ ದಿನಗಳಲ್ಲಿ ಸಾಮಾನ್ಯವಾಗಿ ಅಂದರೆ ಮುಟ್ಟಿಗೆ 4ರಿಂದ 5 ದಿನಗಳ ಮುಂಚೆ ಈ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ಕಾಣಿಸಿಕೊಳ್ಳುತ್ತದೆ. ಆದರೆ, ಮೇಲೆ ಹೇಳಿದ ಎಲ್ಲಾ ಲಕ್ಷಣಗಳು ಎಲ್ಲರಲ್ಲೂ ಹಾಗೂ ಎಲ್ಲವೂ ಕಾಣಿಸಿಕೊಳ್ಳಲ್ಲ. ಕೆಲವೊಂದು ಸಮಸ್ಯೆಗಳು ಸಣ್ಣ ಪ್ರಮಾಣದಲ್ಲಿ ಇನ್ನೂ ಕೆಲವರಿಗೆ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ರೀತಿ ಸಮಸ್ಯೆ ಕಾಣಿಸಿಕೊಂಡರೆ ಅಗತ್ಯ ಮುಂಜಾಗ್ರತೆಯನ್ನು ವಹಿಸಿ. ಅಲ್ಲದೆ ಮನೆಯವರು ಮಹಿಳೆಯರು ಹಾಗೂ ಯುವತಿಯರ ಮೇಲೆ ಕೋಪಗೊಳ್ಳದೆ ಸಮಾಧಾನದಿಂದ ವರ್ತಿಸಿ.












Click it and Unblock the Notifications