Get Updates
Get notified of breaking news, exclusive insights, and must-see stories!

Mosquito Remedies: ನಿಮ್ಮ ಮನೆಯಲ್ಲಿ ಝುಯಿ... ಝುಯಿ.... ಶಬ್ದ ಮಾಡುತ್ತಾ ಸೊಳ್ಳೆ?

ಸೊಳ್ಳೆಗಳು ಕೀಟಗಳಲ್ಲಿ ಹೆಚ್ಚು ಕಿರಿಕಿರಿಯುಂಟುಮಾಡುತ್ತವೆ. ಜೊತೆಗೆ ಇದು ತುಂಬಾ ಅಪಾಯಕಾರಿಯೂ ಹೌದು. ಏಕೆಂದರೆ ಸೊಳ್ಳೆಗಳು ಜನರಲ್ಲಿ ಅನೇಕ ಅಪಾಯಕಾರಿ ರೋಗಗಳನ್ನು ಹರಡುತ್ತವೆ. ಸೊಳ್ಳೆಗಳ ಸಂತಾನೋತ್ಪತ್ತಿ ಸಾಮಾನ್ಯವಾಗಿ ಮಳೆಗಾಲದಲ್ಲಾದರೂ, ಬೇಸಿಗೆಯಲ್ಲೂ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ.

ನಿಮ್ಮ ಮನೆಯೂ ಸೊಳ್ಳೆಗಳಿಂದ ಮುತ್ತಿಕೊಂಡಿದ್ದರೆ, ಈ ಸೊಳ್ಳೆ ಸಮಸ್ಯೆ ಹೋಗಲಾಡಿಸಲು ಅಂಗಡಿಗಳಲ್ಲಿ ಮಾರುವ ಸೊಳ್ಳೆ ನಿವಾರಕ ಉತ್ಪನ್ನಗಳನ್ನು ಖರೀದಿಸಿ ನೀವೆಲ್ಲಾ ಬಳಕೆ ಮಾಡುತ್ತೀರಿ. ಆದರೆ ಇದನ್ನು ಮನೆಯಲ್ಲಿಟ್ಟರೆ ಸೊಳ್ಳೆಗಳು ಸಾಯುತ್ತವೆ ಅಥವಾ ಮನೆಬಿಟ್ಟು ಹೋಗುತ್ತದೆ ಎಂದು ನಿಮಗೆ ಅನಿಸಿರುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಅದನ್ನು ಬಳಸುವವರು ಮಾತ್ರ ಉಸಿರುಗಟ್ಟುವಿಕೆ ಮತ್ತು ಮೂಗು ಕಟ್ಟುವಿಕೆಯಂತಹ ಉಸಿರಾಟದ ತೊಂದರೆಗಳಿಂದ ಬಳಲಲುತ್ತಿರಬಹುದು.

mosquito remedies in kannada best and effective home remedies for mosquitoe

ನಿಮಗೆ ಉಸಿರಾಟದ ಸಮಸ್ಯೆಗಳಿದ್ದರೆ ಮತ್ತು ಸೊಳ್ಳೆ ನಿವಾರಕಗಳನ್ನು ಬಳಸಲು ಸಾಧ್ಯವಾಗದಿದ್ದರೆ ನೀವು ನೈಸರ್ಗಿಕ ಪರಿಹಾರಗಳನ್ನು ಪ್ರಯತ್ನಿಸಬಹುದು. ಏಕೆಂದರೆ ಕೆಲವು ನೈಸರ್ಗಿಕ ಪರಿಹಾರಗಳು ಸೊಳ್ಳೆಗಳು ಮನೆಯೊಳಗೆ ಬರದಂತೆ ತಡೆಯುವ ಶಕ್ತಿ ಹೊಂದಿವೆ. ಈಗ ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಮತ್ತು ನಿಯಂತ್ರಿಸಲು ಕೆಲವು ನೈಸರ್ಗಿಕ ವಿಧಾನಗಳನ್ನು ನೋಡೋಣ.

ಕರ್ಪೂರ

ಸೊಳ್ಳೆಗಳನ್ನು ನಿಯಂತ್ರಿಸಲು ಕರ್ಪೂರ ತುಂಬಾ ಸಹಾಯ ಮಾಡುತ್ತದೆ. ಸಂಜೆ ಮನೆಯ ಕಿಟಕಿ ಬಾಗಿಲು ಮುಚ್ಚಿ ಕರ್ಪೂರ ಹಚ್ಚಿ. ಇಲ್ಲವಾದಲ್ಲಿ ಕರ್ಪೂರವನ್ನು ನೀರಿನ ಪಾತ್ರೆಯಲ್ಲಿ ಹಾಕಿ ಮನೆಯ ಮೂಲೆಗಳಲ್ಲಿ ಇಡಿ. ಕರ್ಪೂರದ ವಾಸನೆ ಸೊಳ್ಳೆಗಳನ್ನು ಮನೆಯಲ್ಲಿ ಪ್ರವೇಶಿಸುವುದನ್ನು ತಡೆಯುತ್ತದೆ.

mosquito remedies in kannada best and effective home remedies for mosquitoe

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿರುವ ಸಲ್ಫರ್ ವಾಸನೆಯನ್ನು ಕೀಟಗಳು ಇಷ್ಟಪಡುವುದಿಲ್ಲ. ಮತ್ತು ಮನೆಯಲ್ಲಿ ಸೊಳ್ಳೆಗಳ ಕಾಟ ಜಾಸ್ತಿ ಇದ್ದಾಗ ಬೆಳ್ಳುಳ್ಳಿ ಎಸಳನ್ನು ಅರೆದು ನೀರಿನಲ್ಲಿ ಕುದಿಸಿ ಸ್ಪ್ರೇ ಬಾಟಲಿಯಲ್ಲಿ ಸುರಿದು ಸೊಳ್ಳೆಗಳು ಬರುವ ಕಡೆ ಸ್ಪ್ರೇ ಮಾಡಿ. ಇದರಿಂದಲೂ ಸೊಳ್ಳೆಗಳು ಬರುವುದಿಲ್ಲ.

ನಿಂಬೆ ಲವಂಗ

ಸೊಳ್ಳೆಗಳ ಸಮಸ್ಯೆಯನ್ನು ಸರಳ ರೀತಿಯಲ್ಲಿ ಪರಿಹರಿಸಬೇಕೆಂದರೆ ಮನೆಯಲ್ಲಿ ಅಡುಗೆ ಮನೆಯಲ್ಲಿರುವ ನಿಂಬೆಹಣ್ಣನ್ನು ತೆಗೆದುಕೊಂಡು ಅದನ್ನು ಎರಡಾಗಿ ಕತ್ತರಿಸಿ ಅದಕ್ಕೆ ಸ್ವಲ್ಪ ಲವಂಗವನ್ನು ಅಂಟಿಸಿ ಸೊಳ್ಳೆಗಳು ಪ್ರವೇಶಿಸುವ ಕಿಟಕಿ, ಬಾಗಿಲು ಮುಂತಾದ ಸ್ಥಳಗಳಲ್ಲಿ ಇರಿಸಿ. ಇದರಿಂದ ಸೊಳ್ಳೆಗಳು ಮನೆಯೊಳಗೆ ಬರುವುದಿಲ್ಲ.

ಕಾಫಿ ಪುಡಿ

ಮನೆಯ ಅಡುಗೆಮನೆಯಲ್ಲಿ ಕಾಫಿ ಪುಡಿ ಕೂಡ ಸೊಳ್ಳೆ ಸಮಸ್ಯೆಯನ್ನು ತಡೆಯಬಹುದು. ಅದಕ್ಕಾಗಿ ನಿಮ್ಮ ಮನೆಯ ಸುತ್ತ ನೀರು ನಿಂತ ಜಾಗಕ್ಕೆ ಕಾಫಿ ಪುಡಿಯನ್ನು ಉದುರಿಸಿ. ಇದು ಸೊಳ್ಳೆ ಮೊಟ್ಟೆಗಳನ್ನು ಮಾತ್ರವಲ್ಲದೆ ಇತರ ಕೀಟಗಳನ್ನು ಸಹ ಕೊಲ್ಲುತ್ತದೆ.

ಲ್ಯಾವೆಂಡರ್ ಎಣ್ಣೆ

ಸೊಳ್ಳೆಗಳು ಲ್ಯಾವೆಂಡರ್ ಎಣ್ಣೆಯ ವಾಸನೆಯನ್ನು ಇಷ್ಟಪಡುವುದಿಲ್ಲ. ಇದು ಉತ್ತಮ ಪರಿಮಳವನ್ನು ಹೊಂದಿರುತ್ತದೆ. ಹಾಗಾಗಿ ಸೊಳ್ಳೆಗಳು ಮನೆಯೊಳಗೆ ಬರದಂತೆ ತಡೆಯಲು ಲ್ಯಾವೆಂಡರ್ ಎಣ್ಣೆಯನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಸಿಂಪಡಿಸಿ. ಸೊಳ್ಳೆಗಳು ನಿಮ್ಮನ್ನು ಕಚ್ಚದಂತೆ ತಡೆಯಲು, ನಿಮ್ಮ ಚರ್ಮಕ್ಕೆ ಸ್ವಲ್ಪ ಲ್ಯಾವೆಂಡರ್ ಎಣ್ಣೆಯನ್ನು ಅನ್ವಯಿಸಿ.

ಪುದೀನಾ

ಸೊಳ್ಳೆಗಳು ಪುದೀನಾ ವಾಸನೆಯನ್ನು ಇಷ್ಟಪಡುವುದಿಲ್ಲ. ಹಾಗಾಗಿ ಮನೆಯಲ್ಲಿ ಪುದೀನಾ ಎಲೆಗಳಿದ್ದರೆ ಅವುಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ ಮನೆಯ ಕೋಣೆಗಳಲ್ಲಿ ಇಡಿ. ಇಲ್ಲದಿದ್ದರೆ, ಮನೆಯ ಸುತ್ತಲೂ ಪುದೀನಾ ಎಣ್ಣೆಯನ್ನು ಸಿಂಪಡಿಸಿ.

ತುಳಸಿ ಎಲೆಗಳು

ತುಳಸಿ ಎಲೆಗಳು ಪರಿಮಳಯುಕ್ತವಾಗಿವೆ. ಆದರೆ ಕೀಟಗಳು ಈ ವಾಸನೆಯನ್ನು ಇಷ್ಟಪಡುವುದಿಲ್ಲ. ಹಾಗಾಗಿ ಸೊಳ್ಳೆಗಳು ಮನೆಗೆ ಬರದಂತೆ ತಡೆಯಲು ತುಳಸಿ ಗಿಡಗಳನ್ನು ಮನೆಯ ಬಾಗಿಲಲ್ಲಿ ಇರಿಸಿ. ಇಲ್ಲವಾದಲ್ಲಿ ತುಳಸಿ ಎಲೆಗಳನ್ನು ಕೈಯಿಂದ ಪುಡಿ ಮಾಡಿ ಸೊಳ್ಳೆಗಳು ಬರುವ ಜಾಗದಲ್ಲಿ ಇಡಿ. ಇದರಿಂದ ತುಳಸಿಯ ವಾಸನೆಯಿಂದ ಸೊಳ್ಳೆಗಳು ಮನೆಗೆ ಬರುವುದಿಲ್ಲ.u

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+