ಟೊಮ್ಯಾಟೊ ಪುದೀನಾ ಹಾಕಿ ಚಟ್ನಿಯನ್ನು ಹೀಗೆ ಮಾಡಿ.. ಯಾಮ್ಮಿ.. ಯಾಮ್ಮಿ....

ಇತ್ತೀಚೆಗೆ ದೋಸೆ ಮತ್ತು ಇಡ್ಲಿಗೆ ಮಾತ್ರ ಚಟ್ನಿ ತಿನ್ಬೇಕು ಅನ್ನೋ ರೂಲ್ಸ್ ಇಲ್ಲ. ಚಟ್ನಿಯನ್ನ ಅನ್ನ, ಚಪಾತಿ, ಅವಲಕ್ಕಿ, ಇನ್ನಿತರ ಸ್ನ್ಯಾಕ್ಸ್ ಗೂ ತಿನ್ಬಹುದು. ಹೀಗೆ ಎಲ್ಲದಕ್ಕೂ ಹೊಂದಿಕೊಳ್ಳುವ ಚಟ್ನಿ ಅಂದ್ರೆ ಅದು ಪುದೀನಾ ಚಟ್ನಿ. ಬಹುತೇಕರಿ ಪುದೀನ ಚಟ್ನಿ ಮಾಡೋದು ಹೇಗೆ ಅನ್ನೋದು ತಿಳಿದಿರುವುದಿಲ್ಲ. ನೀವು ಬೆಳಿಗ್ಗೆ ತಿಂಡಿಗೆ ಚಟ್ನಿ ಮಾಡಲು ಭಾವಿಸಿದರೆ ಪುದೀನಾ ಚಟ್ನಿ ಒಮ್ಮೆ ಟ್ರೈ ಮಾಡಿ.

ಇದಕ್ಕೆ ಮನೆಯಲ್ಲಿ ಟೊಮ್ಯಾಟೊ ಮತ್ತು ಪುದೀನಾ ಇದ್ದರೆ ಸಾಕು. ಇದರಿಂದ ರುಚಿ ರುಚಿಯಾಗಿ ಮನೆಯವರ ಮನಸ್ಸು ಗೆಲ್ಲುವಂತೆ ಚೆಟ್ನಿ ಮಾಡಬಹುದು. ಹಾಗಾದರೆ ಟೊಮೆಟೊ ಪುದೀನಾ ಚಟ್ನಿ ಮಾಡುವುದು ಹೇಗೆ? ಅದಕ್ಕೆ ಬೇಕಾಗುವ ಪದಾರ್ಥಗಳು ಏನು? ಎನ್ನುವುದನ್ನು ತಿಳಿಯಲು ಇದನ್ನು ಓದಿ, ಮಾಡಿ ರುಚಿ ನೋಡಿ. ಜೊತೆಗೆ ಅದು ಹೇಗಿತ್ತು ಅನ್ನೋದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Learn how to make pudina chutney in Kannada

ಅಗತ್ಯವಿರುವ ವಸ್ತುಗಳು:

* ಪುದೀನಾ - 2 ಕಪ್ (1 ಗೊಂಚಲು)

* ಕೊತ್ತಂಬರಿ - 1/4 ಕಪ್

* ಹುಣಸೆಹಣ್ಣು - 1 ದೊಡ್ಡ ನೆಲ್ಲಿಕಾಯಿ ಗಾತ್ರ

* ಹಸಿರು ಮೆಣಸಿನಕಾಯಿ - 6-7

* ಈರುಳ್ಳಿ - 3-4 (ಕತ್ತರಿಸಿದ)

* ಟೊಮ್ಯಾಟೊ - 3 (ಕತ್ತರಿಸಿದ)

* ಉದ್ದಿನಬೇಳೆ - 2 tbsp

* ಕಡಲೆಬೇಳೆ - 2 tbsp

* ಉಪ್ಪು - ರುಚಿಗೆ ತಕ್ಕಂತೆ

* ಎಣ್ಣೆ - 1 tbsp

ಮಸಾಲೆಗಾಗಿ...

* ಸಾಸಿವೆ - 1 ಚಮಚ

* ಕರಿಬೇವಿನ ಸೊಪ್ಪು - ಸ್ವಲ್ಪ

* ಇಂಗು ಪುಡಿ - 1 ಚಿಟಿಕೆ


ಪಾಕವಿಧಾನ:

* ಮೊದಲು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದರಲ್ಲಿ 2 ಚಮಚ ಎಣ್ಣೆ ಹಾಕಿ ಅದು ಬಿಸಿಯಾದಾಗ ಉದ್ದಿನಬೇಳೆ ಮತ್ತು ಕಡಲೆಬೇಳೆಯನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ.

* ನಂತರ ಹಸಿರು ಮೆಣಸಿನಕಾಯಿ ಮತ್ತು ಸಣ್ಣ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ.

* ನಂತರ ಟೊಮೆಟೊ ಮತ್ತು ಹುಣಸೆಹಣ್ಣು ಸೇರಿಸಿ ಮತ್ತು ಮೃದುವಾಗುವವರೆಗೆ ಹುರಿಯಿರಿ.

* ಟೊಮೆಟೊ ಚೆನ್ನಾಗಿ ಹುರಿದ ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಹಾಕಿ ಚೆನ್ನಾಗಿ ಫ್ರೈ ಮಾಡಿ ತಣ್ಣಗಾಗಲು ಇಡಿ.

* ನಂತರ ಹುರಿದ ಸಾಮಾಗ್ರಿಗಳನ್ನು ಮಿಕ್ಸರ್ ಜಾರ್ ಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಂಡು ಬೌಲ್ ಗೆ ತೆಗೆದುಕೊಳ್ಳಿ.

* ಕೊನೆಗೆ ಒಲೆಯ ಮೇಲೆ ಪ್ಯಾನ್ ಇಟ್ಟು ಅದರಲ್ಲಿ 1 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ, ಕರಿಬೇವಿನ ಸೊಪ್ಪು ಮತ್ತು ಮೆಂತ್ಯ ಪುಡಿಯನ್ನು ಒಗ್ಗರಣೆ ಮಾಡಿ ಚಟ್ನಿಯೊಂದಿಗೆ ಬೆರೆಸಿದರೆ ರುಚಿಕರವಾದ ಟೊಮೆಟೊ ಪುದೀನಾ ಚಟ್ನಿ ರೆಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+