Hair Care: ನಿತ್ಯ ಕೈ ತುಂಬಾ ಕೂದಲು ಉದುರುತ್ತಾ? ತಲೆ ಬೋಳಾಗುವ ಭಯ ಕಾಡ್ತಾಯಿದಿಯಾ? ಹಾಗಾದರೆ ಈ ಸಲಹೆಗಳನ್ನು ಅನುಸರಿಸಿ....
ಕೂದಲು ಉದುರುವುದು ಅನೇಕ ಜನರ ಸಾಮಾನ್ಯ ಸಮಸ್ಯೆಯಾಗಿದೆ. ನೈಸರ್ಗಿಕವಾಗಿ ಆ ಸಮಸ್ಯೆಯನ್ನು ಪರಿಹರಿಸುವುದು ಕೂದಲಿನ ಆರೋಗ್ಯವನ್ನು ಸುಧಾರಿಸುವ ವಿಧಾನವಾಗಿದೆ. ಹಾಗಾದರೆ ಕೂದಲುದುರುವ ಸಮಸ್ಯೆಗೆ ಪರಿಹಾರವೇನು? ಯಾವುದೇ ಔಷಧಿ ಅಥವಾ ಆಸ್ಪತ್ರೆಯ ಸಹವಾಸವೇ ಇಲ್ಲದೆ ಕುದುಲುದುರುವ ಸಮಸ್ಯೆಯನ್ನು ಹೇಗೆ ಬಗೆಹರಿಸುವುದು? ಎನ್ನುವುದನ್ನು ತಿಳಿಯೋಣ.
ನೀವೇನಾದ್ರೂ ಕೂದಲಿನ ಸಮಸ್ಯೆ ಎದುರಿಸುತ್ತಿದ್ದರೆ ಅದಕ್ಕೆ ಪರಿಹಾರ ನಿಮ್ಮ ಮನೆಯಲ್ಲೇ ಇದೆ. ಇದಕ್ಕಾಗಿ ನೀವು ಅಧಿಕ ಹಣ ಖರ್ಚು ಮಾಡಬೇಕಾಗಿಲ್ಲ. ನಿಮ್ಮ ಅಡುಗೆ ಮನೆಯಲ್ಲಿರುವ ಪದಾರ್ಥವೊಂದೇ ಸಾಕು. ಅದೆಂದರೆ ಕರಿಬೇವು. ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲಿ ಕರಿಬೇವು ಇದ್ದೇ ಇರುತ್ತದೆ. ಅಡುಗೆಗೆ ಕರಿಬೇವಿನ ಒಗ್ಗರಣೆ ಬಿದ್ದರೆ ಅದರ ರುಚಿ ಹೇಗೆ ಹೆಚ್ಚಾಗುತ್ತೋ ಹಾಗೇ ಕೂದಲಿನ ಆರೋಗ್ಯವನ್ನು ಕಾಪಾಡುವಲ್ಲಿ ಕರಿಬೇವು ತುಂಬಾ ಅವಶ್ಯಕ.

ಇದರ ಬಳಕೆಯಿಂದಾಗಿ ಹೊಳೆಯುವ ಹಾಗೂ ಕೂದಲುದುರುವ ಸಮಸ್ಯೆ ಮಾತ್ರವಲ್ಲದೆ ಅನೇಕ ಬದಲಾವಣೆಯನ್ನು ನಿಮ್ಮ ಕೇಶದಲ್ಲಿ ನೀವು ಕಾಣಬಹುದು. ಹಾಗಾದರೆ ಕರಿಬೇವಿನ ಎಲೆಯಿಂದ ಕೂದಲ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂದು ತಿಳಿಯೋಣ. ಇದಕ್ಕೂ ಮೊದಲು ಕರಿಬೇವಿನ ಎಣ್ಣೆ ತಯಾರಿಸುವುದು ಹೇಗೆ ಎಂದು ನೋಡೋಣ.
ಅಗತ್ಯವಿರುವ ವಸ್ತುಗಳು:-
1 ಕಪ್ ತಾಜಾ ಕರಿಬೇವಿನ ಎಲೆಗಳು
1 ಕಪ್ ತೆಂಗಿನ ಎಣ್ಣೆ (ಅಥವಾ ಆಲಿವ್ ಎಣ್ಣೆ ಅಥವಾ ಬಾದಾಮಿ ಎಣ್ಣೆ)
ಸೂಚನೆಗಳು:-
ಕೊಳಕು ಅಥವಾ ಕಲ್ಮಶಗಳನ್ನು ತೆಗೆದುಹಾಕಲು ಕರಿಬೇವಿನ ಎಲೆಗಳನ್ನು ಚೆನ್ನಾಗಿ ತೊಳೆಯಿರಿ. ತೊಳೆದ ಎಲೆಗಳನ್ನು ಗಾಳಿಯಲ್ಲಿ ಒಣಗಲು ಬಿಡಿ, ಅದರಲ್ಲಿ ತೇವಾಂಶವಿಲ್ಲ ಎಂದು ತಿಳಿದುಕೊಳ್ಳಿ. ನಿಮ್ಮ ಕೂದಲಿನ ನೀವು ಯಾವ ಎಣ್ಣೆಯನ್ನು ಬಳಕೆ ಮಾಡಿವಿರೋ (ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ ಅಥವಾ ಬಾದಾಮಿ ಎಣ್ಣೆ) ಅದನ್ನು ತೆಗೆದುಕೊಳ್ಳಿ. ತೆಂಗಿನ ಎಣ್ಣೆ ಅದರ ಪೋಷಣೆಯ ಗುಣಲಕ್ಷಣಗಳಿಂದಾಗಿ ಜನಪ್ರಿಯ ಆಯ್ಕೆಯಾಗಿದೆ. ಆದರೆ ಆಲಿವ್ ಎಣ್ಣೆ ಅಥವಾ ಬಾದಾಮಿ ಎಣ್ಣೆ ಕೂಡ ಉಪಯುಕ್ತವಾಗಿದೆ.

ಕರಿಬೇವಿನ ತೈಲ ತಯಾರಿಸುವುದು ಹೇಗೆ?
ಆಯ್ದ ಎಣ್ಣೆಯನ್ನು ಕಡಿಮೆ ಮತ್ತು ಮಧ್ಯಮ ಶಾಖದ ಮೇಲೆ ಬಿಸಿ ಮಾಡಿ. ತೈಲದ ಪೌಷ್ಟಿಕಾಂಶದ ಅಂಶವನ್ನು ಸಂರಕ್ಷಿಸಲು ಶಾಖವನ್ನು ಕಡಿಮೆ ಇಡುವುದು ಉತ್ತಮ. ಇದಕ್ಕೆ ಬೇಕಾದರೆ ಮೆಂತೆ ಕಾಳುಗಳನ್ನೂ ಬಳಕೆ ಮಾಡಬಹುದು.
ಎಣ್ಣೆ ಬಿಸಿಯಾದ ನಂತರ ಒಣ ಕರಿಬೇವಿನ ಎಲೆಗಳನ್ನು ಬಾಣಲೆಗೆ ಸೇರಿಸಿ. ಸುಮಾರು 10-15 ನಿಮಿಷಗಳ ಕಾಲ ಕಡಿಮೆ ಶಾಖದಲ್ಲಿ ಎಣ್ಣೆಯನ್ನು ಬಿಸಿಯಾಗಿರಲು ಬಿಡಿ. ಶಾಖವನ್ನು ಆಫ್ ಮಾಡಿ ಮತ್ತು ಎಣ್ಣೆಯನ್ನು ತಣ್ಣಗಾಗಲು ಬಿಸಿ. ಕರಿಬೇವಿನ ಎಲೆಗಳನ್ನು ಎಣ್ಣೆಯಿಂದ ಬೇರ್ಪಡಿಸಿ ಎಣ್ಣೆಯನ್ನು ಸೋಸಿಕೊಳ್ಳಿ.
ಬೇವಿನ ಎಣ್ಣೆಯನ್ನು ಗಾಳಿಯಾಡದ ಕಂಟೇನರ್ಗೆ ವರ್ಗಾಯಿಸಿ ಸಂಗ್ರಹಿಸಿ. ಇದು ತೈಲದ ಪೌಷ್ಟಿಕಾಂಶವನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ.

ಎಣ್ಣೆ ಹಚ್ಚುವ ಪ್ರಕ್ರಿಯೆ:-
ಕರಿಬೇವಿನ ಎಣ್ಣೆಯನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ. ವೃತ್ತಾಕಾರದ ಚಲನೆಯಲ್ಲಿ ನಿಧಾನವಾಗಿ ತಲೆಗೆ ಮಸಾಜ್ ಮಾಡಿ. ಎಣ್ಣೆಯನ್ನು ನಿಮ್ಮ ಕೂದಲು ಮತ್ತು ನೆತ್ತಿಯ ಮೇಲೆ ಬೇರುಗಳಿಂದ ತಾಗುವಂತೆ ಹಚ್ಚಿ. 30 ನಿಮಿಷದಿಂದ ಒಂದು ಗಂಟೆಯವರೆಗೆ ಅಥವಾ ರಾತ್ರಿಯಿಡೀ ಎಣ್ಣೆಯನ್ನು ಬಿಡಿ.
ಸೌಮ್ಯವಾದ ಶಾಂಪೂ ಬಳಸಿ
ಎಣ್ಣೆಯನ್ನು ತೆಗೆದುಹಾಕಲು ನಿಮ್ಮ ಕೂದಲನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ತಲೆ ತೊಳಿಯುವಾಗ ಎರಡು ಬಾರಿ ಶಾಂಪೂ ಮಾಡಬೇಕಾಗಬಹುದು. ಆದರೆ ಹೆಚ್ಚು ರಾಸಾಯನಿಕ ಇರುವ ಶಾಂಪೂಗಳನ್ನು ಬಳಕೆ ಮಾಡಬೇಡಿ. ಅತ್ಯುತ್ತಮ ಫಲಿತಾಂಶಗಳಿಗಾಗಿ, ಈ ಕರಿಬೇವಿನ ಎಣ್ಣೆಯನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ಬಳಸಿ.

ಪ್ರಯೋಜನಗಳು:-
* ಕೂದಲುದುರುವುದು ಕಡಿಮೆಯಾಗುತ್ತದೆ
* ಬಿಳಿ ಕೂದಲ ಬೆಳವಣಿಗೆಯನ್ನು ತಡೆಗಟ್ಟುತ್ತದೆ.
* ತಲೆ ಹೊಟ್ಟು ನಿವಾರಣೆಯಾಗುತ್ತದೆ.
* ಕೂದಲು ದಟ್ಟವಾಗಿ ಬೆಳೆಯುತ್ತದೆ.
* ಕೂದಲ ಆರೋಗ್ಯ ಸುಧಾರಿಸುತ್ತದೆ.
* ಕೂದಲು ಇಬ್ಬಾಗ ಆಗುವುದನ್ನು ತಡೆಗಟ್ಟಬಹುದು.
* ತಲೆ ನೋವು, ಒತ್ತಡವನ್ನು ಕಡಿಮೆ ಮಾಡುತ್ತದೆ.
* ಕೂದಲ ಹೊಳಪನ್ನು ಹೆಚ್ಚಿಸುತ್ತದೆ












Click it and Unblock the Notifications