Non-veg Recipe: ಕಬಾಬ್ ಮಾಡುವಾಗ ಚಿಕನ್ ಚೆನ್ನಾಗಿ ಬೇಯಬೇಕು, ಉಪ್ಪು-ಖಾರ ಲಾಸ್ಟ್ ಬೈಟ್‌ವರೆಗೂ ಇರಬೇಕಾ? ಹೀಗೆ ಮಾಡಿ
ಚಿಕನ್ ಅಂದ್ರೆ ಇಷ್ಟ ಇಲ್ಲ ಅನ್ನೋರಿಗಿಂತ ತುಂಬಾ ಇಷ್ಟ ಎನ್ನುವವರೇ ಹೆಚ್ಚು. ಯಾಕೆಂದರೆ ಇದರಲ್ಲಿ ವಿಭಿನ್ನವಾದ ಖಾದ್ಯಗಳನ್ನು ರುಚಿ ರಚಿಯಾಗಿ ತಯಾರಿಸಬಹುದು. ವಿಶೇಷವಾಗಿ ಕಬಾಬ್. ಕಬಾಬ್ ಸಂಜೆ ಹೊತ್ತು ತಿಂಡಿ, ಊಟಕ್ಕೂ ಸಹ ಹೇಳಿ ಮಾಡಿಸಿದ ಖಾದ್ಯ. ಆದರೆ ಈ ಕಬಾಬ್ ಅನ್ನು ಮನೆಯಲ್ಲಿ ತಯಾರಿಸಿ ತಿನ್ನುವವರಿಗಿಂತ ಹೊರಗಡೆ ತಿನ್ನುವವರೇ ಹೆಚ್ಚು. ಯಾಕೆಂದರೆ ಮನೆಯಲ್ಲಿ ಕಬಾಬ್ ತಯಾರಿಸಲು ಹೋಟೆಲ್ ಸ್ಟೈಲ್ ರುಚಿ ಬರುವುದಿಲ್ಲ ಎನ್ನುವ ಸಮಸ್ಯೆ. ಹೀಗೆ ಕಬಾಬ್ ಮಾಡುವಾಗ ಚೆನ್ನಾಗಿ ಬೇಯುವುದಿಲ್ಲ, ಲಾಸ್ಟ್ ಬೈಟ್‌ವರೆಗೂ ಕಬಾಬ್‌ನಲ್ಲಿ ಉಪ್ಪು- ಖಾರ ಚೆನ್ನಾಗಿ ಇರಬೇಕು ಎಂದು ಆಸೆ ಪಡುವ ಗೃಹಣಿಯರಿಗಾಗಿ ಇಲ್ಲಿದೆ ಟಿಪ್ಸ್.
ಚಿಕನ್ ಕಬಾಬ್ ನಾನ್‌ವೆಜ್ ಪ್ರಿಯರ ನೆಚ್ಚಿನ ಖಾದ್ಯ. ಇದನ್ನು ರುಚಿಯಾಗಿ ಮಾಡುವುದು ಗೃಹಿಣಿಯರ ಟಾಲೆಂಟ್ ತೋರಿಸುತ್ತದೆ. ಯಾಕೆಂದರೆ ಕಬಾಬ್ ತಯಾರಿಸುವವರು ನಮ್ಮ ನಡುವೆ ತುಂಬಾ ಜನ ಇದ್ದರೂ ಸಹ ಅದನ್ನು ರುಚಿ ರುಚಿಯಾಗಿ ತಯಾರಿಸುವವರ ಸಂಖ್ಯೆ ತುಂಬಾ ಕಡಿಮೆ ಇದೆ. ಹೀಗಾಗಿ ನೀವೇನಾದರೂ ಕಬಾಬ್ ಪ್ರಿಯರಾಗಿದ್ದರೆ, ಲಾಸ್ಟ್ ಬೈಟ್‌ವರೆಗೂ ಚಿಕನ್ ಕಬಾಬ್‌ನಲ್ಲಿ ಉಪ್ಪು-ಖಾರದ ಜೊತೆಗೆ ಚಿಕನ್ ಗರಿಗರಿಯಾಗಿ ಇರಬೇಕು ಅಂದುಕೊಂಡರೆ ಈ ಟಿಪ್ಸ್‌ಗಳನ್ನು ಅನುಸರಿಸಿ. ಹಾಗಾದರೆ ಚಿಕನ್ ಚಿಕನ್ ಕಬಾಬ್ ಮಾಡುವ ವಿಧಾನ ತಿಳಿಯೋಣ.

ತಯಾರಿಸಲು ಬೇಕಾದ ಪದಾರ್ಥಗಳು:-
* ಚಿಕನ್ 1 ಕೆಜಿ
* ಕಾರ್ನ್ ಫ್ಲೋರ್ 8 ಟೇಬಲ್ ಸ್ಪೂನ್
* ಮೈದಾ ಹಿಟ್ಟು 1 ಟೇಬಲ್ ಸ್ಪೂನ್
* ನಿಂಬೆ ಹಣ್ಣು 2
* ಹಸಿ ಮೆಣಸಿನಕಾಯಿ 8
* ಖಾರದ ಪುಡಿ 1 ಟೇಬಲ್ ಸ್ಪೂನ್
* ಕಾಳು ಮೆಣಸಿನ ಪುಡಿ ಅರ್ಧ ಟೇಬಲ್ ಸ್ಪೂನ್
* ಲವಂಗ ಪುಡಿ ಕಾಲ್ ಟೇಬಲ್ ಸ್ಪೂನ್
* ಅರಿಶಿಣ ಅರ್ಧ ಟೇಬಲ್ ಸ್ಪೂನ್
* ಉಪ್ಪು ರುಚಿಗೆ ತಕ್ಕಷ್ಟು
* ಎಣ್ಣೆ ಕರಿಯಲು ಬೇಕಾಗುವಷ್ಟು
* ಅಡುಗೆ ಸೋಡಾ ಚಿಟಿಕೆ
ತಯಾರಿಸುವ ವಿಧಾನ:-
* ಕಬಾಬ್ ಮಾಡುವ ಮುನ್ನ ಒಂದು ವಿಷಯ ಗಮನದಲ್ಲಿ ಇಡಿ. ಕಬಾಬ್ ತಯಾರಿಸುವ ಮೊದಲು ಅಂದರೆ ಎಂಟು ಗಂಟೆಗಳಿಗೂ ಮುನ್ನ ಚಿಕನ್ ಅನ್ನು ಚೆನ್ನಾಗಿ ತೆಳೆದು, ಅದಕ್ಕೆ ನಿಂಬೆ ಹಣ್ಣಿನ ರಸ, ಉಪ್ಪು, ಖಾರದ ಪುಡಿ, ಅರಿಶಿಣ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಜೊತೆಗೆ ಹಸಿ ಮೆಣಸಿನಕಾಯಿಯನ್ನು ರುಬ್ಬಿ ಅದರಿಂದ ತೆಗೆದ ರಸವನ್ನು ಹಾಕಿ ಮಿಕ್ಸ ಮಾಡಿ ಮುಚ್ಚಳ ಮುಚ್ಚಿ ಇಟ್ಟುಬಿಡಿ.

* ಒಂದು ಪಾತ್ರೆಯಲ್ಲಿ ಕಾರ್ನ್ ಫ್ಲೋರ್, ಮೈದಾ ಹಿಟ್ಟು, ಕಾಳು ಮೆಣಸಿನ ಪುಡಿ, ಲವಂಗ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿಕೊಂಡರೆ ಉತ್ತಮ.
* ಬಳಿಕ ಈ ಮಿಶ್ರಣಕ್ಕೆ ಚಿಕನ್ ಪೀಸ್‌ಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಐದು ನಿಮಿಷ ಬಿಟ್ಟುಬಿಡಿ.
* ನಂತರ ಒಂದು ಬಾಣಲೆಗೆ ಚಿಕನ್ ಪೀಸ್ ಮುಳುಗುವಷ್ಟು ಎಣ್ಣೆ (ಕರಿಯಲು ಬೇಕಾಗುವಷ್ಟು) ಹಾಕಿ ಬಿಸಿ ಮಾಡಲು ಬಿಡಿ.
* ಎಣ್ಣೆ ಬಿಸಿಯಾದ ಬಳಿಕ ಚಿಕನ್ ಪೀಸ್‌ಗಳನ್ನು ಒಂದೊಂದಾಗಿ ಅದ್ದಿ ಎಣ್ಣೆಯಲ್ಲಿ ಬಿಟ್ಟು ಡೀಪ್ ಫ್ರೈ ಮಾಡಿ. ಉರಿಯನ್ನು ನಿಧಾನವಾಗಿ ಇಟ್ಟು ಕರಿದರೆ ಗರಿಗರಿಯಾದ ಚಿಕನ್ ಕಬಾಬ್ ಸವಿಯಲ್ ಸಿದ್ಧ.
ಈ ರೀತಿ ಚಿಕನ್ ಕಬಾಬ್ ತಯಾರಿಸುವುದರಿಂದ ಕೊನೆಯ ಬೈಟ್‌ವರೆಗೂ ಉಪ್ಪು-ಖಾರ ಚೆನ್ನಾಗಿ ಕಬಾಬ್‌ನಲ್ಲಿ ಹೀರಿಕೊಂಡಿರುತ್ತದೆ. ಜೊತೆಗೆ ಗರಿಗರಿಯಾಗಿ ರುಚಿಯಾಗಿಯೂ ಇರುತ್ತದೆ. ಇದನ್ನು ನೀವು ಕೂಡ ಮನೆಯಲ್ಲಿ ಒಮ್ಮೆ ಟ್ರೈ ಮಾಡಬಹುದು. ಇದು ನಿಮಗೆ ಹೋಟೆಲ್ ಸ್ಟೈಲ್ ರುಚಿಯನ್ನು ನೀಡುವುದು ಮಾತ್ರವಲ್ಲದೆ ತಯಾರಿಸುವುದು ಕೂಡ ತುಂಬಾನೇ ಸುಲಭ. ನೀವೇನಾದ್ರೂ ಇದನ್ನು ಮನೆಯಲ್ಲಿ ಒಮ್ಮೆ ಟ್ರೈ ಮಾಡಿದರೆ ನಿಮ್ಮ ಅನುಭವವನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.












Click it and Unblock the Notifications