Benefit Of Lady Finger Water: ಬೇಸಿಗೆಯಲ್ಲಿ ತ್ವಚೆ ಪಳ ಪಳ ಹೊಳೆಯಲು ಪ್ರತಿದಿನ ಬೆಂಡೆಕಾಯಿ ನೀರು ಗಟ ಗಟ ಕುಡಿಯುರಿ...
ಕೆಲವರಿಗೆ ಬೆಂಡೆಕಾಯಿ ಅಂದರೆ ತುಂಬಾನೇ ಇಷ್ಟ ಇನ್ನೂ ಕೆಲವರಿಗೆ ಕಷ್ಟ. ಆದರೆ ಪ್ರತಿಯೊಂದು ತರಕಾರಿ ತನ್ನದೇ ಆದ ರುಚಿಯನ್ನು ನೀಡುತ್ತದೆ. ಜೊತೆಗೆ ಆರೋಗ್ಯವನ್ನು ಹೆಚ್ಚಿಸುವ ಪೋಷಕಾಂಶಗಳನ್ನು ಹೊಂದಿರುತ್ತದೆ. ಈ ತರಕಾರಿಗಳಲ್ಲಿ ವಿಭಿನ್ನ ಹಾಗೂ ವಿಶೇಷ ರುಚಿಯನ್ನು ನೀಡುವ ಬೆಂಡೆಕಾಯಿಯಿಂದ ನಾವು ಹಲವಾರು ಖಾದ್ಯಗಳನ್ನು ಮಾಡುತ್ತೇವೆ.
ಭಾರತದ ಪಾಕ ವಿಧಾನದಲ್ಲಿ ಹೆಚ್ಚು ಬಳಸುವ ತರಕಾರಿಗಳಲ್ಲಿ ಬೆಂಡೆಕಾಯಿ ಕೂಡ ಒಂದು. ಎಲ್ಲಾ ಋತುವಿನಲ್ಲೂ ಇದು ಸುಲಭವಾಗಿ ಲಭ್ಯವಾಗಿರುತ್ತದೆ. ಇದರಿಂದ ಅನೇಕ ರುಚಿಕರವಾದ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಇದು ವಿಶಿಷ್ಟವಾದ ರುಚಿಯನ್ನು ಹೊಂದಿದ್ದರೂ ಆರೋಗ್ಯಕ್ಕೆ ಮಾತ್ರ ತುಂಬಾನೇ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

ಬೆಂಡೆಕಾಯಿಯ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಉತ್ತಮ ಮಾರ್ಗವೆಂದರೆ ಅದನ್ನು ನೀರಿನಲ್ಲಿ ನೆನೆಸಿ ಮತ್ತು ಆ ನೀರನ್ನು ಕುಡಿಯುವುದು. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಕಾಳಜಿಯಿಂದಾಗಿ ಅನೇಕರು ಈ ಬೆಂಡೆಕಾಯಿಯನ್ನು ನೀರಿನಲ್ಲಿಟ್ಟು ನೆನಸಿ ಕುಡಿಯುವ ಅಭ್ಯಾಸವನ್ನು ಹೊಂದಿದ್ದಾರೆ. ಹೀಗೆಂದು ತಜ್ಞರು ಕೂಡ ಸಲಹೆ ನೀಡುತ್ತಾರೆ.
ಹಾಗಾದರೆ ಈಗ ಬೆಂಡೆಕಾಯಿ ನೆನೆಸಿದ ನೀರನ್ನು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ? ಈ ನೀರನ್ನು ಯಾರು ಕುಡಿಯಬಾರದು ಮತ್ತು ಬೆಂಡೆಕಾಯಿ ನೀರನ್ನು ಹೇಗೆ ತಯಾರಿಸಬೇಕು ಎಂಬುದನ್ನು ವಿವರವಾಗಿ ನೋಡೋಣ.

*ತೂಕ ಇಳಿಕೆಗೆ ಸಹಾಯ
ಬೆಂಡೆಕಾಯಿ ವಿಟಮಿನ್ ಬಿ, ಸಿ, ಫೋಲಿಕ್ ಆಮ್ಲ ಮತ್ತು ಫೈಬರ್ ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇವೆಲ್ಲವೂ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಇದಲ್ಲದೆ ಈ ಬೆಂಡೆಕಾಯಿ ನೀರು ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ ಮತ್ತು ದೇಹದ ನೀರಿನ ಚಯಾಪಚಯವನ್ನು ಸುಧಾರಿಸುತ್ತದೆ.
*ಮಧುಮೇಹಕ್ಕೆ ಒಳ್ಳೆಯದು
ಮಧುಮೇಹಿಗಳು ಬೆಂಡೆಕಾಯಿ ನೀರನ್ನು ಕುಡಿಯುವುದು ಒಳ್ಳೆಯದು ಎಂದು ಅನೇಕರು ಹೇಳುವುದನ್ನು ನೀವು ಕೇಳಿದ್ದೀರಿ. ಏಕೆಂದರೆ ಬೆಂಡೆಕಾಯಿಯಲ್ಲಿ ಕರಗುವ ಮತ್ತು ಕರಗದ ನಾರುಗಳು ಅಧಿಕವಾಗಿರುತ್ತವೆ. ಇವು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ತುಂಬಾ ಸಹಕಾರಿಯಾಗಿವೆ. ಮೂಲಭೂತವಾಗಿ ಈ ನೀರನ್ನು ಕುಡಿಯುವುದು ಆಹಾರದಿಂದ ಕಾರ್ಬೋಹೈಡ್ರೇಟ್‌ಗಳ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿಸುವುದನ್ನು ತಡೆಯುತ್ತದೆ.

*ರೋಗನಿರೋಧಕ ಶಕ್ತಿ ಹೆಚ್ಚಳ
ಬೆಂಡೆಕಾಯಿಯಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಅಧಿಕವಾಗಿವೆ. ಇದು ದೇಹದಲ್ಲಿ ಹಾನಿ ಉಂಟುಮಾಡುವ ಜೀವಿಗಳ ವಿರುದ್ಧ ಹೋರಾಡುತ್ತದೆ ಮತ್ತು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗಾಗಿ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಈ ನೀರನ್ನು ಕುಡಿಯಬೇಕು.
*ಹೃದಯದ ಆರೋಗ್ಯ ಸುಧಾರಣೆ
ವಿವಿಧ ಅಧ್ಯಯನಗಳ ಪ್ರಕಾರ, ಬೆಂಡೆಕಾಯಿಯಲ್ಲಿರುವ ಪೋಷಕಾಂಶಗಳು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಂಡೆಕಾಯಿ ನೆನೆಸಿದ ನೀರನ್ನು ಕುಡಿದರೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯುತ್ತದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾದರೆ, ಅನೇಕ ರೋಗಗಳ ಅಪಾಯವು ಕಡಿಮೆಯಾಗುತ್ತದೆ. ಮುಖ್ಯವಾಗಿ ಹೃದ್ರೋಗಗಳ ಅಪಾಯ ಕಡಿಮೆಯಾಗುತ್ತದೆ ಮತ್ತು ಹೃದಯದ ಕಾರ್ಯವು ಉತ್ತಮವಾಗಿರುತ್ತದೆ.
*ದೇಹವು ಶುದ್ಧ
ಬೆಂಡೆಕಾಯಿ ನೆನೆಸಿದ ನೀರಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಆ್ಯಂಟಿಆಕ್ಸಿಡೆಂಟ್ ಇತ್ಯಾದಿಗಳಿವೆ. ಈ ನೀರನ್ನು ಕುಡಿಯುವಾಗ ಅದರಲ್ಲಿರುವ ಪೋಷಕಾಂಶಗಳು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ ಮತ್ತು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.
* ತ್ವಚೆಯ ಕಾಂತಿ ಹೆಚ್ಚಳ
ಈ ಎರಡು ಕಾರ್ಯಗಳನ್ನು ದೇಹದಲ್ಲಿ ಉತ್ತಮವಾಗಿ ನಿರ್ವಹಿಸಿದರೆ ಚರ್ಮದ ಅಕಾಲಿಕ ವಯಸ್ಸಾದಿಕೆಯನ್ನು ತಡೆಯುತ್ತದೆ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುತ್ತವೆ. ಆದ್ದರಿಂದ ನೀವು ಸುಂದರವಾಗಿ ಕಾಣಲು ಮತ್ತು ನಿಮ್ಮ ದೇಹವನ್ನು ಸ್ವಚ್ಛವಾಗಿಡಲು ಬಯಸಿದರೆ ಬೆಂಡೆಕಾಯಿ ನೀರನ್ನು ಕುಡಿಯಿರಿ.
ಬೆಂಡೆಕಾಯಿ ನೀರು ಕುಡಿಯಲು ಉತ್ತಮ ಸಮಯ ಯಾವುದು?
ಪ್ರತಿದಿನ ಬೆಂಡೆಕಾಯಿ ನೀರನ್ನು ಕುಡಿಯುವುದು ಒಳ್ಳೆಯದು. ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಈ ಬೆಂಡೆಕಾಯಿ ನೀರನ್ನು ಕುಡಿಯುವುದು ಇನ್ನೂ ಉತ್ತಮ. ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದರಿಂದ, ಪೋಷಕಾಂಶಗಳನ್ನು ದೇಹವು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ ಮತ್ತು ಸಂಪೂರ್ಣ ಪ್ರಯೋಜನಗಳನ್ನು ಪಡೆಯಬಹುದು.
ಬೆಂಡೆಕಾಯಿ ನೀರನ್ನು ಹೇಗೆ ತಯಾರಿಸುವುದು?
* ಮೊದಲು 5 ಬೆಂಡೆಕಾಯಿ ತೆಗೆದುಕೊಂಡು ತುದಿ ತೆಗೆದು ತುರಿದುಕೊಳ್ಳಿ.
* ನಂತರ ಒಂದು ಪಾತ್ರೆಯಲ್ಲಿ 2 ಟಮ್ಲಾರ್ ನೀರು ಹಾಕಿ, ಅದರಲ್ಲಿ ಈ ಎರಡು ಭಾಗ ಮಾಡಿದ ಬೆಂಡೆಕಾಯಿ ಹಾಕಿ ರಾತ್ರಿ ನೆನೆಯಲು ಬಿಡಿ.
* ಮರುದಿನ ಬೆಳಗ್ಗೆ ಬೆಂಡೆಕಾಯಿ ತೆಗೆದು ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿಯಿರಿ.
ಬೆಂಡೆಕಾಯಿ ನೀರನ್ನು ಯಾರು ಕುಡಿಯಬಾರದು?
ಉರಿಯೂತವಿರುವ ಜನರು ಬೆಂಡೆಕಾಯಿ ನೀರನ್ನು ಕುಡಿಯಬಾರದು. ಇದಲ್ಲದೆ ಕರುಳಿನ ಸಿಂಡ್ರೋಮ್ (ಐಬಿಎಸ್) ಹೊಂದಿರುವ ಜನರು ಬೆಂಡೆಕಾಯಿ ನೀರನ್ನು ಕುಡಿಯುವುದನ್ನು ತಪ್ಪಿಸಬೇಕು. ಏಕೆಂದರೆ ಇದರಲ್ಲಿ ಫ್ರಕ್ಟಾನ್ ಅಧಿಕವಾಗಿರುತ್ತದೆ. ಇವು ಕರುಳಿನ ಸಮಸ್ಯೆ ಉಲ್ಬಣಗೊಳಿಸಬಹುದು. ಜೊತೆಗೆ ಯಾವುದೇ ಗಂಭೀರ ಕಾಯಿಲೆ ಇರುವವರು, ಯಾವುದೇ ಸಮಸ್ಯೆಯಿಂದ ಬಳುವಂತವರು ಬೆಂಡೆಕಾಯಿ ನೀರು ಕುಡಿಯುವ ಮುನ್ನ ವೃತ್ತಿಪರರನ್ನು ಸಂಪರ್ಕಿಸಿ. ಅವರ ಅನುಮತಿಯನ್ನು ತೆಗೆದುಕೊಳ್ಳಲು ಮರೆಯದಿರಿ.












Click it and Unblock the Notifications