World's Small Condom: ಈ ಕಾಂಡೋಮ್ ಅತೀ ಚಿಕ್ಕಾದಾದ್ರೂ ಬೇಡಿಕೆ ಮಾತ್ರ ಸಿಗಲಾರದಷ್ಟಿದೆ.!
World's Small Condom: ಲೈಂಗಿಕವಾಗಿ ಹರಡುವ ರೋಗಗಳನ್ನು ತಡೆಗಟ್ಟುವಲ್ಲಿ ಕಾಂಡೋಮ್ ಪಾತ್ರ ಪ್ರಮುಖವಾಗಿರುತ್ತದೆ. ಇನ್ನು ಕಾಂಡೋ ಹೆಸರು ಕೇಳಿದರೆ ಸಾಕು ಬಹುತೇಕ ಮಂದಿ ನಾಚಿ ನೀರಾಗುತ್ತಾರೆ. ಬಳಕೆ ಮಾಡುವವರು ಸೇರಿದಂತೆ ತುಂಬಾ ಜನರಿಗೆ ಈ ಅನುಭವ ಆಗುವುದು ಸಹಜ. ಕೆಲವೇ ನೇರವಾಗಿ ಶಾಪ್‌ಗಳಲ್ಲಿ ಖರೀದಿ ಮಾಡಿದರೆ, ಇನ್ನೂ ಕೆಲವರು ಆನ್‌ಲೈನ್‌ಗಳಲ್ಲಿ ಬುಕ್ ಮಾಡುತ್ತಾರೆ.
ಇತ್ತೀಚಿನ ದಿನಗಳಲ್ಲಿ ಕಾಂಡೋಮ್ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಲೈಂಗಿಕ ಕ್ರಿಯೆಯಿಂದ ಹರಡುವ ರೋಗಗಳನ್ನು ತಡೆಯಲು, ಗರ್ಭಧಾರಣೆ ತಡೆಯಲು ಕಾಂಡೋಮ್ ಪಾತ್ರ ಪ್ರಮುಖವಾಗುತ್ತದೆ. ಮತ್ತೊಂದೆಡೆ ಫ್ಯಾಮಿಲಿ ಪ್ಲಾನಿಂಗ್‌ನಲ್ಲಿರುವ ದಂಪತಿಗಳು ಕೂಡ ಕಾಂಡೋಮ್ ಅನ್ನು ಬಳಕೆ ಮಾಡುತ್ತಾರೆ. ಇದು ಈಗ ಚಿಕ್ಕಮಕ್ಕಳಿಂದ ಹಿಡಿದು ಹಿರಿಕರವರೆಗೂ ಗೊತ್ತೇ ಇರುವ ವಿಚಾರ ಆಗಿದೆ.

ಕಾಂಡೋಮ್ ಅಂದರೆ ಸಾಕು ಕೆಲವರು ಅದು ಕೆಟ್ಟದ್ದು ಅನ್ನುವ ರೀತಿಯಲ್ಲಿ ಕಾಣುತ್ತಾರೆ. ಆದರೆ, ವೈದ್ಯರ ಪ್ರಕಾರ ಅರೋಗ್ಯಕರ ಲೈಂಗಿಕ ಕ್ರಿಯೆಗೆ ಕಾಂಡೋಮ್ ಬಳಸುವುದು ಉತ್ತಮ. ಇದೀಗ ಯುಕೆ ಮೂಲದ ಕಂಪನಿಯು ವಿಶ್ವದ ಅತ್ಯಂತ ಚಿಕ್ಕ ಕಾಂಡೋಮ್ ಅನ್ನು ಬಿಡುಗಡೆ ಮಾಡಿದೆ. ಇದು ಭಾರೀ ಮಾರಾಟ ಆಗುವ ಮೂಲಕ ಯಶಸ್ಸು ಕಂಡಿದೆ. ಹಾಗಾದರೆ ಆ ಕಾಂಡೋಮ್ ಯಾವುದು, ಬೆಲೆ, ವಿಶೇಚತೆಗಳ ಬಗ್ಗೆ ಇಲ್ಲಿ ನೀಡಲಾಗಿದೆ ಗಮನಿಸಿ.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಕೆಲವು ಕಾಂಡೋಮ್ ಬಳಕೆಯಿಂದ ಹಲವು ಸಮಸ್ಯೆಗಳಾಗುತ್ತವೆ ಎನ್ನುವ ಬಗ್ಗೆ ವರದಿಯಾಗಿತ್ತು. ಇದೀಗ ದೇ ಫಿಟ್ ಸಂಸ್ಥೆಯೂ ಹೊಸ ಮಾದರಿಯ ಕಾಂಡೋಮ್‌ಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ದೊಡ್ಡ ಗಾತ್ರದ ಕಾಂಡೋಮ್ ಬಳಿಕೆಯಿಂದ ಎದುರಾಗುತ್ತಿದ್ದ ಸಮಸ್ಯೆಗಳನ್ನು ತಡೆಯಲಯ ಕೇವಲ 3.1 ಇಂಚು ಉದ್ದದಿಂದ ಆರಂಭವಾಗುವ ಕಾಂಡೋಮ್ ಬಿಡುಗಡೆ ಮಾಡಿತ್ತು. ಇದು ಸಾಮಾನ್ಯ ಕಾಂಡೋಮ್‌ಗಳ ಅರ್ಧದಷ್ಟು ಉದ್ದವಿದ್ದು, ಕೇವಲ 2.6 ಸೆಂಟಿ ಮೀಟರ್ ಅಗಲ ಹೊಂದಿದೆ ಎಂದು ಹೇಳಲಾಗುತ್ತಿದೆ.
ದೇ ಫಿಟ್ ಕಂಪನಿ 66ಕ್ಕೂ ಹೆಚ್ಚು ಸೈಜ್ನ ಕಾಂಡೋಮ್‌ಗಳನ್ನು ಮಾಡುಕಟ್ಟಗೆ ತಂದಿದ್ದು, ಇದರಲ್ಲಿ ಸಣ್ಣ ಗಾತ್ರದ ಕಾಂಡೋಮ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಮೆಜಾನ್ನಲ್ಲಿ 6 ಪ್ಯಾಕೇಟ್ಗಳ ಈ ಕಾಂಬೋ ಪ್ಯಾಕ್ ಆಫರ್‌ನಲ್ಲಿ 399 ರೂಪಾಯಿಗಳಿಗೆ ಲಭ್ಯ ಇದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಮೂಲಗಳ ಪ್ರಕಾರ ಜಗತ್ತಿನಲ್ಲಿ ಶೇಕಾಡ 5 ರಿಂದ 10 ರಷ್ಟು ಪುರುಷರು ತಮ್ಮ ಅದರ ಗಾತ್ರಕ್ಕೆ ಸರಿ ಹೊಂದದ ಕಾಂಡೋಮ್ ಬಳಕೆ ಮಾಡುತ್ತಿದ್ದರಂತೆ. ಇದರಿಂದ ರಕ್ತ ಸಂಚಾರ ಹಾಗೂ ಲೈಂಗಿಕ ತೃಪ್ತಿ ಮೇಲೂ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತಿದೆ ಎನ್ನುವ ಶಾಕಿಂಗ್ ಮಾಹಿತಿಯೂ ಹೊರಬಿದ್ದಿತ್ತು. ಇದರ ಬೆನ್ನಲ್ಲೇ ವಿಶ್ವದ ಅತೀ ಚಿಕ್ಕ ಕಾಂಡೋಮ್ ಬಿಡುಗಡೆಯಾಗಿದ್ದು, ಇದೀಗ ಇದನ್ನು ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications