ಎಸಿ, ಕೂಲರ್‌ ಆಯ್ತು.. ಈಗ ಬಂದಿದೆ ಜನರನ್ನು ತಂಪಾಗಿಸುವ ಫ್ರಿಡ್ಜ್: ಒಂದೇ ನಿಮಿಷದಲ್ಲಿ ಕೂಲ್‌ ಕೂಲ್‌ ಅನುಭವ

ದೇಶದ ಬಹುತೇಕ ಭಾಗಗಳಲ್ಲಿ ಈ ವರ್ಷ ಕಳೆದ ಬಾರಿಗೆ ಹೋಲಿಕೆ ಮುಂಗಾರು ಕೊರತೆ ಎದ್ದು ಕಾಣುತ್ತಿದೆ. ಕೆಲವೆಡೆ ಮಾತ್ರ ಮಳೆಯಾಗುತ್ತಿದ್ದು, ಉಳಿದ ಕಡೆಗಳಲ್ಲಿ ಬೇಸಿಗೆಯ ರೀತಿಯಲ್ಲಿ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಬಿಸಿಲ ಧಗೆಯಿಂದ ಮುಕ್ತಿ ಪಡೆಯಲು ಜನರು ಎಸಿ, ಕೂಲರ್‌ ಮೊರೆ ಹೋಗುತ್ತಿದ್ದಾರೆ. ಇದೀಗ ಇದನ್ನ ಗಮನದಲ್ಲಿಟ್ಟುಕೊಂಡು ತಂಪಾಗಿಸುವ ಫ್ರಿಡ್ಜ್ ಅನ್ನೇ ಕಂಡುಹಿಡಿಯಲಾಗಿದೆ. ಇದರ ವಿಶೇಷತೆಗಳೇನು ಹಾಗೂ ಹೇಗೆ ಕಾರ್ಯನಿರ್ವಹಿಸಲಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಬೇಸಿಗೆ ಪ್ರತಿ ವರ್ಷ ಹೆಚ್ಚು ಅಪಾಯಕಾರಿಯಾಗುತ್ತಿದೆ. ಈ ಸವಾಲನ್ನು ಎದುರಿಸಲು, ಜಪಾನಿನ ಕಂಪನಿ SDRS ಡು ಹೈಮನ್ ಬಾಕ್ಸ್ ಎಂಬ ವಿಶೇಷ ಕೂಲಿಂಗ್ ಬೂತ್ ಅನ್ನು ಅಭಿವೃದ್ಧಿಪಡಿಸಿದೆ. ಇದು ನಿಮಿಷಗಳಲ್ಲಿ ದೇಹವನ್ನು ತಂಪಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಮೂಲಕ ಬಿಸಿಲ ಬೇಗೆಯಿಂದ ಪರಿಹಾರವನ್ನು ಒದಗಿಸಲು ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Japan Human Fridge New Cooling Mission Cools Body in Just 5 Minutes Know Complete details

ಸುಡುವ ಶಾಖದಿಂದ ತಕ್ಷಣ ಪರಿಹಾರ

ಈ ಯಂತ್ರದ ವಿನ್ಯಾಸವು ಸಣ್ಣ ರೆಫ್ರಿಜರೇಟರ್ ಅಥವಾ ಕೂಲಿಂಗ್ ಕ್ಯಾಬಿನ್ ತರ ಕಾಣಿಸುತ್ತದೆ. ಇದರೊಳಗೆ ಒಬ್ಬ ವ್ಯಕ್ತಿಯು ಆರಾಮವಾಗಿ ಕುಳಿತುಕೊಳ್ಳಬಹುದು. ಈ ಬಾಕ್ಸ್‌ ಒಳಗೆ ಹೋದ ನಂತರ ತಂಪಾದ ಗಾಳಿಯು ನೇರವಾಗಿ ವ್ಯಕ್ತಿಯ ತಲೆ, ಕುತ್ತಿಗೆ, ಭುಜಗಳು ಮತ್ತು ಬೆನ್ನಿಗೆ ಹರಿಯುತ್ತದೆ. ಈ ಮೂಲಕ ಕೂಲ್‌ ಕೂಲ್‌ ಅನುಭವ ಸಿಗುತ್ತದೆ. ಹಾಗಾಗಿ ಇದನ್ನು "ಮಾನವ ರೆಫ್ರಿಜರೇಟರ್" ಎಂದು ಕೂಡಾ ಕರೆಯುತ್ತಾರೆ. ಇದರ ಉದ್ದೇಶ ಜನರನ್ನು ತಂಪಾಗಿಸುವುದಲ್ಲ, ಬದಲಿಗೆ ಸುಡುವ ಶಾಖದಿಂದ ತಕ್ಷಣದ ಪರಿಹಾರವನ್ನು ಒದಗಿಸುವುದು.

ಕೇವಲ ಐದು ನಿಮಿಷಗಳಲ್ಲಿ ಕೂಲ್‌.. ಕೂಲ್‌

ಕಂಪನಿಯ ಪ್ರಕಾರ ಈ ಕೂಲಿಂಗ್ ಬಾಕ್ಸ್‌ನೊಳಗಿನ ತಾಪಮಾನವನ್ನು ಸುಮಾರು 15 ಡಿಗ್ರಿ ಸೆಲ್ಸಿಯಸ್‌ನಲ್ಲಿ ನಿರ್ವಹಿಸಲಾಗುತ್ತದೆ. ಸರಿಸುಮಾರು 5 ಡಿಗ್ರಿ ಸೆಲ್ಸಿಯಸ್‌ನಷ್ಟು ತಂಪಾದ ಗಾಳಿಯು ದೇಹದ ಮೇಲ್ಭಾಗಕ್ಕೆ ಬಿಡುಗಡೆಯಾಗುತ್ತದೆ. ಇದರಲ್ಲಿ ಒಬ್ಬ ವ್ಯಕ್ತಿಯು ಸುಮಾರು 10 ನಿಮಿಷಗಳ ಕಾಲ ಕುಳಿತರೆ, ಅವರ ದೇಹದ ಉಷ್ಣತೆಯು ಗಮನಾರ್ಹವಾಗಿ ಕಡಿಮೆಯಾಗಬಹುದು. ಇದು ಸನ್‌ ಸ್ಟ್ರೋಕ್‌ ಅಥವಾ ಶಾಖದ ಬಳಲಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಯಾರಿಗೆಲ್ಲಾ ಹೆಚ್ಚು ಉಪಯುಕ್ತ?

ದಿನವಿಡೀ ಬಿಸಿನಲ್ಲಿ ಕೆಲಸ ಮಾಡುವ ಜನರಿಗಾಗಿ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಉದಾಹರಣೆಗೆ ನಿರ್ಮಾಣ ಕಾರ್ಮಿಕರು, ಕಾರ್ಖಾನೆ ನೌಕರರು, ಗೋದಾಮಿನ ಸಿಬ್ಬಂದಿ, ರಸ್ತೆ ಕೆಲಸಗಾರರು ಮತ್ತು ದೊಡ್ಡ ಹೊರಾಂಗಣ ಕಾರ್ಯಕ್ರಮಗಳಿಗಾಗಿ ಕೆಲಸ ಮಾಡುವವರನ್ನು ಗಮನದಲ್ಲಿಟ್ಟುಕೊಂಡು ಈ ಮೆಷಿನ್‌ ಅನ್ನು ತಯಾರಿಸಲಾಗಿದೆ. ಇವರು ಸದಾ ಬಿಸಿಲಿನಲ್ಲಿಯೇ ಕೆಲಸ ಮಾಡುತ್ತಿರುತ್ತಾರೆ. ಹಾಗಾಗಿ ಬಿಸಿಲು ಹೆಚ್ಚಿರುವಾಗ ಈ ಮೆಷಿನ್‌ ಒಳಗೆ ಕುಳಿತುಕೊಳ್ಳುವ ಮೂಲಕ ದೇಹವನ್ನು ತಂಪಾಗಿರಿಸಿಕೊಂಡರೆ ಅವರ ಆರೋಗ್ಯದ ಮೇಲೆ ಶಾಖದ ಪರಿಣಾಮಗಳಾಗದಂತೆ ನೋಡಿಕೊಳ್ಳಬಹುದು.

ಮೂರು ವಿಭಿನ್ನ ಕೂಲಿಂಗ್ ವಿಧಾನಗಳ ವಿವರ

ಡು ಹೈಮನ್ ಬಾಕ್ಸ್ ಮೂರು ಕೂಲಿಂಗ್ ಮತ್ತು ಏರ್ ಫ್ಲೋ ಸೆಟ್ಟಿಂಗ್‌ಗಳನ್ನು ಹೊಂದಿದೆ. ನಿಮ್ಮ ಅಗತ್ಯಗಳಿಗೆ ತಕ್ಕಂತೆ ತಂಪಾದ ಗಾಳಿಯ ವೇಗವನ್ನು ಸರಿಹೊಂದಿಸಬಹುದು. ಇಲ್ಲಿ ಮನುಷ್ಯರ ಸುರಕ್ಷತೆಯನ್ನು ಸಹ ಎಚ್ಚರಿಕೆಯಿಂದ ಪರಿಗಣಿಸಲಾಗಿದೆ. ಒಬ್ಬ ವ್ಯಕ್ತಿಯು ಒಳಗೆ ಹೆಚ್ಚು ಹೊತ್ತು ಕುಳಿತಿದ್ದರೆ, ಅತಿಯಾಗಿ ತಂಪಾಗುವುದನ್ನು ತಡೆಯಲು 20 ನಿಮಿಷಗಳ ನಂತರ ಯಂತ್ರವು ಸ್ವಯಂಚಾಲಿತವಾಗಿ ಆಫ್ ಆಗುತ್ತದೆ.

ಕಡಿಮೆ ವಿದ್ಯುತ್ ಬಳಕೆ

ಈ ಯಂತ್ರದ ಮತ್ತೊಂದು ವಿಶೇಷ ವೈಶಿಷ್ಟ್ಯ ಅಂದರೆ ಇದಕ್ಕೆ ಸಾಮಾನ್ಯ ಸ್ಪಾಟ್ ಏರ್ ಕಂಡಿಷನರ್‌ನ ಸರಿಸುಮಾರು ಅರ್ಧದಷ್ಟು ವಿದ್ಯುತ್‌ ಬೇಕಾಗುತ್ತದೆ ಅಷ್ಟೇ. ಇದಕ್ಕೆ ಯಾವುದೇ ವಿಶೇಷ ಇನ್ಸ್ಟಾಲೇಶನ್‌ ಅಗತ್ಯವಿಲ್ಲ. ಇದನ್ನು ಒಳಗೆ ಅಥವಾ ಹೊರಗೆ ಎಲ್ಲಿ ಬೇಕಾದರೂ ಬಳಸಬಹುದು. ಇದು ಕೆಳಭಾಗದಲ್ಲಿ ಚಕ್ರಗಳನ್ನು ಹೊಂದಿದೆ. ಹಾಗಾಗಿ ನಮ್ಮ ಅಗತ್ಯಕ್ಕೆ ಅನುಸಾರವಾಗಿ ಅದನ್ನು ಎಲ್ಲಿ ಇರಿಸಬೇಕೋ ಅಲ್ಲಿಗೆ ತೆಗೆದುಕೊಂಡು ಹೋಗಬಹುದು.

ಪ್ರಸ್ತುತ ಈ ಕೂಲಿಂಗ್ ಬೂತ್ ಪ್ರಾಥಮಿಕವಾಗಿ ಕಂಪನಿಗಳು ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ಲಭ್ಯವಿದೆ. ಇದರ ಬೆಲೆ ಸುಮಾರು 1.5 ಮಿಲಿಯನ್ ಯೆನ್‌ಗೆ ನಿಗದಿಪಡಿಸಲಾಗಿದೆ. ಮುಂಬರುವ ವರ್ಷಗಳಲ್ಲಿ ಶಾಖವು ಹೆಚ್ಚುತ್ತಲೇ ಇದ್ದರೆ, ಅಂತಹ ಕೂಲಿಂಗ್ ಬಾಕ್ಸ್‌ಗಳನ್ನು ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು, ಉದ್ಯಾನವನಗಳು, ಆಟದ ಮೈದಾನಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿಯೂ ಸ್ಥಾಪಿಸಬಹುದು ಎಂದು ಕಂಪನಿ ಹೇಳುತ್ತದೆ. ಇದು ಸುಡುವ ಬಿಸಿಲಿನ ಸಮಯದಲ್ಲಿ ಸಾಮಾನ್ಯ ಜನರಿಗೆ ಕೆಲವೇ ನಿಮಿಷಗಳಲ್ಲಿ ಪರಿಹಾರವನ್ನು ನೀಡುತ್ತದೆ.

ಶಾಖದಿಂದ ಮುಕ್ತಿ ಪಡೆಯಲು ಹೊಸ ಪ್ರಯತ್ನ

ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಹಿಂದಿನಿಂದಲೂ ಜಪಾನ್ ಹೆಸರುವಾಸಿಯಾಗಿದೆ. ಇದೀಗ ಈ ಸಾಲಿಗೆ ಡು ಹೈಮನ್ ಬಾಕ್ಸ್ ಕೂಡಾ ಸೇರಿದೆ. ಹವಾಮಾನ ಬದಲಾವಣೆಯಿಂದಾಗಿ ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ಶಾಖವು ನಿರಂತರವಾಗಿ ಹೆಚ್ಚುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ಎಸಿ ಮಾತ್ರವಲ್ಲದೆ ಜನರಿಗೆ ತ್ವರಿತ ಪರಿಹಾರವನ್ನು ಒದಗಿಸುವ ಪೋರ್ಟಬಲ್ ಕೂಲಿಂಗ್ ವ್ಯವಸ್ಥೆಗಳು ಕೂಡಾ ಭವಿಷ್ಯದಲ್ಲಿ ಬಹಳ ಉಪಯುಕ್ತವಾಗಬಹುದು. ಅದಕ್ಕಾಗಿಯೇ 'ಹ್ಯೂಮನ್ ಫ್ರಿಡ್ಜ್' ಅನ್ನು ಕೇವಲ ಹೊಸ ಯಂತ್ರವಾಗಿ ನೋಡದೆ, ಹೆಚ್ಚುತ್ತಿರುವ ಶಾಖವನ್ನು ನಿಭಾಯಿಸುವ ಹೊಸ ಉಪಕ್ರಮವಾಗಿ ನೋಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+