ಅತ್ತೆ ಹೇಳಿಕೊಟ್ಟ ಹಳ್ಳಿ ಶೈಲಿಯ ಉಪ್ಪಿಟ್ಟು ರೆಸಿಪಿ: ತಿಂದವ್ರು ಒನ್ ಮೋರ್ ಮೋರ್..ಅಂತಾರೆ
ನಾವು ಹೆಣ್ ಮಕ್ಕಳೇ ಹಾಗೇ ಚಿಕ್ಕ ವಯಸ್ಸಿನಲ್ಲಿ ಅಮ್ಮ ಮನೆ ಕೆಲಸ ಹೇಳಿದ್ರೆ ಹೇ ಹೋಗಮ್ಮ ನಾನು ಮಾಡಲ್ಲ ಅಂತ ಹೇಳ್ತಿವಿ. ಅದೇ ಅತ್ತೆ ಮನೆಯಲ್ಲಿ ಅತ್ತೆ ಏನ್ ಹೇಳಿದ್ರು, ಆಯ್ತು ಅಂತಿವೆ. ನಮ್ಮ ಅತ್ತೆ ನಾಳೆ ಬೆಳ್ಳಿಗೆಗೆ ಉಪ್ಪಿಟ್ ಮಾಡಮ್ಮ ತಿಂಡಿನಾ ಅಂತ ಹೇಳಿದಾಗ ಅಯ್ಯೋ ಅತ್ತೆ ನನಗೆ ಅದೆಲ್ಲಾ ಬರಲ್ಲ ಅಂತ ಹೇಳಿದ್ದೆ. ಅದಕ್ಕೆ ನಮ್ಮ ಅತ್ತೆ ಉಪ್ಪಿಟ್ಟ ಮಾಡೋಕು ಬರಲ್ವಾ ಅಂತ ಕೇಳಿದ್ರು. ಆಗ ಅನಿಸಿತ್ತು. ಅಮ್ಮ ಹೇಳಿಕೊಟ್ಟಾಗ ಕಲಿಬೇಕಿತ್ತು ಅಂತ. ಇರ್ಲಿ ಬಿಡು ನಮ್ಮ ಅತ್ತೆ ಅಲ್ವಾ ಒಮ್ಮೆ ಹೇಳಿಕೊಡ್ಲಿ, ಅಮೇಲೆ ನಾನು ಮಾಡಿ ಕೊಟ್ರೆ ಆಯ್ತು ಅನ್ಕೊಂಡೆ. ಮೊದಲ ಬಾರಿ ನಮ್ಮ ಅತ್ತೆ ಹಳ್ಳಿ ಶೈಲಿಯ ಉಪ್ಪಿಟ್ಟು ಹೇಗೆ ಮಾಡೋದು ಅಂತ ಹೇಳಿಕೊಟ್ಟಿದ್ದಾರೆ. ಹೇಗೆ ಅಂತ ನೀವು ಒಮ್ಮೆ ನೋಡಿ.
ನಮ್ಮ ಅತ್ತೆ ಕಡಿಮೆ ಪದಾರ್ಥಗಳಿಂದ ರುಚಿಕರವಾದ ಹಳ್ಳಿ ಶೈಲಿಯ ಉಪ್ಪಿಟ್ಟು ತಯಾರಿಸುವ ವಿಧಾನವನ್ನ ಹೇಳಿ ಕೊಟ್ಟಿದ್ದಾರೆ. ಉಪ್ಪಿಟ್ಟು ಅಂದ್ರೆ ಅದೆಷ್ಟೋ ಜನರಿಗೆ ಇಷ್ಟ ಆಗಲ್ಲ. ಅಡುಗೆಯಲ್ಲೊಂದು ಬೆಳಗಿನ ಎವರ್ ಗ್ರೀನ್ ತಿಂಡಿ ಅಂದ್ರೆ ಅದು ಉಪ್ಪಿಟ್ಟು. ಅದರಲ್ಲೂ ನಾವು ಇಂದು ಹಳ್ಳಿ ಶೈಲಿಯಲ್ಲಿ ಉಪ್ಪಿಟ್ಟು ಮಾಡೋದು ಹೇಗೆ ಅಂತ ಹೇಳುತ್ತಿದ್ದೇವೆ. ಕಡಿಮೆ ಪದಾರ್ಥ ಬಳಸಿ ರುಚಿಕರವಾದ ಉಪ್ಪಿಟ್ಟು ತಯಾರಿಸಬಹುದು ಎಂದು ನಮ್ಮ ಅತ್ತೆ ನನಗೆ ಹೇಳಿಕೊಟ್ಟಿದ್ದಾರೆ. ಬನ್ನಿ ಆ ಹಳ್ಳಿ ಶೈಲಿಯ ಉಪ್ಪಿಟ್ಟು ಹೇಗೆ ಮಾಡುವುದು? ಯಾವ ಪದಾರ್ಥಗಳು ಬೇಕು ಎಂಬುದನ್ನ ಹೇಳಿ ಕೊಡ್ತಿನಿ..

ಹಳ್ಳಿ ಶೈಲಿ ಉಪ್ಪಿಟ್ಟು ಮಾಡಲು ಬೇಕಾಗುವ ಸಾಮಾಗ್ರಿಗಳು ಇಲ್ಲಿವೆ
ದಪ್ಪ ರವೆ: 1 ಕಪ್, ಈರುಳ್ಳಿ: 1 (ದೊಡ್ಡ ಗಾತ್ರದ್ದು), ಹಸಿ ಮೆಣಸಿನಕಾಯಿ: 2, ಟೊಮೆಟೋ: 1, ಸಾಸವೆ-ಜೀರಿಗೆ: 1 ಟೀ ಸ್ಪೂನ್, ಉದ್ದಿನಬೇಳೆ 2 ಟೀ ಸ್ಪೂನ್ ಕರೀಬೇವು: 8 ರಿಂದ 10 ಎಲೆ, ಶೇಂಗಾ: 10 ರಿಂದ 15 , ಎಣ್ಣೆ: 5 ಟೀ ಸ್ಪೂನ್, ಕೋತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಕೊನೆಯಲ್ಲಿ ಸ್ವಲ್ಪ ನಿಂಬೆ ಹಣ್ಣಿನ ರಸ
ಹಳ್ಳಿ ಶೈಲಿ ಉಪ್ಪಿಟ್ಟು ಮಾಡುವ ವಿಧಾನ
ಮೊದಲಿಗೆ ರವೆಗೆ 1 ಟೀ ಸ್ಪೂನ್ ತುಪ್ಪ ಹಾಕಿ ಕಡಿಮೆ ಉರಿಯಲ್ಲಿ ಪರಿಮಳ ಬರೋಬವರೆಗೂ ಹುರಿದುಕೊಂಡು ಎತ್ತಿಟ್ಟುಕೊಳ್ಳಿ. ನಂತರ ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ ಮತ್ತು ಕೋತಂಬರಿ ಸೊಪ್ಪು ಕತ್ತರಿಸಿಕೊಳ್ಳಿ. ಆನಂತರ ಗ್ಯಾಸ್ ಸ್ಟವ್ ಆನ್ ಮಾಡ್ಕೊಂಡು ಪಾತ್ರೆ ಇರಿಸಿಕೊಳ್ಳಿ. ಇದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಸಾಸವೆ, ಜೀರಿಗೆ, ಶೇಂಗಾ, ಉದ್ದಿನಬೇಳೆ ಹಾಕಿಕೊಂಡು ಕಡಿಮೆ ಉರಿಯಲ್ಲಿ ಇವುಗಳನ್ನ ಎಣ್ಣೆಯಲ್ಲಿ ಫ್ರೈ ಮಾಡಿ. ಆನಂತರ ಕತ್ತರಿಸಿಕೊಂಡಿರುವ ಹಸಿಮೆಣಸಿನಕಾಯಿ, ಕರೀಬೇವು, ಈರುಳ್ಳಿ, ಟೊಮೆಟೋ ( ನಿಮಗೆ ಬೇಕಾಗಿರುವ ತರಕಾರಿಗಳನ್ನು ಸಹ ಸೇರಿಸಿಕೊಳ್ಳಬಹುದು) ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ನಂತರ ಇದಕ್ಕೆ ಅರಿಶಿನ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಒಂದೂವರೆ ಕಪ್ ನೀರು ಹಾಕಿ(ಎಷ್ಟು ರವೆ ತೆಗೆದುಕೊಂಡಿರುತ್ತಿರೋ ಅದರ ಎರಡರಷ್ಟು ನೀರು ಸೇರಿಸಿಕೊಳ್ಳಿ) ನೀರು ಕುದಿಯಲು ಶುರು ಮಾಡುತ್ತಿದ್ದಂತೆ ಹುರಿದಿಟ್ಟುಕೊಂಡಿರುವ ರವೆ ಸೇರಿಸಿ ಗಂಟು ಆಗದಂತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನೀರಿನಂಶ ಕಡಿಮೆ ಆಗುತ್ತಿದ್ದಂತೆ ಗ್ಯಾಸ್ ಸ್ಟವ್ ಆಫ್ ಮಾಡಿ ಕೋತಂಬರಿ ಸೊಪ್ಪು ಸೇರಿಸಿ ಮುಚ್ಚಳ ಮುಚ್ಚಿ. 10 ನಿಮಿಷದ ನಂತರ ನಿಂಬೆ ಹಣ್ಣಿನ ರಸವನ್ನ ಸೇರಿಸಿದ್ರೆ ರುಚಿಯಾಗಿರೀ ಮೃದುವಾಗಿ ಹಳ್ಳಿ ಶೈಲಿಯ ಉಪ್ಪಿಟ್ಟು ಸವಿಯಲು ಸಿದ್ಧವಾಗುತ್ತದೆ.
-
ಮನೆ ಕಟ್ಟುವಾಗ ವಾಸ್ತು ಪಾಲಿಸದಿದ್ದರೆ ಏನಾಗುತ್ತದೆ? ಇಲ್ಲಿವೆ 5 ಪ್ರಮುಖ ನಿಯಮಗಳು -
ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಕರಿದ ತಿಂಡಿ, ಟೀ-ಕಾಫಿ ಬ್ಯಾನ್: ಸಿರಿಧಾನ್ಯಗಳಿಗೆ ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ -
ದುಬಾರಿ ಆ್ಯಂಟಿ ಏಜಿಂಗ್ ಕ್ರೀಮ್ಗಿಂತ ಈ ತರಕಾರಿಯೇ ಪರಿಣಾಮಕಾರಿಯಂತೆ: ಚಿರಯೌವನ ತ್ವಚೆಗೆ ನೈಸರ್ಗಿಕ ಉಪಾಯ -
ನಿಮ್ಮ ಮನೆ ದಿಕ್ಕು ಸರಿಯೇ? ರಾಶಿ ಪ್ರಕಾರ ವಾಸ್ತು ಸೂಚನೆಗಳು ಇಲ್ಲಿವೆ -
ಬೇಸಿಗೆಯಲ್ಲಿ ಸೌತೆಕಾಯಿ ತಿನ್ನಲು ಟಾಪ್ 5 ಕಾರಣಗಳು: ಆರೋಗ್ಯಕ್ಕೆ ಅದ್ಭುತ ಲಾಭಗಳು -
ಮೊಡವೆ ಕಲೆಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಸಿಂಪಲ್ ಟ್ರಿಕ್ಸ್ : ಬೇಸಿಗೆಯಲ್ಲಿ ಅನುಸರಿಸಿ ಈ 9 ಟಿಪ್ಸ್ -
Summer Heat Alert: ಮಕ್ಕಳ ಆರೋಗ್ಯ ಕಾಪಾಡಲು ಪೋಷಕರಿಗೆ 7 ಮುಖ್ಯ ಸಲಹೆಗಳು -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ











Click it and Unblock the Notifications