ನೀವು ಅಣಬೆಗಳನ್ನು ಇಷ್ಟಪಡುತ್ತೀರಾ? ಮಶ್ರೂಮ್ ಟಿಕ್ಕಾ ಮಸಾಲ ಮಾಡಿ.. ಮತ್ತೆ ಮತ್ತೆ ತಿನ್ನದೇ ಇರಲ್ಲ..

ನೀವು ಅಣಬೆ ಪ್ರಿಯರೇ? ನಿಮ್ಮ ಮನೆಯ ಜನರು ಅಣಬೆಗಳನ್ನು ತಿನ್ನಲು ಇಷ್ಟಪಡುತ್ತಾರೆಯೇ? ನೀವು ಆಗಾಗ ಮನೆಯಲ್ಲಿ ಅಣಬೆಗಳಿಂದ ಆಹಾರ ತಯಾರು ಮಾಡುವಿರೇ? ಹಾಗಿದ್ದಲ್ಲಿ ನಾವು ಕೂಡ ನಿಮಗೊಂದು ಹೊಸ ರೆಸಿಪಿಯನ್ನು ಹೇಳಿಕೊಡುತ್ತೇವೆ.

ಸ್ವಲ್ಪ ವಿಭಿನ್ನ ರೀತಿಯಲ್ಲಿ ಅಣಬೆಗಳನ್ನು ಬೇಯಿಸಿ ತಿನ್ನುವುದರಲ್ಲಿ ಇರುವ ಮಜಾನೇ ಬೇರೆ. ಹಾಗಾಗಿ ಅಣಬೆಯನ್ನು ಬೇಯಿಸಿ ಟಿಕ್ಕಾ ಮಸಾಲವನ್ನು ಮಾಡಿದರೆ ತುಂಬಾ ರುಚಿಯಾಗಿರುತ್ತದೆ. ನಿಮ್ಮ ಮನೆಯಲ್ಲೂ ನಿಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತದೆ. ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಈ ಹೊಸ ರೆಸಿಪಿ ಇಷ್ಟವಾಗುತ್ತದೆ.

How to make Mushroom Tikka Masala learn in Kannada

ಯಾಕೆಂದರೆ ಮಶ್ರೂಮ್ ಟಿಕ್ಕಾ ಮಸಾಲಾವನ್ನು ಚಪಾತಿ, ಪೂರಿ ಹಾಗೂ ಅನ್ನದೊಂದಿಗೆ ಸೇವಿಸಬಹುದು. ಹೀಗಾಗಿ ಇಂದು ನಾವು ನಿಮಗೆ ಹೇಳಿಕೊಡುವ ಈ ಹೊಸ ರೆಸಿಪಿಯನ್ನು ಈ ವಾರಾಂತ್ಯಕ್ಕೆ ತಯಾರಿಸುವುದನ್ನು ಮರಿಯಬೇಡಿ. ಹಾಗಿದ್ದಲ್ಲಿ ತಡ ಮಾಡುವುದು ಬೇಡ ಮಶ್ರೂಮ್ ಟಿಕ್ಕಾ ಮಸಾಲಾ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿಯೋಣ.

ಅಗತ್ಯವಿರುವ ಸಾಮಗ್ರಿಗಳು:

*ಮಶ್ರೂಮ್ - 2 ಕಪ್ (ಎರಡಾಗಿ ಕತ್ತರಿಸಿ)

* ಮೆಣಸಿನಕಾಯಿ - 1/2 ಕಪ್ (ಹೆಚ್ಚಿದ)

* ಈರುಳ್ಳಿ - 1/2 ಕಪ್ (ಹೆಚ್ಚಿದ)

* ಮೊಸರು - 1/4 ಕಪ್

* ಕಡಲೆ ಹಿಟ್ಟು - 2 ಟೇಬಲ್ ಚಮಚ

* ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 tbsp

* ಅರಿಶಿನ ಪುಡಿ - 1/4 ಟೀಸ್ಪೂನ್

* ಕಾಶ್ಮೀರಿ ಚಿಲ್ಲಿ ಪೌಡರ್ - 1 tbsp

* ಗರಂ ಮಸಾಲ - 2 ಚಮಚ

* ಚಾಟ್ ಮಸಾಲಾ - 1/2 ಟೀಸ್ಪೂನ್

* ನಿಂಬೆ ರಸ - 1 tbsp

* ಎಣ್ಣೆ - 2 ಟೀಸ್ಪೂನ್

* ಉಪ್ಪು - ರುಚಿಗೆ ತಕ್ಕಂತೆ

* ಕಸೂರಿ ಮೇತಿ - ಸ್ವಲ್ಪ

How to make Mushroom Tikka Masala learn in Kannada

ವಿಧಾನ:

* ಮೊದಲು ಒಂದು ಪಾತ್ರೆಯಲ್ಲಿ ಮೊಸರು, ಕಡಲೆ ಹಿಟ್ಟು, ಮೆಣಸಿನ ಪುಡಿ, ಅರಿಶಿನ ಪುಡಿ, ಗರಂ ಮಸಾಲ, ಚಾಟ್ ಮಸಾಲ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

* ನಂತರ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆಲವು ಸೆಕೆಂಡುಗಳ ಕಾಲ ಫ್ರೈ ಮಾಡಿ.

How to make Mushroom Tikka Masala learn in Kannada

* ನಂತರ ಈರುಳ್ಳಿ ಮತ್ತು ಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ.

* ಬಳಿಕ ಮಶ್ರೂಮ್ ಹಾಕಿ ಹುರಿಯಿರಿ. ಅಣಬೆಯಿಂದ ನೀರು ಹೊರಬಂದು ಒಣಗಿದಾಗ, ಅದಕ್ಕೆ ಮೊಸರು ಕಡಲೆ ಹಿಟ್ಟಿನ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಬೆರೆಸಿ.

* ಮಶ್ರೂಮ್ ಚೆನ್ನಾಗಿ ಬೆಂದಾಗ ಮಸಾಲದ ಹಸಿರು ವಾಸನೆ ಮಾಯವಾಗಿ ಗ್ರೇವಿ ಸ್ವಲ್ಪ ದಟ್ಟವಾಗತೊಡಗುತ್ತದೆ. ಆಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಸೂರಿ ಮೇತಿ ಮತ್ತು ನಿಂಬೆರಸ ಸಿಂಪಡಿಸಿ ಕಲಕಿದರೆ ರುಚಿಯಾದ ಮಶ್ರೂಮ್ ಟಿಕ್ಕಾ ಮಸಾಲಾ ರೆಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+