Mango Maaza Juice recipe: ಮನೆಯಲ್ಲಿಯೇ ಸುಲಭವಾಗಿ ಮಾಡಿ ಮಾಝಾ ಜ್ಯೂಸ್

ಬೆಂಗಳೂರು, ಏಪ್ರಿಲ್. 27: ಮಾವಿನ ಫ್ರೂಟಿ ಜ್ಯೂಸ್ ಅಥವಾ ಮಾಜಾ ಜ್ಯೂಸ್ ಯಾರಿಗೆ ತಾನೆ ಗೊತ್ತಿಲ್ಲ. ಎಲ್ಲರಿಗೂ ಇದು ಇಷ್ಟವಾಗುತ್ತದೆ. ಬಿಸಿಲಿನ ಕಾಲದಲ್ಲಿ ತಣ್ಣಗಿನ ಮಾವಿನ ಜ್ಯೂಸ್ ಕುಡಿಯಲು ಮಕ್ಕಳು, ಹಿರಿಯರು ಸೇರಿ ಎಲ್ಲರು ಇಷ್ಟಪಡುತ್ತಾರೆ. ಹಾಗಾದರೆ ಅಂಗಡಿಯಲ್ಲಿ ಹೆಚ್ಚು ಹಣ ಕೊಟ್ಟು ತರುವ ಬದಲು ಮಾಜಾ ಜ್ಯೂಸ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ಹೇಳಲಾಗಿದೆ.

ಹಣ್ಣುಗಳ ರಾಜ ಮಾವಿನ ಹಣ್ಣು ತುಂಬಾ ಆರೋಗ್ಯಕರ ಗುಣಗಳನ್ನು ಹೊಂದಿದೆ. ಹಣ್ಣಿನ ಸೀಸನ್ ಕೂಡ ಆಗಿರುವುದರಿಂದ ಈಗ ಮಾವಿನ ಹಣ್ಣನ್ನು ಆರಾಮಾವಾಗಿ ಸವಿಯಬಹುದು. ನೀವು ಸುಲಭವಾಗಿ ಟೆಟ್ರಾಪ್ಯಾಕ್ ರೀತಿಯ ಮಾವಿನ ರಸವನ್ನು ತಯಾರಿಸಬಹುದು ಮತ್ತು ಹೆಚ್ಚು ದಿನಗಳ ಕಾಲ ಅದನ್ನು ಸಂಗ್ರಹಿಸಬಹುದು. ಈ ಜ್ಯೂಸ್ ಉತ್ತಮ ರುಚಿ ಹೊಂದಿದ್ದು, ಬಿರು ಬೇಸಿಗೆಯಲ್ಲಿ ತುಂಬಾ ಸಹಾಯಕವಾಗಿರುತ್ತದೆ.

How to make Mango Maaza juice recipe explained with step by step

ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ಮಾವಿನ ಹಣ್ಣಿನ ಜ್ಯೂಸ್ ಮಾಡಬಹುದು. ಇಲ್ಲಿ ಸಕ್ಕರೆ ಬಳಸಲಾಗಿದೆ. ಆದರೆ, ಜ್ಯೂಸ್ ಅನ್ನು ಹೆಚ್ಚು ಆರೋಗ್ಯಕರವಾಗಿಸಲು ಬಯಸಿದರೆ ನೀವು ಸಕ್ಕರೆಯನ್ನು ಬೆಲ್ಲದೊಂದಿಗೆ ಬದಲಾಯಿಸಬಹುದು. ಎಲ್ಲರಿಗೂ ಇಷ್ಟವಾಗುವ ಈ ಮಾವಿನ ಹಣ್ಣಿನ ಜ್ಯೂಸ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.

ಮಾವಿನ ಹಣ್ಣಿನ ಸೀಸನ್ ನಡೆಯುತ್ತಿದೆ. ಮಾವಿನ ಕಾಯಿ, ಮಾವಿನ ಹಣ್ಣಿನ ರೆಸಿಪಿಗಳನ್ನು ಮಾಡಿಕೊಳ್ಳಬಹುದು. ವರ್ಷಗಳವರೆಗೆ ಇದನ್ನು ಶೇಕರಿಸಿ ಇಟ್ಟುಕೊಳ್ಳಬಹುದು. ಮಾವಿನ ಉಪ್ಪಿನಕಾಯಿ, ಹಸಿ ಮಾವಿನ ರಸಂ, ಮಾವಿನ ಕರಿ, ಮಾವಿನ ತೊಕ್ಕು ಮತ್ತು ಹಸಿ ಮಾವಿನಕಾಯಿ ಚಟ್ನಿ ಮಾಡಬಹುದು. ಹಾಗೆಯೇ ಮಾವಿನ ಹಣ್ಣಿನ ಜ್ಯೂಸ್, ಮಾವಿನ ಹಣ್ಣಿನ ಶಿಕರಣೆ ಸೇರಿ ಹಲವು ವಿಧವಾಗಿ ಬಳಸಬಹುದು.

ಮಾವಿನ ಹಣ್ಣಿನ ಮಾಝಾ ಜ್ಯೂಸ್ ಮಾಡಲು ಬೇಕಾದ ಪದಾರ್ಥಗಳು

1. 2 ಬಟ್ಟಲು ಕತ್ತರಿಸಿದ ಮಾವಿನ ಹಣ್ಣಿನ ತಿರುಳು

2. 1/4 ಕಪ್ ಕತ್ತರಿಸಿದ ಹಸಿ ಮಾವು

3. ನಿಮ್ಮ ರುಚಿಗೆ ತಕ್ಕಂತೆ ಸಕ್ಕರೆ ಅಥವಾ ಬೆಲ್ಲ

4. ಅಗತ್ಯವಿರುವಷ್ಟು ನೀರು

How to make Mango Maaza juice recipe explained with step by step

ಮಾಝಾ ಜ್ಯೂಸ್ ತಯಾರಿಸುವ ವಿಧಾನ

ಸುಮಾರು ಎರಡು ಬಟ್ಟಲು ಕತ್ತರಿಸಿದ ಮಾವಿನ ಹಣ್ಣಿನ ತಿರುಳನ್ನು ತೆಗೆದುಕೊಳ್ಳಿ. ಮಾವಿನ ತಿರುಳು ಮತ್ತು ಹಸಿ ಮಾವಿನ ತುಂಡುಗಳನ್ನು ಒಂದು ಬಾಣಲೆಗೆ ಹಾಕಿಕೊಳ್ಳಿ. ಸಕ್ಕರೆ/ ಬೆಲ್ಲ ಸೇರಿಸಿ. ಮಾವಿನ ಸಿಹಿಗೆ ಅನುಗುಣವಾಗಿ ಮತ್ತು ನಿಮ್ಮ ರುಚಿಗೆ ಅನುಗುಣವಾಗಿ ಹಾಕಿಕೊಳ್ಳಿ. ಜೊತೆಗೆ ಬೇಕಾದ ನೀರನ್ನು ಸೇರಿಸಿ ಕುದಿಯಲು ಇಡಿ. ಅದು ಕುದಿಯಲು ಪ್ರಾರಂಭಿಸಿದಾಗ, ಉರಿಯನ್ನು ಕಡಿಮೆ ಮಾಡಿ, ಮುಚ್ಚಳವನ್ನು ಮುಚ್ಚಿ ಮತ್ತು ಹಸಿ ಮಾವಿನಕಾಯಿ ಮೃದುವಾಗುವವರೆಗೆ 7-8 ನಿಮಿಷ ಬೇಯಿಸಿ. ಹಸಿ ಮಾವಿನಕಾಯಿ ಬೆಂದ ಮತ್ತು ಮೃದುವಾದ ನಂತರ ಸ್ಟವ್ ಆಫ್ ಮಾಡಿ.

ಬೇಯಿಸಿದ ನೀರನ್ನು ಸೋಸಿ ಪಕ್ಕಕ್ಕೆ ಇಟ್ಟುಕೊಳ್ಳಿ. ಬಳಿಕ ಈ ನೀರನ್ನು ಬಳಸಬಹುದು. ಈಗ ಬೇಯಿಸಿದ ಮಾವಿನ ಹಣ್ಣನ್ನು ಮಿಕ್ಸರ್ ಗ್ರೈಂಡರ್‌ಗೆ ಹಾಕಿ ನುಣ್ಣಗೆ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ಜ್ಯೂಸ್ ಸ್ಟ್ರೈನರ್ ಬಳಸಿ ಅದನ್ನು ಸೋಸಿಕೊಳ್ಳಿ. ಒಂದು ಚಮಚ ಮತ್ತು ಸ್ವಲ್ಪ ನೀರನ್ನು ಬಳಸಿ ಚೆನ್ನಾಗಿ ಸೋಸಿಕೊಳ್ಳಿ. ಅದಕ್ಕೆ ಬೇಕಾದ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ತಣ್ಣಗಾಗಿಸಿ ಸರ್ವ್ ಮಾಡಿ. ನೀವು ಈ ಜ್ಯೂಸ್ ಅನ್ನು ಒಂದು ತಿಂಗಳು ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಿಕೊಂಡು ಬೇಕಾದಾಗ ಬಳಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+