Hesaru Bele Chakli: ಮನೆಯಲ್ಲೇ ಗರಿಗರಿಯಾದ ಚಕ್ಕುಲಿ ಮಾಡುವುದು ಹೇಗೆ.?
ಇನ್ನೇನು ಮಳೆಗಾಲ ಆರಂಭವಾಗುತ್ತಿದೆ..ಮಳೆ ಬಂದಾಗ ಬಿಸಿ-ಬಿಸಿ ಚಹಾದ ಜೊತೆ ಕರಿದ ತಿಂಡಿಗಳನ್ನೇ ನಾವು ಬಯಸುತ್ತೇವೆ. ಜಿಟಿ ಜಿಟಿ ಮಳೆಗೆ ಬಿಸಿ ಬಿಸಿಯಾದ ತಿಂಡಿಗಳನ್ನೇ ಅರಸುತ್ತೇವೆ. ಸಂಜೆ ವೇಳೆ ಮಳೆಗೆ ಬಿಸಿ ಬಿಸಿಯಾದ ತಿಂಡಿಯಿದ್ದರೆ ವಾವ್ ಎನಿಸುತ್ತದೆ. ಹೀಗಾಗಿ ಮನೆಯಲ್ಲೇ ಮಳೆಗಾಲ ತಿಂಡಿಗಳನ್ನು ತಯಾರಿಸಿಕೊಳ್ಳಿ.
ಚಕ್ಕುಲಿ, ನಿಪ್ಪಟ್ಟು, ಹಪ್ಪಳ, ಸೆಂಡಿಗೆ ಹೀಗೆ ಮಳೆಗಾಲಕ್ಕೆ ಸಿದ್ಧಪಡಿಸಿಕೊಳ್ಳುವ ತಿಂಡಿಗಳ ಪಟ್ಟಿ ದೊಡ್ಡದಿದೆ. ಅದರಲ್ಲಿ ಬಹಳ ಸುಲಭವಾಗಿ ಮಾಡುವ ಚಕ್ಕುಲಿ ತಯಾರಿಸುವ ವಿಧಾನ ಇಲ್ಲಿದೆ. ಮನೆಯಲ್ಲೇ ರುಚಿರುಚಿಯಾದ, ಬಿಸಿಬಿಸಿಯಾದ ಚಕ್ಕುಲಿಯನ್ನು ತಯಾರಿಸುವ ವಿವರಣೆ ಇಲ್ಲಿದೆ.

ಚಕ್ಕುಲಿ ಮಾಡಲು ಬೇಕಾಗುವ ಸಾಮಾಗ್ರಿಗಳು
ಅಕ್ಕಿ ಹಿಟ್ಟು-1 ಕಪ್
ಹೆಸರು ಬೇಳೆ-1/4 ಕಪ್
ಜೀರಿಗೆ-1 ಚಮಚ
ಇಂಗು- ಒಂದು ಚಿಟಿಕೆ
ಉಪ್ಪು-ನಿಮ್ಮ ರುಚಿಗೆ ತಕ್ಕಷ್ಟು
ಡೀಪ್ ಫ್ರೈ ಮಾಡಲು ಎಣ್ಣೆ
ಚಕ್ಕುಲಿ ಮಾಡುವ ವಿಧಾನವೇನು..?
ಚಕ್ಕುಲಿ ಮಾಡಲು ಮೊದಲು ಹೆಸರು ಬೇಳೆಯನ್ನು ತೆಗೆದುಕೊಂಡು ಕುಕ್ಕರ್‌ನಲ್ಲಿ ಹಾಕಿ, ಮೂರರಿಂದ ನಾಲ್ಕು ಚಮಚ ನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಕುಕ್ಕರ್‌ನಲ್ಲಿ ಮೂರು ಕೂಗು ಕೂಗಿಸಿದರೆ ಸಾಕು. ಬೆಂದ ಬಳಿಕ ತಣ್ಣಗಾಗುವರೆಗೂ ಕಾಯಿರಿ. ಬಳಿಕ ಚೆನ್ನಾಗಿ ಮ್ಯಾಶ್ ಮಾಡಿ ಅಥವಾ ಮಿಕ್ಸಿ ಬಳಸಿ ಪೇಸ್ಟ್ ಮಾಡಿಕೊಳ್ಳಿ. ಬಳಿಕ ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಜೀರಿಗೆ, ಇಂಗು ಹಾಕಿ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.

2 ಚಮಚ ಎಣ್ಣೆಯನ್ನು ಬಿಸಿ ಮಾಡಿ ಹಿಟ್ಟಿನ ಮೇಲೆ ಸುರಿಯಿರಿ. ಎಣ್ಣೆ ಬದಲು ಬೆಣ್ಣೆಯನ್ನು ಸಹ ಬೇಕಾದರೆ ಸೇರಿಸಬಹುದು. ನಂತರ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಬೇಯಿಸಿಟ್ಟುಕೊಂಡ ಹೆಸರು ಬೇಳೆ ಮಿಶ್ರಣವನ್ನು ಹಾಕಿ..ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ. ಕೊನೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಚಕ್ಕುಲಿ ಅಚ್ಚು ಬಳಸಿ ಹಿಟ್ಟನ್ನು ಬಿಸಿ ಬಿಸಿ ಎಣ್ಣೆಗೆ ಬಿಡಿ. ಹಿಟ್ಟು ಗೋಲ್ಡನ್ ಬಣ್ಣಕ್ಕೆ ಬಂದಾಗ ಬಾಣಲಿಯಿಂದ ತೆಗೆದರೆ ಬಿಸಿ ಬಿಸಿಯಾದ ಗರಿ ಗರಿಯಾದ ಚಕ್ಕುಲಿ ಸವಿಯಲು ಸಿದ್ಧವಾಗುತ್ತದೆ. ಒಂದೊಳ್ಳೆ ಟೀ ಸಿದ್ಧಪಡಿಸಿಕೊಂಡು ಚಕ್ಕುಲಿಯನ್ನು ಟೀ ಜೊತೆ ಸವಿಯಿರಿ.











Click it and Unblock the Notifications